ಹೇಳಿಕೆ/Claim: ವಾಟ್ಸಾಪ್ ನಲ್ಲಿ “ಒಂದು ವೀಕ್ಷಣೆ”ಯ ಫೈಲ್ ಅನ್ನು ಒಮ್ಮೆ ತೆರೆದ ನಂತರ, “.rvo” ಎಂದು ಟೈಪ್ ಮಾಡುವುದರಿಂದ (ಪ್ರತ್ಯುತ್ತರಕ್ಕಾಗಿ) ಸ್ವಯಂಚಾಲಿತವಾಗಿ ಫೋಟೋ ಪುನಃ ಕಾಣುತ್ತದೆ.
ಕಡೆನುಡಿ/Conclusion: ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. “.rvo” ಎಂದು ಟೈಪ್ ಮಾಡುವುದರಿಂದ ಅಧಿಕೃತ ವಾಟ್ಸಾಪ್ ಅಪ್ಲಿಕೇಶನ್ನಲ್ಲಿ ಏನೂ ಆಗುವುದಿಲ್ಲ. ಒಂದು ವೀಕ್ಷಣೆಯ ಫೋಟೋ ಅಥವಾ ವೀಡಿಯೊವನ್ನು ಒಮ್ಮೆ ತೆರೆದು ಮುಚ್ಚಿದ ನಂತರ, ಅದು ಶಾಶ್ವತವಾಗಿ ಕಣ್ಮರೆಯಾಗುತ್ತದೆ ಮತ್ತು ಅದನ್ನು ಪುನಃ ನೋಡಲಾಗುವುದಿಲ್ಲ.
ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ
******************************************************
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ವೀಡಿಯೊವನ್ನು ಹಂಚಿಕೊಂಡಿದ್ದು, ಪ್ರತ್ಯುತ್ತರವಾಗಿ “.rvo” ಎಂದು ಟೈಪ್ ಮಾಡುವುದರಿಂದ ಫೈಲ್ ಪುನಃ ಕಾಣಸಿಗುತ್ತದೆ ಎಂದು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘Alphx_Elite’ ಅಂತಹ ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ (ಕನ್ನಡಕ್ಕೆ ಅನುವಾದಿಸಲಾಗಿದೆ): “ಈ ವಾಟ್ಸಾಪ್ ವಿಧಾನದಿಂದ ಒಮ್ಮೆ ಕಳುಹಿಸಿದ ಸಂದೇಶಗಳನ್ನು ಮತ್ತೆ ವೀಕ್ಷಿಸಲು ಸಾಧ್ಯವಿದೆ ಎಂದು ಹೇಳಲಾಗಿದೆ. ನಿಮ್ಮ ಅಭಿಪ್ರಾಯವೇನು, ಇದು ನಿಜವೇ?” ಈ ತಂತ್ರವನ್ನು ಪ್ರದರ್ಶಿಸುವ 16 ಕ್ಷಣಗಳ ವೀಡಿಯೊವನ್ನು ಪೋಸ್ಟ್ಗೆ ಲಗತ್ತಿಸಲಾಗಿದೆ. ಕೆಳಗಿನ ಪೋಸ್ಟ್ ಅನ್ನು ನೋಡಿ-
Se afirmó que es posible volver a ver los mensajes enviados una sola vez con este método de WhatsApp.
Qué opinan, esto es real?. pic.twitter.com/tUlW0PKMxf— Alphx Elite (@Alphx_Elite) June 15, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. “.rvo” ಆಜ್ಞೆಯು ಅಧಿಕೃತ ವಾಟ್ಸಾಪ್ ಅಪ್ಲಿಕೇಶನ್ನಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ‘ವ್ಯೂ ವನ್ಸ್’ ಫೋಟೋ ಅಥವಾ ವೀಡಿಯೊವನ್ನು ಒಮ್ಮೆ ತೆರೆದು ಮುಚ್ಚಿದ ನಂತರ, ಅದನ್ನು ಮುಂದೆ ಅಪ್ಲಿಕೇಶನ್ ನಲ್ಲಿ ತೆರೆಯಲಾಗುವುದಿಲ್ಲ.
ನಾವು ಮೊದಲು ಇದನ್ನು ಅಧಿಕೃತ ಪ್ಲೇಸ್ಟೋರ್/ಆ್ಯಪ್ ಸ್ಟೋರ್ನಿಂದ ಡೌನ್ಲೋಡ್ ಮಾಡಲಾಗಿದ್ದ ನಮ್ಮದೇ ಆದ ವಾಟ್ಸಾಪ್ ಅಪ್ಲಿಕೇಶನ್ನಲ್ಲಿ ಪರೀಕ್ಷಿಸಿದೆವು. ಈ ವಿಧಾನವು ಕೆಲಸ ಮಾಡುವುದಿಲ್ಲ ಮತ್ತು ಇದು ಕೆಲಸ ಮಾಡುತ್ತದೆಂದು ಸೂಚಿಸಲು ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಪುರಾವೆಗಳಿಲ್ಲ. ಹೆಸರೇ ಸೂಚಿಸುವಂತೆ, ಈ ವೈಶಿಷ್ಟ್ಯವನ್ನು “ಒಂದು ವೀಕ್ಷಣೆ” ಗಾಗಿಯೇ ವಿನ್ಯಾಸಗೊಳಿಸಲಾಗಿದೆ ಮತ್ತು ಅದನ್ನು ಮತ್ತೆ ತೆರೆಯಲಾಗುವುದಿಲ್ಲ.
ವಾಟ್ಸಾಪ್ ಪ್ರಕಾರ, ವ್ಯೂ ಒನ್ಸ್ ವೈಶಿಷ್ಟ್ಯವು ಬಳಕೆದಾರರು “ಸ್ವೀಕರಿಸುವವರು ಒಮ್ಮೆ ತೆರೆದ ನಂತರ ಚಾಟ್ನಿಂದ ಕಣ್ಮರೆಯಾಗುವ” ಫೋಟೋಗಳು, ವೀಡಿಯೊಗಳು ಮತ್ತು ಧ್ವನಿ ಸಂದೇಶಗಳನ್ನು ಕಳುಹಿಸಲು ಅನುಮತಿಸುತ್ತದೆ. ಒಮ್ಮೆ ‘ವ್ಯೂ ಒನ್ಸ್’ ಫೈಲ್ ಅನ್ನು ಕಳುಹಿಸಿದ ನಂತರ, ಕಳುಹಿಸುವವರು ಅದನ್ನು ಮತ್ತೆ ನೋಡಲು ಸಾಧ್ಯವಿಲ್ಲ, ಮತ್ತು ಸ್ವೀಕರಿಸುವವರು ಅದನ್ನು ಫಾರ್ವರ್ಡ್, ಸೇವ್, ಕಾಪಿ, ಸ್ಟಾರ್ ಮಾಡಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ. ಈ ವೈಶಿಷ್ಟ್ಯವನ್ನು ಬಳಸಿಕೊಂಡು ಕಳುಹಿಸಿದ ಫೋಟೋಗಳು ಮತ್ತು ವೀಡಿಯೊಗಳು ಸ್ವೀಕರಿಸುವವರ ಗ್ಯಾಲರಿ ಅಥವಾ ಫೋಟೋ ಅಪ್ಲಿಕೇಶನ್ಗೆ ಸೇವ್ ಆಗುವುದಿಲ್ಲ ಎಂದು ಕೂಡ ವಾಟ್ಸಾಪ್ ಹೇಳುತ್ತದೆ.
‘ವ್ಯೂ ವನ್ಸ್’ ಮಾಧ್ಯಮದ ಸ್ಕ್ರೀನ್ಶಾಟ್ಗಳನ್ನು ನಿರ್ಬಂಧಿಸಲಾಗಿದ್ದರೂ, ಸ್ವೀಕರಿಸುವವರು ಅದರಲ್ಲಿರುವ ವಿಷಯವಸ್ತುವನ್ನು “ಇತರ ಮಾರ್ಗಗಳ ಮೂಲಕ” ರೆಕಾರ್ಡ್ ಮಾಡಲು ಅಥವಾ ಉಳಿಸಲು ಸಧ್ಯವಿದೆ, ಉದಾಹರಣೆಗೆ ಬೇರೆಂದು ಡಿವೈಸ್ ಬಳಸಿ, ಎಂದು ಕಂಪನಿಯು ಗಮನಿಸಿದೆ. ಇದಲ್ಲದೆ, ತೆರೆಯದ ‘ವ್ಯೂ ವನ್ಸ್’ ಸಂದೇಶಗಳನ್ನು 14 ದಿನಗಳಲ್ಲಿ ನೋಡಬೇಕು ಅಥವಾ ಸ್ವಯಂಚಾಲಿತವಾಗಿ ಅವುಗಳ ಅವಧಿ ಮುಗಿಯುತ್ತದೆ. ವಿಭಾಗದ ಒಂದು ಸ್ಕ್ರೀನ್ಶಾಟ್ ಅನ್ನು ಕೆಳಗೆ ನೋಡಿ –

ಮತ್ತೊಂದು ವಾಟ್ಸಾಪ್ ಸಹಾಯ ಲೇಖನದಲ್ಲಿ, ‘ವ್ಯೂ ವನ್ಸ್’ ಮೀಡಿಯಾ ಮತ್ತು ಧ್ವನಿ ಸಂದೇಶಗಳನ್ನು ಬಳಕೆದಾರರು ಹೇಗೆ ಕಳುಹಿಸಬಹುದು ಮತ್ತು ತೆರೆಯಬಹುದು ಎಂಬುದರ ಕುರಿತು ಹಂತ ಹಂತದ ಕಾರ್ಯವಿಧಾನವನ್ನು ವಿವರಿಸಲಾಗಿದೆ. ಅಂತಹ ವಿಷಯವಸ್ತುಗಳು “ಸ್ವೀಕರಿಸುವವರ ಫೋಟೋಗಳು ಅಥವಾ ಗ್ಯಾಲರಿಯಲ್ಲಿ ಸೇವ್ ಆಗುವುದಿಲ್ಲ” ಮತ್ತು ಅದನ್ನು ಫಾರ್ವರ್ಡ್ ಮಾಡಲು, ಹಂಚಿಕೊಳ್ಳಲು ಅಥವಾ ಕಾಪಿ ಮಾಡಲು ಸಾಧ್ಯವಿಲ್ಲ ಎಂದು ವಾಟ್ಸಾಪ್ ಹೇಳುತ್ತದೆ. ಸ್ವೀಕರಿಸುವವರು ಮೀಡಿಯಾ ವ್ಯೂವರ್ ನಿಂದ ಒಮ್ಮೆ ಹೊರ ಬಂದರೆ, ನಂತರ ವಿಷಯವನ್ನು ಪುನಃ ತೆರೆಯಲಾಗುವುದಿಲ್ಲ ಮತ್ತು ಪುನಃ ನೋಡಲಾಗುವುದಿಲ್ಲ. ಈ ಸಹಾಯ ಲೇಖನದ ಒಂದು ಭಾಗವನ್ನು ಕೆಳಗೆ ನೋಡಿ-

ಸೆಪ್ಟೆಂಬರ್ 9, 2024ರಂದು, ಟೆಕ್ ಕ್ರಂಚ್ ವರದಿಯೊಂದರಲ್ಲಿ, ವಾಟ್ಸಾಪ್ನ ವ್ಯೂ ವನ್ಸ್ ವೈಶಿಷ್ಟ್ಯದಲ್ಲಿ ದೋಷವನ್ನು ಭದ್ರತಾ ಸಂಶೋಧಕ ಟಾಲ್ ಬೆಯಿರಿ ಕಂಡುಹಿಡಿದಿದ್ದರು ಎಂದು ಬಹಿರಂಗಪಡಿಸಲಾಗಿತ್ತು. ಒಂದು ನೇರ ಪ್ರದರ್ಶನದಲ್ಲಿ, ಆತ ‘ವ್ಯೂ ವನ್ಸ್’ ಚಿತ್ರವನ್ನು ಯಶಸ್ವಿಯಾಗಿ ಸೆರೆಹಿಡಿದು ಸಂಗ್ರಹಿಸಿದ್ದರು ಮತ್ತು ಈ ದುರ್ಬಲತೆಯು ಗೌಪ್ಯತೆಯ “ಸುಳ್ಳು ಸಮಾಧಾನ”ವನ್ನು ಸೃಷ್ಟಿಸಿದೆ ಎಂದು ವಾದಿಸಿದರು. ಇದು ಬಹಿರಂಗವಾದ ನಂತರ, ಮೆಟಾ ಈ ಸಮಸ್ಯೆಯನ್ನು ಒಪ್ಪಿಕೊಂಡು ಅಂತರ್ಜಾಲದ ವೇದಿಕೆಯಲ್ಲಿ ‘ವ್ಯೂ ವನ್ಸ್’ ರಕ್ಷಣೆಗಳನ್ನು ಸುಧಾರಿಸಲು ಸಂಸ್ಥೆಯು “ಈಗಾಗಲೇ ನವೀಕರಣಗಳನ್ನು ಹೊರತರುವ ಪ್ರಕ್ರಿಯೆಯಲ್ಲಿದೆ” ಎಂದು ಹೇಳಿಕೊಂಡಿತ್ತು.
ಆದರೆ, “.rvo” ನಂತಹ ಯಾವುದೇ ಎಂದಿಗೂ ಆಜ್ಞೆಯನ್ನು ಬಳಸಲಾಗಿದೆ ಅಥವಾ ಹೇಳಿಕೆಯಲ್ಲಿ ಸಾಧಿಸಿದ ಫಲಿತಾಂಶಗಳನ್ನು ಪಡೆಯಲಾಗಿದೆ ಎಂಬುದಕ್ಕೆ ಡಿಜಿಟೈ ಇಂಡಿಯಾಗೆ ಯಾವುದೇ ಪುರಾವೆಗಳು ದೊರಕಿಲ್ಲ. ಆದ್ದರಿಂದ, ಈ ಹೇಳಿಕೆ ಸುಳ್ಳು ಮತ್ತು ಈ ಆಜ್ಞೆಯು ಅಧಿಕೃತ ವಾಟ್ಸಾಪ್ ಅಪ್ಲಿಕೇಶನ್ನಲ್ಲಿ ಕೆಲಸ ಮಾಡುವುದಿಲ್ಲ.
