Video of drunk British Navy Official creating ruckus in Chennai claimed as Indian police assault; Fact Check

ಬ್ರಿಟಿಷ್ ನೌಕಾಪಡೆಯ ಅಧಿಕಾರಿಯೊಬ್ಬರು ಕುಡಿದ ಮತ್ತಿನಲ್ಲಿ ಚೆನ್ನೈಯಲ್ಲಿ ಗಲಾಟೆ ಮಾಡಿದ ವೀಡಿಯೊವನ್ನು ಭಾರತೀಯ ಪೋಲೀಸ್ ಶೋಷಣೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಹಣ ನೀಡದಿದ್ದಕ್ಕಾಗಿ ಚೆನ್ನೈನಲ್ಲಿ ಭಾರತೀಯ ಪೋಲೀಸರು ಬ್ರಿಟಿಷ್ ನೌಕಾಪಡೆಯ ಅಧಿಕಾರಿಯನ್ನು ಥಳಿಸುವುದನ್ನು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಮದ್ಯದ ಅಮಲಿನಲ್ಲಿದ್ದ ಬ್ರಿಟಿಷ್ ನೌಕಾಪಡೆಯ ಸಿಬ್ಬಂದಿಯೊಬ್ಬರು ಚೆನ್ನೈಯ ರಸ್ತೆಯಲ್ಲಿ ಬೈಕ್ ಸವಾರರನ್ನು ಕಚ್ಚುವುದನ್ನು ತಡೆಯಲು ಪೋಲೀಸರು ಮತ್ತು ಸಾರ್ವಜನಿಕರು ಪ್ರಯತ್ನಿಸುತ್ತಿದ್ದರು.

ರೇಟಿಂಗ್: ದಾರಿತಪ್ಪಿಸುವ ಸುದ್ದಿ -- 

ಸತ್ಯ ಪರಿಶೀಲನೆ ವಿವರಗಳು:

ಹಣ ನೀಡಲು ನಿರಾಕರಿಸಿದ ಬ್ರಿಟಿಷ್ ನೌಕಾಪಡೆಯ ಅಧಿಕಾರಿಯೊಬ್ಬರಿಗೆ ಚೆನ್ನೈ ಪೊಲೀಸರು ಕಿರುಕುಳ ನೀಡಿದರೆನ್ನುವ ಹೇಳಿಕೆಯೊಂದಿಗೆ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ X ಪೋಸ್ಟ್‌ನ ಶೀರ್ಷಿಕೆಯು ಹೀಗಿದೆ: “ಬ್ರೇಕಿಂಗ್ ನ್ಯೂಸ್ ! “ತಮಗೆ ಹಣ ನೀಡಲಿಲ್ಲವೆಂಬ ಕಾರಣಕ್ಕೆ ಚೆನ್ನೈಯಲ್ಲಿ ಭಾರತೀಯ ಪೋಲೀಸರು ಬ್ರಿಟಿಷ್ ನೌಕಾಪಡೆಯ ಅಧಿಕಾರಿಯೊಬ್ಬರನ್ನು ಥಳಿಸಿದ ವರದಿಗಳು ಹೊರಹೊಮ್ಮುತ್ತಿವೆ”. ಪೋಸ್ಟ್ ನಲ್ಲಿ, “ನ್ಯಾಯ ದೊರಕಿದೆಯೆಂದು ಖಚಿತಪಡಿಸಿಕೊಳ್ಳಲು ಸಂಪೂರ್ಣ ಮತ್ತು ಸಮಾನ ತನಿಖೆಗಾಗಿ ಪ್ರತಿಪಾದಿಸುತ್ತಿದ್ದೇವೆ” ಎಂದೂ ಹೇಳಲಾಗಿದೆ.

ಅದನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

FACT CHECK

ಡಿಜಿಟೈ ಇಂಡಿಯಾದ ಸಹಾಯವಾಣಿಗೆ ಒಂದು ವಾಟ್ಸಾಪ್ ವಿನಂತಿ ಬಂದ ನಂತರ ಈ ಸುದ್ದಿಯನ್ನು ಕೈಗೆತ್ತಿಕೊಂಡು ಮೂಲ ವೀಡಿಯೊವನ್ನು ಪರಿಶೀಲಿಸಿದೆವು. ಬ್ರಿಟನ್, ನೌಕಾಪಡೆ ಅಧಿಕಾರಿ, ಚೆನ್ನೈ ಪೊಲೀಸ್ ಎಂಬ ಪದಗಳನ್ನು ಬಳಸಿದಾಗ X ನಲ್ಲಿ ಮೂಲ ವೀಡಿಯೊ ಕಾಣಿಸಿಕೊಂಡಿತು ಮತ್ತು ಆ ನೌಕಾಪಡೆಯ ಅಧಿಕಾರಿಯು ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಹೋಗಿತ್ತಿದ್ದ ಬೈಕ್ ಸವಾರರನ್ನು ಕಚ್ಚಲು ಪ್ರಯತ್ನಿಸುತ್ತಿದ್ದ ಎಂದು ವೀಡಿಯೊ ಸೂಚಿಸಿತು. ಕೆಳಗೆ ಕಂಡುಬರುವಂತೆ X ನಲ್ಲಿನ ಹಲವಾರು ಪೋಸ್ಟ್‌ಗಳು ಮೂಲ ವೀಡಿಯೊವನ್ನು ಹಂಚಿಕೊಂಡಿವೆ:

2024 ರ ಮಾರ್ಚ್ 31 ರಂದು ರಾತ್ರಿ ಚೆನ್ನೈಯ ರಾಯಪೆಟ್ಟಾ ಪ್ರದೇಶದ ಮಾಲ್‌ ಒಂದರ ಹೊರಗೆ ನಡೆದ ಈ ಘಟನೆಯನ್ನು ಸುದ್ದಿ ವರದಿಗಳು ದೃಢಪಡಿಸಿವೆ. ವೀಡಿಯೊದಲ್ಲಿರುವ ವ್ಯಕ್ತಿಯು ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನನ್ನು ಹಿಡಿದು ಕಚ್ಚಲು ಯತ್ನಿಸುತ್ತಿರುವುದು ಕಂಡುಬರುತ್ತದೆ. ಒಂದಿಬ್ಬರು ಸ್ಥಳೀಯ ಪೋಲೀಸರು ಆತನನ್ನು ಹಿಡಿದಿಡಲು ಪ್ರಯತ್ನಿಸುತ್ತಿರುವುದನ್ನೂ ವೀಡಿಯೊದಲ್ಲಿ ಕಾಣಬಹುದು. ನಂತರ ಅವರು ಆ ಪಾನಮತ್ತ ವ್ಯಕ್ತಿಯನ್ನು ರಸ್ತೆಬದಿಗೆ ಎಳೆದುಕೊಂಡು ಹೋಗುವುದನ್ನು ವೀಡಿಯೊ ತೋರಿಸುತ್ತದೆ.

ಚೆನ್ನೈ ಪೋಲೀಸರು ನಂತರ ಆ ಪಾನಮತ್ತ ವ್ಯಕ್ತಿಯನ್ನು ಜೆ ಎಲ್ ವಿಲ್ಲಿಸ್ ಎಂದೂ, ಈತ ನಿರ್ವಹಣೆಗಾಗಿ ಚೆನ್ನೈಯ ಕಟ್ಟುಪಳ್ಳಿಯಲ್ಲಿರುವ ಲಾರ್ಸೆನ್ ಮತ್ತು ಟರ್ಬೊ ಹಡಗು ನಿರ್ಮಾಣ ಘಟಕದಲ್ಲಿ ಲಂಗರು ಹಾಕಲಾದ ಯುನೈಟೆಡ್ ಕಿಂಗ್‌ಡಂನ 2 ರಾಯಲ್ ನೇವಿ ಹಡಗುಗಳಲ್ಲಿ ಒಂದರ ಕ್ರೂ ಸದಸ್ಯನೆಂದೂ ಗುರುತಿಸಿದರು. ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಸಹೋದ್ಯೋಗಿಗಳ ಭರವಸೆಯ ಮೇರೆಗೆ ಆತನನ್ನು ಬಿಡಲಾಯಿತು ಎಂದು ಪೋಲೀಸರು ತಿಳಿಸಿದ್ದಾರೆ.

ಆದ್ದರಿಂದ, ಹಣವನ್ನು ನೀಡದಿದ್ದಕ್ಕಾಗಿ ಬ್ರಿಟಿಷ್ ನೌಕಾಪಡೆಯ ಅಧಿಕಾರಿಯನ್ನು ಭಾರತೀಯ ಪೋಲೀಸರು ಚೆನ್ನೈಯಲ್ಲಿ ಥಳಿಸಿದರೆಂಬ ಹೇಳಿಕೆಯು ಸಂಪೂರ್ಣವಾಗಿ ಸುಳ್ಳು.

ಇದನ್ನೂ ಓದಿ:

ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಹೊಡೆದರಾ? ವೀಡಿಯೊ ವೈರಲ್; ಸತ್ಯ ಪರಿಶೀಲನೆ
ಇಲ್ಲ, "ಡಿಎಂಕೆ ಹಿಂದೂಗಳನ್ನು ಮತಕ್ಕಾಗಿ ಬೇಡುವುದಿಲ್ಲ " ಎಂದು ಸ್ಟಾಲಿನ್ ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*