Don't Miss

ರತನ್ ಟಾಟಾರವರು ಇತ್ತೀಚೆಗೆ ಗುಂಡು ತಡೆದುಕೊಳ್ಳುವ ಮತ್ತು ಬಾಂಬ್ ತಡೆದುಕೊಳ್ಳುವ ಬಸ್ಸುಗಳನ್ನು ಭಾರತೀಯ ಸೇನೆಗೆ ಉಡುಗೊರೆಯಾಗಿ ನೀಡಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಟಾಟಾ ಗ್ರೂಪ್ ಅಧ್ಯಕ್ಷರಾದ ರತನ್ ಟಾಟಾರವರು ಇತ್ತೀಚೆಗೆ ಭಾರತೀಯ ಸೇನೆಗೆ ಗುಂಡು ತಡೆದುಕೊಳ್ಳುವಂತಹ ಮತ್ತು ಬಾಂಬ್ ತಡೆದುಕೊಳ್ಳುವಂತಹ ಬಸ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಕಡೆನುಡಿ/Conclusion:ಸುಳ್ಳು. ಈ ಬಸ್‌ಗಳನ್ನು ಮಿಶ್ರಾ ಧಾತು ನಿಗಮ್ ಲಿಮಿಟೆಡ್ (MIDHANI) 2017 ರಲ್ಲಿ CRPF ಗೆ ನೀಡಿತ್ತು.

ರೇಟಿಂಗ್:ತಪ್ಪು ನಿರೂಪಣೆ

ಸತ್ಯ ಪರಿಶೀಲನೆ ವಿವರಗಳು

ಟಾಟಾ ಗ್ರೂಪ್‌ನ ಅಧ್ಯಕ್ಷರಾದ ರತನ್ ಟಾಟಾರವರ ಚಿತ್ರ ಮತ್ತು ಅದರೊಂದಿಗೆ ಒಂದು ಶಸ್ತ್ರಸಜ್ಜಿತ ಬಸ್ಸಿನ  ಮತ್ತೊಂದು ಚಿತ್ರವನ್ನು ತೋರಿಸುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ತನ್ನ ಪರೋಪಕಾರಿ ಚಟುವಟಿಕೆಗಳಿಗಾಗಿ ಹೆಸರುವಾಸಿಯಾದ ಈ ಉದ್ಯಮಿಗಳು ಇತ್ತೀಚೆಗೆ ಗುಂಡು ತಡೆದುಕೊಳ್ಳುವ ಮತ್ತು ಬಾಂಬ್ ತಡೆದುಕೊಳ್ಳುವ ಬಸ್ಸುಗಳನ್ನು ಭಾರತೀಯ ಸೇನೆಗೆ ದಾನ ಮಾಡಿದ್ದಾರೆ ಎಂಬುದು ಇದರೊಂದಿಗಿರುವ ಹೇಳಿಕೆ. ಫೇಸ್ಬುಕ್ ನಲ್ಲಿ ಶೇರ್ ಮಾಡಿರುವ ಪೋಸ್ಟ್ ಇಲ್ಲಿ ನೋಡಿ.

ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.

FACT CHECK

ಡಿಜಿಟೈ ಇಂಡಿಯಾ ತಂಡವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ಬಳಸಿ ಪರಿಶೀಲಿಸಿದಾಗ, ಈ ನಿರ್ದಿಷ್ಟ ಬಸ್ಸನ್ನು ಮಿಶ್ರಾ ಧಾತು ನಿಗಮ್ ಲಿಮಿಟೆಡ್ (ಮಿಧಾನಿ) ಎಂಬ ಹೈದರಾಬಾದ್ ಮೂಲದ ಲೋಹ ಉತ್ಪಾದನಾ ಗುಂಪು 2017 ರಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF)ಗೆ ಕೊಟ್ಟಿತ್ತು ಎಂದು ಫಲಿತಾಂಶಗಳು ತಿಳಿಸಿದವು.

ಇದನ್ನು CRPF ಸೆಪ್ಟೆಂಬರ್ 7, 2017ರಂದು ಟ್ವೀಟ್‌ನಲ್ಲಿ ಅಂಗೀಕರಿಸಿದೆ. ಈ ಬಸ್ಸುಗಳ ಹೊರಭಾಗವನ್ನು ಟಾಟಾ ಮೋಟಾರ್ಸ್ ತಯಾರಿಸಿದೆ, ಆದರೆ ಈ ವಾಹನಗಳನ್ನು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ಸಾರ್ವಜನಿಕ ವಲಯದ ಉದ್ಯಮವಾದ (PSU) MIDHANI ಸಂಪೂರ್ಣ ಶಸ್ತ್ರಸಜ್ಜಿತವಾಗಿ ಒದಗಿಸಿತ್ತು.

ಟ್ವೀಟ್‌ನಲ್ಲಿ ಹೇಳಿಕೆ ಹೀಗಿದೆ: “MIDHANI ಯು #ಮೇಕ್‌ಇನ್‌ಇಂಡಿಯಾ ಅಡಿಯಲ್ಲಿ ತಯಾರಿಸಿದ ಶಸ್ತ್ರಸಜ್ಜಿತ ಬಸ್ ಮತ್ತು ಭಾಭಾ ಕವಚ, ಹಗುರವಾದ ಬುಲೆಟ್ ಪ್ರೂಫ್ ಜ್ಯಾಕೆಟ್ಅನ್ನು ಇಂದು DG CRPFಗೆ ಹಸ್ತಾಂತರಿಸಲಾಯಿತು.” ಇದಲ್ಲದೆ, ಕೆಳಗೆ ತೋರಿಸಿರುವಂತೆ MIDHANI ಲಿಮಿಟೆಡ್ ತನ್ನ 2017-18ರ ವಾರ್ಷಿಕ ವರದಿಯಲ್ಲಿ ಇದನ್ನು ದೃಢಪಡಿಸಿದೆ.

ಈ ಬುಲೆಟ್ ಪ್ರೂಫ್ ಬಸ್ಸನ್ನು ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಳಸುವಂತೆ MIDHANI ವಿನ್ಯಾಸಗೊಳಿಸಿದೆ. ಅಷ್ಟೇ ಅಲ್ಲದೆ, MIDHANI ಲಿಮಿಟೆಡ್ ಸಿಆರ್‌ಪಿಎಫ್‌ಗೆ ಭಾಭಾ ಕವಚ (ಹಗುರ ಬುಲೆಟ್ ಪ್ರೂಫ್ ಜಾಕೆಟ್) ಮತ್ತು ಕೆಲವು ಶಸ್ತ್ರಾಸ್ತ್ರಗಳನ್ನೂ ಸಹ ಉಡುಗೊರೆಯಾಗಿ ನೀಡಿದೆ. ಆದ್ದರಿಂದ, ಹೇಳಿಕೆ ಸುಳ್ಳಾಗಿತ್ತು.

ಆದರೆ, 2019ರಲ್ಲಿ ಟಾಟಾ ಮೋಟರ್ಸ್ ಕೇವಲ ಒಂದು ಬಸ್ಸನ್ನು ತಯಾರಿಸಿ CRPF ಗೆ ಉಡುಗೊರೆಯಾಗಿ ನೀಡಿತ್ತು. ಫೆಬ್ರವರಿ 2019 ರಲ್ಲಿ CRPF ಯೋಧರ ಮೇಲೆ ಪುಲ್ವಾಮಾ ಮಾರಣಾಂತಿಕ ದಾಳಿಯ ನಂತರ, ಇಲ್ಲಿ ವರದಿ ಮಾಡಿರುವಂತೆ ಮತ್ತು ಇಲ್ಲಿ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವಂತೆ ಟಾಟಾ ಗ್ರೂಪ್ ಒಂದು ಬುಲೆಟ್ ಪ್ರೂಫ್ ಬಸ್ಸನ್ನು ಯೋಧರಿಗೆ ಉಡುಗೊರೆಯಾಗಿ ನೀಡಿತ್ತು.

ಇದನ್ನೂ ಓದಿ:

ಕರೋನವೈರಸ್ ಅನ್ನು ಪತ್ತೆಹಚ್ಚುವುದು ಹೇಗೆ ಎಂಬುದರ ಕುರಿತು AIIMS ಹೇಳಿಕೆ ನೀಡಿದೆಯೇ? ಸತ್ಯ ಪರಿಶೀಲನೆ

ಇಲ್ಲ, ಹೇಳಿಕೊಂಡಂತೆ ಈ ‘ಪಿತ್ರ್’ ನದಿಯು ವರ್ಷದಲ್ಲೊಮ್ಮೆ ಕಾಣಿಸಿಕೊಳ್ಳುವುದಿಲ್ಲ; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*