ಹೇಳಿಕೆ/Claim : ಪ್ಲೇಸ್ಟೇಷನ್ 2 ಆರಂಭಿಕ ಧ್ವನಿಯನ್ನು ಕಟ್ಟಡದ ಮೇಲಿನಿಂದ ಪಿಯಾನೋವನ್ನು ಎಸೆದು ಮಾಡಲಾಗಿದೆ.
ಕಡೆನುಡಿ/Conclusion :ಹೇಳಿಕೆ ಸುಳ್ಳು. ಪೋಸ್ಟ್‌ಗೆ ಲಗತ್ತಿಸಲಾದ ವೀಡಿಯೊ, ಧ್ವನಿಯ ಸೃಷ್ಟಿಗೆ ಪುರಾವೆಯಲ್ಲ, ಇದು ಮೊದಲೇ ಅಸ್ತಿತ್ವದಲ್ಲಿರುವ ವೈರಲ್ ಕ್ಲಿಪ್ ಆಗಿದೆ ಮತ್ತು ಇದರ ಮೇಲೆ PS2 ಚೈಮ್ ಅನ್ನು ಸಂಪಾದಿಸಲಾಗಿದೆಯೆಷ್ಟೇ. PS2 ಸ್ಟಾರ್ಟ್ಅಪ್ ಧ್ವನಿಯನ್ನು ಸೋನಿ ಧ್ವನಿ ವಿನ್ಯಾಸಕ ಟಕಾಫುಮಿ ಫುಜಿಸಾವಾ ಮತ್ತು ಮೀಸಲಾದ ಒಂದು ತಂಡವು ರಚಿಸಿತ್ತು.
ರೇಟಿಂಗ್/Rating : ಸುಳ್ಳು ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ
******************************************************
ಪಿಯಾನೋವನ್ನು ಬೀಳಿಸುವ ಮೂಲಕ ಪ್ಲೇಸ್ಟೇಷನ್ 2ರ ಆರಂಭಿಕ ಧ್ವನಿಯನ್ನು ರಚಿಸಲಾಗಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘mejoviralES’ ಅಂತಹ ಒಂದು ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಪ್ಲೇಸ್ಟೇಷನ್ 2ರ ಆರಂಭಿಕ ಧ್ವನಿಯನ್ನು ಕಟ್ಟಡದ ಮೇಲಿನಿಂದ ಪಿಯಾನೋ ಎಸೆದು ರಚಿಸಲಾಗಿದೆ.” ಪೋಸ್ಟ್‌ಗೆ ಲಗತ್ತಿಸಲಾದ 14 ಕ್ಷಣಗಳ ವೀಡಿಯೊದಲ್ಲಿ ಜನರು ಒಂದು ಪಿಯಾನೋವನ್ನು ಕಟ್ಟಡದಿಂದ ಎಸೆಯುವುದನ್ನು ತೋರಿಸಲಾಗಿದೆ, ಈ ಮೂಲಕ PS2 ಧ್ವನಿಯನ್ನು ರಚಿಸಲಾಗಿದೆ. ಕೆಳಗಿನ ಪೋಸ್ಟ್ ಅನ್ನು ನೋಡಿ-
El sonido de apertura de la PlayStation 2 proviene de un piano arrojado desde lo alto de un edificiopic.twitter.com/bVSUBfgh8f
— 𝐌𝐄𝐉𝐎𝐑𝐄𝐒 𝐕ϟ𝐑𝐀𝐋𝐄𝐒™ (@mejorviralES) April 14, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
PlayStation 2’nin açılış sesi, bir binanın tepesinden aşağı atılan bir piyanodan geliyor. pic.twitter.com/RpwhD1Ohqq
— Dikkat Medya (@dikkatmedya) April 14, 2026
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ದೃಶ್ಯದಲ್ಲಿರುವ ವೀಡಿಯೊವನ್ನು ಸಂಪಾದಿಸಲಾಗಿದೆ ಮತ್ತಿದು PS2 ಆರಂಭಿಕ ಧ್ವನಿಯ ರಚನೆಯ ದಾಖಲೆಯನ್ನು ತೋರಿಸುವುದಿಲ್ಲ. ನಿಜವಾದ ಪ್ಲೇಸ್ಟೇಷನ್ 2 ಆರಂಭಿಕ ಧ್ವನಿಯನ್ನು ಸೋನಿ ಧ್ವನಿ ವಿನ್ಯಾಸಕ ಟಕಾಫುಮಿ ಫುಜಿಸಾವಾ ಮತ್ತು ಮೀಸಲಾದ ಒಂದು ತಂಡವು ಅಭಿವೃದ್ಧಿಪಡಿಸಿದೆ.
ವಿಷಯವನ್ನು ಅರ್ಥಮಾಡಿಕೊಳ್ಳಲು, ನಿಮಗೆ ಪ್ಲೇಸ್ಟೇಷನ್ 2 ಆರಂಭಿಕ ಧ್ವನಿಯ ಪರಿಚಯವಿಲ್ಲದಿದ್ದರೆ ಅಥವಾ ಮೂಲ ಶಬ್ದವು ನೆನಪಿಲ್ಲದಿದ್ದರೆ, ಈ ವೀಡಿಯೊ ಸಿಸ್ಟಮ್ ಬೂಟ್ ಆಗುವ ಮುನ್ನ ಕೇಳಿಬರುವ ಧ್ವನಿಯನ್ನು ಸೆರೆಹಿಡಿಯುತ್ತದೆ.
ಹೆಚ್ಚಿನ ಮಾಹಿತಿ ಪಡೆಯಲು, ಮೊದಲು ನಾವು ವೀಡಿಯೊದ ವಿವಿಧ ಕೀಫ್ರೇಮ್‌ಗಳನ್ನು ತೆಗೆದು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸುಮಾರು 3 ನಿಮಿಷಗಳ ಉದ್ದದ ದೃಶ್ಯಗಳ ಮೂಲ ಆವೃತ್ತಿಯು ದೊರಕಿತು.
ಈ ಕ್ಲಿಪ್ ಅನ್ನು ಏಪ್ರಿಲ್ 23, 2011ರಂದು ಅಪ್‌ಲೋಡ್ ಮಾಡಲಾಗಿದ್ದರೂ, ವಿವರಣೆಯಲ್ಲಿ ಇದು “MIT ಬೇಕರ್ ಪಿಯಾನೋ ಡ್ರಾಪ್ 2007” ಮತ್ತು ವೀಡಿಯೊಗ್ರಾಫರ್ ಕ್ಲಿಂಟನ್ ಬ್ಲ್ಯಾಕ್‌ಬರ್ನ್ ಎಂದು ಹೇಳಲಾಗಿದೆ. ವೀಡಿಯೊದಲ್ಲಿ 2:52 ಸಮಯಕ್ಕೆ ಪಿಯಾನೋವನ್ನು ಎಸೆಯಲಾಗಿದೆ ಮತ್ತು ಅದರಲ್ಲಿ ಮರ ಒಡೆಯುವ ಸಾಮಾನ್ಯ ಶಬ್ದ ಕೇಳಿಸುತ್ತದೆಯಷ್ಟೇ. ಹೇಳಿಕೆಗೆ ಹೋಲಿಸಿದರೆ, ಇದರಲ್ಲಿ ಯಾವುದೇ PS2 ಆರಂಭಿಕ ಧ್ವನಿ ಇಲ್ಲ, ಹೀಗಾಗಿ ಹೇಳಿಕೆಯಲ್ಲಿ ಸಂಪಾದಿತ ಕ್ಲಿಪ್ ಅನ್ನು ಬಳಸಲಾಗಿದೆ ಎಂಬುದು ಸಾಬೀತಾಗುತ್ತದೆ.
ನಂತರ, ಅದನ್ನು ರಚಿಸಿದ ನಿಜವಾದ ವ್ಯಕ್ತಿಯ ಬಗ್ಗೆ ತಿಳಿಯಲು ನಾವು “PS2 ಓಪನಿಂಗ್ ಸೌಂಡ್ ಕಂಪೋಸರ್” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಪ್ಲೇಸ್ಟೇಷನ್ ಬ್ಲಾಗ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಟಕಾಫುಮಿ ಫ್ಯೂಜಿಸಾವಾ ಈ ಅದ್ಭುತ ಪ್ಲೇಸ್ಟೇಷನ್ ಸ್ಟಾರ್ಟ್ಅಪ್ ಧ್ವನಿಯ ಮೂಲ ಸೃಷ್ಟಿಕರ್ತರಾಗಿದ್ದರು, ಆರಂಭಿಕ ಹಾರ್ಡ್‌ವೇರ್ ಅಭಿವೃದ್ಧಿಯ ಭಾಗವಾಗಿ “ತಂಡವು ಅಧಿಕೃತವಾಗುವ ಮೊದಲೇ” ಈ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದರು. 1994 ರಲ್ಲಿ, ಪ್ರೊಟೊಟೈಪ್ (ಮೂಲಮಾದರಿ) ರಚಿಸಿದಾಗ, ಆತ ಮೋಷನ್ ಲೋಗೋವನ್ನು ತಮ್ಮದೇ ಆದ ಧ್ವನಿ ವಿನ್ಯಾಸದೊಂದಿಗೆ ಸಂಯೋಜಿಸಿ “ಸ್ಟಾರ್ಟ್ಅಪ್ ಧ್ವನಿಯನ್ನು ರಚಿಸಿದರು”.
ಪ್ಲೇಸ್ಟೇಷನ್ 2ಕ್ಕೆ ಸಂಬಂಧಿಸಿದಂತೆ, ಧ್ವನಿ ತಂಡವು “ಗಮನಾರ್ಹ ಗಾತ್ರಕ್ಕೆ ಬೆಳೆದಿದೆ” ಎನ್ನುತ್ತಾ ಫ್ಯೂಜಿಸಾವಾ ವಿಸ್ತೃತ ಸೃಜನಶೀಲ ಪಾತ್ರಕ್ಕೆ ಬಂದರು, ಇಲ್ಲಿ ಅತ ಒಂದು ಪರಿಕಲ್ಪನೆಯನ್ನು ರಚಿಸಿ ತಂಡದಲ್ಲಿ ಸ್ಪರ್ಧೆಯನ್ನು ನಡೆಸಲು ಕಾರಣವಾಯಿತು. ಆತ “ಅಂತಿಮ ಎರಡು ಆಯ್ಕೆಗಳನ್ನು ಅಂತಿಮಗೊಳಿಸಿದರು” ಮತ್ತು ಪರಿಪೂರ್ಣ 4 ನೇ ಸ್ವರಮೇಳಗಳಂತಹ ಸಿಗ್ನೇಚರ್ ಅಂಶಗಳು ಗುರುತಿನ ಕೇಂದ್ರವಾಗಿ ಉಳಿಯುವಂತೆ ನೋಡಿಕೊಂಡರು. “ಬಾಹ್ಯಾಕಾಶದಲ್ಲಿ ತೇಲುತ್ತಿರುವ ಏಕಶಿಲೆಯಂತೆ” ಎಂಬ ದೃಷ್ಟಿಕೋನದ ಮಾರ್ಗದರ್ಶನದಲ್ಲಿ, PS2 ಧ್ವನಿಯನ್ನು ಹೆಚ್ಚು ಕನಿಷ್ಠವೆಂಬತಹ ಮತ್ತು ಭವಿಷ್ಯವಾದಿ ಎನಿಸುವಂತಹ “ಸರಳ ಶಕ್ತಿಯನ್ನು” ವ್ಯಕ್ತಪಡಿಸಲು ವಿನ್ಯಾಸಗೊಳಿಸಲಾಗಿದೆ.

ಹೀಗಾಗಿ, ಹೇಳಿಕೆ ಸುಳ್ಳು.
ಇದನ್ನೂ ಓದಿ:
ಇರಾನ್ USS ಜೆರಾಲ್ಡ್ ಆರ್.ಫೋರ್ಡ್ ಮೇಲೆ 17 ದಿಕ್ಕುಗಳಿಂದ ದಾಳಿ ಮಾಡಿದೆ ಎಂದು ಟ್ರಂಪ್ ಹೇಳಿದರೇ? ಸತ್ಯ ಪರಿಶೀಲನೆ
ಇರಾನ್ ಸಂಘರ್ಷದ ಮಧ್ಯೆ ಭಾಷಣ ಮಾಡುವಾಗ ಡೊನಾಲ್ಡ್ ಟ್ರಂಪ್ ನಿಜವಾಗಿಯೂ ಕುಸಿದುಬಿದ್ದರೇ? ಸತ್ಯ ಪರಿಶೀಲನೆ
