Don't Miss

ನಮ್ಮ ಬಗ್ಗೆ

ಡಿಜಿಟೈ ಇಂಡಿಯಾ ಎಂಬುದು ವಾಸ್ತವ, ಸತ್ಯಸಂಬದ್ಧ ಸಾಮಾಜಿಕ ಮಾಧ್ಯಮ ಸಂದೇಶಗಳು ಮತ್ತು ಅಧಿಕೃತ ವ್ಯೂಗಳು ಎಂದು ಹೇಳಿಕೊಳ್ಳುವ ಮತ್ತು ಹಂಚಿಕೊಳ್ಳಲಾಗುವ ದೈನಂದಿನ ಸಾಮಾಜಿಕ ಜಾಲತಾಣದ  ಹೇಳಿಕೆಗಳ ಸತ್ಯಾಸತ್ಯತೆಯನ್ನು ಹೊರತರಲು ಒಗ್ಗೂಡಿದ ಅನುಭವಿ ಪತ್ರಕರ್ತರ ಒಂದು ಸಣ್ಣ ಗುಂಪು ಆರಂಭಿಸಿದ ಒಂದು ಸ್ವತಂತ್ರ ಡಿಜಿಟಲ್ ಸತ್ಯ-ಪರಿಶೀಲನಾ  ಸಾಹಸೋದ್ಯಮ.

ಅದು ಹೇಳಿಕೆಯೇ ಆಗಲಿ ಅಥವಾ ಸಂದೇಶವೇ ಆಗಿರಲಿ, ನಾವು ಅದರ ಸತ್ಯ-ಪರಿಶೀಲನೆ ಮಾಡುವುದರ ಮೇಲೆ ಗಮನ ವಹಿಸುತ್ತೇವೆ. ಆನ್‌ಲೈನ್ ಮಾಧ್ಯಮಗಳು, ವೆಬ್‌ಸೈಟ್‌ಗಳು, ಹಾಗೂ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್‌ನಿಂದ ವಾಟ್ಸಾಪ್ ವರೆಗಿನ ಸಾಮಾಜಿಕ ಜಾಲತಾಣದಲ್ಲಿನ ಹೇಳಿಕೆಗಳಲ್ಲಿ ಸುಳ್ಳುಗಳು ಮತ್ತು ವದಂತಿಗಳನ್ನು ಕಂಡುಹಿಡಿಯುವುದು  ನಮ್ಮ ಕೆಲಸದ ವ್ಯಾಪ್ತಿಯಲ್ಲಿ ಒಳಗೊಳ್ಳುವ ವಿಷಯ.

ಸಂಸ್ಥೆಯ ರಚನೆ:

ಡಿಜಿಟೈ.ಇನ್, 2014ರಲ್ಲಿ ಭಾರತದಲ್ಲಿ ನೋಂದಾಯಿಸಲ್ಪಟ್ಟ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಂಪನಿಯಾಗಿರುವ ಸಾಫ್ಟ್ ಮೀಡಿಯಾ ಎಲ್.ಎಲ್.ಪಿ ಯ ಒಂದು ಭಾಗವಾಗಿದೆ . ಸುಳ್ಳು ವಾಟ್ಸಾಪ್ ವದಂತಿಗಳನ್ನು ಆಧರಿಸಿ ಬೆಂಗಳೂರು ಸಮೀಪದ ಹಳ್ಳಿಯೊಂದರಲ್ಲಿ ಗುಂಪು-ದಾಳಿಯಲ್ಲಿ ಅಮಾಯಕ ಐಟಿ ಉದ್ಯೋಗಿಯೊಬ್ಬರ  ಕೊಲೆಯ ಹಿನ್ನೆಲೆಯಲ್ಲಿ ನಾವು ಸತ್ಯ-ಪರಿಶೀಲನೆಯನ್ನು ಕೈಗೊಂಡಿದ್ದೇವೆ. ನವೆಂಬರ್ 2018ರಲ್ಲಿ ಔಪಚಾರಿಕವಾಗಿ ಆರಂಭಗೊಂಡ ನಮ್ಮ ಸಂಸ್ಥೆಯ ಏಕೈಕ ಉದ್ಯಮವೆಂದರೆ ಡಿಜಿಟೈ ಇಂಡಿಯಾ ಮತ್ತಿದು ಸಂಪೂರ್ಣವಾಗಿ ಸತ್ಯ-ಪರಿಶೀಲನೆಗೆ ಸಮರ್ಪಿತವಾಗಿದೆ.

ಡಿಜಿಟೈ ಇಂಡಿಯಾ ಉಪಕ್ರಮವು ಆರು ಜನರ ತಂಡವೊಂದನ್ನು ಹೊಂದಿದೆ (ದಯವಿಟ್ಟು “ನಮ್ಮ ತಂಡ” ಪುಟವನ್ನು ನೋಡಿ). ಪ್ರಸ್ತುತ, ನಮ್ಮಲ್ಲಿ ನಾಲ್ವರು ಸತ್ಯ ಪರೀಕ್ಷಕರು ಇದ್ದಾರೆ, ಇವರು ಹೇಳಿಕೆಗಳು ಅಥವಾ ಸುಳ್ಳು ನಿರೂಪಣೆಗಳನ್ನು ಆಯ್ದು, ಸತ್ಯ-ಪರಿಶೀಲನೆ ಮಾಡಿ, ಪ್ರಕಟಣೆಗೆ ಸಲ್ಲಿಸುವ ಮೊದಲು ಚಿತ್ರಗಳನ್ನು ಪರಿಶೀಲಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಈ ತಂಡವು ಪ್ರತಿಯೊಂದು ಲೇಖನವನ್ನು ಪ್ರಕಟಿಸುವ ಮುನ್ನ ಹಲವಾರು ಹಂತಗಳಲ್ಲಿ ಪರಿಶೀಲಿಸುತ್ತದೆ..

ನಮ್ಮ ವೆಬ್‌ಸೈಟ್‌ನಲ್ಲಿ ಸತ್ಯ ಪರಿಶೀಲಿತ ಸುದ್ದಿಗಳನ್ನು ಪ್ರಕಟಿಸುವ ಮುನ್ನ, ಅವು ನಮ್ಮ ಕಾರ್ಯವಿಧಾನ ಮತ್ತು ತತ್ವ ಸಂಹಿತೆಯಲ್ಲಿ ಉಲ್ಲೇಖಿಸಿರುವಂತೆ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತವೆಯೇ ಎಂದು ನಿರ್ಧರಿಸುವ ಅಂತಿಮ ಅಧಿಕಾರ ನಮ್ಮ ಸಂಪಾದಕರದ್ದು. ಎಲ್ಲಾ ಅವಶ್ಯಕತೆಗಳನ್ನು ಪೂರೈಸುವುದು ಮತ್ತು ಸಂಪಾದಕೀಯ ವಿಷಯಗಳಲ್ಲಿ ಯಾವುದೇ ಹೊರಗಿನ ಹಸ್ತಕ್ಷೇಪವಿಲ್ಲದೆ ನಮ್ಮ ಬರಹಗಳಲ್ಲಿ ಯಾವುದೇ ರೀತಿಯ ಪಕ್ಷಪಾತ ಅಥವಾ ಒಲವು ತೋರದಿರುವುದು  ಐ.ಎಫ್.ಸಿ.ಎನ್ ತತ್ವ ಸಂಹಿತೆಯ ಸಹಿದಾರರಾದ ನಮ್ಮ ಪ್ರಾಮಾಣಿಕ ಪ್ರಯತ್ನವಾಗಿದೆ.

ನಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿರುವ ತತ್ವ ಸಂಹಿತೆಗೆ ನಾವು ಕಟ್ಟುನಿಟ್ಟಾಗಿ ಬದ್ಧರಾಗಿದ್ದೇವೆ. ನಾವು ಕಾರ್ಯವಿಧಾನವನ್ನು ಎತ್ತಿಹಿಡಿಯುವುದರಲ್ಲಿ  ಪಾರದರ್ಶಕರಾಗಿದ್ದೇವೆ, ಇದು ಪರಿಶೀಲನೆಗೆ ಮುಕ್ತವಾಗಿದ್ದು ನಮ್ಮ ಸುದ್ದಿಗಳನ್ನು ಓದುಗರು ಸುಲಭವಾಗಿ ತಾವೇ ಪುನರಾವರ್ತಿಸಬಹುದು. ನಾವು ತಿದ್ದುಪಡಿಯ ಎಲ್ಲಾ ಮಾನದಂಡಗಳನ್ನು ಅನುಸರಿಸುತ್ತೇವೆ ಮತ್ತು ಅವುಗಳನ್ನು ಕೂಡಲೆ ತಿದ್ದುಪಡಿಗಳ ಪುಟದಲ್ಲಿ ಸಾರ್ವಜನಿಕಗೊಳಿಸುತ್ತೇವೆ.

ಡಿಜಿಟೈ ಇಂಡಿಯಾ (http://digiteye.in) ಐ.ಎಫ್.ಸಿ.ಎನ್ ತತ್ವ ಸಂಹಿತೆಯ ಪರಿಶೀಲಿತ ಸಹಿದಾರರಾಗಿದ್ದಾರೆ. ಸಹಿದಾರರು ಐ.ಎಫ್.ಸಿ.ಎನ್ ಸಂಹಿತೆಯನ್ನು ಉಲ್ಲಂಘಿಸುತ್ತಿದ್ದಾರೆಂದು ನಿಮಗನಿಸಿದಲ್ಲಿ, ನೀವು ಇಲ್ಲಿ ಅದರ ಕುರಿತು ಐ.ಎಫ್.ಸಿ.ಎನ್ ಗೆ ಮಾಹಿತಿ ನೀಡಬಹುದು.

 

ನಮ್ಮನ್ನು ಸಂಪರ್ಕಿಸಿ:

ನಮ್ಮ ಸತ್ಯ ಪರಿಶೀಲನಾ ಉಪಕ್ರಮದ ಭಾಗವಾಗಲು ನಮ್ಮ ಓದುಗರು ಮತ್ತು ಸಂದರ್ಶಕರಿಗೆ ಆಹ್ವಾನವಿದೆ. ಪಕ್ಷಪಾತ, ಸುಳ್ಳು ಅಥವಾ ನಕಲಿ ಎಂದು ನಿಮಗನಿಸಿದ ಯಾವುದೇ ಮಾಹಿತಿಯನ್ನು ದಯವಿಟ್ಟು ನಮಗೆ ಒದಗಿಸಿ. ಸತ್ಯ ಪರಿಶೀಲನೆ ಮತ್ತು ಕಾರ್ಯವಿಧಾನದ ಪ್ರಮಾಣಿತ ನಿಯಮಗಳನುಸಾರ ನಾವು ಸರಿಯಾದ ಪರೀಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಕೆಳಗಿನ ವಿಳಾಸಗಳ ಮೂಲಕ ಅಥವಾ ಈ ಸಾಮಾಜಿಕ ಜಾಲತಾಣ ಸಂಪರ್ಕಗಳ ಮೂಲಕ ನಮಗೆ ಈಮೇಲ್ ಕಳುಹಿಸಿ:

email: admin@digiteye.in

Twitter: @eye_digit

WhatsApp: 9632830256