Don't Miss
Did AAP leaders Atishi, Saurabh Bhardwaj unfollow Kejriwal on X (Twitter)? Fact Check

ಆಪ್ ನಾಯಕರಾದ ಅತಿಶಿ, ಸೌರಭ್ ಭಾರದ್ವಾಜ್ ಅವರು X (ಟ್ವಿಟ್ಟರ್) ನಲ್ಲಿ ಕೇಜ್ರಿವಾಲ್ ಅವರನ್ನು ಅನ್‌ಫಾಲೋ ಮಾಡಿದ್ದಾರಾ? ಸತ್ಯ ಪರಿಶೀಲನೆ

ಹೇಳಿಕೆ/Claim: ಆಪ್ ನಾಯಕರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು X (ಟ್ವಿಟ್ಟರ್) ನಲ್ಲಿ ಅನ್‌ಫಾಲೋ ಮಾಡಿದರು.

ಕಡೆನುಡಿ/Conclusion: ಸುಳ್ಳು ಹೇಳಿಕೆ, ಇಬ್ಬರೂ ಈಗಲೂ X (ಟ್ವಿಟ್ಟರ್) ನಲ್ಲಿ ಕೇಜ್ರಿವಾಲ್ ಅವರನ್ನು ಅನುಸರಿಸುತ್ತಿದ್ದಾರೆ.

ರೇಟಿಂಗ್: ತಪ್ಪು ನಿರೂಪಣೆ

ಸತ್ಯ ಪರಿಶೀಲನೆ ವಿವರಗಳು

ದೆಹಲಿ ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರು ದೆಹಲಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ಅವರನ್ನು Xನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ ಮತ್ತು ಅದನ್ನು ‘ಟ್ವಿಟರ್ ಫಾಲೋವರ್ ಚೆಕ್’ ಎಂಬ ಆನ್‌ಲೈನ್ ಟೂಲ್‌ನಿಂದ ಪಡೆಯಲಾದ ಎರಡು ಸ್ಕ್ರೀನ್‌ಶಾಟ್‌ಗಳೊಂದಿಗೆ ಬೆಂಬಲಿಸಲಾಗಿದೆ.

2024ರ ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯವು (ED) ಕೇಜ್ರಿವಾಲ್ ಅವರನ್ನು ಮದ್ಯ ನೀತಿ ಪ್ರಕರಣದಲ್ಲಿ ಆಪಾದಿತ ಪಾತ್ರಕ್ಕಾಗಿ ಬಂಧಿಸಿತು ಮತ್ತು ಅವರ ಬಂಧನವನ್ನು ಏಪ್ರಿಲ್ 15 ರವರೆಗೆ ವಿಸ್ತರಿಸಲಾಯಿತು. ಜೊತೆಗೆ, ಅವರು ತಮ್ಮ ವಿಚಾರಣೆಯ ಸಮಯದಲ್ಲಿ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರನ್ನು ಹೆಸರಿಸಿದ್ದರು ಎಂದು ಸುದ್ದಿ ವರದಿಗಳು ತಿಳಿಸಿವೆ. ಶೀರ್ಷಿಕೆಯು ಹೀಗಿದೆ: “ಅತಿಶಿಯವರು ಅರವಿಂದ್ ಕೇಜ್ರಿವಾಲ್ ಅವರನ್ನು ಫಾಲೋ ಮಾಡುವುದನ್ನು ನಿಲ್ಲಿಸಿದಂತಿದೆ. ಆಕೆ ಆತನನ್ನು ಫಾಲೋ ಮಾಡುತ್ತಿದ್ದರು ಎಂದು ಯಾರಾದರೂ ಖಚಿತಪಡಿಸಬಹುದೇ?”

FACT-CHECK

ಭಾರತೀಯ ಜನತಾ ಪಕ್ಷವು (ಬಿಜೆಪಿ) “ತನ್ನ ರಾಜಕೀಯ ವೃತ್ತಿಜೀವನವನ್ನು ಕಾಪಾಡಲು” ತಮ್ಮ ಪಕ್ಷವನ್ನು ಸೇರಲು ಅವಕಾಶ ನೀಡಿತ್ತು ಮತ್ತು ನಿರಾಕರಿಸಿದಲ್ಲಿ ತನ್ನನ್ನು ಬಂಧಿಸುವುದಾಗಿ ಬೆದರಿಕೆ ಹಾಕಿತ್ತು ಎಂಬ ಅತಿಶಿಯ ಹೇಳಿಕೆಯ ಹಿಂದೆಯೇ ಈ ಹೇಳಿಕೆ ಬಂದದ್ದರಿಂದ, ಡಿಜಿಟೈ ಇಂಡಿಯಾ ಇದನ್ನು ಸತ್ಯ ಪರಿಶೀಲನೆಗಾಗಿ ಕೈಗೆತ್ತಿಕೊಂಡಿತು. ಮೊದಲಿಗೆ ನಾವು “ಟ್ವಿಟ್ಟರ್ ಫಾಲೋವರ್ ಚೆಕರ್” ಎಂಬ ಅದೇ ಟೂಲನ್ನು ಬಳಸಿಕೊಂಡು ಪರಿಶೀಲನೆ ನಡೆಸಿದೆವು ಮತ್ತು ಫಲಿತಾಂಶಗಳು ಹೇಳಿಕೆಯನ್ನು ದೃಢೀಕರಿಸುತ್ತವೆ ಎಂದು ಕಂಡುಬಂತು.

ಆದರೆ ಕೇಜ್ರಿವಾಲ್ ಅವರ ಟ್ವಿಟರ್ ಖಾತೆಯಲ್ಲಿ ಮತ್ತಷ್ಟು ಹುಡುಕಿದಾಗ, ಅವರು ಈಗಲೂ ಕೇಜ್ರಿವಾಲ್ ಅವರ ಖಾತೆಯಲ್ಲಿ ಅವರನ್ನು ಅನುಸರಿಸುತ್ತಿದ್ದಾರೆ ಎಂದು ಕಂಡುಬಂತು. ಆದ್ದರಿಂದ, ನಾವು ಅತಿಶಿ ಮತ್ತು ಸೌರಭ್ ಇಬ್ಬರನ್ನೂ ಹುಡುಕಲು ಪ್ರಾರಂಭಿಸಿದಾಗ ಅವರು ಟ್ವಿಟರ್‌ನಲ್ಲಿ ಕೇಜ್ರಿವಾಲ್ ಅವರನ್ನು ನಿಜವಾಗಲೂ ಫಾಲೊ ಮಾಡುತ್ತಿದ್ದಾರೆ ಎಂದು ಕಂಡುಕೊಂಡೆವು.

ಶೀಘ್ರದಲ್ಲೇ, ಸೌರಭ್ ಭಾರದ್ವಾಜ್ ಅವರು ಈ ಕೆಳಗಿನ ಸಂದೇಶವನ್ನು ಟ್ವೀಟ್ ಮಾಡುವ ಮೂಲಕ ತಾವು ಕೇಜ್ರಿವಾಲ್ ಅವರನ್ನು “ಅನ್‌ಫಾಲೋ” ಮಾಡಿದ್ದರೆಂಬ ಹೇಳಿಕೆಯನ್ನು ನಿರಾಕರಿಸಿದರು:


ಆದ್ದರಿಂದ, ಟ್ವಿಟರ್ ಫಾಲೋವರ್ ಚೆಕ್ ಆಧರಿಸಿದ ಹೇಳಿಕೆ ಸುಳ್ಳು

ಇದನ್ನೂ ಓದಿ:

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ರವರ ಬಂಧನವನ್ನು ಪ್ರತಿಭಟಿಸುತ್ತಿರುವ ಜನಸಮೂಹವೆಂದು ಜಗನ್ನಾಥ ರಥಯಾತ್ರೆಯ ಚಿತ್ರವನ್ನು ತೋರಿಸಲಾಗಿದೆ; ಸತ್ಯ ಪರಿಶೀಲನೆ

ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಹೊಡೆದರಾ? ವೀಡಿಯೊ ವೈರಲ್; ಸತ್ಯ ಪರಿಶೀಲನೆ


					
					
									

Leave a Reply

Your email address will not be published. Required fields are marked *

*