Don't Miss

ರಾಜಸ್ಥಾನದ ಬೂಂದಿಯಲ್ಲಿ ರಾಹುಲ್ ಗಾಂಧಿಯವರ ‘ಭಾರತ್ ಮಾತಾ’ ಭಾಷಣವನ್ನು ಸಂದರ್ಭದಿಂದ ಹೊರತಾಗಿಸಿ ತಿರುಚಿರುವುದನ್ನು ತೋರಿಸುವ ವೀಡಿಯೊ ಕ್ಲಿಪ್ ; ಸತ್ಯ ಪರಿಶೀಲನೆ

Claim/ಹೇಳಿಕೆ: “ಈ ಭಾರತ ಮಾತಾ ಯಾರು” ಎಂದು ರಾಹುಲ್ ಗಾಂಧಿ ಕೇಳುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ ಮತ್ತು ಅವರು “ಜಾರ್ಜ್ ಸೊರೊಸ್ ಕೈಗೊಂಬೆ” ಎಂದು ಆರೋಪಿಸುತ್ತದೆ.
Conclusion/ಕಡೆನುಡಿ: ಭಾಷಣದ ಸಂಪೂರ್ಣ ಸಂದರ್ಭವನ್ನು ತಪ್ಪಾಗಿ ನಿರೂಪಿಸಲು ವೀಡಿಯೊ ಕ್ಲಿಪ್ ಅನ್ನು ಕತ್ತರಿಸಲಾಗಿದೆ.

ರೇಟಿಂಗ್:ತಪ್ಪು ನಿರೂಪಣೆ

Fact Check  ವಿವರಗಳು:

ರಾಜಸ್ಥಾನದ ವಿಧಾನಸಭಾ ಚುನಾವಣೆಯ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತ ಮಾತೆ ಯಾರು ಎಂದು ಪ್ರಶ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊ ಕ್ಲಿಪ್ ಅನ್ನು ಇಲ್ಲಿ ನೋಡಿ:


‘ಭಾರತ್ ಮಾತಾ ಕೀ ಜೈ’ .. ಎಂಬ ಘೋಷಣೆಯನ್ನು ಎಲ್ಲರೂ ಕೂಗುತ್ತಾರೆ. ಆದರೆ ಈ ಭಾರತ ಮಾತೆ ಯಾರು, ಏನು?” ಎಂದು ರಾಹುಲ್ ಗಾಂಧಿಯವರು ಹೇಳುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಆಂಧ್ರಪ್ರದೇಶದ ಬಿಜೆಪಿ ನಾಯಕ ರಮೇಶ್ ನಾಯ್ಡುರವರು X ನ ತಮ್ಮ ಅಕೌಂಟಿನಲ್ಲಿ ಈ ಕ್ಲಿಪ್ ಹಂಚಿಕೊಂಡಿದ್ದು ಅದಕ್ಕೆ ಈ ಕೆಳಗಿನ ಶೀರ್ಷಿಕೆಯನ್ನು ನೀಡಿದ್ದಾರೆ: “ये भारत माता है कौन, है क्या [ಈ ಭಾರತ ಮಾತಾ ಯಾರು, ಏನು], ಎಂದು ಕೇಳುವುದು ಜಾರ್ಜ್ ಸೊರೊಸ್ ಕೈಗೊಂಬೆ. ನಾಚಿಕೆಗೇಡು.”
ಈ ಪೋಸ್ಟ್ ಅನ್ನು ಇಲ್ಲಿ ಮತ್ತು ಇಲ್ಲಿ X ಪ್ಲಾಟ್ಫಾರ್ಮ್ನಲ್ಲಿಯೂ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

Fact Check

ಡಿಜಿಟೈ ಇಂಡಿಯಾಗೆ ವಾಟ್ಸಾಪ್ನಲ್ಲಿ ಕೋರಿಕೆ ದೊರಕಿದಾಗ, ತಂಡವು ಅದನ್ನು ಕೈಗೆತ್ತಿಕೊಂಡು ಮೂಲ ವೀಡಿಯೊವನ್ನು ಹುಡುಕಿತು. ಅದೇ ವೀಡಿಯೊವನ್ನು ಕಾಂಗ್ರೆಸ್ ಪಕ್ಷದ ಹ್ಯಾಂಡಲ್ಗಳಲ್ಲಿ ಸಂಪೂರ್ಣ ಸಂದರ್ಭವನ್ನು ವಿವರಿಸಿ ಹಂಚಿಕೊಳ್ಳಲಾಗಿದೆ. ನವೆಂಬರ್ 20ರಂದು ಕಾಂಗ್ರೆಸ್ನ ಸಾಮಾಜಿಕ ಜಾಲತಾಣಗ ಮತ್ತು ಡಿಜಿಟಲ್ ಮಾಧ್ಯಮಗಳ ಸೆಲ್ನ ಅಧ್ಯಕ್ಷೆ ಸುಪ್ರಿಯಾ ಶ್ರಿನಾತೆಯವರು ಹಂಚಿಕೊಂಡ ಟ್ವೀಟ್ ಅನ್ನು ನೋಡಿ.


3 ನಿಮಿಷ 40 ಕ್ಷಣಗಳ ವೀಡಿಯೋದಲ್ಲಿ ರಾಹುಲ್ ಗಾಂಧಿಯವರು “ಚಂದನಾ ಜೀ ಯವರು ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಯನ್ನೆತ್ತಿದ್ದಾರೆ. ಹಾಗಾದರೆ ಈ ಭಾರತ್ ಮಾತಾ ಎಂದರೆ ಯಾರು, ಏನು? ಎಂಬ ಪ್ರಶ್ನೆಯು ಅನೇಕ ಬಾರಿ ಕೇಳಿಬರುತ್ತದೆ” ಎಂದು ಹೇಳುವುದನ್ನು ಕಾಣಬಹುದು. ನಂತರ ಅವರು ಭಾರತ ಮಾತೆ ಯಾರು ಅಥವಾ ಏನು ಎಂದು ವಿವರಿಸಲು ಮುಂದುವರಿಯುತ್ತಾರೆ. ಭಾಷಣ ಮತ್ತು ವೀಡಿಯೊದ ಆವೃತ್ತಿಯ ಸಂಪೂರ್ಣ ಸನ್ನಿವೇಶವನ್ನು ನೋಡುವಾಗ, ಕೆಳಗಿನ ಆವೃತ್ತಿಯು ಸಂದರ್ಭವನ್ನು ವಿವರಿಸುತ್ತದೆ:

“ನೋಡಿ, ಭಾರತ ಮಾತೆ ಎಂದರೆ ಈ ಭೂಮಿ, ಭಾರತ ಮಾತೆ ಎಂದರೆ ಈ ದೇಶದ ಜನರು. ನಿಮ್ಮ ಸಹೋದರರು, ಸಹೋದರಿಯರು, ತಾಯಂದಿರು, ತಂದೆಯಂದಿರು, ಬಡವರು, ಶ್ರೀಮಂತರು, ವೃದ್ಧರು, ಭಾರತ ಮಾತೆಯ ಧ್ವನಿ ಪ್ರತಿಧ್ವನಿಸುವ ಎಲ್ಲಾ ಜನರು. ಇದು ಭಾರತ ಮಾತೆ. ಸಂಸತ್ತಿನಲ್ಲೂ ನಾನು ಹೇಳಿದ್ದೇನೆ, ‘ನೋಡಿ, ನಾನು ಈ ಭಾರತ ಮಾತೆ ಯಾರು , ಅಂದರೆ ಈ ಜನರು ಯಾರು ಎಂದು ತಿಳಿಯಲು ಬಯಸುತ್ತೇನೆ? ಅವಳಲ್ಲಿರುವ ಜನಸಂಖ್ಯೆ ಎಷ್ಟು? ಆದಿವಾಸಿಗಳು ಎಷ್ಟಿದ್ದಾರೆ, ದಲಿತರು ಎಷ್ಟು, ಹಿಂದುಳಿದವರು ಎಷ್ಟು, ಬಡವರು ಮತ್ತು ಶ್ರೀಮಂತರೆಷ್ಟು. ನಾವು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದರೆ ನಾವು ನಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿದ್ದರೆ, ಈ ದೇಶದಲ್ಲಿ ಎಷ್ಟು ಹಿಂದುಳಿದವರು, ಎಷ್ಟು ದಲಿತರು, ಎಷ್ಟು ಬಡವರು ಇದ್ದಾರೆ ಎಂದು ನಮಗೆ ತಿಳಿದಿಲ್ಲವಾದರೆ, ಭಾರತ್ ಮಾತಾ ಕೀ ಜೈ ಎಂದರೆ ಏನು? ಆದ್ದರಿಂದ, ಈ ದೇಶವು ಈಗ ಈ ಆಧಾರದ ಮೇಲೆ ಜನಗಣತಿಯನ್ನು ನಡೆಸಬೇಕಾಗುತ್ತದೆ.

ಇಷ್ಟಲ್ಲದೆ, ಮೇಲೆ ಕಾಣುವಂತೆ ರಾಹುಲ್ ಗಾಂಧಿಯವರ ಅಧಿಕೃತ ಯೂಟ್ಯೂಬ್ ಖಾತೆಯಲ್ಲಿ ಪೂರ್ಣ ವೀಡಿಯೊವನ್ನು ಲಭ್ಯಪಡಿಸಲಾಯಿತು. ರಾಜಸ್ಥಾನದ ಬೂಂದಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿಯವರ 35 ನಿಮಿಷಗಳ ವೀಡಿಯೊದ ಪೂರ್ಣ ಆವೃತ್ತಿಯು ಸಂಪೂರ್ಣ ಸಂದರ್ಭ ಮತ್ತು ನೈಜ ಆವೃತ್ತಿಯನ್ನು ತೋರಿಸುತ್ತದೆ.

ಇದನ್ನೂ ಓದಿ:

ಇಲ್ಲ, ರಾಹುಲ್ ಗಾಂಧಿಯವರು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಉಚಿತ ಮೊಬೈಲ್ ರೀಚಾರ್ಜ್ ಅನ್ನು ಘೋಷಿಸಿಲ್ಲ

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*