Don't Miss

ಸತ್ಯ ಪರಿಶೀಲನೆ: ಕೇರಳದಲ್ಲಿ ಹಣ ಸುಲಿಗೆಯ ನಾಟಕೀಯ ವೀಡಿಯೊ ಸುಳ್ಳು ಕೋಮುವಾದಿ ಹೇಳಿಕೆಗಳೊಂದಿಗೆ ವೈರಲ್ ಆಗಿದೆ

ಹೇಳಿಕೆ/Claim:ಕೇರಳದಲ್ಲಿ ಹಣ ವಸೂಲಿಯ ನಾಟಕೀಯ ವೀಡಿಯೊವನ್ನು ಕೋಮುವಾದಿ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಕಡೆನುಡಿ/Conclusion:ಡಿಸೆಂಬರ್ 26ರಂದು ಸುಜಿತ್ ರಾಮಚಂದ್ರನ್ ಎಂಬ ಬಳಕೆದಾರರು ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಬಳಕೆದಾರರು ವೀಡಿಯೊದ ಪಾತ್ರಗಳನ್ನು ಉಲ್ಲೇಖಿಸಿದರು. ಅವರು ನಂತರ, ವೀಡಿಯೊವನ್ನು ಸಂಪೂರ್ಣವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರೀಕರಿಸಲಾಗಿದೆ ಎಂಬ ಒಂದು ಹಕ್ಕು ನಿರಾಕರಣೆಯನ್ನೂ ಸೇರಿಸಿದ್ದರು. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಗಂಡಸರ ಗುಂಪೊಂದು ಕಾರಿನಲ್ಲಿ ಒಬ್ಬ ವ್ಯಕ್ತಿಯಿಂದ ಹಣ ವಸೂಲಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಕೋಮುವಾದಿ  ಹೇಳಿಕೆಗಳೊಂದಿಗೆ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಕೇರಳದಲ್ಲಿ ಸೆರೆಹಿಡಿಯಲಾಗಿದೆ ಮತ್ತು ತಮ್ಮ ಕ್ರಿಸ್ಮಸ್ ...

Read More »

ರತನ್ ಟಾಟಾರವರು ಇತ್ತೀಚೆಗೆ ಗುಂಡು ತಡೆದುಕೊಳ್ಳುವ ಮತ್ತು ಬಾಂಬ್ ತಡೆದುಕೊಳ್ಳುವ ಬಸ್ಸುಗಳನ್ನು ಭಾರತೀಯ ಸೇನೆಗೆ ಉಡುಗೊರೆಯಾಗಿ ನೀಡಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಟಾಟಾ ಗ್ರೂಪ್ ಅಧ್ಯಕ್ಷರಾದ ರತನ್ ಟಾಟಾರವರು ಇತ್ತೀಚೆಗೆ ಭಾರತೀಯ ಸೇನೆಗೆ ಗುಂಡು ತಡೆದುಕೊಳ್ಳುವಂತಹ ಮತ್ತು ಬಾಂಬ್ ತಡೆದುಕೊಳ್ಳುವಂತಹ ಬಸ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕಡೆನುಡಿ/Conclusion:ಸುಳ್ಳು. ಈ ಬಸ್‌ಗಳನ್ನು ಮಿಶ್ರಾ ಧಾತು ನಿಗಮ್ ಲಿಮಿಟೆಡ್ (MIDHANI) 2017 ರಲ್ಲಿ CRPF ಗೆ ನೀಡಿತ್ತು. ರೇಟಿಂಗ್:ತಪ್ಪು ನಿರೂಪಣೆ ಸತ್ಯ ಪರಿಶೀಲನೆ ವಿವರಗಳು ಟಾಟಾ ಗ್ರೂಪ್‌ನ ಅಧ್ಯಕ್ಷರಾದ ರತನ್ ಟಾಟಾರವರ ಚಿತ್ರ ಮತ್ತು ಅದರೊಂದಿಗೆ ಒಂದು ಶಸ್ತ್ರಸಜ್ಜಿತ ಬಸ್ಸಿನ  ಮತ್ತೊಂದು ಚಿತ್ರವನ್ನು ತೋರಿಸುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ತನ್ನ ಪರೋಪಕಾರಿ ಚಟುವಟಿಕೆಗಳಿಗಾಗಿ ಹೆಸರುವಾಸಿಯಾದ ಈ ...

Read More »

ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಚರ್ಚ್‌ನಲ್ಲಿ ತಮ್ಮ ಮದುವೆಯನ್ನು ನೋಂದಾಯಿಸುತ್ತಿರುವುದನ್ನು ಈ ಚಿತ್ರವು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸೋನಿಯಾ ಗಾಂಧಿ ಮತ್ತು ರಾಜೀವ್ ಗಾಂಧಿ ಕ್ರೈಸ್ತ ಸಂಪ್ರದಾಯದಲ್ಲಿ ವಿವಾಹವಾದರು ಎಂದು ವೈರಲ್ ಚಿತ್ರ ಆರೋಪಿಸುತ್ತದೆ. ಕಡೆನುಡಿ/Conclusion:  ಸೋನಿಯಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ವಿವಾಹದ ಮೂಲ ವೀಡಿಯೊದಲ್ಲಿ, ದಂಪತಿಗಳು ಸಾಂಪ್ರದಾಯಿಕ ಹಿಂದೂ ವಿವಾಹದ ಉಡುಪನ್ನು ಧರಿಸಿ ತಮ್ಮ ವಿವಾಹವನ್ನು ನೋಂದಾಯಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ಕ್ರೈಸ್ತ ಧರ್ಮದ ಮದುವೆಯಲ್ಲಿ, ವಧು ಬಿಳಿ ವಸ್ತ್ರಗಳನ್ನು ಧರಿಸುತ್ತಾರೆ, ಆದರೆ ಚಿತ್ರದಲ್ಲಿ ಸೋನಿಯಾ ಗಾಂಧಿ ಗುಲಾಬಿ ಬಣ್ಣದ ಬಟ್ಟೆಯಲ್ಲಿದ್ದಾರೆ. ರೇಟಿಂಗ್:ತಪ್ಪು ನಿರೂಪಣೆ ಸತ್ಯ ಪರಿಶೀಲನೆ ವಿವರಗಳು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕ್ರೈಸ್ತ ಪಾದ್ರಿಯ ಮುಂದೆ ಕುಳಿತಿರುವ ಚಿತ್ರವೊಂದು ...

Read More »

ಕರೋನವೈರಸ್ ಅನ್ನು ಪತ್ತೆಹಚ್ಚುವುದು ಹೇಗೆ ಎಂಬುದರ ಕುರಿತು AIIMS ಹೇಳಿಕೆ ನೀಡಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕೋವಿಡ್-19ನ್ನು ಪತ್ತೆಹಚ್ಚುವ ರೋಗಲಕ್ಷಣಗಳ ಪಟ್ಟಿಯನ್ನು ಹೊಂದಿರುವ ಹೊಸ ಸಲಹೆಯನ್ನು AIIMS ಬಿಡುಗಡೆ ಮಾಡಿದೆ. ಕಡೆನುಡಿ/Conclusion: AIIMSನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ. ಸಾಮಾನ್ಯ ನೆಗಡಿ, ಪ್ಲು ಮತ್ತು ವೈರಲ್ ಜ್ವರದ ಲಕ್ಷಣಗಳು ಕೋವಿಡ್-19ರ ಲಕ್ಷಣಗಳನ್ನು ಹೋಲಬಹುದು. ದೇಶದ ಹಲವಾರು ಭಾಗಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ, ಮೊದಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ರೇಟಿಂಗ್:  ದಾರಿತಪ್ಪಿಸುವ ಸುದ್ದಿ  ಸತ್ಯ ಪರಿಶೀಲನೆ ವಿವರಗಳು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು (AIIMS) ಕೋವಿಡ್-19 ಅನ್ನು ಪತ್ತೆಹಚ್ಚಲು ಹೊಸ ರೋಗಲಕ್ಷಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ...

Read More »

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪ್ರಯಾಣಿಕರ ಪರ್ಸ್‌ನಿಂದ ಹಣ ಕದಿಯುತ್ತಿರುವುದನ್ನು ತಯಾರಿಸಲಾದ ವೀಡಿಯೊ ತೋರಿಸುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim:  : ಭದ್ರತಾ ಸಿಬ್ಬಂದಿಯು ವಿಮಾನ ಪ್ರಯಾಣಿಕರೊಬ್ಬರ ಪರ್ಸ್‌ನಿಂದ ಹಣ ಕದಿಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion:: ವೀಡಿಯೊ ಪ್ರಕಟಪಡಿಸಿದವರು ಅಪ್‌ಲೋಡ್ ಮಾಡಿರುವ ಹಲವಾರು ವೀಡಿಯೊಗಳಲ್ಲಿ ಕಂಡುಬರುವ ನಟರ ಕಾರ್ಯ ಪ್ರಕ್ರಿಯೆಯನ್ನು ತೋರಿಸುವ ನಾಟಕೀಯ ವೀಡಿಯೊ. ರೇಟಿಂಗ್:ತಪ್ಪು ನಿರೂಪಣೆ ಸತ್ಯ ಪರಿಶೀಲನೆ ವಿವರಗಳು ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಬ್ಬರ ಪರ್ಸ್‌ನಿಂದ ಹಣ ಕದಿಯುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಟ್ವಿಟರ್‌ನಲ್ಲಿ ಬಳಕೆದಾರರಿಂದ  ಹಲವಾರು ಪ್ರತಿಕ್ರಿಯೆಗಳನ್ನು ಪಡೆದಿದೆ, ಕೆಳಗೆ ತೋರಿಸಿರುವಂತೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ವಿರುದ್ಧ ಎಚ್ಚರಿಕೆ ನೀಡುತ್ತದೆ. Airport se Safar karne ...

Read More »

ಅಮೇರಿಕಾದಲ್ಲಿ ವಿಶ್ವದ ಅತಿದೊಡ್ಡ ಒಂದು ಗ್ರಂಥಾಲಯವನ್ನು ತೆರೆಯಲಾಗಿದ್ದು, ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರವರ ಹೆಸರಿಸಲಾಗಿದೆ? ಸತ್ಯ ಪರಿಶೀಲನೆ

ಹೇಳಿಕೆ/Claim:: ಯುನೈಟೆಡ್ ಸ್ಟೇಟ್ಸ್ನಲ್ಲಿ ಒಂದು ಗ್ರಂಥಾಲಯವನ್ನು ತೆರೆಯಲಾಗಿದ್ದು ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರವರ ಹೆಸರನ್ನಿಡಲಾಗಿದೆ. ಕಡೆನುಡಿ/Conclusion: ಅಂತಹ ಯಾವುದೇ ಗ್ರಂಥಾಲಯವನ್ನು ತೆರೆಯಲಾಗಿಲ್ಲ ಮತ್ತು ಹೇಳಲಾಗಿರುವಂತೆ ಅದಕ್ಕೆ ಅಂಬೇಡ್ಕರ್ ಅವರ ಹೆಸರನ್ನು ಖಂಡಿತವಾಗಿಯೂ ಇಡಲಾಗಿಲ್ಲ. ಚಿತ್ರವು ಚೀನಾದಲ್ಲಿ ಮಾರ್ಚ್ 2018 ರಲ್ಲಿ ತೆರೆಯಲಾದ ಗ್ರಂಥಾಲಯದ್ದು. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ವಿಶ್ವದ ಅತಿದೊಡ್ಡ ಗ್ರಂಥಾಲಯವನ್ನು ಯುನೈಟೆಡ್ ಸ್ಟೇಟ್ಸ್ ತೆರೆದಿದೆ ಮತ್ತು ಅದಕ್ಕೆ ಭಾರತೀಯ ಸಂವಿಧಾನದ ಲೇಖಕರಾದ ಡಾ.ಬಿ.ಆರ್. ಅಂಬೇಡ್ಕರ್ ರವರ ಹೆಸರನ್ನಿಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಒಂದು ಹೇಳುತ್ತದೆ.  ...

Read More »

ರಾಷ್ಟ್ರೀಯ ವೈದ್ಯಕೀಯ ಆಯೋಗವು ಧನ್ವಂತರಿ ದೇವತೆಯನ್ನು ಒಳಗೊಂಡ ತನ್ನ ಲಾಂಛನವನ್ನು ಬದಲಾಯಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ರಾಷ್ಟ್ರೀಯ ವೈದ್ಯಕೀಯ ಆಯೋಗವು ಇತ್ತೀಚೆಗೆ ಹಿಂದೂ ದೇವತೆ ಧನ್ವಂತರಿಯನ್ನು ಒಳಗೊ ಳ್ಳುವಂತೆ ತನ್ನ ಅಧಿಕೃತ ಲಾಂಛನವನ್ನು ಬದಲಾಯಿಸಿದೆ. ಕಡೆನುಡಿ/Conclusion: ಸತ್ಯ. ಲಾಂಛನವನ್ನು ಕಳೆದ ವರ್ಷ ಬದಲಾಯಿಸಲಾಯಿತು ಮತ್ತು ಈಗ ಅದನ್ನು ವರ್ಣರಂಜಿತಗೊಳಿಸಿ ಇಂಡಿಯಾ ಶಬ್ದವನ್ನು ಭಾರತ ಎಂದು ಬದಲಾಯಿಸಲಾಗಿದೆ. ರೇಟಿಂಗ್:: ಸತ್ಯ — ಸತ್ಯ ಪರಿಶೀಲನೆ ವಿವರಗಳು: ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಇತ್ತೀಚೆಗೆ ಹಿಂದೂ ದೇವತೆ ಧನ್ವಂತರಿಯೊಂದಿಗೆ ಲಾಂಛನವನ್ನು ಒಳಗೊಂಡಿರುವ ತನ್ನ ಅಧಿಕೃತ ಲಾಂಛನವನ್ನು ಬದಲಾಯಿಸಿದೆ ಎನ್ನುವ ಹೇಳಿಕೆಯೊಂದು ವೈರಲ್ ಆಗುತ್ತಿದೆ. ಲಾಂಛನದಲ್ಲಿ ಮಧ್ಯದಲ್ಲಿ ದೇವರನ್ನು ತೋರಿಸಲಾಗಿದೆ ಮತ್ತಿದರಲ್ಲಿ ಸ್ಪಷ್ಟ ವ್ಯತ್ಯಾಸ ...

Read More »

ಈ ಸಂಪೂರ್ಣ ವೀಡಿಯೊ ಕೇರಳದ ದೇವಸ್ಥಾನವೊಂದರ ಪ್ರಸಿದ್ಧ ಸಸ್ಯಾಹಾರಿ ಮೊಸಳೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕೇರಳದ ಕಾಸರಗೋಡು ಜಿಲ್ಲೆಯ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕೆರೆಯಲ್ಲಿ ಬಾಬಿಯಾ ಎಂಬ ಸಸ್ಯಾಹಾರಿ ಮೊಸಳೆಯೊಂದು ವೈರಲ್  ವೀಡಿಯೊ ತೋರಿಸುತ್ತದೆ. ಮೊಸಳೆಯು ದೇವಸ್ಥಾನದ ನೈವೇದ್ಯವನ್ನು ಮಾತ್ರ ತಿನ್ನುತ್ತದೆ ಎಂದು ಹೇಳಲಾಗಿದೆ. ಕಡೆನುಡಿ/Conclusion: ಕೇರಳದ ಕಾಸರಗೋಡು ಜಿಲ್ಲೆಯ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕೆರೆಯಲ್ಲಿ ವಾಸಿಸುವ ಸಸ್ಯಾಹಾರಿ ಮೊಸಳೆ ಬಾಬಿಯಾ ಬಗೆಗಿನ ವಿಷಯ ಸತ್ಯ. ಆದರೆ, ಬಾಬಿಯಾ 2022ರಲ್ಲಿ ಮರಣಹೊಂದಿತು ಮತ್ತು ಒಂದು ವರ್ಷದ ನಂತರ ಕೆರೆಯಲ್ಲಿ ಹೊಸ ಮೊಸಳೆಯೊಂದು ಕಾಣಿಸಿಕೊಂಡಿತು. ವೈರಲ್ ವೀಡಿಯೊದಲ್ಲಿ ಬಾಬಿಯಾ ಮೊಸಳೆಯ ಕೆಲವು ಚಿತ್ರಗಳನ್ನು ತೋರಿಸಲಾಗಿದೆ, ಆದರೆ ಎಲ್ಲವೂ ಬಾಬಿಯಾದ ...

Read More »

ಸತ್ಯ ಪರಿಶೀಲನೆ: ಕಾಂಗ್ರೆಸ್ನ ಚಿಹ್ನೆಯನ್ನು ಇಸ್ಲಾಂನಿಂದ ಪಡೆಯಲಾಗಿದೆ ಎಂದು ವೈರಲ್ ಸಾಮಾಜಿಕ ಜಾಲತಾಣ ಪೋಸ್ಟ್ಗಳು ಹೇಳುತ್ತವೆ

ಹೇಳಿಕೆ/Claim: ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆಯಾಗಿರುವ ತೆರೆದ ಹಸ್ತವನ್ನು ಇಸ್ಲಾಂ ಧರ್ಮದಿಂದ ಪಡೆಯಲಾಗಿದೆ ಎಂದು ವೈರಲ್ ಆಗಿರುವ ಸಾಮಾಜಿಕ ಮಾಧ್ಯಮದ ಚಿತ್ರವೊಂದು ಹೇಳುತ್ತದೆ. ಕಡೆನುಡಿ/Conclusion: ಕಾಂಗ್ರೆಸ್ ಪಕ್ಷವು ವರ್ಷಗಳಾದ್ಯಂತ ತನ್ನ ಚುನಾವಣಾ ಚಿಹ್ನೆಗಳನ್ನು ಬದಲಾಯಿಸಿದೆ. ತೆರೆದ ಹಸ್ತದ ಪ್ರಸ್ತುತ ಚಿಹ್ನೆಯು 1977 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅಷ್ಟೇ ಅಲ್ಲದೆ, ಯಾವುದೇ ಪಕ್ಷವು ಧಾರ್ಮಿಕ ಅಥವಾ ಸಾಮುದಾಯಿಕ ಅರ್ಥವನ್ನು ಹೊಂದಿರುವ ಚಿಹ್ನೆಯನ್ನು ಹೊಂದಿರಬಾರದು ಎಂದು ಭಾರತೀಯ ಚುನಾವಣಾ ಆಯೋಗವು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಕಾಂಗ್ರೆಸ್ ಚುನಾವಣಾ ...

Read More »

ಮೊರ್ಬಿ ಸೇತುವೆ ಕುಸಿತದ ನಂತರ ತೆಲಂಗಾಣದಲ್ಲಿ ರಾಹುಲ್ ಗಾಂಧಿ ನೃತ್ಯ? ಸತ್ಯ ಪರಿಶೀಲನೆ

ಹೇಳಿಕೆ/Claim: ಗುಜರಾತ್‌ನಲ್ಲಿ ಮೋರ್ಬಿ ಸೇತುವೆ ಕುಸಿದ ನಂತರ ಕಾಂಗ್ರೆಸ್ ನಾಯಕರು ಸಂತೋಷದಿಂದ ನೃತ್ಯ ಮಾಡುತ್ತಿರುವುದು. ಕಡೆನುಡಿ/Conclusion: ಸುಳ್ಳು. ಇದು ಸೇತುವೆ ಕುಸಿತದ ದುರಂತದ ಮೊದಲು ಅಪ್‌ಲೋಡ್ ಮಾಡಿದ ಘಟನೆಯ ವೀಡಿಯೊ ಆಗಿತ್ತು. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಕೆಸಿ ವೇಣುಗೋಪಾಲ್ ಅವರು ಸ್ಥಳೀಯರೊಂದಿಗೆ ಸೇರಿ ಕುಣಿಯುತ್ತಿರುವ ಒಂದು ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಮೋರ್ಬಿಯಲ್ಲಿ ಸೇತುವೆ ಕುಸಿದ ನಂತರ ಅವರು ಸಂತಸದಿಂದ ಕುಣಿಯುತ್ತಿದ್ದರು ಎಂಬುದು ಈ ವೀಡಿಯೊದಲ್ಲಿ ನೀಡಲಾದ ಹೇಳಿಕೆ. Man who wants ...

Read More »