Don't Miss
Altered soundtrack of a video claims Rahul Gandhi resigning from Congress; Fact Check

ರಾಹುಲ್ ಗಾಂಧಿಯವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದಾರೆ ಎನ್ನುವ ಧ್ವನಿ ಬದಲಾಯಿಸಿದ ವೀಡಿಯೊ; ಸತ್ಯ ಪರಿಶೀಲನೆ

ಹೇಳಿಕೆ/Claim: ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಕುರಿತು ಹೇಳಿಕೆಯನ್ನು ಓದುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion:  ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ರಾಹುಲ್ ಗಾಂಧಿಯವರ ಕುರಿತು ಅಪಪ್ರಚಾರ ಮಾಡಲು ವಾಯನಾಡಿನಲ್ಲಿ ನಾಮಪತ್ರ ಸಲ್ಲಿಸುವ ಮೂಲ ವೀಡಿಯೊದ ಧ್ವನಿ ಸುರುಳಿಯನ್ನು  ಬದಲಾಯಿಸಲಾಗಿದೆ.

ರೇಟಿಂಗ್: ಸಂಪೂರ್ಣವಾಗಿ ತಪ್ಪು -- Five rating
ಸತ್ಯ ಪರಿಶೀಲನೆ ವಿವರಗಳು:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಣೆಯನ್ನು ಓದುತ್ತಿರುವುದನ್ನು ಚಿತ್ರಿಸುವ ವೀಡಿಯೊವೊಂದನ್ನು ಟ್ವಿಟರ್ (X) ನಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಇದು ಜನರ ಹುಬ್ಬೇರುವಂತೆ ಮಾಡಿದೆ.

@MithilaWaala ಎಂಬ ಬಳಕೆದಾರರ X ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ಶೀರ್ಷಿಕೆ ಹೀಗಿದೆ, “ಈ ವೀಡಿಯೊ ನಿಜವೋ ಅಥವಾ ಎಡಿಟ್ ಮಾಡಿದ್ದೋ ಗೊತ್ತಿಲ್ಲ”, ಈ ವೀಡಿಯೊವನ್ನು ಕೆಳಗೆ ನೋಡಬಹುದು:

ವೈರಲ್ ವೀಡಿಯೊದಲ್ಲಿ, ರಾಹುಲ್ ಗಾಂಧಿಯವರು ದಾಖಲೆಗಳಿಗೆ ಸಹಿ ಹಾಕುತ್ತಿರುವುದು ಮತ್ತು ಹಿಂದಿಯಲ್ಲಿ ರಾಜೀನಾಮೆ ಘೋಷಣಾ ಹೇಳಿಕೆಯನ್ನು ಓದುತ್ತಿರುವುದನ್ನು ಕಾಣಬಹುದು. ಅದರ ಕನ್ನಡದ ಅನುವಾದ ಇಲ್ಲಿದೆ: “ರಾಹುಲ್ ಗಾಂಧಿ ಆದ ನಾನು ‘ಚುನಾವಿ ಹಿಂದು’ (ಚುನಾವಣೆಯ ಸಮಯದಲ್ಲಿ ಹಿಂದು) ಆಗಿರುವುದರಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಅನ್ಯಾಯ ಯಾತ್ರೆ ಕೈಗೊಂಡದ್ದು ಮತ್ತು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ನಿಜ, ಆದರೆ ಮೋದಿ ಭ್ರಷ್ಟರನ್ನು ಜೈಲಿಗೆ ಕಳಿಸುತ್ತಲೇ ಇದ್ದಾರೆ. ಮೋದಿಯವರ ಆಡಳಿತದಲ್ಲಿ ಭ್ರಷ್ಟ ಜನರನ್ನು ಜೈಲಿಗೆ ಕಳಿಸಲಾಗುತ್ತದೆ. ಆದ್ದರಿಂದ ನಾನು ನನ್ನ ಅಜ್ಜನ ಮನೆಗೆ ಹೋಗುತ್ತಿದ್ದೇನೆ (ಇಟಲಿ).”

FACT CHECK

ಒಂದು ವಾರದ ಹಿಂದೆ ಕೇರಳದ ವಾಯನಾಡಿನಲ್ಲಿ ರಾಹುಲ್ ಗಾಂಧಿಯವರು ನಾಮಪತ್ರ ಸಲ್ಲಿಸಿದ್ದು ದೊಡ್ಡ ಸುದ್ದಿಯಾಗಿದ್ದರಿಂದ ಡಿಜಿಟೈ ಇಂಡಿಯಾಗೆ ಈ ವೀಡಿಯೊ ನೋಡಿರುವಂತೆನಿಸಿತು. ಮೂಲ ಧ್ವನಿಯನ್ನು ಹೊಂದಿದ್ದ ನಿಜವಾದ ವೀಡಿಯೊವನ್ನು ನಾವು ಪರಿಶೀಲಿಸಿದಾಗ, ಹಲವಾರು ಸುದ್ದಿ ವಾಹಿನಿಗಳು ಏಪ್ರಿಲ್ 3, 2024 ರಂದು ಈ ಘಟನೆಯನ್ನು ಅಪ್‌ಲೋಡ್ ಮಾಡಿರುವುದು ನಮಗೆ ಕಂಡುಬಂತು, ಇದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಾಯನಾಡಿನಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸುತ್ತಿರುವುದನ್ನು ಕಾಣಬಹುದು.

ರಾಹುಲ್ ಗಾಂಧಿಯವರು 1:00 ಗಂಟೆಗೆ ಶಾಸನಬದ್ಧ ಹೇಳಿಕೆಯನ್ನು ಓದುವುದನ್ನು ಕಾಣಬಹುದು: “ರಾಹುಲ್ ಗಾಂಧಿಯಾಗಿರುವ ನನ್ನನ್ನು ಸದನದಲ್ಲಿ ಸ್ಥಾನವನ್ನು ತುಂಬಲು ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲಾಗಿದ್ದು, ನಾನು ಭಾರತದ ಸಂವಿಧಾನದೆಡೆಗೆ ನಿಜವಾದ ನಂಬಿಕೆ ಮತ್ತು ಕಾನೂನಿನಲ್ಲಿ ಸ್ಥಾಪಿಸಲ್ಪಟ್ಟಂತೆ ಸತ್ಯನಿಷ್ಠೆಯನ್ನು ಹೊಂದುತ್ತೇನೆ ಮತ್ತು ನಾನು ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತೇನೆ ಎಂದು ದೃಢೀಕರಿಸುತ್ತೇನೆ.”

ಆದ್ದರಿಂದ, ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವಂತೆ ತೋರಿಸಲು ಮೂಲ ವೀಡಿಯೊದ ಧ್ವನಿ ಸುರುಳಿಯನ್ನು ಬದಲಾಯಿಸಲಾಗಿದೆ. ಆದ್ದರಿಂದ, ಹೇಳಿಕೆ ಸಂಪೂರ್ಣವಾಗಿ ಸುಳ್ಳು.

ಇದನ್ನೂ ಓದಿ:

ಚೀನಾಕ್ಕೆ ಹೆದರಿ ಅರುಣಾಚಲ ಪ್ರದೇಶದಲ್ಲಿ 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲವೇ? ಸತ್ಯ ಪರಿಶೀಲನೆ
ಪಿ.ವಿ ನರಸಿಂಹರಾವ್ ಅವರ ಪುತ್ರ ಭಾರತ ರತ್ನ ಸ್ವೀಕರಿಸುವಾಗ ಖರ್ಗೆಯವರು ಚಪ್ಪಾಳೆ ತಟ್ಟಲಿಲ್ಲವೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*