Don't Miss

ಅಯೋಧ್ಯೆ ರಾಮಮಂದಿರ ಕಾರ್ಯಕ್ರಮದ ಭಾಗವಾಗಿರುವ 25,000 ಹವನ ಕುಂಡಗಳನ್ನು ವೀಡಿಯೊ ತೋರಿಸುತ್ತದೆ: ಸತ್ಯ ಪರಿಶೀಲನೆ

ಹೇಳಿಕೆ/Claim: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ 25,000 ಹವನ ಕುಂಡಗಳನ್ನು ವೈರಲ್ ವೀಡಿಯೋ ತೋರಿಸುತ್ತದೆ.

ಕಡೆನುಡಿ/Conclusion: 25,000 ಹವನ ಕುಂಡಗಳನ್ನು ತೋರಿಸುವ ವೀಡಿಯೊ ಅಯೋಧ್ಯೆಯಿಂದಲ್ಲ, ಅದು ಡಿಸೆಂಬರ್ 2023 ರಲ್ಲಿ ನಡೆದ ವಾರಣಾಸಿಯ ಸ್ವರ್ವೇದ್ ಮಹಮಂದಿರ ಧಾಮದ ವೀಡಿಯೊ.

ರೇಟಿಂಗ್:ತಪ್ಪು ನಿರೂಪಣೆ —

ಸತ್ಯ ಪರಿಶೀಲನೆ ವಿವರಗಳು

ಜನವರಿ 22, 2024 ರಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಲಿರುವ ಮುನ್ನ ಸುಮಾರು 25,000 ಹವನ ಕುಂಡಗಳನ್ನು ತೋರಿಸುವ ವೈರಲ್ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಮಾಡುತ್ತಿದೆ.

ವೀಡಿಯೊದಲ್ಲಿ ತೋರಿಸಿರುವ ಹವನ ಕುಂಡಗಳು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಸಿದ್ಧವಾಗುತ್ತಿವೆ ಎಂಬುದು ಹೇಳಿಕೆ. ಹಿಂದಿಯಲ್ಲಿರುವ ಹೇಳಿಕೆ ಹೀಗಿದೆ: “इन 25000 हजार हवन कुंडो से होगा “राम मंदिर” का उद्घाटन… जय श्री राम” (ಅನುವಾದ:
“ಈ 25000 ಸಾವಿರ ಹವನ ಕುಂಡಗಳನ್ನು “ರಾಮ ಮಂದಿರದ” ಉದ್ಘಾಟನೆಗಾಗಿ ಬಳಸಲಾಗುವುದು… ಜೈ ಶ್ರೀ ರಾಮ್”)

FACT CHECK

ಡಿಜಿಟೈ ಇಂಡಿಯಾ ತಂಡವು ಈ ವೀಡಿಯೊದಿಂದ ಪ್ರಮುಖ ಫ್ರೇಮ್‌ಗಳನ್ನು ಪರಿಶೀಲಿಸಿ ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿತು. ಈ ಕ್ಲಿಪ್ ಕಳೆದ ತಿಂಗಳು ವೈರಲ್ ಆಗಿದ್ದು, ಇದು ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಗೆ ಸಂಬಂಧಿಸಿದ್ದಲ್ಲ, ಇದು ಡಿಸೆಂಬರ್ 2023ರಲ್ಲಿನಡೆದ ವಾರಣಾಸಿಯ ಸ್ವರ್ವೇದ್ ಮಹಾಮಂಡಿ ಧಾಮಕ್ಕೆ ಸಂಬಂಧಿಸಿದ್ದು ಎಂದುಹುಡುಕಾಟದ ಫಲಿತಾಂಶಗಳು ತೋರಿಸಿದವು.

ಅಂತಹ ಒಂದು ಸುದ್ದಿ ವೀಡಿಯೊ ಯುಟ್ಯೂಬ್ ನಲ್ಲಿ ಈ ಘಟನೆ ಮತ್ತು ಅದರ ಸಂದರ್ಭವನ್ನು ಸ್ಪಷ್ಟವಾಗಿ ಸೆರೆಹಿಡಿದಿದೆ, ಇದನ್ನು ಡಿಸೆಂಬರ್ 16, 2023 ರಂದು “ಅರುಣ್ ವಿಲೇಜ್ ಬಾಯ್ ವ್ಲಾಗ್” ಎಂಬ ಒಂದು ಸ್ಥಳೀಯ ವಾಹಿನಿಯು ಅಪ್ಲೋಡ್ ಮಾಡಿತ್ತು. ಶೀರ್ಷಿಕೆ ಹೀಗಿದೆ: “स्वर्वेद महामंदिर धाम वाराणसी 25 हजार हवन कुंड | एक साथ सभी को जगाया जाएगा ! Swarved Maha Mandir Dham” [ಅನುವಾದ ಹೀಗಿದೆ: “ಸ್ವರ್ವೇದ್ ಮಹಾಮಂದಿರ ಧಾಮ್ವಾರಣಾಸಿ 25 ಸಾವಿರ ಹವನ ಕುಂಡಗಳು. ಒಂದೇ ಸಮಯದಲ್ಲಿ ಎಲ್ಲವನ್ನೂ ಬೆಳಗಲಾಗುವುದು! ಸ್ವರ್ವೇದ್ ಮಹಾಮಂದಿರ್ ಧಾಮ್”]

ನಾವು ಮತ್ತಷ್ಟು ಹುಡುಕಿದಾಗ, ಕೆಳಗಿನಂತೆ ಇನ್ನೊಂದು ವೀಡಿಯೊ ನಮಗೆ ಸಿಕ್ಕಿತು:

ಸ್ವರ್ವೇದ್ ಮಹಾಮಂದಿರ ಧಾಮದಲ್ಲಿ ಹವನ ಕುಂಡಗಳಲ್ಲಿ ಯಜ್ಞವನ್ನು ಮಾಡುವ ಜನರನ್ನು ಹಲವಾರು ಹಂತಗಳಲ್ಲಿ ತೋರಿಸುವ ಇದೇ ರೀತಿಯ ವೀಡಿಯೊಗಳನ್ನು ಕಾಣಬಹುದು. ವಾರಣಾಸಿಯ ಉಮರಹಾ ಪ್ರದೇಶದಲ್ಲಿರುವ ಬೃಹತ್ ದೇವಾಲಯವಾದ ಸ್ವರ್ವೇದ್ ಮಹಾಮಂದಿರವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರೆಂದು ಸುದ್ದಿ ವರದಿಗಳು ದೃಢಪಡಿಸಿವೆ.

ಆದ್ದರಿಂದ, ಹೇಳಿಕೆಯಂತೆ ಹವನ ಕುಂಡಗಳನ್ನು ತೋರಿಸುವ ವೀಡಿಯೋ ಅಯೋಧ್ಯೆಯದ್ದಲ್ಲ, ಅದು ವಾರಣಾಸಿಯ ಸ್ವರ್ವೇದ್ ಮಹಾಮಂದಿರ ಧಾಮದಿಂದ ಬಂದಿರುವುದು.

ಇದನ್ನೂ ಓದಿ:

ಅಮೇರಿಕಾದಲ್ಲಿ ವಿಶ್ವದ ಅತಿದೊಡ್ಡ ಒಂದು ಗ್ರಂಥಾಲಯವನ್ನು ತೆರೆಯಲಾಗಿದ್ದು, ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರವರ ಹೆಸರಿಸಲಾಗಿದೆ? ಸತ್ಯ ಪರಿಶೀಲನೆ

ಈ ಸಂಪೂರ್ಣ ವೀಡಿಯೊ ಕೇರಳದ ದೇವಸ್ಥಾನವೊಂದರ ಪ್ರಸಿದ್ಧ ಸಸ್ಯಾಹಾರಿ ಮೊಸಳೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ