Don't Miss

ಇಲ್ಲ, ರಾಹುಲ್ ಗಾಂಧಿಯವರು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಉಚಿತ ಮೊಬೈಲ್ ರೀಚಾರ್ಜ್ ಅನ್ನು ಘೋಷಿಸಿಲ್ಲ

Claim/ಹೇಳಿಕೆ: ರಾಹುಲ್ ಗಾಂಧಿಯವರು ಎಲ್ಲಾ ಭಾರತೀಯ ಪ್ರಜೆಗಳಿಗೆ ‘3 ತಿಂಗಳ ಉಚಿತ ಮೊಬೈಲ್ ರೀಚಾರ್ಜ್’ ಕೊಡುಗೆಯನ್ನು ಘೋಷಿಸಿದ್ದಾರೆ.
Conclusion/ಕಡೆನುಡಿ:2024ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ರಾಹುಲ್ ಗಾಂಧಿಯವರು ಯಾವುದೇ ಉಚಿತ ಮೊಬೈಲ್ ರೀಚಾರ್ಜ್ ಕೊಡುಗೆಯನ್ನು ನೀಡಿಲ್ಲ.

ರೇಟಿಂಗ್: Misleading/ದಾರಿತಪ್ಪಿಸುವ ಮಾಹಿತಿ.

Fact Check ವಿವರಗಳು:

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಸಾಧ್ಯತೆಗಳನ್ನು ಹೆಚ್ಚಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಎಲ್ಲಾ ಭಾರತೀಯ ಪ್ರಜೆಗಳಿಗೆ ‘3 ತಿಂಗಳ ಉಚಿತ ಮೊಬೈಲ್ ರೀಚಾರ್ಜ್’ ಕೊಡುಗೆಯನ್ನು ಘೋಷಿಸಿದ್ದಾರೆ ಎಂಬ ಹೇಳಿಕೆಯನ್ನು ಹೊಂದಿರುವ ಒಂದು ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಸಂದೇಶವು ಕೊಡುಗೆಯನ್ನು ಪಡೆಯಲು ಒಂದು ಲಿಂಕ್ ಅನ್ನು ಒದಗಿಸಿದೆ ಮತ್ತದು ನಮ್ಮ ಹಿಂದಿನ ಸತ್ಯ-ಪರಿಶೀಲನೆಯಲ್ಲಿ ತಪ್ಪು ಬಿಜೆಪಿ ಲಿಂಕ್ ಅನ್ನು ಬಳಸಿಕೊಂಡು ತಪ್ಪುದಾರಿಗೆಳೆಯುತ್ತಿರುವ ಲಿಂಕ್ ಎಂದು ಕಂಡುಬಂದಿದೆ.

FACT CHECK
ಮೊದಲನೆಯದಾಗಿ, ಮತದಾರರಿಗೆ ಉಚಿತ ಮೊಬೈಲ್ ರೀಚಾರ್ಜ್ ನೀಡುವ ಯಾವುದೇ ಘೋಷಣೆಯನ್ನು ರಾಹುಲ್ ಗಾಂಧಿ ಮಾಡಿದ್ದಾರೆಯೇ ಎಂದು ನಾವು ಹುಡುಕಿದೆವು, ಅದು ಎಲ್ಲಿಯೂ ಕಂಡುಬರಲಿಲ್ಲ. ಅದು ನಿಜವೇ ಆಗಿದ್ದಲ್ಲಿ, ಸುದ್ದಿ ಮುಖ್ಯಾಂಶಗಳಲ್ಲಿರುತ್ತಿತ್ತು. ಎರಡನೆಯದಾಗಿ, ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ ಇದೇ ರೀತಿಯ ಹೇಳಿಕೆಯನ್ನು ಮಾಡಲಾಗಿತ್ತು ಮತ್ತು ಡಿಜಿಟೈ ಇಂಡಿಯಾ ಈಗಾಗಲೇ ಇಲ್ಲಿ ಈ ಹೇಳಿಕೆಯನ್ನು ತಳ್ಳಿಹಾಕಿದೆ.
ಅದೇ ರೀತಿ, ಹೊಸ ಸಂದೇಶವನ್ನು ರಾಹುಲ್ ಗಾಂಧಿ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಎಂದಿಗೂ ಮಾಡಿಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಅಷ್ಟೇ ಅಲ್ಲದೆ, ಪೋಸ್ಟ್ನಲ್ಲಿ ಒದಗಿಸಲಾದ ಲಿಂಕ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಸಂಬಂಧಿಸಿದ ಲಿಂಕ್ ಅಲ್ಲ. “limitedoffer.xyz” ಡೊಮೈನ್ ಅನ್ನು ನವೆಂಬರ್ 2023 ರಲ್ಲಿ ನೋಂದಾಯಿಸಲಾಗಿದೆ.

ಇದನ್ನೂ ಓದಿ: 

ಇಲ್ಲ, ಈ ವೀಡಿಯೊ ಒಬ್ಬ ಬ್ರಾಹ್ಮಣ ಶಿಕ್ಷಕರು ದಲಿತ ಮಗುವನ್ನು ಥಳಿಸುವುದನ್ನು ತೋರಿಸುವುದಿಲ್ಲ; ಸತ್ಯ ಪರಿಶೀಲನೆ

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ

 

5 comments

Leave a Reply

Your email address will not be published. Required fields are marked *

*