Don't Miss
Didn't Congress field candidates in 2024 poll in Arunachal Pradesh fearing China? Fact Check

ಚೀನಾಕ್ಕೆ ಹೆದರಿ ಅರುಣಾಚಲ ಪ್ರದೇಶದಲ್ಲಿ 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲವೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಚೀನಾಕ್ಕೆ ಹೆದರಿ ಕಾಂಗ್ರೆಸ್ ಪಕ್ಷವು ಅರುಣಾಚಲ ಪ್ರದೇಶದಲ್ಲಿ ಮುಂಬರುವ 2024 ರ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುವುದರಿಂದ ದೂರ ಉಳಿದಿದೆ.

ಕಡೆನುಡಿ/Conclusion: ಪೋಸ್ಟ್‌ನಲ್ಲಿ ಮಾಡಿದ ಹೇಳಿಕೆ ಸುಳ್ಳು. ಇದಕ್ಕೆ ವಿರುದ್ಧವೆಂಬಂತೆ ಮುಂಬರುವ ಅರುಣಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ವಿಧಾನಸಭೆ ಮತ್ತು ಸಂಸದೀಯ ಕ್ಷೇತ್ರಗಳೆರಡಕ್ಕೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಂದುವರಿದಂತೆ, ಭಾರತದ ಚುನಾವಣಾ ಆಯೋಗದ ಮಾಹಿತಿಯು 2004 ರಿಂದ ಸಂಸತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಸ್ಥಿರವಾಗಿ ಭಾಗವಹಿಸಿರುವುದನ್ನು ಖಚಿತಪಡಿಸುತ್ತದೆ.

ರೇಟಿಂಗ್: ಸಂಪೂರ್ಣವಾಗಿ ಸುಳ್ಳು -- Five rating

ಸತ್ಯ ಪರಿಶೀಲನೆ ವಿವರಗಳು: 

ಚೀನಾವನ್ನು ಅಸಮಾಧಾನಗೊಳಿಸುವ ಆತಂಕದಿಂದಾಗಿ ಮುಂಬರುವ ಚುನಾವಣೆಗೆ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಯಾವುದೇ ಅಭ್ಯರ್ಥಿಗಳ ನಾಮನಿರ್ದೇಶನ ಮಾಡಿಲ್ಲ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಅರುಣಾಚಲ ಪ್ರದೇಶಕ್ಕೆ ಪ್ರವೇಶಿಸುವುದನ್ನು ತಪ್ಪಿಸಿದೆ ಎಂದು ಅದು ಬಿಂಬಿಸಲು ಪ್ರಯತ್ನಿಸಿದೆ.

ಹಂಚಿಕೊಂಡಿರುವ ಪೋಸ್ಟ್ ಅನ್ನು ಇಲ್ಲಿ ಮತ್ತು ಇಲ್ಲಿ ನೋಡಿ.

FACT CHECK

ಈ ಹಿಂದೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಯದಲ್ಲಿ ಅರುಣಾಚಲ ಪ್ರದೇಶವನ್ನು ಬಿಟ್ಟಿರುವ ಕುರಿತಾದ ಹೇಳಿಕೆಯನ್ನು ಡಿಜಿಟೈ ಇಂಡಿಯಾ ಈ ಹಿಂದೆ ತಳ್ಳಿಹಾಕಿತ್ತು. ಆದ್ದರಿಂದ, ನಾವು ಈ ಹೇಳಿಕೆಯನ್ನು ಮತ್ತೊಮ್ಮೆ ಸತ್ಯ-ಪರಿಶೀಲನೆಗಾಗಿ ಕೈಗೆತ್ತಿಕೊಂಡೆವು ಮತ್ತದು ನಿಜವಲ್ಲ ಎಂದು ಕಂಡುಬಂತು.

60 ವಿಧಾನ ಸಭಾ ಸ್ಥಾನಗಳು ಮತ್ತು 2 ಲೋಕಸಭಾ ಸ್ಥಾನಗಳಿಗಾಗಿ ಏಪ್ರಿಲ್ 19, 2024 ರಂದು ಏಕಕಾಲದಲ್ಲಿ ವಿಧಾನ ಸಭಾ ಮತ್ತು ಲೋಕ ಸಭಾ ಚುನಾವಣೆಗಳನ್ನು ನಡೆಸಲು ಅರುಣಾಚಲ ಪ್ರದೇಶವು ಸಿದ್ಧವಾಗಿತ್ತು. ಕಾಂಗ್ರೆಸ್ ಪಕ್ಷವು ಲೋಕಸಭಾ ಮತ್ತು ವಿಧಾನ ಸಭಾ ಕ್ಷೇತ್ರಗಳೆರಡಕ್ಕೂ ಅಭ್ಯರ್ಥಿಗಳನ್ನು ಸೂಚಿಸಿತ್ತು. ಅಭ್ಯರ್ಥಿಗಳ ಘೋಷಣೆಯನ್ನು ಇಲ್ಲಿ ನೋಡಬಹುದು.

ಎರಡನೆಯದಾಗಿ, ಎರಡೂ ಸಂಸದೀಯ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿದೆ ಮತ್ತು ಅವರ ಉಮೇದುವಾರಿಕೆಗಳನ್ನು ಅನುಮೋದಿಸಲಾಗಿದೆ ಎಂದು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ದೊರಕುವ ಮಾಹಿತಿಯು ಖಚಿತಪಡಿಸುತ್ತದೆ.

 

ಅಷ್ಟೇ ಅಲ್ಲದೆ, ಅರುಣಾಚಲ ಪ್ರದೇಶದ ಸಂಸತ್ ಚುನಾವಣೆಗಳ ಐತಿಹಾಸಿಕ ಮಾಹಿತಿಯನ್ನು ಚುನಾವಣಾ ಆಯೋಗದ ಪೋರ್ಟಲ್‌ನಲ್ಲಿ ಕಾಣಬಹುದು. 2004 ರಿಂದ, ಕಾಂಗ್ರೆಸ್ ಪಕ್ಷವು ಪ್ರತಿ ಚುನಾವಣೆಯಲ್ಲಿ ಸತತವಾಗಿ ಭಾಗವಹಿಸುತ್ತಾ ಬಂದಿದೆ, ಅಭ್ಯರ್ಥಿ ಅಫಿಡವಿಟ್‌ಗಳು ವೀಕ್ಷಿಸಲು ಲಭ್ಯವಿವೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಕುರಿತಾದ ಹೇಳಿಕೆಗೆ ಸಂಬಂಧಿಸಿದಂತೆ ನೋಡುವುದಾದರೆ, ಯಾತ್ರೆಯು ಜನವರಿ 2024ರಲ್ಲಿ ಅರುಣಾಚಲ ಪ್ರದೇಶವನ್ನು ಪ್ರವೇಶಿಸಿತ್ತು ಎಂದು ದಾಖಲೆಗಳು ತೋರಿಸುತ್ತವೆ. ರಾಹುಲ್ ಅವರ ಅರುಣಾಚಲ ಯಾತ್ರೆಯ ದೃಶ್ಯ ಸಾಕ್ಷ್ಯವು ಇದನ್ನು ಬೆಂಬಲಿಸುತ್ತದೆ. ಈ ಹೇಳಿಕೆಯ ಕುರಿತಾದ ಡಿಜಿಟೈ ಇಂಡಿಯಾದ ಸತ್ಯ ಪರಿಶೀಲನೆಯನ್ನು ಇಲ್ಲಿ ನೋಡಬಹುದು.

ಕಾಂಗ್ರೆಸ್ ಪಕ್ಷವು 2024 ರ ಚುನಾವಣೆಗೆ ಅರುಣಾಚಲ ಪ್ರದೇಶದ ವಿಧಾನಸಭಾ ಮತ್ತು ಸಂಸದೀಯ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿರುವುದರಿಂದ, ಚೀನಾಕ್ಕೆ ಹೆದರಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ ಎಂಬ ಹೇಳಿಕೆ ಸುಳ್ಳು.


ಇದನ್ನೂ ಓದಿ:

ಜಾತಿ ಗಣತಿ ಭಾಷಣ: ರಾಹುಲ್ ಗಾಂಧಿಯವರು 50+15=73 ಎಂದರಾ? ಸತ್ಯ ಪರಿಶೀಲನೆ
ಇಂಡಿಯಾ ಮೈತ್ರಿಕೂಟವು 50% ಮೀಸಲಾತಿಯನ್ನು ತೆಗೆದುಹಾಕುತ್ತದೆ ಎಂದು ರಾಹುಲ್ ಗಾಂಧಿಯವರು ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*