ಹೇಳಿಕೆ/Claim: ಯಾವುದೇ ಖಾಸಗಿ ಪ್ರಸಾರಕರು ಹಕ್ಕುಗಳಿಗಾಗಿ ಬಿಡ್ಗಳನ್ನು ಸಲ್ಲಿಸದ ಕಾರಣ ದೂರದರ್ಶನವು ಭಾರತದಲ್ಲಿ FIFA ವಿಶ್ವಕಪ್ ಪಂದ್ಯಗಳನ್ನು ನೇರ ಪ್ರಸಾರ ಮಾಡಲಿದೆ.
ಕಡೆನುಡಿ/Conclusion:ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ದೂರದರ್ಶನವು FIFA ವಿಶ್ವಕಪ್ ಅನ್ನು ಪ್ರಸಾರ ಮಾಡಲಿದೆ ಎಂದು ಸಾಬೀತುಪಡಿಸಲು ಯಾವುದೇ ವರದಿಗಳು, ಹೇಳಿಕೆಗಳು ಅಥವಾ ಪುರಾವೆಗಳಿಲ್ಲ. ಜೂನ್ 2, 2026ರಂದು FIFA ಮತ್ತು ಝೀ ಪ್ರಸಾರ ಒಪ್ಪಂದವನ್ನು ಅಂತಿಮಗೊಳಿಸಿತು, ಮತ್ತು ಈ ಮೂಲಕ 2026 ಮತ್ತು 2030 ರ ಸೀಸನ್ ಗಳಿಗಾಗಿ ಝೀ ಅನ್ನು ಭಾರತದಲ್ಲಿ ಅಧಿಕೃತ FIFA ವಿಶ್ವಕಪ್ ಪ್ರಸಾರಕರನ್ನಾಗಿ ಮಾಡಲಾಯಿತು, ಆದರೆ ದೂರದರ್ಶನ ಕ್ರೀಡಾ ವಾಹಿನಿಯು DD ಫ್ರೀ ಡಿಶ್ ಮೂಲಕ DD ಸ್ಪೋರ್ಟ್ಸ್ನಲ್ಲಿ FIFA ವಿಶ್ವಕಪ್ 2026ರ ಓಪನಿಂಗ್ ಪಂದ್ಯ, ಎಲ್ಲಾ ಕ್ವಾಟರ್ ಫೈನಲ್, ಸೆಮಿಫೈನಲ್ ಗಳು ಮತ್ತು ಗ್ರ್ಯಾಂಡ್ ಫಿನಾಲೆಯ ನೇರ ಪ್ರಸಾರವನ್ನು ಮಾತ್ರ ಮಾಡಲಿದೆ.
ರೇಟಿಂಗ್/Rating: ದಾರಿ ತಪ್ಪಿಸುವಂತಿದೆ
_____________________________________________________________________________________________________________________
ದೂರದರ್ಶನವು ಭಾರತದಲ್ಲಿ FIFA ವಿಶ್ವಕಪ್ 2026 ಅನ್ನು ಪ್ರಸಾರ ಮಾಡಲಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. X ಬಳಕೆದಾರ ‘abdulrahmanmash’ “ದೂರದರ್ಶನವು ಭಾರತದಲ್ಲಿ FIFA ವಿಶ್ವಕಪ್ ಅನ್ನು ಪ್ರಸಾರ ಮಾಡಲು ಸಿದ್ಧವಾಗಿದೆ!!!” ಎಂಬ ಶೀರ್ಷಿಕೆಯೊಂದಿಗೆ ಅಂತಹದೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ಗೆ ಲಗತ್ತಿಸಲಾದ ಚಿತ್ರದಲ್ಲಿ “ಬ್ರೇಕಿಂಗ್: ದೂರದರ್ಶನ ಹಿಂತಿರುಗಿದೆ: ಬಿಡ್ಗಳಿಲ್ಲದ ನಂತರ ದೂರದರ್ಶನವು ಭಾರತದಲ್ಲಿ FIFA ವಿಶ್ವಕಪ್ 2026 ಅನ್ನು ಪ್ರಸಾರ ಮಾಡಲಿದೆ” ಎಂದು ಹೇಳಲಾಗಿದೆ. ಪೋಸ್ಟ್ ಗೆ 101,000ಕ್ಕೂ ಹೆಚ್ಚು ವೀಕ್ಷಣೆಗಳು ದೊರಕಿವೆ ಮತ್ತು ಅದನ್ನು ಕೆಳಗೆ ನೋಡಬಹುದು –
Doordarshan set to telecast FIFA World Cup in India!!!#FIFA #IndianFootball pic.twitter.com/c2EMbpFpH2
— Abdul Rahman Mashood (@abdulrahmanmash) May 5, 2026

ಇತ್ತೀಚಿನ ಹೇಳಿಕೆಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ದೂರದರ್ಶನವು FIFA ವಿಶ್ವಕಪ್ನ ಸಂಪೂರ್ಣ 104 ಪಂದ್ಯಗಳ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಅಧಿಕೃತ ಪ್ರಕಟಣೆಗಳಿಲ್ಲ. ಬದಲಾಗಿ, FIFA ಜೂನ್ 2, 2026ರಂದು ಝೀ ಎಂಟರ್ಟೈನ್ಮೆಂಟ್ನೊಂದಿಗೆ ಒಪ್ಪಂದವನ್ನು ದೃಢಪಡಿಸಿತು, ಮತ್ತು ಈ ಮೂಲಕ 2026 ಮತ್ತು 2030 ರ ಸೀಸನ್ ಗಳ ಅಧಿಕೃತ ಪ್ರಸಾರಕ ವಾಹಿನಿಯಾಗಿ ಮೂಡಿಬಂತು.
ವಿವರಗಳು:
ಹೆಚ್ಚಿನ ಮಾಹಿತಿಗಾಗಿ ನಾವು ಮೊದಲು “ದೂರದರ್ಶನವು ಫಿಫಾ ವಿಶ್ವಕಪ್ 2026 ಅನ್ನು ಪ್ರಸಾರ ಮಾಡುತ್ತದೆ” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಜೂನ್ 10, 2026 ರಂದು, ಡಿಡಿ ಸ್ಪೋರ್ಟ್ಸ್ ತಮ್ಮ ಅಧಿಕೃತ X ಖಾತೆಯಲ್ಲಿ “ಡಿಡಿ ಫ್ರೀ ಡಿಶ್ ಮೂಲಕ ಡಿಡಿ ಸ್ಪೋರ್ಟ್ಸ್ನಲ್ಲಿ ಓಪನಿಂಗ್ ಪಂದ್ಯ, ಎಲ್ಲಾ ಕ್ವಾರ್ಟರ್ ಫೈನಲ್ಗಳು, ಸೆಮಿಫೈನಲ್ಗಳು ಮತ್ತು ಫಿಫಾ ವಿಶ್ವಕಪ್ 2026 ರ ಗ್ರ್ಯಾಂಡ್ ಫಿನಾಲೆ ಲೈವ್” ಎಂದು ಘೋಷಿಸಿತು.
ಮೇ 4, 2026ರಂದು ಪ್ರಕಟವಾದ ರಾಯಿಟರ್ಸ್ ವರದಿಯ ಪ್ರಕಾರ, ಸಂಸ್ಥೆಯು ಹಿಂದಿನ ವಿಶ್ವಕಪ್ ಒಪ್ಪಂದಗಳಿಗೆ ಆಸುಪಾಸಾಗಿ ಹೆಚ್ಚಿನ ಮೌಲ್ಯಮಾಪನವನ್ನು ನಿರೀಕ್ಷಿಸುತ್ತಿದ್ದರಿಂದ ರಿಲಯನ್ಸ್-ಡಿಸ್ನಿ ಜಂಟಿ ಉದ್ಯಮದಿಂದ $20 ಮಿಲಿಯದ ಬಿಡ್ ಅನ್ನು FIFA ತಿರಸ್ಕರಿಸಿತು ಎಂದು ವರದಿಯಾಗಿದೆ. ಕ್ರಿಕೆಟ್ಗೆ ಹೋಲಿಸಿದರೆ ಫುಟ್ಬಾಲ್ “ಭಾರತದಲ್ಲಿ ಒಂದು ವಿಶಿಷ್ಟ ವಿಭಾಗ”ವಾಗಿದೆ, ಆದರೆ U.S., ಕೆನಡಾ ಮತ್ತು ಮೆಕ್ಸಿಕೊದಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದರಿಂದ ತಡರಾತ್ರಿಯ ಪಂದ್ಯದ ಸಮಯವು ವೀಕ್ಷಣೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು ಎಂದು ವರದಿಯು ಉಲ್ಲೇಖಿಸುತ್ತದೆ.
ಸೋನಿಯಂತಹ ಪ್ರಸಾರಕರು ಸಹ ಹಕ್ಕುಗಳನ್ನು ಖರೀದಿಸದಿರಲು ನಿರ್ಧರಿಸಿದರು ಏಕೆಂದರೆ ಅದು ಸಂಸ್ಥೆಗೆ “ಆರ್ಥಿಕವಾಗಿ ಲಾಭದಾಯಕವಾಗಿರಲಿಲ್ಲ”. ಜಾಹೀರಾತು ಸಂಸ್ಥೆ ಡೆಂಟ್ಸು ಇಂಡಿಯಾದ ಕ್ರೀಡಾ ವ್ಯವಸ್ಥಾಪಕ ಪಾಲುದಾರರಾದ ರೋಹಿತ್ ಪೊಟ್ಫೋಡೆ ಈ ಪರಿಸ್ಥಿತಿಯನ್ನು “ಕೆಲವು ಚಲನೆಗಳು ಮಾತ್ರ ಉಳಿದಿರುವಾಗ ಚೆಸ್ ಆಟದ ಅಂತ್ಯ” ಎಂದು ವಿವರಿಸಿದ್ದಾರೆ ಎಂದು ವರದಿ ಬರೆಯುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇದರ ನಂತರ, ಮೇ 5, 2026ರಂದು ಪ್ರಕಟವಾದ ಇಂಡಿಯಾ ಟುಡೇ ವರದಿ ನಮಗೆ ದೊರಕಿತು, ಅದರಲ್ಲಿ ಭಾರತದಲ್ಲಿ FIFA ವಿಶ್ವಕಪ್ 2026ರ ಪ್ರಸಾರಕರನ್ನು ಅಂತಿಮಗೊಳಿಸಲಾಗಿಲ್ಲ ಎಂದು ಬರೆಯಲಾಗಿತ್ತು. ಪ್ರಸಾರ ಭಾರತಿ ಮತ್ತು ದೂರದರ್ಶನವು “ಸುರಕ್ಷತಾ ಜಾಲದಂಥ ಆಯ್ಕೆಯಷ್ಟೇ” ಮತ್ತು “ಕಡ್ಡಾಯ ಹಂಚಿಕೆ ನಿಯಮಗಳ ಅಡಿಯಲ್ಲಿ, ವಿಶೇಷವಾಗಿ ಸೆಮಿಫೈನಲ್ ಮತ್ತು ಫೈನಲ್ಗಳಂತಹ ಮಾರ್ಕಿ ಆಟಗಳಿಗೆ ಮಧ್ಯಪ್ರವೇಶಿಸಬಹುದು” ಎಂದು ವರದಿಯಲ್ಲಿ ಹೇಳಲಾಗಿದೆ. ಆದಾಗ್ಯೂ, ಲೇಖನದಲ್ಲಿ ಸ್ಪಷ್ಟವಾಗಿ “ಇನ್ನೂ ದೃಢೀಕೃತ ಪ್ರಸಾರಕರು ಇಲ್ಲ” ಎಂದು ಸ್ಪಷ್ಟವಾಗಿ ಹೇಳಲಾಗಿದೆ, ಅಂದರೆ ದೂರದರ್ಶನವು ಅಧಿಕೃತವಾಗಿ ಹಕ್ಕುಗಳನ್ನು ಪಡೆದುಕೊಂಡಿಲ್ಲ ಎಂದರ್ಥ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇತ್ತೀಚಿನ FTN ಸುದ್ದಿ ವರದಿಯೊಂದು, ಒಪ್ಪಂದ ಸಹಿಯಾಗಿರದ ಕಾರಣ, “ಚೀನಾ ಮತ್ತು ಭಾರತದಲ್ಲಿನ ಅಭಿಮಾನಿಗಳಿಗೆ ಪ್ರಸ್ತುತ ಕೇವಲ ಐದು ವಾರಗಳ ದೂರದಲ್ಲಿರುವ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಅವಕಾಶವಿರುವುದಿಲ್ಲ” ಎಂದು ಬರೆಯುತ್ತದೆ. “ವಿಶ್ವಕಪ್ಗೆ ಮುಂಚಿತವಾಗಿ 175 ದೇಶಗಳೊಂದಿಗೆ FIFA ಈಗಾಗಲೇ ಪ್ರಸಾರ ಒಪ್ಪಂದಗಳನ್ನು ಮಾಡಿಕೊಂಡಿದೆ” ಎಂದು ಕೂಡ ವರದಿಯು ಗಮನಿಸುತ್ತದೆ. ಆದಾಗ್ಯೂ, ಭಾರತದ ಬಗ್ಗೆ ಯಾವುದೇ ದೃಢೀಕೃತ ಸುದ್ದಿಗಳಿಲ್ಲ ಮತ್ತು ದೂರದರ್ಶನ ಪ್ರಸಾರ ಹಕ್ಕುಗಳನ್ನು ಪಡೆದುಕೊಳ್ಳುವ ಬಗ್ಗೆಯೂ ಏನೂ ಇಲ್ಲ.

ಜೂನ್ 2, 2026ರಂದು ಪ್ರಕಟವಾದ ಅಲ್ ಜಜೀರಾ ವರದಿಯ ಪ್ರಕಾರ, Zee ಎಂಟರ್ಟೈನ್ಮೆಂಟ್ ಜೊತೆ FIFA ಪ್ರಸಾರ ಒಪ್ಪಂದಕ್ಕೆ ಸಹಿ ಹಾಕಿದ್ದು, 2026 ಮತ್ತು 2030ರ FIFA ವಿಶ್ವಕಪ್ಗಳನ್ನು ಪ್ರಸಾರ ಮಾಡುವ ಹಕ್ಕುಗಳನ್ನು ನೀಡಿದೆ, ಇದು ಮಾರಾಟವಾಗದ ಹಕ್ಕುಗಳ ಕುರಿತಾದ ತಿಂಗಳುಗಳ ಕಾಲದ ಬಿಕ್ಕಟ್ಟನ್ನು ಕೊನೆಗೊಳಿಸಿದೆ. ಝೀ “2034ರವರೆಗೆ 39 FIFA ಪಂದ್ಯಾವಳಿಗಳಲ್ಲಿ 2027ರ ಮಹಿಳಾ ವಿಶ್ವಕಪ್ ಅನ್ನು” ಪ್ರಸಾರ ಮಾಡಲಿದೆ ಎಂದು ವರದಿಯು ಗಮನಿಸುತ್ತದೆ.
ಜೂನ್ 10, 2026 ರಂದು, DD ಸ್ಪೋರ್ಟ್ಸ್ ತಮ್ಮ ಅಧಿಕೃತ X ಖಾತೆಯಲ್ಲಿ “ಓಪನಿಂಗ್ ಪಂದ್ಯ, ಎಲ್ಲಾ ಕ್ವಾರ್ಟರ್ ಫೈನಲ್ಸ್, ಸೆಮಿಫೈನಲ್ಗಳು ಮತ್ತು FIFA ವಿಶ್ವಕಪ್ 2026 ರ ಗ್ರ್ಯಾಂಡ್ ಫಿನಾಲೆಯನ್ನು DD ಫ್ರೀ ಡಿಶ್ ಮೂಲಕ DD ಸ್ಪೋರ್ಟ್ಸ್ನಲ್ಲಿ ನೇರಪ್ರಸಾರ” ಎಂದು ಘೋಷಿಸಿತು. “ಸರ್ಕಾರವು ಕ್ರೀಡಾ ಪ್ರಸಾರ ಸಂಕೇತಗಳು (ಪ್ರಸಾರ ಭಾರತಿಯೊಂದಿಗೆ ಕಡ್ಡಾಯ ಹಂಚಿಕೆ) ಕಾಯ್ದೆಯಡಿಯಲ್ಲಿ ತಿದ್ದುಪಡಿ ಮಾಡಿದ ಕ್ರೀಡಾ ಪ್ರಸಾರ ಪಟ್ಟಿಯನ್ನು ಸೂಚಿಸಿದೆ” ಎಂದು ಒಂದು ವರದಿಯು ತಿಳಿಸಿದೆ. “ಝೀ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಂಬಂಧಿತ ಅಧಿಸೂಚನೆಯನ್ನು ತಿದ್ದುಪಡಿ ಮಾಡಿದೆ ಎಂದು ತಿಳಿದುಬಂದಿದೆ” ಎಂದು ವರದಿ ಹೇಳುತ್ತದೆ.
⚽️ The biggest football spectacle is coming to your screens FREE! 📺
📢 Watch the Opening Match, all Quarterfinals, Semifinals & the Grand Final of the FIFA World Cup 2026 LIVE on DD Sports via DD Free Dish.
— Doordarshan Sports (@ddsportschannel) June 10, 2026
ಆದ್ದರಿಂದ, ದೂರದರ್ಶನವು ಭಾರತದಲ್ಲಿ 2026 ರ FIFAವಿಶ್ವಕಪ್ನ ಸಂಪೂರ್ಣ 104 ಪಂದ್ಯಗಳನ್ನು ಪ್ರಸಾರ ಮಾಡಲಿದೆ ಎಂಬ ಹೇಳಿಕೆಯು ದಾರಿತಪ್ಪಿಸುವಂತಿದೆ ಏಕೆಂದರೆ ಅದು 2026ರ FIFA ವಿಶ್ವಕಪ್ನ ಓಪನಿಂಗ್ ಪಂದ್ಯ, ಎಲ್ಲಾ ಕ್ವಾರ್ಟರ್ಫೈನಲ್ಗಳು, ಸೆಮಿಫೈನಲ್ಗಳು ಮತ್ತು ಗ್ರ್ಯಾಂಡ್ ಫಿನಾಲೆಗಳನ್ನು ಮಾತ್ರ ಪ್ರಸಾರ ಮಾಡಲಿದೆ. ಝೀ ಎಂಟರ್ಟೈನ್ಮೆಂಟ್ FIFA 2026 ಮತ್ತು 2030 FIFA ವಿಶ್ವಕಪ್ಗಳ ಸಂಪೂರ್ಣ ಅಧಿಕೃತ ಪ್ರಸಾರಕವಾಗಿದೆ.
ಹೀಗಾಗಿ, ಭಾರತದಲ್ಲಿ FIFA ಪ್ರಸಾರ ಹಕ್ಕುಗಳಿಗಾಗಿ ಯಾವುದೇ ಖಾಸಗಿ ಬಿಡ್ಡರ್ ಇರಲಿಲ್ಲ ಎಂಬ ಹೇಳಿಕೆ ದಾರಿತಪ್ಪಿಸುವಂತಿದೆ.
ಆದ್ದರಿಂದ, ಈ ಹೇಳಿಕೆ ದಾರಿತಪ್ಪಿಸುವಂಥದ್ದು ಎನ್ನಬಹುದು..
ಇದನ್ನೂ ಓದಿ:
ಪಾಕಿಸ್ತಾನ ಧ್ವಜ ಹೊತ್ತ ಹಡಗನ್ನು ಇರಾನ್ ಹರ್ಮಜ್ ಜಲಸಂಧಿಯಲ್ಲಿ ನಾಶಪಡಿಸಲಾಯಿತೇ? ಸತ್ಯ ಪರಿಶೀಲನೆ
