Don't Miss

Tag Archives: fact checking in kannada

ಬಿಜೆಪಿ ಚಿಹ್ನೆಯನ್ನು ಹೊಂದಿರುವ ಟೀ ಶರ್ಟ್ ಧರಿಸಿರುವಂತೆ ರಾಹುಲ್ ಗಾಂಧಿಯವರ ಸುಳ್ಳು ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim:ರಾಹುಲ್ ಗಾಂಧಿಯವರು ಬಿಜೆಪಿ ಚಿಹ್ನೆ ಇರುವ ಟೀ ಶರ್ಟ್ ಧರಿಸಿರುವ ಚಿತ್ರವನ್ನು ಆತ ಬಿಜೆಪಿ ಏಜೆಂಟ್ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಕಡೆನುಡಿ/Conclusion: ಸುಳ್ಳು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಿಜೆಪಿ ಏಜೆಂಟ್ ಎಂದು ತಪ್ಪಾಗಿ ತೋರಿಸಲು ಅವರ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ಬೆನ್ನಿನ ಭಾಗದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚಿಹ್ನೆ ಇರುವ ಟೀ ಶರ್ಟ್ ಅನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಧರಿಸಿರುವ ಚಿತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. हमने तो पहले ही कहा था की यह ...

Read More »

ಜೋ ಬಿಡೆನ್, ರಿಷಿ ಸುನಕ್, ಜಸ್ಟಿನ್ ಟ್ರುಡೊ ರವರು ರಾಮಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವೀಡಿಯೊ ಹೇಳಿಕೊಂಡಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಅಯೋಧ್ಯೆಯ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಹಲವಾರು ವಿಶ್ವ ನಾಯಕರು ಭಾಗವಹಿಸಿದ್ದರು. ಕಡೆನುಡಿ/Conclusion: ರಾಷ್ಟ್ರಗಳ ಮುಖ್ಯಸ್ಥರು ಸೆಪ್ಟೆಂಬರ್ 2023ರಲ್ಲಿ G20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದ ವೀಡಿಯೊವನ್ನು ಜನವರಿ 2024 ರಲ್ಲಿ ನಡೆದ ರಾಮಮಂದಿರ ಕಾರ್ಯಕ್ರಮದ್ದು ಎನ್ನುವಂತೆ ಹಂಚಿಕೊಳ್ಳಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ಅಮೇರಿಕಾದ ರಾಷ್ಟ್ರಪತಿ  ಜೋ ಬಿಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತಿತರ ವಿಶ್ವ ನಾಯಕರು  ಸೇರಿದಂತೆ ವಿದೇಶಿ ಗಣ್ಯರು ಜನವರಿ 22, 2024 ರಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬ ...

Read More »

ಯೋಗಿ ಆದಿತ್ಯನಾಥ್ 2017 ರಲ್ಲಿ ಮುಖ್ಯ ಮಂತ್ರಿಯಾಗುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ 2 ವಿಮಾನ ನಿಲ್ದಾಣಗಳಿದ್ದವು? ಸತ್ಯ ಪರಿಶೀಲನೆ

ಹೇಳಿಕೆ/Claim: ಬ್ರಿಟಿಷರ ಕಾಲದಿಂದ 2017ರ ವರೆಗೆ ಉತ್ತರ ಪ್ರದೇಶದಲ್ಲಿ ಕೇವಲ ಎರಡು ವಿಮಾನ ನಿಲ್ದಾಣಗಳಿದ್ದವು. ಯೋಗಿ ಆದಿತ್ಯನಾಥ್ ರವರಡಿಯಲ್ಲಿ ಈಗ 24 ವಿಮಾನ ನಿಲ್ದಾಣಗಳಿವೆ. ಕಡೆನುಡಿ/Conclusion: 2017 ರ ಮೊದಲು, ದಾಖಲೆಯನುಸಾರ  ಉತ್ತರ ಪ್ರದೇಶದಲ್ಲಿ 6 ವಿಮಾನ ನಿಲ್ದಾಣಗಳಿದ್ದವು ಮತ್ತು ಪ್ರಸ್ತುತ 10 ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣಗಳಿವೆ ಹಾಗೂ 14 ನಿರ್ಮಾಣ ಹಂತದಲ್ಲಿವೆ ಎಂದು ವಿಮಾನಯಾನ ಸಚಿವರ ಪ್ರಕಟಣೆ ತಿಳಿಸಿದೆ. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ ವಿವರಗಳು ಯೋಗಿ ಆದಿತ್ಯನಾಥ್ ರವರು 2017 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಉತ್ತರ ಪ್ರದೇಶದಲ್ಲಿ ...

Read More »

ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ ಆಂಧ್ರ, ತೆಲಂಗಾಣದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಎರಡು ತೆಲುಗು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿವೆ. ಕಡೆನುಡಿ/Conclusion: ಪ್ರಸ್ತುತ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ತೆಲುಗು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿಲ್ಲ. ಹಳೆಯ ಮಾರ್ಚ್ 2020 ರ ವೀಡಿಯೊವನ್ನು ಈಗ ಹಂಚಿಕೊಳ್ಳಲಾಗುತ್ತಿದೆ. ರೇಟಿಂಗ್:ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ ವಿವರಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕೊರೊನಾದ JN.1 ರೂಪಾಂತರದ ಹೊಸ  ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಎರಡೂ ತೆಲುಗು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿವೆ ಎಂಬ ಒಂದು ಪೋಸ್ಟ್ ಅನ್ನು ...

Read More »

ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿದೆಯೇ? ಹಳೆಯ ಹೇಳಿಕೆಯ ಮರುಕಳಿಕೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಎಂದು ವೈರಲ್ ಸಂದೇಶವೊಂದು ಹೇಳುತ್ತದೆ. ಕಡೆನುಡಿ/Conclusion:ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಕೇಂದ್ರ ಸರ್ಕಾರವು ಈವರೆಗೆ ತಮ್ಮ ಯಾವುದೇ ಯೋಜನೆಯಡಿಯಲ್ಲಿ ಇಂತಹ ಯಾವುದೇ ಸ್ಕೀಮನ್ನು ಪ್ರಾರಂಭಿಸಿಲ್ಲ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು. ಸತ್ಯ ಪರಿಶೀಲನೆ ವಿವರಗಳು ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಗಳನ್ನು ನೀಡುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಸರ್ಕಾರವು ಉಚಿತ ಯೋಜನೆಯನ್ನು ಪ್ರಾರಂಭಿಸಿದೆ ಎಂದು ವೈರಲ್ ಸಂದೇಶವು ಹೇಳುತ್ತದೆ. ವೈರಲ್ ಸಂದೇಶವು ಹೀಗಿದೆ: ...

Read More »

ಅಯೋಧ್ಯೆ ರಾಮಮಂದಿರ ಕಾರ್ಯಕ್ರಮದ ಭಾಗವಾಗಿರುವ 25,000 ಹವನ ಕುಂಡಗಳನ್ನು ವೀಡಿಯೊ ತೋರಿಸುತ್ತದೆ: ಸತ್ಯ ಪರಿಶೀಲನೆ

ಹೇಳಿಕೆ/Claim: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ 25,000 ಹವನ ಕುಂಡಗಳನ್ನು ವೈರಲ್ ವೀಡಿಯೋ ತೋರಿಸುತ್ತದೆ. ಕಡೆನುಡಿ/Conclusion: 25,000 ಹವನ ಕುಂಡಗಳನ್ನು ತೋರಿಸುವ ವೀಡಿಯೊ ಅಯೋಧ್ಯೆಯಿಂದಲ್ಲ, ಅದು ಡಿಸೆಂಬರ್ 2023 ರಲ್ಲಿ ನಡೆದ ವಾರಣಾಸಿಯ ಸ್ವರ್ವೇದ್ ಮಹಮಂದಿರ ಧಾಮದ ವೀಡಿಯೊ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಜನವರಿ 22, 2024 ರಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಲಿರುವ ಮುನ್ನ ಸುಮಾರು 25,000 ಹವನ ಕುಂಡಗಳನ್ನು ತೋರಿಸುವ ವೈರಲ್ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಮಾಡುತ್ತಿದೆ. इन 25000 हजार हवन कुंडो से होगा ...

Read More »

ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಚರ್ಚ್‌ನಲ್ಲಿ ತಮ್ಮ ಮದುವೆಯನ್ನು ನೋಂದಾಯಿಸುತ್ತಿರುವುದನ್ನು ಈ ಚಿತ್ರವು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸೋನಿಯಾ ಗಾಂಧಿ ಮತ್ತು ರಾಜೀವ್ ಗಾಂಧಿ ಕ್ರೈಸ್ತ ಸಂಪ್ರದಾಯದಲ್ಲಿ ವಿವಾಹವಾದರು ಎಂದು ವೈರಲ್ ಚಿತ್ರ ಆರೋಪಿಸುತ್ತದೆ. ಕಡೆನುಡಿ/Conclusion:  ಸೋನಿಯಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ವಿವಾಹದ ಮೂಲ ವೀಡಿಯೊದಲ್ಲಿ, ದಂಪತಿಗಳು ಸಾಂಪ್ರದಾಯಿಕ ಹಿಂದೂ ವಿವಾಹದ ಉಡುಪನ್ನು ಧರಿಸಿ ತಮ್ಮ ವಿವಾಹವನ್ನು ನೋಂದಾಯಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ಕ್ರೈಸ್ತ ಧರ್ಮದ ಮದುವೆಯಲ್ಲಿ, ವಧು ಬಿಳಿ ವಸ್ತ್ರಗಳನ್ನು ಧರಿಸುತ್ತಾರೆ, ಆದರೆ ಚಿತ್ರದಲ್ಲಿ ಸೋನಿಯಾ ಗಾಂಧಿ ಗುಲಾಬಿ ಬಣ್ಣದ ಬಟ್ಟೆಯಲ್ಲಿದ್ದಾರೆ. ರೇಟಿಂಗ್:ತಪ್ಪು ನಿರೂಪಣೆ ಸತ್ಯ ಪರಿಶೀಲನೆ ವಿವರಗಳು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕ್ರೈಸ್ತ ಪಾದ್ರಿಯ ಮುಂದೆ ಕುಳಿತಿರುವ ಚಿತ್ರವೊಂದು ...

Read More »

ಕರೋನವೈರಸ್ ಅನ್ನು ಪತ್ತೆಹಚ್ಚುವುದು ಹೇಗೆ ಎಂಬುದರ ಕುರಿತು AIIMS ಹೇಳಿಕೆ ನೀಡಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕೋವಿಡ್-19ನ್ನು ಪತ್ತೆಹಚ್ಚುವ ರೋಗಲಕ್ಷಣಗಳ ಪಟ್ಟಿಯನ್ನು ಹೊಂದಿರುವ ಹೊಸ ಸಲಹೆಯನ್ನು AIIMS ಬಿಡುಗಡೆ ಮಾಡಿದೆ. ಕಡೆನುಡಿ/Conclusion: AIIMSನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ. ಸಾಮಾನ್ಯ ನೆಗಡಿ, ಪ್ಲು ಮತ್ತು ವೈರಲ್ ಜ್ವರದ ಲಕ್ಷಣಗಳು ಕೋವಿಡ್-19ರ ಲಕ್ಷಣಗಳನ್ನು ಹೋಲಬಹುದು. ದೇಶದ ಹಲವಾರು ಭಾಗಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ, ಮೊದಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ರೇಟಿಂಗ್:  ದಾರಿತಪ್ಪಿಸುವ ಸುದ್ದಿ  ಸತ್ಯ ಪರಿಶೀಲನೆ ವಿವರಗಳು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು (AIIMS) ಕೋವಿಡ್-19 ಅನ್ನು ಪತ್ತೆಹಚ್ಚಲು ಹೊಸ ರೋಗಲಕ್ಷಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ...

Read More »

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪ್ರಯಾಣಿಕರ ಪರ್ಸ್‌ನಿಂದ ಹಣ ಕದಿಯುತ್ತಿರುವುದನ್ನು ತಯಾರಿಸಲಾದ ವೀಡಿಯೊ ತೋರಿಸುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim:  : ಭದ್ರತಾ ಸಿಬ್ಬಂದಿಯು ವಿಮಾನ ಪ್ರಯಾಣಿಕರೊಬ್ಬರ ಪರ್ಸ್‌ನಿಂದ ಹಣ ಕದಿಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion:: ವೀಡಿಯೊ ಪ್ರಕಟಪಡಿಸಿದವರು ಅಪ್‌ಲೋಡ್ ಮಾಡಿರುವ ಹಲವಾರು ವೀಡಿಯೊಗಳಲ್ಲಿ ಕಂಡುಬರುವ ನಟರ ಕಾರ್ಯ ಪ್ರಕ್ರಿಯೆಯನ್ನು ತೋರಿಸುವ ನಾಟಕೀಯ ವೀಡಿಯೊ. ರೇಟಿಂಗ್:ತಪ್ಪು ನಿರೂಪಣೆ ಸತ್ಯ ಪರಿಶೀಲನೆ ವಿವರಗಳು ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಬ್ಬರ ಪರ್ಸ್‌ನಿಂದ ಹಣ ಕದಿಯುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಟ್ವಿಟರ್‌ನಲ್ಲಿ ಬಳಕೆದಾರರಿಂದ  ಹಲವಾರು ಪ್ರತಿಕ್ರಿಯೆಗಳನ್ನು ಪಡೆದಿದೆ, ಕೆಳಗೆ ತೋರಿಸಿರುವಂತೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ವಿರುದ್ಧ ಎಚ್ಚರಿಕೆ ನೀಡುತ್ತದೆ. Airport se Safar karne ...

Read More »

ಅಮೇರಿಕಾದಲ್ಲಿ ವಿಶ್ವದ ಅತಿದೊಡ್ಡ ಒಂದು ಗ್ರಂಥಾಲಯವನ್ನು ತೆರೆಯಲಾಗಿದ್ದು, ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರವರ ಹೆಸರಿಸಲಾಗಿದೆ? ಸತ್ಯ ಪರಿಶೀಲನೆ

ಹೇಳಿಕೆ/Claim:: ಯುನೈಟೆಡ್ ಸ್ಟೇಟ್ಸ್ನಲ್ಲಿ ಒಂದು ಗ್ರಂಥಾಲಯವನ್ನು ತೆರೆಯಲಾಗಿದ್ದು ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರವರ ಹೆಸರನ್ನಿಡಲಾಗಿದೆ. ಕಡೆನುಡಿ/Conclusion: ಅಂತಹ ಯಾವುದೇ ಗ್ರಂಥಾಲಯವನ್ನು ತೆರೆಯಲಾಗಿಲ್ಲ ಮತ್ತು ಹೇಳಲಾಗಿರುವಂತೆ ಅದಕ್ಕೆ ಅಂಬೇಡ್ಕರ್ ಅವರ ಹೆಸರನ್ನು ಖಂಡಿತವಾಗಿಯೂ ಇಡಲಾಗಿಲ್ಲ. ಚಿತ್ರವು ಚೀನಾದಲ್ಲಿ ಮಾರ್ಚ್ 2018 ರಲ್ಲಿ ತೆರೆಯಲಾದ ಗ್ರಂಥಾಲಯದ್ದು. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ವಿಶ್ವದ ಅತಿದೊಡ್ಡ ಗ್ರಂಥಾಲಯವನ್ನು ಯುನೈಟೆಡ್ ಸ್ಟೇಟ್ಸ್ ತೆರೆದಿದೆ ಮತ್ತು ಅದಕ್ಕೆ ಭಾರತೀಯ ಸಂವಿಧಾನದ ಲೇಖಕರಾದ ಡಾ.ಬಿ.ಆರ್. ಅಂಬೇಡ್ಕರ್ ರವರ ಹೆಸರನ್ನಿಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಒಂದು ಹೇಳುತ್ತದೆ.  ...

Read More »