Don't Miss

ಯೋಗಿ ಆದಿತ್ಯನಾಥ್ 2017 ರಲ್ಲಿ ಮುಖ್ಯ ಮಂತ್ರಿಯಾಗುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ 2 ವಿಮಾನ ನಿಲ್ದಾಣಗಳಿದ್ದವು? ಸತ್ಯ ಪರಿಶೀಲನೆ

ಹೇಳಿಕೆ/Claim: ಬ್ರಿಟಿಷರ ಕಾಲದಿಂದ 2017ರ ವರೆಗೆ ಉತ್ತರ ಪ್ರದೇಶದಲ್ಲಿ ಕೇವಲ ಎರಡು ವಿಮಾನ ನಿಲ್ದಾಣಗಳಿದ್ದವು. ಯೋಗಿ ಆದಿತ್ಯನಾಥ್ ರವರಡಿಯಲ್ಲಿ ಈಗ 24 ವಿಮಾನ ನಿಲ್ದಾಣಗಳಿವೆ.

ಕಡೆನುಡಿ/Conclusion: 2017 ರ ಮೊದಲು, ದಾಖಲೆಯನುಸಾರ  ಉತ್ತರ ಪ್ರದೇಶದಲ್ಲಿ 6 ವಿಮಾನ ನಿಲ್ದಾಣಗಳಿದ್ದವು ಮತ್ತು ಪ್ರಸ್ತುತ 10 ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣಗಳಿವೆ ಹಾಗೂ 14 ನಿರ್ಮಾಣ ಹಂತದಲ್ಲಿವೆ ಎಂದು ವಿಮಾನಯಾನ ಸಚಿವರ ಪ್ರಕಟಣೆ ತಿಳಿಸಿದೆ.

ರೇಟಿಂಗ್: ದಾರಿತಪ್ಪಿಸುವ ಸುದ್ದಿ

ಸತ್ಯ ಪರಿಶೀಲನೆ ವಿವರಗಳು

ಯೋಗಿ ಆದಿತ್ಯನಾಥ್ ರವರು 2017 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ ಎರಡು ವಿಮಾನ ನಿಲ್ದಾಣಗಳಿದ್ದವು ಎಂಬ ಒಂದು ವೈರಲ್ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ರಸ್ತುತ ಉತ್ತರ ಪ್ರದೇಶದ ಸರ್ಕಾರದಡಿಯಲ್ಲಿ 24 ವಿಮಾನ ನಿಲ್ದಾಣಗಳನ್ನು ಘೋಷಿಸಲಾಗಿದ್ದು ಅವುಗಳಲ್ಲಿ 10 ವಿಮಾನ ನಿಲ್ದಾಣಗಳು ಕಾರ್ಯಾಚರಣೆಯಲ್ಲಿವೆ ಮತ್ತು 14 ನಿರ್ಮಾಣ ಹಂತದಲ್ಲಿವೆ ಎಂದು ಅದು ಹೇಳಿಕೊಂಡಿದೆ. 

ವೀಡಿಯೊವನ್ನು ಇಲ್ಲಿ ಮತ್ತು ಇಲ್ಲಿ ಟ್ವಿಟರ್‌ನಲ್ಲಿ ನೋಡಬಹುದು.

“2017ರ ಮಾರ್ಚ್‌ನಲ್ಲಿ ಅಖಿಲೇಶ್ ಯಾದವ್ ಆಡಳಿತ ಕೊನೆಗೊಂಡಾಗ ಉತ್ತರ ಪ್ರದೇಶದಲ್ಲಿ ಮಾರ್ಚ್ 2017 ರವರೆಗೆ ಬ್ರಿಟಿಷ್ ಆಳ್ವಿಕೆಯ ಸಮಯದ ಕೇವಲ ಎರಡು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದವು. ಇಂದು ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ನಂತರ, ನಮ್ಮಲ್ಲಿ 24 ವಿಮಾನ ನಿಲ್ದಾಣಗಳಿವೆ, ಅದರಲ್ಲಿ 10 ವಿಮಾನ ನಿಲ್ದಾಣಗಳು ಕಾರ್ಯಾಚರಣೆಯಲ್ಲಿವೆ ಮತ್ತು 14 ನಿರ್ಮಾಣ ಹಂತದಲ್ಲಿದೆ. 2017 ರ ಮುನ್ನ, ಎಲ್ಲಾ ಸರ್ಕಾರಗಳು ಮತ್ತು ಬ್ರಿಟಿಷರು ಕೇವಲ ಎರಡು ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಸಾಧ್ಯವಾಗಿತ್ತು.” ಎಂದು ಹೇಳುತ್ತಿರುವ ಒಬ್ಬ ವ್ಯಕ್ತಿಯನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ.

FACT CHECK

ಡಿಜಿಟೈ ಇಂಡಿಯಾ ಇದನ್ನು ಸತ್ಯ-ಪರಿಶೀಲನೆಗಾಗಿ ಕೈಗೆತ್ತಿಕೊಂಡು ಉತ್ತರ ಪ್ರದೇಶದ ವಿಮಾನ ನಿಲ್ದಾಣಗಳ ಕುರಿತು ಗೂಗಲ್ ಹುಡುಕಾಟವನ್ನು ನಡೆಸಿತು. ಒಂದು ಲಿಂಕ್ ನಮ್ಮನ್ನು ಜನವರಿ 11, 2024 ರಂದು ಪೋಸ್ಟ್ ಮಾಡಲಾದ ಉತ್ತರ ಪ್ರದೇಶದ ವಿಮಾನ ನಿಲ್ದಾಣಗಳ ಕುರಿತು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ರವರ ಇತ್ತೀಚಿನ ಪಿಐಬಿ ಪತ್ರಿಕಾ ಪ್ರಕಟಣೆಗೆ ಕರೆದೊಯ್ಯಿತು. 2014ರಲ್ಲಿ ಉತ್ತರ ಪ್ರದೇಶದಲ್ಲಿ ಕೇವಲ 6 ವಿಮಾನ ನಿಲ್ದಾಣಗಳಿದ್ದವು , ಆದರೆ ಅಯೋಧ್ಯೆಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ವಿಮಾನ ನಿಲ್ದಾಣವೂ ಸೇರಿದಂತೆ ಪ್ರಸ್ತುತ 10 ವಿಮಾನ ನಿಲ್ದಾಣಗಳಿವೆ ಎಂದು ಇದರಲ್ಲಿ ಸಚಿವರು ಹೇಳಿದ್ದಾರೆ.

ಈ ಸುದ್ದಿಯು ಇಲ್ಲಿ ANI ವೀಡಿಯೊ ಸುದ್ದಿಯಲ್ಲಿಯೂ ಕಂಡುಬಂದಿದೆ, ಅದರಲ್ಲಿ ಸಚಿವರು, “ಉತ್ತರ ಪ್ರದೇಶದಲ್ಲಿ 2014ರಲ್ಲಿ ಕೇವಲ 6 ವಿಮಾನ ನಿಲ್ದಾಣಗಳಿದ್ದವು ಮತ್ತೀಗ ಅಯೋಧ್ಯೆ ವಿಮಾನ ನಿಲ್ದಾಣವೂ ಸೇರಿದಂತೆ ರಾಜ್ಯದಲ್ಲಿ 10 ವಿಮಾನ ನಿಲ್ದಾಣಗಳಿವೆ. ಮುಂದಿನ ವರ್ಷದ ವೇಳೆಗೆ ಉತ್ತರ ಪ್ರದೇಶದಲ್ಲಿ ಇನ್ನೂ ಐದು ವಿಮಾನ ನಿಲ್ದಾಣಗಳಿರಲಿವೆ. ಅಜಂಗಢ, ಅಲಿಗಢ, ಮೊರಾದಾಬಾದ್, ಶ್ರಾವಸ್ತಿ ಮತ್ತು ಚಿತ್ರಕೂಟದಲ್ಲಿ ತಲಾ ಒಂದು ವಿಮಾನ ನಿಲ್ದಾಣವನ್ನು ಮುಂದಿನ ತಿಂಗಳಿನಲ್ಲಿ ಉದ್ಘಾಟಿಸಲಾಗುವುದು. ಈ ವರ್ಷದ ಕೊನೆಯೊಳಗೆ ಜೇವರ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವೂ ಸಿದ್ಧವಾಗಲಿದೆ.” ಎಂದು ಘೋಷಿಸಿದರು.

ಆದ್ದರಿಂದ, ಯೋಗಿ ಆದಿತ್ಯನಾಥ್‌ ರವರ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ ಎರಡು ವಿಮಾನ ನಿಲ್ದಾಣಗಳಿದ್ದವು ಎಂಬ ಹೇಳಿಕೆ ಸುಳ್ಳು. ಲಕ್ನೋ ಮತ್ತು ವಾರಣಾಸಿ ನಿಯಮಿತ ಬಳಕೆಯಲ್ಲಿದ್ದವಾದರೂ 2014ರ ವೇಳೆಗೆ ಉತ್ತರ ಪ್ರದೇಶದಲ್ಲಿ ಆರು ವಿಮಾನ ನಿಲ್ದಾಣಗಳು ದಾಖಲೆಯಲ್ಲಿವೆ. ಹಾಗಾಗಿ ಬ್ರಿಟಿಷ್ ಆಳ್ವಿಕೆಯ ಸಮಯದಿಂದ ರಾಜ್ಯದಲ್ಲಿ ಕೇವಲ 2 ವಿಮಾನ ನಿಲ್ದಾಣಗಳಿದ್ದವು ಎಂಬ ಹೇಳಿಕೆಯೂ ಸುಳ್ಳು,

ಇದನ್ನೂ ಓದಿ:

ಅಯೋಧ್ಯೆ ರಾಮಮಂದಿರ ಕಾರ್ಯಕ್ರಮದ ಭಾಗವಾಗಿರುವ 25,000 ಹವನ ಕುಂಡಗಳನ್ನು ವೀಡಿಯೊ ತೋರಿಸುತ್ತದೆ: ಸತ್ಯ ಪರಿಶೀಲನೆ

ತೆಲಂಗಾಣ ಸರ್ಕಾರವು ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳನ್ನು ರದ್ದು ಮಾಡಿದೆಯೇ? ಸತ್ಯ ಪರಿಶೀಲನೆ