Don't Miss
Kangana Ranaut claims Subhas Chandra Bose was the first PM of 'Azad' India; Fact Check

ಸುಭಾಷ್ ಚಂದ್ರ ಬೋಸ್ ಅವರು ‘ಆಜಾದ್’ (ಸ್ವತಂತ್ರ) ಭಾರತದ ಮೊದಲ ಪ್ರಧಾನಿ ಎಂದು ಕಂಗನಾ ರಣಾವತ್ ಹೇಳಿದ್ದಾರೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಆಜಾದ್ (ಸ್ವತಂತ್ರ) ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಂದು ನಟಿ ಕಂಗನಾ ರನೌತ್ ಹೇಳಿದ್ದಾರೆ.

ಕಡೆನುಡಿ/Conclusion:ತಪ್ಪು ಹೇಳಿಕೆ. 1943ರಲ್ಲಿ ಸುಭಾಷ್ ಚಂದ್ರ ಬೋಸ್ ರವರನ್ನು ಸಿಂಗಾಪುರದಲ್ಲಿ ಸ್ಥಾಪಿಸಲಾದ  ಭಾರತದ ತಾತ್ಕಾಲಿಕ ಗಡಿಪಾರು ಸರ್ಕಾರದ ಪ್ರಧಾನ ಮಂತ್ರಿಯನ್ನಾಗಿ ನೇಮಿಸಲಾಗಿತ್ತು, ಸ್ವತಂತ್ರ ಭಾರತದಲ್ಲಲ್ಲ.

ರೇಟಿಂಗ್: ಸಂಪೂರ್ಣವಾಗಿ ತಪ್ಪು -- Five rating 

ಸತ್ಯ ಪರಿಶೀಲನೆ ವಿವರಗಳು:

ಬಾಲಿವುಡ್‌ನ ನಟಿ ಮತ್ತು ರಾಜಕಾರಣಿಯಾಗಿರುವ ಕಂಗನಾ ರನೌತ್ ರವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರು ಭಾರತದ ಮೊದಲ ಪ್ರಧಾನಿಯಾಗಿದ್ದರು, ಜವಾಹರಲಾಲ್ ನೆಹರು ಅಲ್ಲ ಎಂದು 2024ರ ಏಪ್ರಿಲ್ 4 ರಂದು ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಈ ನಟಿಯು ಸುಭಾಷ್ ಚಂದ್ರ ಬೋಸ್ ರವರು 1943ರಲ್ಲಿ ತಾವು ‘ಆಜಾದ್ ಹಿಂದ್’ ನ ಪ್ರಧಾನಿ ಎಂದು ಘೋಷಿಸಿಕೊಂಡಿದ್ದ ಲೇಖನದ ಚಿತ್ರವನ್ನು ಉಲ್ಲೇಖಿಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಸಂದರ್ಶನದ ಕ್ಲಿಪ್ ವೈರಲ್ ಆಗಿದ್ದು ಇಲ್ಲಿ ಮತ್ತು ಇಲ್ಲಿ ಅದನ್ನು ಹಂಚಿಕೊಳ್ಳಲಾಗಿದೆ.

FACT CHECK

ಡಿಜಿಟೈ ಇಂಡಿಯಾ ಐತಿಹಾಸಿಕ ದಾಖಲೆಗಳೊಂದಿಗೆ ಈ ಹೇಳಿಕೆಯನ್ನು ಪರಿಶೀಲಿಸಲು ಪ್ರಯತ್ನಿಸಿತು. ಸ್ವಾತಂತ್ರ್ಯ ವೀರರಾದ ಸುಭಾಷ್ ಚಂದ್ರ ಬೋಸ್ ರವರು ಜಪಾನೀ ಆಕ್ರಮಣ ಪಡೆಗಳ ಸಹಾಯದಿಂದ ಸಿಂಗಾಪುರದಲ್ಲಿ ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರವನ್ನು ಸ್ಥಾಪಿಸಿದ್ದರು ಎಂಬುದು ನಿಜ. ಈ ಗಡಿಪಾರು ಸರ್ಕಾರವನ್ನು ಆಜಾದ್ ಹಿಂದ್ ಸರ್ಕಾರ ಎಂದು ಕರೆಯಲಾಗುತ್ತಿತ್ತು. ಬೋಸ್ ರವರನ್ನು ಅದರ ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು, ಆದರೆ ಇದು ಮೂಲಭೂತವಾಗಿ ತಾತ್ಕಾಲಿಕ ಗಡಿಪಾರು ಸರ್ಕಾರವಾಗಿಯೇ ಉಳಿದಿತ್ತು.

ಆಜಾದ್ ಹಿಂದ್ ಸರ್ಕಾರಕ್ಕಿಂತ ಮೊದಲು, ಒಂದನೆಯ ಮಹಾ ವಿಶ್ವ ಯುದ್ಧದ ಸಮಯದಲ್ಲಿ ಇದೇ ರೀತಿಯ ಗಡಿಪಾರು ಸರ್ಕಾರವನ್ನು ತಾತ್ಕಾಲಿಕವಾಗಿ ಸ್ಥಾಪಿಸಲಾಗಿತ್ತು. ಜರ್ಮನಿ ನೇತೃತ್ವದ ಕೇಂದ್ರೀಯ ಶಕ್ತಿಗಳ ಬೆಂಬಲದೊಂದಿಗೆ ಭಾರತೀಯ ಸ್ವಾತಂತ್ರ್ಯ ಸಮಿತಿಯು ಡಿಸೆಂಬರ್ 1, 1915 ರಂದು ಕಾಬೂಲ್‌ನಲ್ಲಿ (ಅಫ್ಘಾನ್ ರಾಜಧಾನಿ) ಗಡಿಪಾರು ಭಾರತದ ತಾತ್ಕಾಲಿಕ ಸರ್ಕಾರ ಎಂದು ಕರೆಯಲಾಗಿತ್ತು. ಮಹೇಂದ್ರ ಪ್ರತಾಪ್ ರವರು ಅಧ್ಯಕ್ಷರಾಗಿ ಮತ್ತು ಮೌಲಾನಾ ಬರ್ಕತುಲ್ಲಾ ರವರು ಪ್ರಧಾನ ಮಂತ್ರಿಗಳಾಗಿ ಇದರ ನೇತೃತ್ವ ವಹಿಸಿದ್ದರು. ಬ್ರಿಟಿಷರ ಒತ್ತಡದಿಂದಾಗಿ ಅಫ್ಘಾನ್ ಎಮಿರ್ ಈ ಸರ್ಕಾರವನ್ನು ಬಹಿರಂಗವಾಗಿ ಬೆಂಬಲಿಸಲು ನಿರಾಕರಿಸಿದ್ದರಿಂದ, 1919ರಲ್ಲಿ ಅದರ ಅಸ್ತಿತ್ವ ಕೊನೆಗೊಂಡಿತ್ತು. ಆದ್ದರಿಂದ, ಗಡಿಪಾರು ಸರ್ಕಾರಗಳ ಯಾವುದೇ ಪ್ರಧಾನ ಮಂತ್ರಿಗಳನ್ನು ನ್ಯಾಯಯುತ ಅಥವಾ ವಾಸ್ತವಿಕ ಪ್ರಧಾನ ಮಂತ್ರಿಗಳಾಗಿ ಘೋಷಿಸಲಾಗುವುದಿಲ್ಲ.

ಆದ್ದರಿಂದ, ಗಡಿಪಾರು ಸರ್ಕಾರದ ಮುಖ್ಯಸ್ಥರು ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಗಳೆಂದು ಹೇಳುವುದು ಸುಳ್ಳಾಗುತ್ತದೆ, ಹಾಗೆಯೇ ಕಂಗನಾ ರನೌತ್ ರವರ ಹೇಳಿಕೆಯೂ ಸುಳ್ಳು


ಇದನ್ನೂ ಓದಿ:
ಚೀನಾಕ್ಕೆ ಹೆದರಿ ಅರುಣಾಚಲ ಪ್ರದೇಶದಲ್ಲಿ 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲವೇ? ಸತ್ಯ ಪರಿಶೀಲನೆ
ಪಿ.ವಿ ನರಸಿಂಹರಾವ್ ಅವರ ಪುತ್ರ ಭಾರತ ರತ್ನ ಸ್ವೀಕರಿಸುವಾಗ ಖರ್ಗೆಯವರು ಚಪ್ಪಾಳೆ ತಟ್ಟಲಿಲ್ಲವೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*