ಹೇಳಿಕೆ/Claim :ಇರಾನ್ ಸಂಘರ್ಷದ ನಡುವೆ ಭಾಷಣ ಮಾಡುವಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಾನಸಿಕವಾಗಿ ಆಘಾತಗೊಂಡು ಕುಸಿದುಬಿದ್ದರು.
ಕಡೆನುಡಿ/Conclusion : ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಡೊನಾಲ್ಡ್ ಟ್ರಂಪ್ ಅವರು ಕುಸಿದುಬಿದ್ದರು ಅಥವಾ ಮಾನಸಿಕ ಆಘಾತಕ್ಕೊಳಗಾದರು ಎಂಬುದನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಆರೋಗ್ಯದ ಆಧಾರದ ಮೇಲೆ ಡೊನಾಲ್ಡ್ ಟ್ರಂಪ್ ಅವರನ್ನು ತೆಗೆದುಹಾಕಲು US ಕಾಂಗ್ರೆಸ್ ಕೇಳಿಕೊಂಡಿಲ್ಲ ಮತ್ತು ಹೇಳಿಕೆಯಲ್ಲಿರುವ ಚಿತ್ರವು AI- ರಚಿತವಾಗಿದೆ.
ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಡೊನಾಲ್ಡ್ ಟ್ರಂಪ್ ಭಾಷಣ ಮಾಡುವಾಗ ಮಾನಸಿಕ ಒತ್ತಡಕ್ಕೊಳಗಾಗಿ ಕುಸಿದುಬಿದ್ದರು ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘OlenaRohoza’ ಅಂತಹ ಪೋಸ್ಟ್ ಅನ್ನು ಹಂಚಿಕೊಂಡಿದ್ದು, “ಇರಾನ್‌ನೊಂದಿಗಿನ ಪರಿಸ್ಥಿತಿಯಿಂದಾಗಿ ಅಧ್ಯಕ್ಷರು ಮಾನಸಿಕ ಒತ್ತಡಕ್ಕೊಳಗಾದರು ಎಂದು ಹೇಳಲಾಗಿದೆ. ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ವರದಿಯಾಗಿದೆ” ಎಂದು ಹೇಳಿಕೊಂಡಿದ್ದಾರೆ. ಅವರ ಆಪ್ತ ವಲಯದವರಿಗೆ (VP ಜೆ.ಡಿ. ವ್ಯಾನ್ಸ್, ಮಿಲಿಟರಿ ಸೇರಿದಂತೆ) ಇದರ ಬಗ್ಗೆ ತಿಳಿದಿದೆ ಮತ್ತು ಈ ಕಾರಣದಿಂದಾಗಿ ಅಧ್ಯಕ್ಷರನ್ನು ಪದದಿಂದ ತೆಗೆದುಹಾಕಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ ಎಂದು ಪೋಸ್ಟ್ ಹೇಳುತ್ತದೆ. ಈ ಪೋಸ್ಟ್ ಗೆ 1.4 ಮಿಲಿಯಕ್ಕಿಂತಲೂ ಹೆಚ್ಚು ವೀಕ್ಷಣೆಗಳು ದೊರೆತಿವೆ, ಅದನ್ನು ಕೆಳಗೆ ಕಾಣಬಹುದು –
👀 A shocking incident has reportedly occurred with Trump: he came out to speak and suddenly his legs gave way. The president is said to have suffered a nervous breakdown due to the situation with Iran. His health has reportedly deteriorated sharply.
According to insider sources,… pic.twitter.com/0K69Pj4TI2— Olena Rohoza (@OlenaRohoza) March 25, 2026

ಇದೇ ರೀತಿಯ ಹೇಳಿಕೆಗಳನ್ನು ಮಾಡಲಾಗಿದ್ದು, ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಡೊನಾಲ್ಡ್ ಟ್ರಂಪ್ ಕುಸಿದುಬಿದ್ದರು ಎಂದು ಅಥವಾ ಮಾನಸಿಕ ಒತ್ತಡವನ್ನು ಅನುಭವಿಸಿದ್ದಾರೆ ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಇದಲ್ಲದೆ, US ಕಾಂಗ್ರೆಸ್ ಆರೋಗ್ಯದ ಆಧಾರದ ಮೇಲೆ ಟ್ರಂಪ್ ರವರನ್ನು ತೆಗೆದುಹಾಕಲು ಕೋರಿಲ್ಲ ಮತ್ತು ಹೇಳಿಕೆಯಲ್ಲಿ ಉಲ್ಲೇಖಿಸಲಾದ ಚಿತ್ರವನ್ನು ಕೃತಕವಾಗಿ AI ಬಳಸಿ ರಚಿಸಲಾಗಿದೆ, ಇದು ಯಾವುದೋ ಕಾಲ್ಪನಿಕ ಘಟನೆಯನ್ನು ಚಿತ್ರಿಸುತ್ತದೆ.
ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಭಾಷಣದ ಸಮಯದಲ್ಲಿ ಟ್ರಂಪ್ ದೈಹಿಕ ಮತ್ತು ಮಾನಸಿಕ ಕುಸಿತ” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಹುಡುಕಾಟಗಳಲ್ಲಿ ಟ್ರಂಪ್ ಯಾವುದೇ ಇತ್ತೀಚಿನ ಭಾಷಣ ಅಥವಾ ಪ್ರದರ್ಶನದ ಸಮಯದಲ್ಲಿ ಕುಸಿದು ಬೀಳುವುದು, ಮೂರ್ಛೆ ಹೋಗುವುದು ಅಥವಾ ಅವರ “ಕಾಲುಗಳು ಕೈಕೊಡುವುದರ” ಕುರಿತು ಯಾವುದೇ ದೃಢೀಕರಣ ದೊರೆತಿಲ್ಲ. ಮಾರ್ಚ್ 25, 2026 ರಂದು DWS ನ್ಯೂಸ್ ಇರಾನ್ ಸಂಘರ್ಷದ ಕುರಿತು ಅಪ್‌ಲೋಡ್ ಮಾಡಿದ ಟ್ರಂಪ್ ರವರ ಇತ್ತೀಚಿನ ಭಾಷಣವು ಅಧ್ಯಕ್ಷರು ದೈಹಿಕ ಅಥವಾ ಮಾನಸಿಕ ಒತ್ತಡವನ್ನು ತೋರುವ ಯಾವುದೇ ಲಕ್ಷಣಗಳನ್ನು ತೋರುತ್ತಿಲ್ಲ.
ಮೇಲಿನ ವೀಡಿಯೊದ ಪೂರ್ಣ ಆವೃತ್ತಿಯನ್ನು ಅಧಿಕೃತ ಶ್ವೇತಭವನದ ಯೂಟ್ಯೂಬ್ ವಾಹಿನಿಯಲ್ಲಿಯೂ ಅಪ್‌ಲೋಡ್ ಮಾಡಲಾಗಿದೆ, ಅದನ್ನು ಕೆಳಗೆ ನೋಡಬಹುದು –
ದ ಫೆಡರಲ್ ವರದಿಯ ಪ್ರಕಾರ, ಡೊನಾಲ್ಡ್ ಟ್ರಂಪ್ ಏರ್ ಫೋರ್ಸ್ ಒನ್ ನಿಂದ ಇಳಿಯುವಾಗ “ಬಹಳ ಪ್ರಯಾಸ” ಮತ್ತು ಎಚ್ಚರಿಕೆಯ ಹೆಜ್ಜೆಗಳನ್ನು ಇಟ್ಟಿದ್ದಾರೆಂದು ವೀಡಿಯೊ ತೋರಿಸಿದ ನಂತರ ಅವರ ಆರೋಗ್ಯ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. “ಊದಿಕೊಂಡ ಕಣಕಾಲುಗಳು” ಮುಂತಾದ ಗೋಚರ ಚಿಹ್ನೆಗಳ ಹೊರತಾಗಿಯೂ ಟ್ರಂಪ್ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಗಮನಾರ್ಹವಾಗಿ, ತಮ್ಮ ಆಹಾರಕ್ರಮವನ್ನು ಬದಲಾಯಿಸಿದರೆ “200 ವರ್ಷಗಳವರೆಗೆ” ಬದುಕಬಹುದು ಎಂದು ಟ್ರಂಪ್ ಹೇಳಿದ್ದಾರೆ.
ಇದರ ನಂತರ, ಹೇಳಿಕೆಯಲ್ಲಿ ಹಂಚಿಕೊಳ್ಳಲಾದ ಚಿತ್ರದ ಕೆಳ-ಬಲಭಾಗದಲ್ಲಿ ನಾವು ಜೆಮಿನಿ ಲೋಗೋವನ್ನು ಗಮನಿಸಿದೆವು. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಾವು ಚಿತ್ರವನ್ನು AI ಡಿಟೆಕ್ಟರ್ ನಲ್ಲಿ ಹಾಕಿದೆವು, ಆಗ ಅದನ್ನು AI ಬಳಸಿ ರಚಿಸಲಾಗಿದೆ ಎಂದು ಫಲಿತಾಂಶಗಳು ಸಾಬೀತುಪಡಿಸಿವೆ. ಜೆಮಿನಿ ಲೋಗೋ ಮತ್ತು ಫಲಿತಾಂಶಗಳ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಬಹುದು-

ಆರೋಗ್ಯದ ಕಾರಣ ಅಥವಾ ಯಾವುದೇ ದೈಹಿಕ/ಮಾನಸಿಕ ಅಸ್ವಸ್ಥತೆಯಿಂದಾಗಿ ಟ್ರಂಪ್ ಅವರನ್ನು ತೆಗೆದುಹಾಕಲು US ಕಾಂಗ್ರೆಸ್ ಯೋಜಿಸುತ್ತಿದೆ ಎಂಬುದಕ್ಕೆ ನಮಗೆ ಯಾವುದೇ ಪುರಾವೆಗಳು ದೊರಕಿಲ್ಲ. ಮಾರ್ಚ್ 23, 2026ರಂದು ಪ್ರಕಟವಾದ ನ್ಯೂಸ್‌ವೀಕ್ ವರದಿಯ ಪ್ರಕಾರ, ಸಂಪ್ರದಾಯವಾದಿ ವ್ಯಕ್ತಿ ಸ್ಕಾಟ್ ಮೆಕ್ಕಾನ್ನೆಲ್ (ದಿ ಅಮೇರಿಕನ್ ಕನ್ಸರ್ವೇಟಿವ್‌ನ ಸಹ-ಸಂಸ್ಥಾಪಕ) ಉಪಾಧ್ಯಕ್ಷ JD ವ್ಯಾನ್ಸ್ ಅವರನ್ನು “25ನೇ ತಿದ್ದುಪಡಿ” ಪರಿವರ್ತನೆಯನ್ನು ಬೆಂಬಲಿಸುವಂತೆ ಸಾರ್ವಜನಿಕವಾಗಿ ಒತ್ತಾಯಿಸಿದರು. “ಅಧ್ಯಕ್ಷರು ಅಸಮರ್ಥರಾದರೆ ಅಥವಾ ತಮ್ಮ ಕರ್ತವ್ಯಗಳನ್ನು ಪೂರೈಸಲು ಸಾಧ್ಯವಾಗದಿದ್ದರೆ, ಮರಣಹೊಂದಿದರೆ, ರಾಜೀನಾಮೆ ನೀಡಿದರೆ ಅಥವಾ ದೋಷಾರೋಪಣೆಯಿಂದಾಗಿ ಅಧಿಕಾರದಿಂದ ಇಳಿಸಲ್ಪಟ್ಟರೆ, ಅಧ್ಯಕ್ಷೀಯ ಅಧಿಕಾರವನ್ನು ಉಪಾಧ್ಯಕ್ಷರಿಗೆ ವರ್ಗಾಯಿಸಲು ಒಂದು ಕಾನೂನು ಚೌಕಟ್ಟನ್ನು 25ನೇ ತಿದ್ದುಪಡಿ ಸ್ಥಾಪಿಸುತ್ತದೆ” ಎಂದು ವರದಿ ಹೇಳುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಆದಾಗ್ಯೂ, ಮೆಕ್ಕಾನ್ನೆಲ್ ಅವರು JD ವ್ಯಾನ್ಸ್‌ಗೆ ನೀಡಿದ ಈ ಕರೆಯು ಟ್ರಂಪ್ ಅವರ ವೈಯಕ್ತಿಕ ಆರೋಗ್ಯದ ಕಾರಣದಿಂದಲ್ಲ, ನೀತಿ ಮತ್ತು ರಾಜಕೀಯ ಪರಿಗಣನೆಗಳಿಂದಾಗಿ ಆಗಿರುವಂಥದ್ದು.
ಆದ್ದರಿಂದ, ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು.
ಇದನ್ನೂ ಓದಿ:
ರಿಷಿ ಸುನಾಕ್ ತಮ್ಮ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿಕೆ ನೀಡಿದರೇ? ಸತ್ಯ ಪರಿಶೀಲನೆ
