ಹೇಳಿಕೆ/Claim:ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ DCP ಸುಮಿತ್ ಝಾ ರಾಜೀನಾಮೆ ನೀಡುತ್ತಿರುವುದನ್ನು ವೀಡಿಯೊವೊಂದು ತೋರಿಸುತ್ತದೆ ಎಂದು ಹೇಳಲಾಗಿದೆ.
ಕಡೆನುಡಿ/Conclusion: ಈ ಹೇಳಿಕೆಯು ಸಂಪೂರ್ಣವಾಗಿ ಸುಳ್ಳು. ದೃಶ್ಯಾವಳಿಯ ಆಡಿಯೋವನ್ನು AI ಬಳಸಿ ಕುಶಲತೆಯಿಂದ ಬದಲಾಯಿಸಲಾಗಿದೆ ಮತ್ತು DCP ಸುಮಿತ್ ಝಾ ರಾಜೀನಾಮೆ ನೀಡಿಲ್ಲ. .
ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ
******************************************************
ಇತ್ತೀಚಿನ ವಿದ್ಯಾರ್ಥಿಗಳ ನೇತೃತ್ವದ CJP ಪ್ರತಿಭಟನೆಗಳ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ DCP ಸುಮಿತ್ ಝಾ ರಾಜೀನಾಮೆ ನೀಡುತ್ತಿರುವುದನ್ನು ತೋರಿಸುತ್ತಿರುವುದಾಗಿ ಹೇಳಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ಫೇಸ್ಬುಕ್ ಬಳಕೆದಾರ “ಶಕೀರ್ ಖಾನ್” ಅಂತಹ ಒಂದು ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ (ಕನ್ನಡಕ್ಕೆ ಅನುವಾದಿಸಲಾಗಿದೆ) ಹಂಚಿಕೊಂಡಿದ್ದಾರೆ: “ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿದ್ದಕ್ಕಾಗಿ ದೆಹಲಿ DCP ರಾಜೀನಾಮೆ ನೀಡಿದರು”. ಪೋಸ್ಟ್ಗೆ ಲಗತ್ತಿಸಲಾದ 47 ಕ್ಷಣಗಳ ವೀಡಿಯೊದಲ್ಲಿ DCP ಝಾ ರಾಜೀನಾಮೆ ನೀಡುತ್ತಿರುವುದನ್ನು ತೋರಿಸಲಾಗಿದೆ ಎನ್ನಲಾಗಿದೆ. ವೀಡಿಯೊದ ಮೇಲೆ ಬರೆದಿರುವ ಪಠ್ಯ ಹೀಗಿದೆ (ಕನ್ನಡದ ಅನುವಾದಿಸಲಾಗಿದೆ): “ದೆಹಲಿ ಪೊಲೀಸರ DCP ವೈರಲ್ ರಾಜೀನಾಮೆ ವೀಡಿಯೊ.”
ಈ ರೀಲ್ ಅನ್ನು ಜುಲೈ 28, 2026ರಂದು ಅಪ್ಲೋಡ್ ಮಾಡಲಾಗಿದೆ ಮತ್ತು ಅದನ್ನು ಕೆಳಗೆ ನೋಡಬಹುದು-

ಈ ಹೇಳಿಕೆಯೊಂದಿಗೆ ಹಂಚಿಕೊಂಡಿರುವ ವೀಡಿಯೊದಲ್ಲಿ, DCP ಸುಮಿತ್ ಝಾ ತಾವು ದೆಹಲಿ ಪೊಲೀಸ್ ಇಲಾಖೆಯಿಂದ ರಾಜೀನಾಮೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಅಪರಾಧಿಗಳಂತೆ ಬಿಂಬಿಸುವ ಮೂಲಕ ಸರ್ಕಾರವು ತಾನು ಪತ್ರಿಕೆಗಳಿಗೆ ಸುಳ್ಳು ಹೇಳಬೇಕೆಂದು ನಿರೀಕ್ಷಿಸುತ್ತಿದೆ ಎಂದು ಅವರು ಹೇಳುತ್ತಾರೆ. ಅಮಾಯಕ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಳ್ಳುವ ಯಾವುದೇ ಚಟುವಟಿಕೆಯಲ್ಲಿ ತಾವು ಭಾಗವಹಿಸಲು ಸಾಧ್ಯವಿಲ್ಲ ಎಂದು ಮತ್ತು ಅವರು ಭಯೋತ್ಪಾದಕರಲ್ಲ, ದೇಶದ ಭವಿಷ್ಯ ಎಂದು ಅವರು ಹೇಳುತ್ತಾರೆ. ಇದಲ್ಲದೆ, ಸತ್ಯವನ್ನು ಎತ್ತಿಹಿಡಿಯಲು ಪೊಲೀಸ್ ಇಲಾಖೆಯನ್ನು ಸೇರಿಕೊಂಡೆ ಮತ್ತು ಹಾಗಾಗಿ ಸರ್ಕಾರದೊಂದಿಗೆ ನಿಲ್ಲಲು ಸಾಧ್ಯವಿಲ್ಲ, ಬದಲಿಗೆ ವಿದ್ಯಾರ್ಥಿಗಳನ್ನು ಬೆಂಬಲಿಸಲು ಆಯ್ಕೆ ಮಾಡಿಕೊಂಡೆ ಎಂದು ಅವರು ಹೇಳುತ್ತಾರೆ.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸಂಪೂರ್ಣವಾಗಿ ಸುಳ್ಳು ಎಂದು ಕಂಡುಕೊಂಡಿತು. ಈ ವೀಡಿಯೊದ ಧ್ವನಿಯನ್ನು AI ಬಳಸಿ ಕೃತಕವಾಗಿ ಬದಲಾಯಿಸಲಾಗಿದೆ ಮತ್ತು DCP ಸುಮಿತ್ ಝಾ ದೆಹಲಿ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿಲ್ಲ. ಮೂಲ ದೃಶ್ಯಾವಳಿಯಲ್ಲಿ, ಅವರು ತಪ್ಪು ಮಾಹಿತಿ ಪ್ರಚಾರಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿರುವುದು ಕಂಡುಬರುತ್ತದೆ. ಈ ಸುಳ್ಳು ರಾಜೀನಾಮೆ ಹೇಳಿಕೆಯನ್ನು PIB ಸತ್ಯ ಪರಿಶೀಲನಾ ಘಟಕ ಮತ್ತು ದೆಹಲಿ ಪೊಲೀಸರು ಅಧಿಕೃತವಾಗಿ ನಿರಾಕರಿಸಿದ್ದಾರೆ.
ವಿವರಗಳು:
ವೀಡಿಯೊದ ಮೂಲದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು ಅದರ ವಿವಿಧ ಕೀಫ್ರೇಮ್ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ಜುಲೈ 23, 2026ರಂದು ದೆಹಲಿ ಪೊಲೀಸರು ಅಪ್ಲೋಡ್ ಮಾಡಿದ ಅದೇ ದೃಶ್ಯಗಳನ್ನು ಹೊಂದಿರುವ X ಪೋಸ್ಟ್ ನಮ್ಮ ಕೈಸೇರಿತು. ಪೋಸ್ಟ್ ನ ಶೀರ್ಷಿಕೆ ಹೀಗಿದೆ: “ಸಂಘಟಿತ ತಪ್ಪು ಮಾಹಿತಿ ಅಭಿಯಾನಗಳಲ್ಲಿ ಭಾಗಿಯಾಗಿರುವ 480 ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳನ್ನು ಗುರುತಿಸಿ ನಿರ್ಬಂಧಿಸಲಾಗಿದೆ. ಪರಿಸ್ಥಿತಿಯ ದಾರಿ ತಪ್ಪಿಸಲು ವದಂತಿಗಳನ್ನು ಹರಡುವ ಇಂತಹ ವಿದೇಶಿ ಖಾತೆಗಳ ಬಗ್ಗೆ ಎಚ್ಚರದಿಂದಿರಲು ದೆಹಲಿ ಪೊಲೀಸರು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಮನವಿ ಮಾಡುತ್ತಾರೆ.”
480 Pakistan-based social media handles involved in coordinated misinformation campaigns were identified and blocked.
Delhi Police appeals to students and youth to be wary of such foreign accounts spreading rumours to mislead the situation.@LtGovDelhi #DPUpdates pic.twitter.com/SXzwXosDGr
— Delhi Police (@DelhiPolice) July 23, 2026
ಪೋಸ್ಟ್ಗೆ ಲಗತ್ತಿಸಲಾದ 54 ಕ್ಷಣಗಳ ವೀಡಿಯೊದಲ್ಲಿ DCP ಸುಮಿತ್ ಝಾ ಅವರು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳು ತಪ್ಪು ಮಾಹಿತಿಯನ್ನು ಹರಡುವ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿರುವುದನ್ನು ತೋರಿಸಲಾಗಿದೆ. ಈ ಖಾತೆಗಳನ್ನು ಬ್ಲಾಕ್ ಮಾಡಲಾಗುತ್ತಿದೆ ಎಂದು ಮತ್ತು ಆಪರೇಷನ್ ಸಿಂಧೂರ್ ಸಮಯದಲ್ಲಿ ಸಹ ಇದೇ ರೀತಿಯ ಖಾತೆಗಳು ಸಕ್ರಿಯವಾಗಿದ್ದವು ಎಂದು ಅವರು ಹೇಳುತ್ತಾರೆ. ಈ ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳ ಉದ್ದೇಶ ವಿದ್ಯಾರ್ಥಿಗಳನ್ನು ಪ್ರಚೋದಿಸುವುದು ಮತ್ತು ಅಶಾಂತಿ ಸೃಷ್ಟಿಸುವುದು ಎಂದು ಅವರು ಮತ್ತಷ್ಟು ವಿವರಿಸುತ್ತಾರೆ.
ಇದರ ನಂತರ, ಈ ಹೇಳಿಕೆಯನ್ನು ಸುಳ್ಳು ಎಂದಿರುವ PIBಯ ಮತ್ತೊಂದು X ಪೋಸ್ಟ್ ನಮಗೆ ಕಂಡುಬಂತು. ಈ ವೀಡಿಯೊ “ಜಂತರ್ ಮಂತರ್ ಪ್ರತಿಭಟನೆಗೆ ಬೆಂಬಲವಾಗಿ ದೆಹಲಿ ಪೊಲೀಸ್ DCP ಸುಮಿತ್ ಝಾ ರವರು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ ಎಂದು ತಪ್ಪಾಗಿ ಹೇಳಿಕೊಳ್ಳುತ್ತದೆ” ಎಂದು ಪೋಸ್ಟ್ ನಲ್ಲಿ ಗಮನಿಸಲಾಗಿದೆ. ಇದಲ್ಲದೆ, “ವಿಡಿಯೋವನ್ನು #AI ಬಳಸಿ ರಚಿಸಲಾಗಿದೆ” ಮತ್ತು ಅದನ್ನು ಡಿಜಿಟಲ್ ರೂಪದಲ್ಲಿ ಮಾರ್ಪಡಿಸಲಾಗಿದೆ.
A video circulating on social media falsely claims that Delhi Police DCP Sumit Jha has resigned with immediate effect in support of the Jantar Mantar protest#PIBFactCheck: ❌ The claim is fake
The video has been generated using #AI
▶️ Watch the original video here:… https://t.co/v6QPK57CMZ
— PIB India (@PIB_India) July 28, 2026
ದೆಹಲಿ ಪೊಲೀಸ್ DCP ಸುಮಿತ್ ಝಾ ರಾಜೀನಾಮೆ ನೀಡಿದ್ದಾರೆ ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ವರದಿ ಅಥವಾ ಅಧಿಕೃತ ಅಧಿಸೂಚನೆಗಳು ಡಿಜಿಟೈ ಇಂಡಿಯಾಗೆ ದೊರಕಲಿಲ್ಲ. ಜುಲೈ 26, 2026ರಂದು, ದೆಹಲಿ ಪೊಲೀಸರು “ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ದೆಹಲಿ ಪೊಲೀಸ್ DCP ಸುಮಿತ್ ಝಾ ರಾಜೀನಾಮೆ ನೀಡಿದ್ದಾರೆ ಎನ್ನುವ ವೈರಲ್ ವೀಡಿಯೊ ಸಂಪೂರ್ಣವಾಗಿ ನಕಲಿ ಮತ್ತು AI ರಚಿತವಾಗಿದೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಮೂಲ ವೀಡಿಯೊವನ್ನು ಟ್ಯಾಗ್ ಮಾಡಿ “ತಿದ್ದಿದ ಕ್ಲಿಪ್ ಅನ್ನು ಫಾರ್ವರ್ಡ್ ಮಾಡುವುದನ್ನು ಅಥವಾ ಹಂಚಿಕೊಳ್ಳುವುದನ್ನು ತಡೆಯಿರಿ…” ಎಂದು ಜನರನ್ನು ಒತ್ತಾಯಿಸಿದ್ದಾರೆ.
⚠️ FACT CHECK: FAKE VIDEO ⚠️The viral video claiming Delhi Police DCP Sumit Jha resigned over student protests is completely fake and AI generated. The authentic footage, in which the officer addresses the public regarding active misinformation campaigns, is available vide link…
— Delhi Police (@DelhiPolice) July 26, 2026
ಕೊನೆಯದಾಗಿ, AI ಧ್ವನಿ ಪತ್ತೆ ಟೂಲ್ ನಲಿ ವೀಡಿಯೊದ ಸತ್ಯಾಸತ್ಯತೆಯನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಿದೆವು. ಆಡಿಯೋ ಕೇವಲ 14% ಮಾನವನ ಅಂಶ ಹೊಂದಿದ್ದು, ಉಳಿದ 86% AI ಬಳಸಿ ಕುಶಲತೆಯಿಂದ ರಚಿಸಲಾಗಿರುವಂಥದ್ದು ಎಂದು ಫಲಿತಾಂಶಗಳು ತೋರಿಸಿವೆ. ಕೆಳಗಿನ ಫಲಿತಾಂಶಗಳನ್ನು ನೋಡಿ –

ಆದ್ದರಿಂದ, ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು.
ಇದನ್ನೂ ಓದಿ:
ಪಾಕಿಸ್ತಾನ ಧ್ವಜ ಹೊತ್ತ ಹಡಗನ್ನು ಇರಾನ್ ಹರ್ಮಜ್ ಜಲಸಂಧಿಯಲ್ಲಿ ನಾಶಪಡಿಸಲಾಯಿತೇ? ಸತ್ಯ ಪರಿಶೀಲನೆ
