Don't Miss

ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಚರ್ಚ್‌ನಲ್ಲಿ ತಮ್ಮ ಮದುವೆಯನ್ನು ನೋಂದಾಯಿಸುತ್ತಿರುವುದನ್ನು ಈ ಚಿತ್ರವು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸೋನಿಯಾ ಗಾಂಧಿ ಮತ್ತು ರಾಜೀವ್ ಗಾಂಧಿ ಕ್ರೈಸ್ತ ಸಂಪ್ರದಾಯದಲ್ಲಿ ವಿವಾಹವಾದರು ಎಂದು ವೈರಲ್ ಚಿತ್ರ ಆರೋಪಿಸುತ್ತದೆ.

ಕಡೆನುಡಿ/Conclusion:  ಸೋನಿಯಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ವಿವಾಹದ ಮೂಲ ವೀಡಿಯೊದಲ್ಲಿ, ದಂಪತಿಗಳು ಸಾಂಪ್ರದಾಯಿಕ ಹಿಂದೂ ವಿವಾಹದ ಉಡುಪನ್ನು ಧರಿಸಿ ತಮ್ಮ ವಿವಾಹವನ್ನು ನೋಂದಾಯಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ಕ್ರೈಸ್ತ ಧರ್ಮದ ಮದುವೆಯಲ್ಲಿ, ವಧು ಬಿಳಿ ವಸ್ತ್ರಗಳನ್ನು ಧರಿಸುತ್ತಾರೆ, ಆದರೆ ಚಿತ್ರದಲ್ಲಿ ಸೋನಿಯಾ ಗಾಂಧಿ ಗುಲಾಬಿ ಬಣ್ಣದ ಬಟ್ಟೆಯಲ್ಲಿದ್ದಾರೆ.

ರೇಟಿಂಗ್:ತಪ್ಪು ನಿರೂಪಣೆ

ಸತ್ಯ ಪರಿಶೀಲನೆ ವಿವರಗಳು

ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕ್ರೈಸ್ತ ಪಾದ್ರಿಯ ಮುಂದೆ ಕುಳಿತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಜೋಡಿಯು ದೆಹಲಿಯ ಚರ್ಚ್‌ ಒಂದರಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿಕೊಳ್ಳುತ್ತಿರುವುದು ಎಂದು ಚಿತ್ರವು ಹೇಳಿದೆ. ದಂಪತಿಗಳು ಲೇಖನಿ ಮತ್ತು ಕಾಗದದೊಂದಿಗೆ ಮೇಜಿನ ಮುಂದೆ ಕುಳಿತಿರುವುದನ್ನು ಇದು ತೋರಿಸುತ್ತದೆ.

ಚಿತ್ರದೊಂದಿಗೆ ವೈರಲ್ ಆಗುತ್ತಿರುವ ಹೇಳಿಕೆ ಹೀಗಿದೆ:

“ದೆಹಲಿಯ ಚರ್ಚ್‌ನಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿಕೊಳ್ಳುತ್ತಿರುವ ಯುವ ಜೋಡಿ. ಅವರ ಮಗ ಭಾರತೀಯರಿಗೆ ಪಾಠ ಹೇಳುವುದರಲ್ಲಿ ನಿರತ… ಹಿಂದೂ Vs ಹಿಂದುತ್ವವನ್ನು 🙂 #IBatheAlone ಜೈ ಹೋ”

ಈ ವೈರಲ್ ಚಿತ್ರವನ್ನು ಪರಿಶೀಲಿಸಲು ಡಿಜಿಟೈ ಇಂಡಿಯಾಗೆ ವಾಟ್ಸಾಪ್‌ನಲ್ಲಿ ಕೋರಿಕೆ ಬಂತು.

FACT CHECK

ಡಿಜಿಟೈ ಇಂಡಿಯಾ ತಂಡವು ಈ ಚಿತ್ರವನ್ನು ಬಳಸಿ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿತು. 2018ರಿಂದ ಇದೇ ಹೇಳಿಕೆಯೊಂದಿಗೆ ಈ ಚಿತ್ರವು ಚಲಾವಣೆಯಲ್ಲಿದೆ ಎಂಬುದನ್ನು ಫಲಿತಾಂಶಗಳಿಂದ ನಮಗೆ ತಿಳಿದುಬಂತು.

ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಮದುವೆಗೆ ಸಂಬಂಧಿಸಿದಂತೆ ಹೆಚ್ಚಿನ ಚಿತ್ರಗಳನ್ನು ಪಡೆಯಲು ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದೆವು. 2015ರಲ್ಲಿ NDTV ಪ್ರಕಟಿಸಿದ ಸುದ್ದಿ ವರದಿಯೊಂದು ನಮ್ಮ ಕೈಸಿಕ್ಕಿತು. ಕಪ್ಪು-ಬಿಳುಪು ಬಣ್ಣದಲ್ಲಿ ಅವರ ಮದುವೆಯ ಕ್ಷಣಗಳನ್ನು ಸೆರೆಹಿಡಿದ ವೀಡಿಯೊವನ್ನು ಆ ಲೇಖನವು ಉಲ್ಲೇಖಿಸುತ್ತದೆ. ಈ ವಿಡಿಯೋವನ್ನು ಅಸೋಸಿಯೇಟೆಡ್ ಪ್ರೆಸ್ ಪ್ರಕಟಿಸಿತ್ತು. ವೀಡಿಯೊವನ್ನು ಮೂಲತಃ ಬ್ರಿಟಿಷ್ ಮೂವಿಟೋನ್ ಅಪ್‌ಲೋಡ್ ಮಾಡಿದ್ದು ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಪ್ರಮುಖ ಅತಿಥಿಗಳಾಗಿ ಇಂದಿರಾ ಗಾಂಧಿ, ಜಾಕೀರ್ ಹುಸೇನ್, ಸಂಜಯ್ ಗಾಂಧಿ, ಮತ್ತು ವಿಜಯ ಲಕ್ಷ್ಮಿ ಪಂಡಿತ್ ಇದ್ದರು.

ಅಸೋಸಿಯೇಟೆಡ್ ಪ್ರೆಸ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ 1:03 ನಿಮಿಷಗಳ ಸಮಯಕ್ಕೆ, ಇಂದಿರಾ ಗಾಂಧಿ ನೋಡುತ್ತಿರುವಂತೆ ಸೋನಿಯಾ ಮತ್ತು ರಾಜೀವ್ ತಮ್ಮ ಮದುವೆಯನ್ನು ನೋಂದಾಯಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ಅವರು ಮದುವೆ ಉಡುಪಿನಲ್ಲಿದ್ದಾರೆ ಮತ್ತು ಹಿಂದೂ ಸಂಪ್ರದಾಯಾನುಸಾರ ಮದುವೆಯಾದ ಈ ದಂಪತಿಗಳು ತಮ್ಮ ವಿವಾಹವನ್ನು ನೋಂದಾಯಿಸಿಕೊಂಡರು ಎಂದು ಇದು ಖಚಿತಪಡಿಸುತ್ತದೆ.

 

ವೈರಲ್ ಆಗಿರುವ ಚಿತ್ರದಲ್ಲಿ, ಸೋನಿಯಾ ಗಾಂಧಿ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿರುವುದನ್ನು ಕಾಣಬಹುದು. ಕ್ರೈಸ್ತ ಧರ್ಮದ ವಿವಾಹಗಳಲ್ಲಿ ಸಾಮಾನ್ಯವಾಗಿ ವಧು ಬಿಳಿಯ ವಸ್ತ್ರಗಳನ್ನು ಧರಿಸಬೇಕಾಗುತ್ತದೆ. ಆದ್ದರಿಂದ, ಹೇಳಿಕೆ ಸುಳ್ಳು.

ಇದನ್ನೂ ಓದಿ:

ಇಲ್ಲ, ರಾಹುಲ್ ಗಾಂಧಿಯವರು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಉಚಿತ ಮೊಬೈಲ್ ರೀಚಾರ್ಜ್ ಅನ್ನು ಘೋಷಿಸಿಲ್ಲ

ಸುಂದರವಾದ ಸಮುದ್ರ ಪ್ರಾಣಿಯಾದ ಸಮುದ್ರ ಪೆನ್ ನ ಚಿತ್ರವನ್ನು ನಾಗಪುಷ್ಪ ಎಂಬ ಅಪರೂಪದ ಹೂವೆಂದು ಎಂದು ನಂಬಿಸಲಾಗಿದೆ

Leave a Reply

Your email address will not be published. Required fields are marked *

*