Don't Miss

ಹೆದ್ದಾರಿಯಲ್ಲಿ ಇಫ್ತಾರ್ ಕೂಟದ ವೀಡಿಯೊ ಕೋಲ್ಕತ್ತಾದ್ದಲ್ಲ, ಅದು ಕರ್ನಾಟಕದ್ದು; ಸತ್ಯ ಪರಿಶೀಲನೆ

ಹೇಳಿಕೆ/Claim: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ಬೃಹತ್ ಇಫ್ತಾರ್ ಕೂಟವನ್ನು ಒಂದು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion: ಸುಳ್ಳು, ಆ ವೀಡಿಯೋ ಕರ್ನಾಟಕದ ಮಂಗಳೂರಿನ ಮುಡಿಪು ಎಂಬಲ್ಲಿಂದ ಬಂದಿದೆ.

ರೇಟಿಂಗ್: ತಪ್ಪು ನಿರೂಪಣೆ

ಸತ್ಯ ಪರಿಶೀಲನೆ ವಿವರಗಳು

ರಸ್ತೆಯೊಂದರ ಮೇಲೆ  ಇಫ್ತಾರ್ ಕೂಟಕ್ಕಾಗಿ ಆಸನಗಳನ್ನು ಇರಿಸಿರುವ ವೀಡಿಯೊವನ್ನು ಅದು  ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ  ಆಯೋಜಿಸಲಾಗಿರುವ ಕೂಟ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ರಂಜಾನ್ ತಿಂಗಳಲ್ಲಿ ಉಪವಾಸ ಮುರಿಯಲು ಮುಸಲ್ಮಾನರು ಸೂರ್ಯಾಸ್ತದ ನಂತರ ಇಫ್ತಾರ್ ಕೂಟವನ್ನು ನಡೆಸುತ್ತಾರೆ.

ಅದೇ ವೀಡಿಯೊವನ್ನು ಇಲ್ಲಿ ಹಿಂದಿಯಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ:

ಮೇಲಿನ ವೀಡಿಯೊವು ಇಫ್ತಾರ್ ಕೂಟಕ್ಕಾಗಿ ರಸ್ತೆಯ ತುಂಬ ಕುರ್ಚಿಗಳು ಮತ್ತು ಮೇಜುಗಳು ತುಂಬಿರುವುದನ್ನು ತೋರಿಸುತ್ತದೆ ಮತ್ತು ಹತ್ತಿರದಲ್ಲಿ ಆಟೋ ರಿಕ್ಷಾಗಳು ಕಂಡುಬರುತ್ತವೆ. ಬೆಂಗಾಲಿ ಭಾಷೆಯ ಈ ಶೀರ್ಷಿಕೆ ಅನುವಾದ ಹೀಗಿದೆ: “ಭಾರತದ ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ರಸ್ತೆ ತಡೆದು ನಮಾಜ್ ಮಾಡಿದ ನಂತರ, ರಸ್ತೆಯಲ್ಲಿಯೇ ಇಫ್ತಾರ್ ಕೂಟವನ್ನು ನಡೆಸುತ್ತಿರುವುದು. ಟಿಎಂಸಿ ಆಡಳಿತ ಪಕ್ಷವು ಇದನ್ನು ಅನುಮತಿಸಿದೆ ಆದರೆ ಹಿಂದೂಗಳು ಕಡೆಗಣಿಸಲಾದ ಸಮೂಹ, ಅವರು ಮಾತನಾಡಲು ಸಾಧ್ಯವಿಲ್ಲ ಜೈ ಶ್ರೀ ರಾಮ್” .

ಫೇಸ್‌ಬುಕ್ ಪೋಸ್ಟ್‌ನಲ್ಲಿರುವ ಹಿಂದಿ ಶೀರ್ಷಿಕೆ ಹೀಗಿದೆ: “सडक पर नमाज़ के बाद पेश है सडक पर इफ्तार पार्टी* ।। वीडियो पश्चिम बंगाल के कोलकाता से है।। क्या यह सही है ” [ಕನ್ನಡದಲ್ಲಿ ಅನುವಾದಿಸಲಾಗಿರುವ ಈ ಶೀರ್ಷಿಕೆ ಹೀಗಿದೆ: “ರಸ್ತೆಯಲ್ಲಿ ನಮಾಜ್ ನಂತರ ಪ್ರಸ್ತುತಪಡಿಸಲಾಗುತ್ತಿದೆ ರಸ್ತೆಯಲ್ಲಿ ಇಫ್ತಾರ್ ಕೂಟ* . ವೀಡಿಯೊ ಬಂದಿರುವುದು ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ. ಇದು ಸರಿಯೇ?”

FACT-CHECK

ನಾವು ವಾಟ್ಸಾಪ್ ನಲ್ಲಿ ಈ ಕುರಿತು ಪ್ರಶ್ನೆಯನ್ನು ಸ್ವೀಕರಿಸಿದಾಗ, ನಾವು ಕೆಲವು ಪ್ರಮುಖ ಫ್ರೇಮ್‌ಗಳನ್ನು ತೆಗೆದುಕೊಂಡು ಮೂಲ ಚಿತ್ರಕ್ಕಾಗಿ ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಪರಿಶೀಲಿಸಿದೆವು. ವೀಡಿಯೋ ಕರ್ನಾಟಕದ ಮಂಗಳೂರಿನ ಮುಡಿಪು ಜಂಕ್ಷನ್‌ನಿಂದ ಎಂದು ಫಲಿತಾಂಶಗಳು ತೋರಿಸಿದವು. ಹೆಚ್ಚಿನ ಹುಡುಕಾಟ ನಡೆಸಿದಾಗ ಇದರ ಬಗ್ಗೆ ಇಲ್ಲಿ  ಜೀ ಕನ್ನಡದಂತಹ ಕನ್ನಡ ಟಿವಿ ಸುದ್ದಿ ವಾಹಿನಿಗಳು ವರದಿ ಮಾಡಿವೆ ಎಂದು ತಿಳಿದುಬಂತು.

ಸುದ್ದಿ ವರದಿಯ ಪ್ರಕಾರ, ಮಾರ್ಚ್ 30, 2024 ರಂದು ಈ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಇತರ ವರದಿಗಳು ತಿಳಿಸುವಂತೆ ಈ ಕಾರ್ಯಕ್ರಮವು ನಾಲ್ಕು ಗಂಟೆಗಳ ಕಾಲ ನಡೆಯಿತು, ಹೀಗಾಗಿ ಹೆದ್ದಾರಿಯಲ್ಲಿ ಅಡೆತಡೆಯುಂಟಾಗಿತ್ತು. ಪರಿಣಾಮವಾಗಿ, ಚುನಾವಣಾ ಸಮಯದಲ್ಲಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕಾರ್ಯಕ್ರಮದ ಆಯೋಜಕರಾದ ಆಟೋ ರಾಜಕನ್ಮಾರ್‌ನ ಅಬೂಬಕರ್ ಸಿದ್ದೀಕಿಯವರಿಗೆ ಚುನಾವಣಾ ಆಯೋಗವು ನೋಟೀಸು ನೀಡಿತು ಎಂದು ವರದಿಯಾಗಿದೆ.

ಹಾಗಾಗಿ, ಈ ಕಾರ್ಯಕ್ರಮ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದದ್ದು ಎಂಬ ಆರೋಪ ಸುಳ್ಳು.


 ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ರವರ ಬಂಧನವನ್ನು ಪ್ರತಿಭಟಿಸುತ್ತಿರುವ ಜನಸಮೂಹವೆಂದು ಜಗನ್ನಾಥ ರಥಯಾತ್ರೆಯ ಚಿತ್ರವನ್ನು ತೋರಿಸಲಾಗಿದೆ; ಸತ್ಯ ಪರಿಶೀಲನೆ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ಬಿಜೆಪಿಯನ್ನು ಹೊಗಳುತ್ತಿರುವುದನ್ನು ತೋರಿಸುವ ತಿದ್ದಿದ ವಾಟ್ಸಾಪ್ ವೀಡಿಯೊ; ಸತ್ಯ ಪರಿಶೀಲನೆ 

Leave a Reply

Your email address will not be published. Required fields are marked *

*