Don't Miss

ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ ಆಂಧ್ರ, ತೆಲಂಗಾಣದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಎರಡು ತೆಲುಗು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿವೆ.

ಕಡೆನುಡಿ/Conclusion: ಪ್ರಸ್ತುತ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ತೆಲುಗು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿಲ್ಲ. ಹಳೆಯ ಮಾರ್ಚ್ 2020 ರ ವೀಡಿಯೊವನ್ನು ಈಗ ಹಂಚಿಕೊಳ್ಳಲಾಗುತ್ತಿದೆ.

ರೇಟಿಂಗ್:ದಾರಿತಪ್ಪಿಸುವ ಸುದ್ದಿ

ಸತ್ಯ ಪರಿಶೀಲನೆ ವಿವರಗಳು

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕೊರೊನಾದ JN.1 ರೂಪಾಂತರದ ಹೊಸ  ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಎರಡೂ ತೆಲುಗು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿವೆ ಎಂಬ ಒಂದು ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇದೇ ವಿಷಯವನ್ನು ಹೊಂದಿರುವ ಟಿವಿ9 ಸುದ್ದಿ ವರದಿಯನ್ನು ಈ ಸಂದೇಶವು ಒಳಗೊಂಡಿದೆ. ಪಠ್ಯವು ಸ್ಪಷ್ಟವಾಗಿ ತೋರಿಸುವಂತೆ: “ತೆಲಂಗಾಣ ರಜಾದಿನಗಳು 28/12/23 ರಿಂದ 18/01/24.” ಹೇಳಿಕೆಯ ಸತ್ಯ-ಪರಿಶೀಲನೆ ಮಾಡುವಂತೆ ಡಿಜಿಟೈ ಇಂಡಿಯಾದ ವಾಟ್ಸಾಪ್ ಟಿಪ್‌ಲೈನ್‌ನಲ್ಲಿ  ವಿನಂತಿ ದೊರಕಿತು.

FACT CHECK

ಡಿಜಿಟೈ ಇಂಡಿಯಾ ತಂಡವು ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ವರದಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿತ್ತು. ಹಂಚಿಕೊಳ್ಳಲಾಗಿರುವ ವೀಡಿಯೊ ಇತ್ತೀಚಿನದಾಗಿ ಕಾಣುವಂತೆ ವೀಡಿಯೊದ ಮೇಲೆ ಕೆಲವು ದಿನಾಂಕಗಳನ್ನು ಮುದ್ರಿಸಲಾಗಿದೆ. ಆದರೆ, TV9 ಸುದ್ದಿ ವಾಹಿನಿಯು ಇತ್ತೀಚಿನ ವಾರಗಳಲ್ಲಿ ಅಂದರೆ ಡಿಸೆಂಬರ್ 2023ರಿಂದೀಚೆಗೆ ಎರಡು ತೆಲುಗು ರಾಜ್ಯಗಳಲ್ಲಿ JN.1 ಕರೋನಾ ರೂಪಾಂತರದ ಪ್ರಕರಣಗಳು ವರದಿಯಾದ ನಂತರ ಅಂತಹ ಯಾವುದೇ ಸುದ್ದಿಯನ್ನು ಮಾಡಿಲ್ಲ.

 ಟಿವಿ9 ನ್ಯೂಸ್ ಆರ್ಕೈವ್‌ಗಳಲ್ಲಿ ಹೆಚ್ಚಿನ ಹುಡುಕಾಟ ನಡೆಸಿದಾಗ, ಆ ಸುದ್ದಿ ಭಾರತದಲ್ಲಿ ಕರೋನಾ ಉಲ್ಬಣಗೊಳ್ಳಲು ಶುರುವಾಗಿ ಸಾಂಕ್ರಾಮಿಕ ರೋಗದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ವಿಧಿಸಲಾದ ಸಮಯದಲ್ಲಿ ಮಾರ್ಚ್ 18, 2020ರಂದು ಪ್ರಕಟವಾದ ಹಳೆಯ ಸುದ್ದಿ ವರದಿ ಎಂದು ತಿಳಿದುಬಂತು.

ತೆಲುಗು ಭಾಷೆಯಲ್ಲಿರುವ ಸುದ್ದಿ ವರದಿ ಹೀಗಿದೆ: ““ఏపీ కీలక నిర్ణయం.. విద్యాసంస్థలు బంద్” [ಆಂಗ್ಲ ಭಾಷಾ ಅನುವಾದ ಹೀಗಿದೆ: “ಎಪಿ ಪ್ರಮುಖ ನಿರ್ಧಾರ… ಶಾಲೆಗಳು ಬಂದ್”]

ಕೊರೊನಾ ವೈರಸ್ ಅಥವಾ ಕೋವಿಡ್ -19 ರ JN.1 ರೂಪಾಂತರದ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ ಎಂಬ ಸುದ್ದಿ ವರದಿಗಳನ್ನು ನಾವು ಹುಡುಕಿದಾಗ, ಈ ಎರಡು ತೆಲುಗು ರಾಜ್ಯ ಸರ್ಕಾರಗಳು ಅಂತಹ ಯಾವುದೇ ಪ್ರಕಟಣೆಯನ್ನು ಮಾಡಲಿಲ್ಲ ಎಂದು ಕಂಡುಬಂತು. ಇದನ್ನು ಯಾವುದೇ ಟಿವಿ ಸುದ್ದಿ ವಾಹಿನಿ ಅಥವಾ ಸ್ಥಳೀಯ ಪತ್ರಿಕೆ ಅಥವಾ TV9 ತೆಲುಗು ವರದಿ ಮಾಡಿಲ್ಲ.

ಪ್ರಸ್ತುತ, ನಮ್ಮ ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳವು ಕನಿಷ್ಠವಾಗಿದೆ ಮತ್ತು ಅಂತಹ ಪ್ರಕರಣಗಳ ಬಗ್ಗೆ ಜಾಗರೂಕರಾಗಿರಲು ಮತ್ತು ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳಕ್ಕೆ ಆಸ್ಪತ್ರೆಗಳನ್ನು ಸಿದ್ಧಪಡಿಸುವಂತೆ ಕೇಂದ್ರವು ರಾಜ್ಯಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ಅಂತೆಯೇ, ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳೆರಡೂ ಕೋವಿಡ್ -19 ಪ್ರಕರಣಗಳ ಹೆಚ್ಚಳದ ದೃಷ್ಟಿಯಿಂದ ಆಸ್ಪತ್ರೆಗಳನ್ನು ಎಚ್ಚರಿಸುತ್ತಾ ಹಲವಾರು ಸೂಚನೆಗಳನ್ನು ನೀಡಿದೆ.

ಆದ್ದರಿಂದ, ಕೋವಿಡ್ -19 ಪ್ರಕರಣಗಳ ಹೆಚ್ಚಳದಿಂದಾಗಿ ಈ ಎರಡು ತೆಲುಗು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿವೆ ಎಂಬ ಹೇಳಿಕೆಯು ಸುಳ್ಳು, ಮತ್ತು ಈ ಹೇಳಿಕೆಯನ್ನು ಬೆಂಬಲಿಸಲು ಹಳೆಯ 2020 ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ:

‘ಹೆಚ್ಚು ಹಳದಿ’ಯಾಗಿರುವ ಅರಿಶಿನವು ಸೀಸದ ಕ್ರೋಮೇಟ್ ಅನ್ನು ಹೊಂದಿರುತ್ತದೆ ಎಂದು ವೈರಲ್ ಸಂದೇಶವು ಹೇಳುತ್ತದೆ; ಸತ್ಯ ಪರಿಶೀಲನೆ

ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿದೆಯೇ? ಹಳೆಯ ಹೇಳಿಕೆಯ ಮರುಕಳಿಕೆ; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*