ಹೇಳಿಕೆ/Claim: 16ನೇ ಸುತ್ತಿನಲ್ಲಿ ಅರ್ಜೆಂಟೀನಾ ವಿರುದ್ಧ ಈಜಿಪ್ಟ್ ನಡುವಿನ FIFA ವಿಶ್ವಕಪ್ 2026ರ ಪಂದ್ಯವನ್ನು ಅಧಿಕೃತವಾಗಿ ನಿರ್ವಹಿಸಿದ ರೆಫರಿಯನ್ನು ನಿಷೇಧಿಸಲಾಗಿದೆ..
ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಮ್ಯಾಚ್ ರೆಫರಿ ಫ್ರಾಂಸ್ವಾ ಲಟೆಕ್ಸ್ಯೆ ಮತ್ತು VAR ಅಧಿಕಾರಿಗಳು ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ಈಜಿಪ್ಟ್ ಕಾನೂನುಬದ್ಧವಾಗಿ ದೂರು ನೀಡಿತ್ತು ಮತ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತ್ತು. ಆದರೆ, FIFA ಫ್ರಾಂಸ್ವಾ ಲಟೆಕ್ಸ್ಯೆಯವರ ಮೇಲೆ ನಿಷೇಧವನ್ನು ಜಾರಿಗೊಳಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳು, ಅಧಿಕೃತ ಹೇಳಿಕೆಗಳು ಅಥವಾ ದೃಢೀಕರಣವಿಲ್ಲ. ಫ್ರೆಂಚ್ ರೆಫರಿ ಫ್ರಾಂಸ್ವಾ ಲಟೆಕ್ಸ್ಯೆಯವರ ಬ್ಯಾಂಕ್ ಖಾತೆಯು ತನಿಖೆಯಲ್ಲಿದೆ ಅಥವಾ ಅವರು ಯಾವುದೇ ನಿಗೂಢ $500,000 ಪಾವತಿಗಳನ್ನು ಸ್ವೀಕರಿಸಿದ್ದರು ಎಂಬುದರ ಕುರಿತು ಡಿಜಿಟೈ ಇಂಡಿಯಾಗೆ ಯಾವುದೇ ಪುರಾವೆಗಳು ದೊರಕಿಲ್ಲ.
ರೇಟಿಂಗ್/Rating: ಸುಳ್ಳು ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
Or ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
2026ರ FIFA ವಿಶ್ವಕಪ್ನ 16ನೇ ಸುತ್ತಿನಲ್ಲಿ ಅರ್ಜೆಂಟೀನಾ ವಿರುದ್ಧ ಈಜಿಪ್ಟ್ ಪಂದ್ಯದ ಸಮಯದಲ್ಲಿದ್ದ ಮ್ಯಾಚ್ ರೆಫರಿಯ ಮೇಲೆ ನಿಷೇಧ ಹೇರಲಾಗಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘ImoPunter’ ಅಂತಹ ಹೇಳಿಕೆಯನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡರು “ಇದೀಗ ಬಂದ ಸುದ್ದಿ: ಅರ್ಜೆಂಟೀನಾ ವಿರುದ್ಧ ಈಜಿಪ್ಟ್ ಪಂದ್ಯವನ್ನು ನಿರ್ವಹಿಸಿದ ರೆಫರಿಯನ್ನು ಕಳಪೆ ನಿರ್ವಹಣೆಗಾಗಿ ನಿಷೇಧಿಸಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಪೋಸ್ಟ್ಗೆ ಲಗತ್ತಿಸಲಾದ ಚಿತ್ರದಲ್ಲಿ “BANNED” ಎಂಬ ಪದವನ್ನು ದೊಡ್ಡ ಬಿಳಿ ಅಕ್ಷರಗಳಲ್ಲಿ ಬರೆದಿರುವ FIFA 2026ರ ಹಳದಿ ಜರ್ಸಿಯಲ್ಲಿರುವ ಮ್ಯಾಚ್ ರೆಫರಿ ಫ್ರಾಂಸ್ವಾ ಲಟೆಕ್ಸ್ಯೆಯನ್ನು ಚಿತ್ರಿಸಲಾಗಿದೆ. ಈ ಪೋಸ್ಟ್ ಗೆ 3.3 ಮಿಲಿಯಕ್ಕಿಂತಲೂ ಹೆಚ್ಚು ವೀಕ್ಷಣೆಗಳು ದೊರಕಿರ್ವೆ, ಇದನ್ನು ಕೆಳಗೆ ನೋಡಬಹುದು –
🚨 JUST IN: The referee that officiated the game between Argentina vs Egypt has been banned due to poor officiating. 💔😔 pic.twitter.com/Mt77Zpbc4w
— BIG IMO🤴🏽🇨🇦 (@ImoPunter) July 8, 2026

“ಅಧಿಕಾರಿಗಳು ಫ್ರಾಂಸ್ವಾ ಲಟೆಕ್ಸ್ಯೆಯವರ ಬ್ಯಾಂಕ್ ಖಾತೆಯನ್ನು ತನಿಖೆ ಮಾಡಿದರು ಮತ್ತು ಕಳೆದ 24 ಗಂಟೆಗಳಲ್ಲಿ ಅವರು $500,000ಕ್ಕೂ ಹೆಚ್ಚು ನಿಗೂಢ ಪಾವತಿಯನ್ನು ಪಡೆದಿದ್ದಾರೆ” ಎಂದು ಮತ್ತೊಂದು ಹೇಳಿಕೆ ಸೂಚಿಸುತ್ತದೆ. ಪೋಸ್ಟ್ ಅನ್ನು ಇಲ್ಲಿ ನೋಡಿ.
Circulan rumores,
Las autoridades investigaron la cuenta bancaria de François Letexier y descubrieron que en las últimas 24 horas recibió un pago misterioso de más de 500.000 dólares.
Esto ocurrió justo antes de que arbitrara el partido de Argentina contra Egipto.🎯 pic.twitter.com/yF9EtbMPXq
— 🌐EL GRAN DESPERTAR🌐 (@destapandolose1) July 8, 2026
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಗಳನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅವು ಸುಳ್ಳು ಎಂದು ಕಂಡುಕೊಂಡಿತು. ಈಜಿಪ್ಟ್ ನ್ಯಾಯಯುತ ಕಳವಳಗಳನ್ನು ವ್ಯಕ್ತಪಡಿಸಿ ರೆಫರಿ ಫ್ರಾಂಸ್ವಾ ಲಟೆಕ್ಸ್ಯೆ ಮತ್ತು VAR ತಂಡವು ತೆಗೆದುಕೊಂಡ ಹಲವು ನಿರ್ಧಾರಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕರೆ ನೀಡಿದ್ದು ನಿಜ. ಆದರೆ, FIFA ಮೂಲಕ ಲೆಟೆಕ್ಸಿಯರ್ ಅವರನ್ನು ಅಮಾನತುಗೊಳಿಸಿದೆ ಅಥವಾ ನಿಷೇಧಿಸಲಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಪ್ರಕಟಣೆ, ವಿಶ್ವಾಸಾರ್ಹ ಪುರಾವೆಗಳು ಅಥವಾ ದೃಢೀಕರಣವಿಲ್ಲ. ಅವರ ಬ್ಯಾಂಕ್ ಖಾತೆಯನ್ನು ತನಿಖೆ ಮಾಡಲಾಗುತ್ತಿದೆ ಅಥವಾ ಅವರು ಅನುಮಾನಾಸ್ಪದ $500,000 ಪಾವತಿಯನ್ನು ಸ್ವೀಕರಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ವಿವರಗಳು:
ಹಿನ್ನೆಲೆ ತಿಳಿಯಲು, ಜುಲೈ 7, 2026ರಂದು ಅಟ್ಲಾಂಟಾದಲ್ಲಿ ನಡೆದ FIFA ವಿಶ್ವಕಪ್ 2026ರ 16ನೇ ಸುತ್ತಿನಲ್ಲಿ ಅರ್ಜೆಂಟೀನಾ ಈಜಿಪ್ಟ್ ಅನ್ನು 3-2ರ ಅಂತರದಿಂದ ಸೋಲಿಸಿತು, ಫ್ರೆಂಚ್ ರೆಫರಿ ಫ್ರಾಂಸ್ವಾ ಲಟೆಕ್ಸ್ಯೆ ಈ ಪಂದ್ಯವನ್ನು ನಿರ್ವಹಿಸಿದರು. ಈಜಿಪ್ಟ್ 3-2 ಅಂತರದಿಂದ ಸೋಲುವ ಮೊದಲು 2-0ಯ ಮುನ್ನಡೆಯನ್ನು ವೃಥಾ ಕಳೆದುಕೊಂಡಿತು, ಆದರೆ “ಬಿಲ್ಡ್-ಅಪ್ ನಲ್ಲಿ ಸ್ವಲ್ಪ ಫೌಲ್ ಕಂಡುಬಂದ ಕಾರಣ VAR ಪರಿಶೀಲನೆಯ ನಂತರ” ಮೊಸ್ತಫಾ ಜಿಕೊ ರವರ ಎರಡನೇ ಗೋಲನ್ನು VAR ನಿರಾಕರಿಸಿದ ನಂತರ ಈ ಫಲಿತಾಂಶವು ವಿವಾದದ ಹಿಂದೆ ಮುಚ್ಚಿಹೋಯಿತು. ಅರ್ಜೆಂಟೀನಾ ಪರ ಗೋಲು ಗಳಿಸಿದ ಆಟಗಾರರಲ್ಲಿ ಕ್ರಿಸ್ಟಿಯನ್ ರೊಮೆರೊ, ಲಯೋನೆಲ್ ಮೆಸ್ಸಿ ಮತ್ತು ಎಂಜೊ ಫೆರ್ನಾಂಡಿಸ್ ಸೇರಿದ್ದರು.
ಇದರ ನಂತರ, ಜುಲೈ 9, 2026ರಂದು ಪ್ರಕಟವಾದ ಮಿಡ್-ಡೇ ವರದಿಯಿಂದ ನಮಗೆ ಈಜಿಪ್ಟ್ FIFA ಗೆ ದೂರು ಸಲ್ಲಿಸಿದೆ ಎಂದು ತಿಳಿದುಬಂದಿತು. ತಮ್ಮ ಅಧ್ಯಕ್ಷ ಹ್ಯಾನಿ ಅಬುರಿಡಾ ಅವರು ಫ್ರೆಂಚ್ ರೆಫರಿ ಫ್ರಾಂಸ್ವಾ ಲಟೆಕ್ಸ್ಯೆ ವಿರುದ್ಧ “ತನಿಖೆ” ಕೋರಿ ” FIFA ಗೆ ದೂರು ಸಲ್ಲಿಸಿದ್ದಾರೆ” ಎಂದು ಫೆಡರೇಶನ್ ಹೇಳಿತು. ದೂರಿನಲ್ಲಿ “ದ್ವಂದ್ವ ನೀತಿ”ಯನ್ನೂ ಕೂಡ ಆರೋಪಿಸಲಾಗಿತ್ತು, ಮತ್ತು ಆ ನಿರ್ಧಾರಗಳು “ಈಜಿಪ್ಟ್ ತಂಡವು ಪಂದ್ಯವನ್ನು ಸೋತು ವಿಶ್ವಕಪ್ನಿಂದ ಹೊರಹೋಗಲು ಕಾರಣವಾಯಿತು” ಎಂದು ವಾದಿಸಲಾಗಿತ್ತು.

ಕೂಲಂಕುಷವಾಗಿ ಹುಡುಕಿದ ನಂತರವೂ, ಫ್ರಾಂಸ್ವಾ ಲಟೆಕ್ಸ್ಯೆ ಅಥವಾ ಅವರ ಮೇಲ್ವಿಚಾರಣಾ ತಂಡದ ಮೇಲೆ FIFA ಯಾವುದೇ ನಿಷೇಧ, ಅಮಾನತು ಅಥವಾ ತೆಗೆದುಹಾಕುವಿಕೆಯನ್ನು ಘೋಷಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಡಿಜಿಟೈ ಇಂಡಿಯಾಗೆ ದೊರಕಿಲ್ಲ. ಅಲ್ ಜಜೀರಾ ವರದಿಯ ಪ್ರಕಾರ, FIFA ರೆಫರಿಯಿಂಗ್ ಮುಖ್ಯಸ್ಥ ಪ್ಯೆಲ್ವೀಗಿ ಕೊಲಿನಾ “ನಿರ್ವಹಣಾ” ತಂಡವನ್ನು ಸಮರ್ಥಿಸಿಕೊಂಡರು ಮತ್ತು “ಪಕ್ಷಪಾತದ ಆರೋಪಗಳನ್ನು ತಳ್ಳಿಹಾಕಿದರು.” ಈಜಿಪ್ಟ್ ತನ್ನ ಸೋಲಿನ ನಂತರ ನಿರ್ವಹಣೆಯ ಬಗ್ಗೆ ದೂರು ನೀಡಿದ ನಂತರ “ಅಧಿಕಾರಿಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ್ದನ್ನು ಖಂಡಿಸಿದರು” ಕೊಲಿನಾ.

“ನಿರ್ಧಾರಗಳ ಬಗ್ಗೆ ರಚನಾತ್ಮಕ ಚರ್ಚೆಗಳು ಎಂದಿಗೂ ಫುಟ್ಬಾಲ್ನ ಭಾಗವಾಗಿರುತ್ತವೆ”, ಆದರೆ ಆಧಾರರಹಿತ ಆರೋಪಗಳಿಗೆ ಯಾವುದೇ ಸ್ಥಳವಿಲ್ಲ ಎಂದು ಕೊಲಿನಾ ಒಪ್ಪಿಕೊಂಡರು ಎಂದು ಮೇಲಿನ ವರದಿಯಲ್ಲಿ ಹೇಳಲಾಗಿದೆ. ವರದಿಯ ಪ್ರಕಾರ, “FIFA ರೆಫರಿಯಿಂಗ್ ಮೇಲೆ ಯಾರಾದರೂ ಪ್ರಭಾವ ಬೀರಬಹುದು ಎಂದು ಯಾರೂ ಹೇಳಲು ಸಾಧ್ಯವಿಲ್ಲ, FIFA ಅಧ್ಯಕ್ಷರು [ಜಿಯಾನಿ ಇನ್ಫಾಂಟಿನೊ] ಕೂಡ ಮಾಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ. ಫ್ರಾಂಸ್ವಾ ಲಟೆಕ್ಸ್ಯೆಯವರ ಮೇಲೆ ನಿಷೇಧ ಹೇರಲಾಗಿದೆ ಎಂದು ಅಥವಾ ಆರ್ಥಿಕ ವಂಚನೆಯ ಕುರಿತು ಯಾವುದೇ ಆರೋಪಗಳಿಲ್ಲ.
ಜುಲೈ 9, 2026ರ ಹೊತ್ತಿಗೆ, ದೂರು ನಿಜವಾಗಿರುವುದು, ಆದರೆ ಯಾವುದೇ ನಿಷೇಧ ಉಂಟಾಗಿಲ್ಲ ಎಂದು ಹಲವು ಪ್ರತಿಷ್ಠಿತ ವರದಿಗಳು ದೃಢಪಡಿಸಿವೆ. ಫ್ರಾಂಸ್ವಾ ಲಟೆಕ್ಸ್ಯೆಯವರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಲಾಗುತ್ತಿದೆ ಅಥವಾ ಯಾವುದೇ ನಿಗೂಢ $500,000 ಪಾವತಿಗಳ ಬಗೆಗಿನ ಹೇಳಿಕೆಗಳು ಆಧಾರರಹಿತವಾಗಿವೆ. ಈಜಿಪ್ಟ್ ಫ್ರಾಂಸ್ವಾ ಲಟೆಕ್ಸ್ಯೆ ಮತ್ತವರ ನಿರ್ವಹಣಾ ತಂಡವನ್ನು ಕಳಪೆ ಪ್ರದರ್ಶನಕ್ಕಾಗಿ ಮತ್ತು VAR ನಿರ್ವಹಣೆಗಾಗಿ ಆರೋಪಿಸಿದೆಯೇ ಹೊರತು ಯಾವುದೇ ಆರ್ಥಿಕ ಭ್ರಷ್ಟಾಚಾರಕ್ಕಾಗಿ ಅಲ್ಲ.

ಹೀಗಾಗಿ, ಕಳಪೆ ನಿರ್ವಹಣೆಗಾಗಿ ರೆಫರಿ ಫ್ರಾಂಸ್ವಾ ಲಟೆಕ್ಸ್ಯೆಯವರ ಮೇಲೆ ನಿಷೇಧವನ್ನು ಜಾರಿಗೊಳಿಸಲಾಗಿದೆ ಅಥವಾ ಆತ ಯಾವುದೇ ನಿಗೂಢ $500,000 ಪಾವತಿಗಳನ್ನು ಪಡೆದಿದ್ದಾರೆ ಎಂಬ ಹೇಳಿಕೆಗಳು ಸುಳ್ಳು.
ಇದನ್ನೂ ಓದಿ:
