Don't Miss

ರಾಷ್ಟ್ರೀಯ ವೈದ್ಯಕೀಯ ಆಯೋಗವು ಧನ್ವಂತರಿ ದೇವತೆಯನ್ನು ಒಳಗೊಂಡ ತನ್ನ ಲಾಂಛನವನ್ನು ಬದಲಾಯಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ರಾಷ್ಟ್ರೀಯ ವೈದ್ಯಕೀಯ ಆಯೋಗವು ಇತ್ತೀಚೆಗೆ ಹಿಂದೂ ದೇವತೆ ಧನ್ವಂತರಿಯನ್ನು ಒಳಗೊ ಳ್ಳುವಂತೆ ತನ್ನ ಅಧಿಕೃತ ಲಾಂಛನವನ್ನು ಬದಲಾಯಿಸಿದೆ.

ಕಡೆನುಡಿ/Conclusion: ಸತ್ಯ. ಲಾಂಛನವನ್ನು ಕಳೆದ ವರ್ಷ ಬದಲಾಯಿಸಲಾಯಿತು ಮತ್ತು ಈಗ ಅದನ್ನು ವರ್ಣರಂಜಿತಗೊಳಿಸಿ ಇಂಡಿಯಾ ಶಬ್ದವನ್ನು ಭಾರತ ಎಂದು ಬದಲಾಯಿಸಲಾಗಿದೆ.

ರೇಟಿಂಗ್:: ಸತ್ಯ —

ಸತ್ಯ ಪರಿಶೀಲನೆ ವಿವರಗಳು:

ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಇತ್ತೀಚೆಗೆ ಹಿಂದೂ ದೇವತೆ ಧನ್ವಂತರಿಯೊಂದಿಗೆ ಲಾಂಛನವನ್ನು ಒಳಗೊಂಡಿರುವ ತನ್ನ ಅಧಿಕೃತ ಲಾಂಛನವನ್ನು ಬದಲಾಯಿಸಿದೆ ಎನ್ನುವ ಹೇಳಿಕೆಯೊಂದು ವೈರಲ್ ಆಗುತ್ತಿದೆ. ಲಾಂಛನದಲ್ಲಿ ಮಧ್ಯದಲ್ಲಿ ದೇವರನ್ನು ತೋರಿಸಲಾಗಿದೆ ಮತ್ತಿದರಲ್ಲಿ ಸ್ಪಷ್ಟ ವ್ಯತ್ಯಾಸ ಕಾಣುತ್ತದೆ. ಸರ್ಕಾರಿ ಲಾಂಛನಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಬಳಸಲಾಗುತ್ತಿದೆ ಎಂದು ಶೀರ್ಷಿಕೆಗಳು ಹೇಳುತ್ತವೆ.


ಇತ್ತೀಚಿನ ಬದಲಾವಣೆಯಲ್ಲಿ ಲಾಂಛನದಲ್ಲಿನ ‘ಇಂಡಿಯಾ’ ಎಂಬ ಪದವನ್ನು ‘ಭಾರತ್’ ಎಂದು ಬದಲಸಲಾಗಿದೆ.


 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಎನ್‌ಎಂಸಿಯ ವೆಬ್‌ಸೈಟ್‌ನಲ್ಲಿ ಅದರ ಅಧಿಕೃತ ಲಾಂಛನವನ್ನು ಪರಿಶೀಲಿದಾಗ ಕೊನೆಯ ಸಲ ಡಿಸೆಂಬರ್ 2022ರಲ್ಲಿ ಲಾಂಛನವನ್ನು ಬದಲಾಯಿಸಲಾಗಿದೆ ಮತ್ತು ಬದಲಾಯಿಸಲಾದ ಲಾಂಛನದಲ್ಲಿ ಕಪ್ಪು ರೂಪಗಳ ಬದಲಾಗಿ ಬಣ್ಣಗಳನ್ನುಳ್ಳ ರೂಪಗಳನ್ನು ಬಳಸಲಾಗಿದೆ ಎಂದು ಕಂಡುಬಂತು. ಎರಡನೆಯದಾಗಿ, ತೋರಿಸಲಾಗಿರುವಂತೆ ಅದು ಧನ್ವಂತರಿಯನ್ನು ಹೊಂದಿದೆ ಮತ್ತು 2022ರಲ್ಲಿ ಬದಲಾವಣೆಯನ್ನು ಅನುಮೋದಿಸಲಾಗಿದೆ ಎಂದು ಎನ್‌ಎಂಸಿ ಡಿಸೆಂಬರ್ 6, 2023ರಂದು ಹೇಳಿಕೊಂಡಿದೆ.

ಧನ್ವಂತರಿಯನ್ನು ಆಯುರ್ವೇದ ಮತ್ತು ಔಷಧದ ದೇವರು ಎಂದು ಪರಿಗಣಿಸಲಾಗಿದ್ದು, ಅದು ವೈದ್ಯಕೀಯ ಸಂಸ್ಥೆಯ ಲಾಂಛನಕ್ಕೆ ಸೂಕ್ತವಾದ ಸೇರ್ಪಡೆ ಎಂದು ಎನ್‌ಎಂಸಿಯ ಅಧಿಕಾರಿಗಳು ಹೇಳಿದರು. “ಗ್ರೀಕ್ ಪುರಾಣಗಳ ಭಾಗವಾದ ಎರಡು ಸರ್ಪಗಳು ಸುತ್ತಿಕೊಂಡಿರುವ ಕೋಲು-
ಕ್ಯಾಡುಸಿಯಸ್ ವೈದ್ಯರ ಲಾಂಛನವಾಗಿದ್ದರೆ, ನಾವು ನಮ್ಮದೇ ಆದ ಪುರಾಣಗಳಿಂದ ಚಿಹ್ನೆಗಳನ್ನು ಏಕೆ ಬಳಸಬಾರದು?” ಹೊಸ ಮತ್ತು ಹಳೆಯ ಲಾಂಛನಗಳನ್ನು ಇಲ್ಲಿ ನೋಡಿ:

ಹೊಸ ಲಾಂಛನ                                                ಹಳೆಯ ಲಾಂಛನ

ಮಧ್ಯದಲ್ಲಿ ವೈದ್ಯ ದೇವರಾದ ಧನ್ವಂತರಿಯ ವರ್ಣರಂಜಿತ ಚಿತ್ರವನ್ನು ಹೊಂದಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಲಾಂಛನವನ್ನು 2022ರಲ್ಲಿ ನಿರ್ಧರಿಸಲಾಯಿತು ಎಂದು ಭಾರತೀಯ ವೈದ್ಯಕೀಯ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದನ್ನು ಸುದ್ದಿ ವರದಿಗಳು ಉಲ್ಲೇಖಿಸಿವೆ. ಧನ್ವಂತರಿಯ ಚಿತ್ರವು ಎಂದಿನಿಂದಲೂ ಎನ್‌ಎಂಸಿಯ ಲಾಂಛನದ ಭಾಗವಾಗಿತ್ತು. ಆದರೆ ಮೊದಲು ಅದು ಗಾಢ ನೆರಳುಗೆರೆಚಿತ್ರವಾಗಿದ್ದು ಮತ್ತು ಹೊಸ ಲಾಂಛನದಲ್ಲಿ ಅದನ್ನು ವರ್ಣರಂಜಿತವಾಗಿ ತೋರಿಸಲಾಗಿದೆ, ಜೊತೆಗೆ ‘ಇಂಡಿಯಾ’ ಪದವನ್ನು ‘ಭಾರತ್’ ಎಂದು ಬದಲಿಸಲಾಗಿದೆ, ಎಂದು ಎನ್‌ಎಂಸಿಯು ಸಮರ್ಥಿಸಿಕೊಂಡಿದೆ.

ಈ ಕ್ರಮವನ್ನು ವಿರೋಧಿಸಿದ ಐಎಂಎ ಅಧ್ಯಕ್ಷರಾದ ಡಾ. ಶರದ್ ಅಗರ್ವಾಲ್: “ವೈದ್ಯರು ಜಾತಿ, ವರ್ಗ ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಚಿಕಿತ್ಸೆ ನೀಡುವುದಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಹಾಗಾದರೆ ವೈದ್ಯರ ತರಬೇತಿಯನ್ನು ನಿಯಂತ್ರಿಸುವ ಸಂಸ್ಥೆಯ ಲಾಂಛನವು ಧಾರ್ಮಿಕ ಸಂಬಂಧವನ್ನು ಏಕೆ ಹೊಂದಿರಬೇಕು?” ಎಂದು ಹೇಳಿದರು.

ಆದ್ದರಿಂದ, ಎನ್‌ಎಂಸಿಯ ಲಾಂಛನದಲ್ಲಿ ಧನ್ವಂತರಿ ದೇವತೆಯ ಲೋಗೋವನ್ನು ಬಳಸಲಾಗಿದೆ ಎಂಬ ಹೇಳಿಕೆ ನಿಜವಾಗಿದೆ.

ಇದನ್ನೂ ಓದಿ:

ಈ ವೀಡಿಯೊ 170-ವರ್ಷ-ಹಳೆಯ ಟಿಸ್ಸಾಟ್ ವಾಚ್ನ ಮರುಸ್ಥಾಪನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಸತ್ಯ ಪರಿಶೀಲನೆ: ಸುಡಾನ್‌ನಲ್ಲಿ ಡ್ರೋನ್ ದಾಳಿಯ ಒಂದು ಹಳೆಯ ವೀಡಿಯೊಗೂ ಗಾಜಾ಼ ಮೇಲಿನ ದಾಳಿಗೂ ಸಂಬಂಧ ಕಲ್ಪಿಸಲಾಗಿದೆ

Leave a Reply

Your email address will not be published. Required fields are marked *

*