Don't Miss

ಇಲ್ಲ, ಈ ವೀಡಿಯೊ ಒಬ್ಬ ಬ್ರಾಹ್ಮಣ ಶಿಕ್ಷಕರು ದಲಿತ ಮಗುವನ್ನು ಥಳಿಸುವುದನ್ನು ತೋರಿಸುವುದಿಲ್ಲ; ಸತ್ಯ ಪರಿಶೀಲನೆ

ಮಗುವಿನ ಮೇಲೆ ಹಿರಿಯ ವ್ಯಕ್ತಿಯೊಬ್ಬರು ದೈಹಿಕ ಹಲ್ಲೆ ನಡೆಸುತ್ತಿರುವ ಸಂಕಟವನ್ನುಂಟುಮಾಡುವ ಒಂದು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಮಗು ಅಳುವುದು ಮತ್ತು ಹೊಡೆಯುವುದನ್ನು ನಿಲ್ಲಿಸುವಂತೆ ವ್ಯಕ್ತಿಯನ್ನು ಬೇಡಿಕೊಳ್ಳುವುದನ್ನು ಕಾಣಬಹುದು, ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಇತರ ವಿದ್ಯಾರ್ಥಿಗಳ ಕಣ್ಣೆದುರಿಗೆ ಆ ವ್ಯಕ್ತಿ ಮಗುವನ್ನು ಥಳಿಸುವುದನ್ನು ಮುಂದುವರೆಸುತ್ತಾನೆ. ವೀಡಿಯೊದೊಂದಿಗೆ ವೈರಲ್ ಆಗುತ್ತಿರುವ ಹೇಳಿಕೆ ಹೀಗಿದೆ:
ये देखो हिंदू राष्ट्र, (धर्म) के अंदर छुपा ब्राह्मण राष्ट्र
जब पता चला, ब्राह्मणो के बिच मे दलित बच्चा भी पढता है, जबकी पढने के लिए उस बच्चेने बच्चेने भी चोटी रखी है.
यही है भाजप मोदी और RSS का राष्ट्रवाद तथा अजेंडा. इस व्हिडिओ को समाज माध्यमों में फैलावो ताकि जल्द से जल्द यह सर्वोच्च न्यायालय और हमारे सरन्यायाधीश तक पहुंचे और जितनी क्रुरता और बर्बरता से यह दरिंदा इस लडके को पीट रहा है उतने ही शीघ्र उसकी गिरफ्तारी हो ओर कडी से कडी उसे शिक्षा मिले. और इस मासुम को न्याय मिले.
(ಅನುವಾದ: ಇಲ್ಲಿ ನೋಡಿ, ಹಿಂದೂ ರಾಷ್ಟ್ರದೊಳಗೆ ಅಡಗಿರುವ ಬ್ರಾಹ್ಮಣ ರಾಷ್ಟ್ರ. ಒಂದು ದಲಿತ ಮಗು ಬ್ರಾಹ್ಮಣರ ನಡುವೆ ಓದುತ್ತದೆ, ಮಗು ಓದುವ ಸಲುವಾಗಿ ಕೂದಲನ್ನೂ ಹೆಣೆದುಕೊಂಡಿದೆ. ಇದು ಬಿಜೆಪಿ, ಮೋದಿ ಮತ್ತು ಆರ್ಎಸ್ಎಸ್ನ ರಾಷ್ಟ್ರೀಯತೆ ಮತ್ತು ಯೋಜನೆ. ಈ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ, ಆದಷ್ಟು ಬೇಗ ಇದು ನಮ್ಮ ಸರ್ವೋಚ್ಚ ನ್ಯಾಯಾಲಯ ಮತ್ತು ಮುಖ್ಯ ನ್ಯಾಯಾಧೀಶರನ್ನು ತಲುಪಲಿ. ಈ ಕಟುಕನು ಎಷ್ಟು ಕ್ರೌರ್ಯ ಮತ್ತು ಅನಾಗರಿಕತೆಯಿಂದ ಈ ಹುಡುಗನನ್ನು ಥಳಿಸುತ್ತಿದ್ದಾನೋ, ಅಷ್ಟೇ ಬೇಗ ಅವನ ಬಂಧನವಾಗಲಿ ಮತ್ತು ಅವನಿಗೆ ಕಠಿಣ ಶಿಕ್ಷೆಯಾಗಲಿ. ಹಾಗೆಯೇ, ಈ ಮುಗ್ಧ ಮಗುವಿಗೆ ನ್ಯಾಯ ಸಿಗಲಿ.

ವೀಡಿಯೊ X (ಈ ಹಿಂದೆ, ಟ್ವಿಟರ್) ಮತ್ತು ಫೇಸ್ಬುಕ್ ನಲ್ಲಿಯೂ ವೈರಲ್ ಆಗುತ್ತಿದೆ ಮತ್ತು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಅದೇ ರೀತಿಯ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ.

FACT CHECK

ಡಿಜಿಟೈ ಇಂಡಿಯಾ ತಂಡವು ವೀಡಿಯೊವನ್ನು ಹಲವು ಕೀಫ್ರೇಮ್ಗಳಾಗಿ ವಿಂಗಡಿಸಿ ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿತು. ಒಂದು ಫಲಿತಾಂಶವು ಪಬ್ಲಿಕ್ ಎಂಬ ವೀಡಿಯೊ ಹಂಚಿಕೆ ಆಪ್ ನಲ್ಲಿ ಹಂಚಿಕೊಳ್ಳಲಾದ ವೀಡಿಯೊವನ್ನು ತೋರಿಸಿತು. ಈ ವೀಡಿಯೊದ ಶೀರ್ಷಿಕೆ ಹೀಗಿತ್ತು “ಸಿಧೌಲಿ-ಗ್ರಾಮೆ ಚಂಜನ್ ಕೆ ಗುರು ಕುಲ್ ಮೆ ಬುರಿ ತರಹ್ ಪೀಟಾ ಜಾ ರಹಾ ಮಾಸೂಮ್”. ಇದನ್ನು ಅಕ್ಟೋಬರ್ 9, 2023ರಂದು ಅಪ್ಲೋಡ್ ಮಾಡಲಾಗಿತ್ತು.
ನಾವು ಈ ಸುಳಿವನ್ನು ಬಳಸಿ ಗೂಗಲ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ಒಂದು ಫಲಿತಾಂಶವು ದೈನಿಕ್ ಭಾಸ್ಕರದ ಲೇಖನಕ್ಕೆ ನಮ್ಮನ್ನು ಕೊಂಡೊಯ್ಯಿತು, ಅದರಲ್ಲಿದ್ದ ಹೇಳಿಕೆ, “सीतापुर में संस्कृत विद्यालय के आचार्य ने छात्र को पीटा:पहले थप्पड़ बरसाया..फिर छड़ी से पीटकर पटक दिया, नाराज लोगों ने कार्रवाई की मांग की” (ಅನುವಾದ: ಸೀತಾಪುರದ ಸಂಸ್ಕೃತ ಪಾಠಶಾಲೆಯ ಆಚಾರ್ಯರು ವಿದ್ಯಾರ್ಥಿಯನ್ನು ಥಳಿಸಿದರು: ಮೊದಲು ಕಪಾಳಕ್ಕೆ ಹೊಡೆದು… ನಂತರ ಕೋಲಿನಿಂದ ಥಳಿಸಿದರು, ಕೋಪಗೊಂಡ ಜನರು ಕ್ರಮ ಕೈಗೊಳ್ಳಲು ಒತ್ತಾಯಿಸಿದರು) ಸುದ್ದಿ ಲೇಖನದಲ್ಲಿ ಅದೇ ವೀಡಿಯೊ ಇದೆ.

ಅಕ್ಟೋಬರ್ 20, 2023ರ ಇಂಡಿಯನ್ ಎಕ್ಸ್ಪ್ರೆಸ್ನ ಮತ್ತೊಂದು ವರದಿಯು ಉಲ್ಲೇಖಿಸುತ್ತದೆ, “ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಸಿಧೌಲಿ ಪ್ರದೇಶದಲ್ಲಿನ ಪೌರೋಹಿತ್ಯ (ಹಿಂದೂ ಪುರೋಹಿತ) ತರಬೇತಿ ಕೇಂದ್ರದ ಶಿಕ್ಷಕರು 14 ವರ್ಷದ ವಿದ್ಯಾರ್ಥಿ ಸಂಸ್ಥೆಯಿಂದ ಓಡಿಹೋದದ್ದಕ್ಕಾಗಿ ಅವನನ್ನು ಥಳಿಸಿದ ಕಾರಣದಿಂದ ಬಂಧನಕ್ಕೊಳಗಾದರು. ಈ ಘಟನೆಯು ಜುಲೈಯಲ್ಲಿ ನಡೆಯಿತು ಎಂದು ವರದಿಯಲ್ಲಿ ಹೇಳಲಾಗಿದೆ ಆದರೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ನಂತರವೇ ಬೆಳಕಿಗೆ ಬಂದದ್ದು.
ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 506 (ಅಪರಾಧಾತ್ಮಕ ಬೆದರಿಕೆ)ರ ಅಡಿಯಲ್ಲಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಸೀತಾಪುರ ಪೊಲೀಸರು ಕೂಡ ಟ್ವಿಟರ್ನಲ್ಲಿ ಈ ಘಟನೆಯ ಬಗ್ಗೆ ಮಾತನಾಡಿದ್ದಾರೆ.

 

ಹಾಗಾಗಿ, ಹೇಳಿಕೆ ಸುಳ್ಳು.

CLAIM: ಒಬ್ಬ ದಲಿತ ವಿದ್ಯಾರ್ಥಿಯ ಮೇಲೆ ಬ್ರಾಹ್ಮಣ ಶಿಕ್ಷಕಿಯೊಬ್ಬರಿಂದ ಹಲ್ಲೆ.

CONCLUSION: T ಹಿಂದೂ ಪೌರೋಹಿತ್ಯ ತರಬೇತಿ ಕೇಂದ್ರದಿಂದ ಓಡಿ ಹೋದ ವಿದ್ಯಾರ್ಥಿಯನ್ನು ಆ ವ್ಯಕ್ತಿ ಹೊಡೆಯುತ್ತಿದ್ದ. ಈ ಘಟನೆಯು ಜುಲೈಯಲ್ಲಿ ನಡೆದಿತ್ತು ಆದರೆ ವಿಡಿಯೋ ವೈರಲ್ ಆದದ್ದು ಇತ್ತೀಚೆಗೆ. ಪೊಲೀಸರು ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 506ರ (ಅಪರಾಧಾತ್ಮಕ ಬೆದರಿಕೆ) ಅಡಿಯಲ್ಲಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿದ್ದಾರೆ.

RATING: ??? – ತಪ್ಪು ವ್ಯಾಖ್ಯಾನ.

[ಇದನ್ನೂ ಓದಿ: ಹಮಾಸ್ ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿ ಆಟದ ಮೈದಾನವನ್ನು ಪ್ರವೇಶಿಸಿತು ಎಂದು ವೈರಲ್ ವೀಡಿಯೊ ಆರೋಪಿಸಿದೆ; ಸತ್ಯ ಪರಿಶೀಲನೆ

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ]