ಹೇಳಿಕೆ/Claim: ಮೋದಿ ಸರ್ಕಾರದಡಿಯಲ್ಲಿ, ಭಾರತದ ಪಾಸ್ಪೋರ್ಟ್ ಶ್ರೇಯಾಂಕವು 2014ರಲ್ಲಿದ್ದ 76ನೇ ಸ್ಥಾನದಿಂದ 2026ರಲ್ಲಿ 125 ನೇ ಸ್ಥಾನಕ್ಕೆ ಕುಸಿದಿದೆ.
ಕಡೆನುಡಿ/Conclusion: ಈ ಹೇಳಿಕೆ ದಾರಿತಪ್ಪಿಸುವಂತಿದೆ. ಹೊಂದಾಣಿಕೆಯಾಗದ ವಿಧಾನಗಳನ್ನು ಬಳಸುವ ಎರಡು ಸಂಪೂರ್ಣವಾಗಿ ವಿಭಿನ್ನ ಪಾಸ್ಪೋರ್ಟ್ ಸೂಚ್ಯಂಕಗಳಿಂದ ತೆಗೆಯಲಾಗಿರುವ ಭಾರತದ ಶ್ರೇಯಾಂಕಗಳನ್ನು ಇದು ಹೋಲಿಸುತ್ತದೆ. 2014ರಲ್ಲಿ ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕವು ಭಾರತಕ್ಕೆ 76 ನೇ ಸ್ಥಾನ ನೀಡಿತ್ತು, ಮತ್ತು ಗ್ಲೋಬಲ್ ಸಿಟಿಜನ್ ಸೊಲ್ಯೂಷನ್ಸ್ ಗ್ಲೋಬಲ್ ಪಾಸ್ಪೋರ್ಟ್ ಸೂಚ್ಯಂಕವು 2026ರಲ್ಲಿ ಭಾರತಕ್ಕೆ 125ನೇ ಸ್ಥಾನ ನೀಡಿತು. ಆದಾಗ್ಯೂ, ಈ ಶ್ರೇಯಾಂಕಗಳನ್ನು ನೇರವಾಗಿ ಹೋಲಿಸಲು ಸಾಧ್ಯವಿಲ್ಲ ಏಕೆಂದರೆ ಎರಡೂ ಸೂಚ್ಯಂಕಗಳು ವಿಭಿನ್ನ ನಿಯತಾಂಕಗಳನ್ನು ಅಳೆಯುತ್ತವೆ. 2026ರ ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕದ ಪ್ರಕಾರ, ಭಾರತವು ಜಾಗತಿಕವಾಗಿ 80 ನೇ ಸ್ಥಾನದಲ್ಲಿದೆ, 125ನೇ ಸ್ಥಾನದಲ್ಲಲ್ಲ.
ರೇಟಿಂಗ್/RRating: ದಾರಿತಪ್ಪಿಸುವಂತಿದೆ ![]()
ಮೋದಿ ಸರ್ಕಾರದ ಅವಧಿಯಲ್ಲಿ ಭಾರತದ ಪಾಸ್ಪೋರ್ಟ್ ಶ್ರೇಯಾಂಕವು 2014ರಲ್ಲಿ 76 ನೇ ಸ್ಥಾನದಲ್ಲಿದ್ದದ್ದು 2026ರಲ್ಲಿ 125ನೇ ಸ್ಥಾನಕ್ಕೆ ಕುಸಿದಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಅಂಥವರಲ್ಲೊಬ್ಬರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನಾತೆ ಇನ್ಸ್ಟಾಗ್ರಾಮ್ನಲ್ಲಿ ಈ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್ನಲ್ಲಿ, ಆಕೆ “ಮೋದಿ ನೇತೃತ್ವದಲ್ಲಿ ಭಾರತದ ಪಾಸ್ಪೋರ್ಟ್ ಸ್ಥಾನ ಕಳೆದುಕೊಳ್ಳುತ್ತಿದೆ” ಎನ್ನುವ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಜಾಗತಿಕ ಪಾಸ್ಪೋರ್ಟ್ ಸೂಚ್ಯಂಕದ ಅಂಕಿಅಂಶಗಳು ಎನ್ನಲಾದ ವಿವರಗಳನ್ನು ಪ್ರದರ್ಶಿಸಿದ್ದಾರೆ. ಭಾರತದ ಪಾಸ್ಪೋರ್ಟ್ ಶ್ರೇಯಾಂಕವು 2014ರಲ್ಲಿದ್ದ 76ನೇ ಸ್ಥಾನದಿಂದ 2026ರಲ್ಲಿ 125ನೇ ಸ್ಥಾನಕ್ಕೆ ಕುಸಿದಿದೆ ಎಂದು ಈ ಚಿತ್ರ ಹೇಳುತ್ತದೆ. ಕೆಳಗಿನ ಪೋಸ್ಟ್ ಅನ್ನು ನೋಡಿ-
View this post on Instagram

ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಈ ಹೇಳಿಕೆಯು ವಿಭಿನ್ನ ಶ್ರೇಯಾಂಕ ವಿಧಾನಗಳನ್ನು ಅನುಸರಿಸುವ ಎರಡು ಪ್ರತ್ಯೇಕ ಪಾಸ್ಪೋರ್ಟ್ ಸೂಚ್ಯಂಕಗಳನ್ನು ಹೋಲಿಸುತ್ತದೆ. ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕವು 2014ರಲ್ಲಿ ಭಾರತವನ್ನು 76 ನೇ ಸ್ಥಾನದಲ್ಲಿ ಇರಿಸಿತ್ತು ಮತ್ತು ಗ್ಲೋಬಲ್ ಸಿಟಿಜನ್ ಸೊಲ್ಯೂಷನ್ಸ್ ಗ್ಲೋಬಲ್ ಪಾಸ್ಪೋರ್ಟ್ ಸೂಚ್ಯಂಕವು 2026ರಲ್ಲಿ ಭಾರತವನ್ನು 125 ನೇ ಸ್ಥಾನದಲ್ಲಿ ಇರಿಸಿದೆ. ಈ ಸೂಚ್ಯಂಕಗಳು ವಿಭಿನ್ನ ಅಂಶಗಳನ್ನು ಮೌಲ್ಯಮಾಪನ ಮಾಡುವುದರಿಂದ, ಅವುಗಳು ಒದಗಿಸುವ ಶ್ರೇಯಾಂಕಗಳನ್ನು ನೇರವಾಗಿ ಹೋಲಿಸಲು ಸಾಧ್ಯವಿಲ್ಲ.
ವಿವರಗಳು:
ಮೊದಲು ನಾವು ಈ ಹೇಳಿಕೆಯ ಜೊತೆಗೆ ಹಂಚಿಕೊಳ್ಳಲಾದ ಗ್ರಾಫಿಕ್ನಲ್ಲಿ ಪ್ರದರ್ಶಿಸಲಾದ ಅಂಕಿಅಂಶಗಳನ್ನು ಪರಿಶೀಲಿಸಲು ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಗ್ಲೋಬಲ್ ಸಿಟಿಜನ್ ಸೊಲ್ಯೂಷನ್ಸ್ನ ಗ್ಲೋಬಲ್ ಪಾಸ್ಪೋರ್ಟ್ ಸೂಚ್ಯಂಕದ ಅಧಿಕೃತ ವೆಬ್ಸೈಟ್ ಪ್ರಕಾರ, ಭಾರತವು 2026ರಲ್ಲಿ 125ನೇ ಸ್ಥಾನದಲ್ಲಿದೆ. ಇದರ ಸ್ಕ್ರೀನ್ಶಾಟ್ ಅನ್ನು ಕೆಳಗೆ ನೋಡಿ-

ಆದರೆ, ಗ್ಲೋಬಲ್ ಸಿಟಿಜನ್ ಸೊಲ್ಯೂಷನ್ಸ್ ನ ಗ್ಲೋಬಲ್ ಪಾಸ್ಪೋರ್ಟ್ ಸೂಚ್ಯಂಕವು 2014ರಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಡಿಜಿಟೈ ಗೆ ತಿಳಿದುಬಂದಿದೆ. ಅವರ ಅಧಿಕೃತ ವೆಬ್ಸೈಟ್ನಲ್ಲಿರುವ ‘ನಮ್ಮ ಕಂಪನಿ’ ವಿಭಾಗದ ಪ್ರಕಾರ, ಅವರು “ವಿದೇಶದಲ್ಲಿ ಹೂಡಿಕೆ ಮಾಡಲು, ಸ್ಥಳಾಂತರಗೊಳ್ಳಲು ಮತ್ತು ತಮ್ಮ ಜೀವನವನ್ನು ಮರುಕಲ್ಪಿಸಿಕೊಳ್ಳಲು ಜನರಿಗೆ ಸಹಾಯ ಮಾಡಲು, 2017ರಲ್ಲಿ ಗ್ಲೋಬಲ್ ಸಿಟಿಜನ್ ಸೊಲ್ಯೂಷನ್ಸ್ ಅನ್ನು ಪ್ರಾರಂಭಿಸಿದರು”. ಇದರರ್ಥ ಗ್ಲೋಬಲ್ ಪಾಸ್ಪೋರ್ಟ್ ಸೂಚ್ಯಂಕವು 2014ರ ಶ್ರೇಯಾಂಕವನ್ನು ಪ್ರಕಟಿಸಿರಲು ಸಾಧ್ಯವಿಲ್ಲ. ಆದ್ದರಿಂದ, ವೈರಲ್ ಪೋಸ್ಟ್ ಎರಡು ವಿಭಿನ್ನ ಸಂಸ್ಥೆಗಳು ಪ್ರಕಟಿಸಿದ ಎರಡು ವಿಭಿನ್ನ ಸೂಚ್ಯಂಕಗಳ ಅಂಕಿಅಂಶಗಳನ್ನು ಹೋಲಿಸುತ್ತದೆ.
ಇದರ ನಂತರ, ಯಾವ ಪಾಸ್ಪೋರ್ಟ್ ಸೂಚ್ಯಂಕದ ಉಲ್ಲೇಖ ನೀಡಲಾಗಿದೆ ಎಂಬುದನ್ನು ಗುರುತಿಸಲು ನಾವು 2014ರಲ್ಲಿ 76 ನೇ ಶ್ರೇಯಾಂಕದ ಮೂಲವನ್ನು ಹುಡುಕಿದೆವು. ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕವು 2014ರಲ್ಲಿ ಭಾರತಕ್ಕೆ 76ನೇ ಶ್ರೇಯಾಂಕವನ್ನು ನೀಡಿತ್ತು ಎಂದು ನಮ್ಮ ಹುಡುಕಾಟದಲ್ಲಿ ಕಂಡುಬಂತು. ಆದರೆ, ಅದೇ ಸೂಚ್ಯಂಕವು ಭಾರತವನ್ನು 2026ರ ಶ್ರೇಯಾಂಕದಲ್ಲಿ 80ನೇ ಸ್ಥಾನದಲ್ಲಿ ಇರಿಸಿದೆ, 125ನೇ ಸ್ಥಾನದಲ್ಲಲ್ಲ. ಆದ್ದರಿಂದ, ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕವು 125ನೇ ಸ್ಥಾನಕ್ಕೆ ಕುಸಿತವನ್ನು ತೋರಿಸುವುದಿಲ್ಲ. ಕೆಳಗಿನ ಮಾಹಿತಿಯನ್ನು ಗಮನಿಸಿ-


ವಿಧಾನಗಳ ಆಧಾರಿತ ಶ್ರೇಯಾಂಕ:
ಪಾಸ್ಪೋರ್ಟ್ಗಳನ್ನು ಶ್ರೇಣೀಕರಿಸಲು ಈ ಎರಡು ಸೂಚ್ಯಂಕಗಳು ವಿಭಿನ್ನ ವಿಧಾನಗಳನ್ನು ಬಳಸಿವೆ ಎಂದು ನಾವು ಗಮನಿಸಿದೆವು. ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ FAQ ಪ್ರಕಾರ, “ಪ್ರತಿ ಪಾಸ್ಪೋರ್ಟ್ಗೆ ವೀಸಾ-ಮುಕ್ತ ಸ್ಕೋರ್ ನೀಡಲಾಗುತ್ತದೆ… ಈ ಪಾಸ್ಪೋರ್ಟ್ ಎಷ್ಟು ಸ್ಥಳಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಹೊಂದಿದೆ ಎಂಬುದನ್ನು ಅದು ಪ್ರತಿಬಿಂಬಿಸುತ್ತದೆ. ಪಾಸ್ಪೋರ್ಟ್ಗೆ ಹೆಚ್ಚು ಸ್ಥಳಗಳಿಗೆ ಪ್ರವೇಶವಿದ್ದಷ್ಟು, ಅದು ಸೂಚ್ಯಂಕದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುತ್ತದೆ.” ಮತ್ತೊಂದೆಡೆ, ತನ್ನ ಗ್ಲೋಬಲ್ ಪಾಸ್ಪೋರ್ಟ್ ಸೂಚ್ಯಂಕವು “ಪಾಸ್ಪೋರ್ಟ್ನ ಪ್ರಯಾಣ ಸ್ವಾತಂತ್ರ್ಯದ ಸೌಲಭ್ಯವನ್ನು ಮಾತ್ರವಲ್ಲದೆ, ಸ್ಥಿರತೆ, ಜೀವನದ ಗುಣಮಟ್ಟ ಮತ್ತು ಅದು ಅನುವು ಮಾಡುವ ಆರ್ಥಿಕ ಅವಕಾಶವನ್ನು ಮೌಲ್ಯಮಾಪನ ಮಾಡುತ್ತದೆ” ಎಂದು ಗ್ಲೋಬಲ್ ಸಿಟಿಜನ್ ಸೊಲ್ಯೂಷನ್ಸ್ ಹೇಳುತ್ತದೆ.
ಆದ್ದರಿಂದ, 2014ರಲ್ಲಿನ 76ನೇ ಶ್ರೇಯಾಂಕವು ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕದಿಂದ ಬಂದಿದೆ ಮತ್ತು 2026ರಲ್ಲಿನ 125ನೇ ಶ್ರೇಯಾಂಕವು ಗ್ಲೋಬಲ್ ಸಿಟಿಜನ್ ಸೊಲ್ಯೂಷನ್ಸ್ ಗ್ಲೋಬಲ್ ಪಾಸ್ಪೋರ್ಟ್ ಸೂಚ್ಯಂಕದಿಂದ ಬಂದಿದೆ. ಈ ಸೂಚ್ಯಂಕಗಳು ವಿಭಿನ್ನ ನಿಯತಾಂಕಗಳನ್ನು ಅಳೆಯುವುದರಿಂದ, ಅವುಗಳ ಶ್ರೇಯಾಂಕಗಳನ್ನು ನೇರವಾಗಿ ಹೋಲಿಸಲು ಸಾಧ್ಯವಿಲ್ಲ.
ಹೀಗಾಗಿ, ಈ ಹೇಳಿಕೆ ದಾರಿತಪ್ಪಿಸುವಂತಿದೆ.
ಇದನ್ನೂ ಓದಿ:
