ಹೇಳಿಕೆ/Claim:ವೈದ್ಯಕೀಯ ರೆಸೆಡೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಒಂದು ರೋಬೋಟ್ ಓಡಿಹೋಗುತ್ತಿರುವುದನ್ನು ಮತ್ತು ಪೊಲೀಸರು ಅದನ್ನು ಬೆನ್ನಟ್ಟುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ..
ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಈ ವೀಡಿಯೊವನ್ನು AI ಬಳಸಿ ರಚಿಸಲಾಗಿದೆ ಮತ್ತು ಅಂತಹ ಯಾವುದೇ ನೈಜ ಘಟನೆ ಸಂಭವಿಸಿಲ್ಲ. ಅಂತಹ ಯಾವುದೇ ರೋಬೋಟ್, ಆಸ್ಪತ್ರೆಯಿಂದ ತಪ್ಪಿಸಿಕೊಳ್ಳುವಿಕೆ ಅಥವಾ ಪೊಲೀಸ್ ಬೆನ್ನಟ್ಟುವಿಕೆಯ ಯಾವುದೇ ಅಧಿಕೃತ ದೃಶ್ಯಾವಳಿಗಳು ಅಥವಾ ವರದಿಗಳಿಲ್ಲ..
ರೇಟಿಂಗ್/Rating: ಸುಳ್ಳು. ![]()
ವೈದ್ಯಕೀಯ ರೆಸಿಡೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಒಂದು ರೋಬೋಟ್ ಓಡಿಹೋಗುತ್ತಿರುವುದು ಮತ್ತು ಪೊಲೀಸರು ಅದನ್ನು ಬೆನ್ನಟ್ಟುತ್ತಿರುವ ವೀಡಿಯೊಗಳನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘drsanish777’ ಸೆಪ್ಟೆಂಬರ್ 14, 2026 ರಂದು ಅಂತಹ ಒಂದು ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಸುದೀರ್ಘ 36 ಗಂಟೆಗಳ ಶಿಫ್ಟ್ ನಂತರ ವೈದ್ಯಕೀಯ ರೆಸೆಡೆನ್ಸಿಯಿಂದ ಓಡಿಹೋಗುತ್ತಿರುವ ರೋಬೋಟ್”. ಆಸ್ಪತ್ರೆಯ ನಿಲುವಂಗಿಯನ್ನು ಧರಿಸಿದ ಒಂದು ರೋಬೋಟ್ ಉದ್ಯಾನವನದಂತಹ ಪ್ರದೇಶದ ಮೂಲಕ ವೇಗವಾಗಿ ಓಡುತ್ತಿರುವ ಮತ್ತು ಅದರ ಹಿಂದೆ ಆಂಬ್ಯುಲೆನ್ಸ್ ಇರುವ ವೀಡಿಯೊವನ್ನು ಪೋಸ್ಟ್ಗೆ ಲಗತ್ತಿಸಲಾಗಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ-

Robot running away from medical residency 🤠 after long 36 hr shift. #neetpg pic.twitter.com/y0CTJxHzL6
— Dr.Sanish Babu (@drsanish777) September 14, 2026
2026ರ ಸೆಪ್ಟೆಂಬರ್ 13ರಂದು ಮತ್ತೊಬ್ಬ ಬಳಕೆದಾರರು ಇದೇ ರೀತಿಯ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ನಗರದಂತಹ ಸ್ಥಳದಲ್ಲಿ ರೋಬೋಟ್ ಓಡುತ್ತಿರುವುದನ್ನು ತೋರಿಸಲಾಗಿದೆ. “ಈ ವಸ್ತು ಓಡುತ್ತಿರುವಾಗಲೇ ಪೊಲೀಸರು, ಭದ್ರತಾ ಸಿಬ್ಬಂದಿ, ಆಂಬ್ಯುಲೆನ್ಸ್ ಕೂಡ ಅದನ್ನು ಹಿಡಿಯಲು ಪ್ರಯತ್ನಿಸಿದರು” ಎಂದು ಪೋಸ್ಟ್ ಹೇಳುತ್ತದೆ. ಈ ಪೋಸ್ಟ್ ಅನ್ನು ಕೆಳಗೆ ನೋಡಿ-
ALERT: A MEDICAL ROBOT has ESCAPED!!!
Apparently it wanted freedom, because it left everyone chasing it looking completely ridiculous.
Police, security, even an ambulance tried to keep up while this thing just kept RUNNING.
And somehow the funniest part is how seriously… pic.twitter.com/IUwZDqYUQO
— Mutant CYT (@CytMutant) September 12, 2026
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಈ ವೀಡಿಯೊ AI- ರಚಿತವಾಗಿದೆ, ಮತ್ತು ಚಿತ್ರಿಸಲಾದ ಘಟನೆಯು ನಿಜವಾಗಿ ಸಂಭವಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆಸ್ಪತ್ರೆಯಿಂದ ತಪ್ಪಿಸಿಕೊಳ್ಳುತ್ತಿರುವ ಅಥವಾ ಪೊಲೀಸರು ಬೆನ್ನಟ್ಟುತ್ತಿರುವ ಯಾವುದೇ ರೋಬೋಟ್ ಅನ್ನು ಯಾವುದೇ ಅಧಿಕೃತ ದೃಶ್ಯಾವಳಿಗಳು ಅಥವಾ ವಿಶ್ವಾಸಾರ್ಹ ವರದಿಗಳು ದೃಢೀಕರಿಸುವುದಿಲ್ಲ.
ವಿವರಗಳು:
ಮೊದಲು ನಾವು ವೀಡಿಯೊದ ಮೂಲವನ್ನು ಪತ್ತೆಹಚ್ಚಲು ಅದರ ಹಲವಾರು ಕೀಫ್ರೇಮ್ಗಳನ್ನು ಬಳಸಿಕೊಂಡು ರಿವರ್ಸ್ ಚಿತ್ರಾಧಾರಿತ ಹುಡುಕಾಟವನ್ನು ನಡೆಸಿದೆವು. ಆದಾಗ್ಯೂ, ನಮಗೆ ಫಲಿತಾಂಶಗಳಲ್ಲಿ ಪ್ರಾಥಮಿಕವಾಗಿ ದೊರಕಿದ್ದು ಮನರಂಜನೆ ಅಥವಾ ವಿಡಂಬನೆಗಾಗಿ ಹಂಚಿಕೊಳ್ಳಲಾದ ರೀಪೋಸ್ಟ್ಗಳು. ಮಾಧ್ಯಮಗಳು ಅಥವಾ ಇತರ ವಿಶ್ವಾಸಾರ್ಹ ಮೂಲಗಳಿಂದ ನಮಗೆ ಯಾವುದೇ ವರದಿಗಳು ಕಂಡುಬಂದಿಲ್ಲ. ಕೆಲವು ಬಳಕೆದಾರರು ವೀಡಿಯೊವನ್ನು AI- ರಚಿತ ಎಂದು ಸ್ಪಷ್ಟವಾಗಿ ಗುರುತಿಸಿದ್ದಾರೆ ಮತ್ತು ಅದನ್ನು #AI ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಹಂಚಿಕೊಂಡಿದ್ದಾರೆ. ಅಂತಹ ಒಂದು ಪೋಸ್ಟ್ ಅನ್ನು ಕೆಳಗೆ ತೋರಿಸಲಾಗಿದೆ –

ಇದರ ನಂತರ, ನಾವು ಆಯಾ ಹೇಳಿಕೆಗಳನ್ನೊಳಗೊಂಡ ಪೋಸ್ಟ್ಗಳಲ್ಲಿ ಉಲ್ಲೇಖಿಸಲಾದ ಎರಡೂ ವೀಡಿಯೊಗಳನ್ನು ಡೌನ್ಲೋಡ್ ಮಾಡಿ ಅದನ್ನು AI ಡಿಟೆಕ್ಟರ್ ನಲ್ಲಿ ಹಾಕಿ ಪರಿಶೀಲಿಸಿದೆವು. ಹೈವ್ ಮಾಡರೇಶನ್ನ AI ಡಿಟೆಕ್ಟರ್ ಬಳಸಿದಾಗ ದೊರಕಿದ ಫಲಿತಾಂಶವು ಸುಮಾರು 50% ವೀಡಿಯೊವನ್ನು AI ಬಳಸಿ ರಚಿಸಲಾಗಿದೆ ಎಂದು ಸಾಬೀತುಪಡಿಸಿತು ಮತ್ತು ಕೆಲವು ವಿಭಾಗಗಳು 62% AI ಬಳಕೆಯನ್ನು ಬಹಿರಂಗಪಡಿಸಿದವು. ಫಲಿತಾಂಶಗಳನ್ನು ಕೆಳಗೆ ವೀಕ್ಷಿಸಿ-

ಇಂಟೆಲ್ ನ ಪ್ರಕಾರ, ಹೆಲ್ತ್ ಕೇರ್ ವರ್ಗದಲ್ಲಿನ ರೊಬೊಟಿಕ್ಸ್, AI, ಕಂಪ್ಯೂಟರ್ ವಿಜನ್ ಮತ್ತು ಆಟೊಮೇಶನ್ ಮೂಲಕ ವೈದ್ಯಕೀಯ ಕಾರ್ಯವಿಧಾನಗಳನ್ನು ಪರಿವರ್ತಿಸುತ್ತಿದೆ. ವೈದ್ಯಕೀಯ ರೋಬೋಟ್ಗಳು “ಆರೋಗ್ಯ ಕಾರ್ಯಕರ್ತರನ್ನು ಬೆಂಬಲಿಸುತ್ತವೆ ಮತ್ತು ರೋಗಿಗಳ ಆರೈಕೆಯನ್ನು ಹೆಚ್ಚಿಸುತ್ತವೆ”, ಮತ್ತೊಂದೆಡೆ ಸ್ವಾಯತ್ತ ಮೊಬೈಲ್ ರೋಬೋಟ್ಗಳು “ಸೋಂಕುನಿವಾರಣೆ, ಟೆಲಿಪ್ರೆಸೆನ್ಸ್ ಮತ್ತು ಔಷಧಿ ಮತ್ತು ವೈದ್ಯಕೀಯ ಸಾಮಗ್ರಿಗಳ ವಿತರಣೆಗೆ” ಸಹಾಯ ಮಾಡುತ್ತವೆ ಎಂದು ಸಂಸ್ಥೆಯು ವಿವರಿಸುತ್ತದೆ. ತಂತ್ರಜ್ಞಾನ ಮುಂದುವರೆದಂತೆ ವೈದ್ಯಕೀಯ ರೊಬೊಟಿಕ್ಸ್ನ ಭವಿಷ್ಯವು “ಸ್ವಾಯತ್ತವಾಗಿ, ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಹೆಚ್ಚು ನಿಖರವಾಗಿ” ಕಾರ್ಯಗಳನ್ನು ಪೂರ್ಣಗೊಳಿಸುವುದನ್ನು ಒಳಗೊಂಡಿರುತ್ತದೆ ಎಂದು ಇಂಟೆಲ್ ಗಮನಿಸುತ್ತದೆ.

ಆದಾಗ್ಯೂ, ಸ್ವಾಯತ್ತ ವೈದ್ಯಕೀಯ-ರೆಸಿಡೆಂಟ್ ರೋಬೋಟ್ಗಳು ಅಥವಾ ವೀಡಿಯೊಗೆ ಹೊಂದಿಕೆಯಾಗುವ ಯಾವುದೇ “ಕಾಲ್ತೆಗೆಯುವಿಕೆಯ” ಘಟನೆಗಳ ಬಗ್ಗೆ ಯಾವುದೇ ದೃಢೀಕೃತ ವರದಿಗಳು ಲಭ್ಯವಿಲ್ಲ.
ಹೀಗಾಗಿ, ಈ ಹೇಳಿಕೆ ಸುಳ್ಳು.
__________________________________________________________________
