Don't Miss

ನಂದಿನಿ ತುಪ್ಪದ ಪೂರೈಕೆಗೆ ಕೆಎಂಎಫ್ ನೀಡಿದ ಬೆಲೆ ಹೇಳಿಕೆಯನ್ನು ಟಿಟಿಡಿ 50 ವರ್ಷಗಳ ನಂತರ ತಿರಸ್ಕರಿಸಿತೇ? ಸತ್ಯ ಪರಿಶೀಲನೆ

ಸಾಂಪ್ರದಾಯಿಕ ತಿರುಪತಿ ಲಡ್ಡುಗಳ ತಯಾರಿಕೆಗಾಗಿ ನಂದಿನಿ ತುಪ್ಪದ ಪೂರೈಕೆಗೆ ಸಂಬಂಧಿತ ಬೆಲೆ ಪ್ರಸ್ತಾವನೆಯನ್ನು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ತಿರಸ್ಕರಿಸಿತು ಎಂದು ಕರ್ನಾಟಕ ಹಾಲು ಮಹಾಮಂಡಳಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಹೇಳಿಕೆಗಳು ಕಾಣಿಸಿಕೊಂಡಿವೆ.

ಸುದ್ದಿ ವೈರಲ್ ಆಗಿದ್ದು, ಮೇ 2023ರ ಚುನಾವಣೆ ವೇಳೆ ರಾಜ್ಯದಲ್ಲಿ ಅಮುಲ್ ಪ್ರವೇಶವನ್ನು ಎತ್ತಿ ಹಿಡಿದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ಕೆಎಂಎಫ್ ಮತ್ತು ಅದರ ನಂದಿನಿ ತುಪ್ಪದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸುವ ಹಲವು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ. ಟ್ವಿಟರ್‌ನಲ್ಲಿನ ಸಂದೇಶಗಳನ್ನು ಇಲ್ಲಿ ಮತ್ತು ಇಲ್ಲಿಯೂ ನೋಡಬಹುದು.

ಟ್ವಿಟರ್‌ನಲ್ಲಿನ ಸಂದೇಶಗಳನ್ನು ಇಲ್ಲಿ ಮತ್ತು ಇಲ್ಲಿಯೂ ನೋಡಬಹುದು.

FACT CHECK

ಈ ವಿಷಯದ ಕುರಿತಾಗೆದ್ದ ತೀವ್ರ ವಿವಾದದಿಂದಾಗಿ, ಟಿಟಿಡಿ ಸಂಸ್ಥೆಯು 50 ವರ್ಷಗಳ ಪೂರೈಕೆ ಮಾಡಲಾದ ನಂದಿನಿ ತುಪ್ಪದ ಪೂರೈಕೆಯನ್ನು ಸ್ಥಗಿತಗೊಳಿಸಿದ ಕುರಿತು ಡಿಜಿಟೈ ಇಂಡಿಯಾ ಸತ್ಯ ಪರಿಶೀಲನೆ ನಡೆಸಿತು. ಹೇಳಿಕೆಗಳಲ್ಲಿ ತಿಳಿಸಲಾದಂತೆ 50 ವರ್ಷಗಳ ಕಾಲ ತಡೆರಹಿತವಾಗಿ ಟಿಟಿಡಿಗೆ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗಿಲ್ಲ ಎಂದು ನಮಗೆ ತಿಳಿದುಬಂದಿತು. ವಾಸ್ತವಿಕವಾಗಿ, 2019ರಲ್ಲಿಯೂ ಕೆಎಂಎಫ್ ನ ಬೆಲೆ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿತ್ತು ಮತ್ತು ತಮಿಳುನಾಡಿನ ಹಾಲಿನ ಬ್ರ್ಯಾಂಡ್ ಆವಿನ್‌ಗೆ ಗುತ್ತಿಗೆ ನೀಡಲಾಯಿತು. ಟಿಟಿಡಿ ಅಧಿಕಾರಿಗಳ ಪ್ರಕಾರ ಪ್ರತಿ ಆರು ತಿಂಗಳಿಗೊಮ್ಮೆ ಬಿಡ್ಡಿಂಗ್ ನಡೆಯುತ್ತದೆ.

ಕೆಎಂಎಫ್ ಸಂಸ್ಥೆಯು ಕಳೆದ 20 ವರ್ಷಗಳಿಂದ ನಿರಂತರವಾಗಿ ತುಪ್ಪ ಪೂರೈಕೆ ಮಾಡುತ್ತಿದೆ ಎಂದು ತಿರುಮಲ ತಿರುಪತಿ ದೇವಸ್ತಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎ.ವಿ. ಧರ್ಮ ರೆಡ್ಡಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು. ಆದ್ದರಿಂದ, 50 ವರ್ಷಗಳ “ತಡೆರಹಿತ” ಪೂರೈಕೆ ಎಂಬ ಹೇಳಿಕೆ ನೆಲೆರಹಿತವಾಗಿದೆ. ಟೆಂಡರ್, ಸಹಜವಾಗಿ, ಕಡಿಮೆ ಬೆಲೆ ಪ್ರಸ್ತಾಪಿಸಿದವರಿಗೆ ಹೋಗುತ್ತದೆ, ಆದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾರ್ಚ್ 2023ರಲ್ಲಿ ನಡೆದ ಇತ್ತೀಚಿನ ಟೆಂಡರ್‌ನಲ್ಲಿ ಕೆಎಂಎಫ್ ಭಾಗವಹಿಸಲಿಲ್ಲ ಎಂದು ಟಿಟಿಡಿ ಯ  ಕಾರ್ಯನಿರ್ವಾಹಕ ಅಧಿಕಾರಿ (ಇಒ) ಸ್ಪಷ್ಟಪಡಿಸಿದ್ದಾರೆ ಎಂದು ಅವರು ತಿಳಿಸಿದರು.

ಹಾಗಾಗಿ, ಕೆಎಂಎಫ್ ಗೆ  “ಈಗ” ಗುತ್ತಿಗೆ ದೊರೆತಿಲ್ಲ ಎಂಬ ಹೇಳಿಕೆ ನಿಜವಲ್ಲ.

ಕರ್ನಾಟಕ ಸರ್ಕಾರದ ಸ್ಪಷ್ಟನೆ:

ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ವಿಷಯದ ಕುರಿತು ತಕ್ಷಣ ಪ್ರತಿಕ್ರಯಿಸುತ್ತಾ, ತಿರುಮಲ ತಿರುಪತಿ ದೇವಸ್ಥಾನಗಳಿಗೆ (ಟಿಟಿಡಿ) ಕರ್ನಾಟಕ ಹಾಲು ಮಹಾಮಂಡಳಿಯಿಂದ (ಕೆಎಂಎಫ್) ನಂದಿನಿ ತುಪ್ಪದ ಪೂರೈಕೆಯನ್ನು “ಬಿಜೆಪಿ ಆಡಳಿತದಲ್ಲಿ ನಿಲ್ಲಿಸಲಾಯಿತು” ಎಂದು ಹೇಳಿದರು ಮತ್ತು ಟಿಟಿಡಿಗೆ ನಂದಿನಿ ತುಪ್ಪದ ಪೂರೈಕೆಯ ನಿಲುಗಡೆಯು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ “ಹಿಂದೂ ವಿರೋಧಿ” ನೀತಿಯನ್ನು ಎತ್ತಿಹಿಡಿದಿದೆ ಎಂಬ ಬಿಜೆಪಿ ಆರೋಪವನ್ನು ನಿರಾಕರಿಸಿದರು.

ತಿರುಪತಿಗೆ (ಆಂಧ್ರ ಪ್ರದೇಶದಲ್ಲಿರುವ ಹಿಂದೂ ತೀರ್ಥಯಾತ್ರಾ ಸ್ಥಳ) ನಂದಿನಿ ತುಪ್ಪದ ಪೂರೈಕೆಯನ್ನು ನಿಲ್ಲಿಸಿರುವುದು ನೆನ್ನೆ-ಮೊನ್ನೆಯ ವಿಚಾರವಲ್ಲ. ತುಪ್ಪದ ಪೂರೈಕೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಕಾರ್ಯಾವಧಿಯಲ್ಲಿಯೇ ನಿಲ್ಲಿಸಲಾಗಿತ್ತು ಎಂದವರು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿವರ ನೀಡಿದರು: “ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿರುವುದು ಇಂದು, ನಿನ್ನೆಯ ವಿಚಾರವಲ್ಲ. ಕಳೆದ ಒಂದೂವರೆ ವರ್ಷದ ಹಿಂದೆಯೇ @BJP4Karnataka ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.”

ಕೆಎಂಎಫ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಶಾಸಕರಾದ ಭೀಮ ನಾಯ್ಕ್ ಅವರು ಸ್ಪಷ್ಟಪಡಿಸಿದ್ದೇನೆಂದರೆ, ಕೆಎಂಎಫ್ ಪ್ರಮುಖ ಪೂರೈಕೆದಾರ ಸಂಸ್ಥೆಯಲ್ಲ, ಆದರೆ ಮೂರನೇ ಸ್ಥಾನದಲ್ಲಿದ್ದುದರಿಂದ ಎಲ್1 ಮತ್ತು ಎಲ್2 ಬಿಡ್ಡರ್‌ಗಳ ನಂತರ ಸರಬರಾಜು ಮಾಡುವ ಅಗತ್ಯವಿತ್ತು. ಟಿಟಿಡಿಯು ತನ್ನ ಸಾಂಪ್ರದಾಯಿಕ ಜಿಐ-ಟ್ಯಾಗ್ಡ್ ಲಡ್ಡುಗಳನ್ನು ತಯಾರಿಸಲು 1,400 ಟನ್ ತುಪ್ಪದ ಪೂರೈಕೆಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಟೆಂಡರ್ ಆಹ್ವಾನಿಸುತ್ತದೆ, ಆದ್ದರಿಂದ ಬೇಡಿಕೆಯನ್ನು ಕೆಎಂಎಫ್ ಒಂಟಿಯಾಗಿ ಪೂರೈಸಲು ಸಾಧ್ಯವಿಲ್ಲ ಮತ್ತು ಅಷ್ಟು ಪೂರೈಕೆ ಮಾಡಿಯೂ ಇಲ್ಲ.

“ಕೆಎಂಎಫ್ ಸಂಸ್ಥೆಯು 2005 ರಿಂದ 2020ರವರೆಗೆ ತಿರುಪತಿಗೆ ನಂದಿನಿ ತುಪ್ಪವನ್ನು ಪೂರೈಸಿದೆ… ನಾವು ಬೇಡಿಕೆಯ 45 ಶೇಕಡಾವಾರಿನಷ್ಟು ಪೂರೈಸುತ್ತೇವೆ… 2020ರಿಂದ, ನಾವು ಎಲ್3 ಪೂರೈಕೆದಾರರಾಗಿದ್ದೇವೆ. ನಾವು ಎಲ್1 ಮತ್ತು ಎಲ್2 ಬಿಡ್ಡರ್‌ಗಳ ನಂತರ ಸರಬರಾಜು ಮಾಡುವ ಅಗತ್ಯವಿತ್ತು. 2021-22ರಲ್ಲಿ ಪೂರೈಕೆಗಾಗಿ ಅವರು ಪತ್ರ ಬರೆದಿದ್ದರು. ಕೆಎಂಎಫ್ ನಿಂದ 345 ಮೆಟ್ರಿಕ್ ಟನ್ ನಷ್ಟು ನಂದಿನಿ ತುಪ್ಪವನ್ನು ಪೂರೈಕೆ ಮಾಡಲಾಗಿತ್ತು,” ಎಂದು ನಾಯ್ಕ್ ರವರು ಮಾಧ್ಯಮಗಳಿಗೆ ಹೆಚ್ಚಿನ ವಿವರ ನೀಡಿದರು. ಆದ್ದರಿಂದ, ಹೇಳಿಕೆ ಸುಳ್ಳು ಮತ್ತು ಇದಕ್ಕೆ ನಮ್ಮ ಮುದ್ರೆ- ತಪ್ಪು ನಿರೂಪಣೆ.

ಹೇಳಿಕೆ: ಸಾಂಪ್ರದಾಯಿಕ ತಿರುಪತಿ ಲಡ್ಡುಗಳ ತಯಾರಿಕೆಗಾಗಿ ನಂದಿನಿ ತುಪ್ಪದ ಪೂರೈಕೆಗೆ ಸಂಬಂಧಿತ ಬೆಲೆ ಪ್ರಸ್ತಾವನೆಯನ್ನು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ತಿರಸ್ಕರಿಸಿತು ಎಂದು ಕರ್ನಾಟಕ ಹಾಲು ಮಹಾಮಂಡಳಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಹೇಳಿಕೆಗಳು ಕಾಣಿಸಿಕೊಂಡಿವೆ.

ಕಡೆನುಡಿ: ಟಿಟಿಡಿಯು ತನ್ನ ಸಾಂಪ್ರದಾಯಿಕ ಜಿಐ-ಟ್ಯಾಗ್ಡ್ ಲಡ್ಡುಗಳನ್ನು ತಯಾರಿಸಲು 1,400 ಟನ್ ತುಪ್ಪದ ಪೂರೈಕೆಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಟೆಂಡರ್ ಆಹ್ವಾನಿಸುತ್ತದೆ, ಆದ್ದರಿಂದ ಬೇಡಿಕೆಯನ್ನು ಕೆಎಂಎಫ್ ಒಂಟಿಯಾಗಿ ಪೂರೈಸಲು ಸಾಧ್ಯವಿಲ್ಲ ಮತ್ತು ಅಷ್ಟು ಪೂರೈಕೆ ಮಾಡಿಯೂ ಇಲ್ಲ. ಆದ್ದರಿಂದ, ಹೇಳಿಕೆ ಸುಳ್ಳು

Rating – ತಪ್ಪು ನಿರೂಪಣೆ —

[ಇದನ್ನೂ ಓದಿ: ಹಮಾಸ್ ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿ ಆಟದ ಮೈದಾನವನ್ನು ಪ್ರವೇಶಿಸಿತು ಎಂದು ವೈರಲ್ ವೀಡಿಯೊ ಆರೋಪಿಸಿದೆ; ಸತ್ಯ ಪರಿಶೀಲನೆ

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ]