Don't Miss

ಸತ್ಯ ಪರಿಶೀಲನೆ: ಕೇರಳದಲ್ಲಿ ಹಣ ಸುಲಿಗೆಯ ನಾಟಕೀಯ ವೀಡಿಯೊ ಸುಳ್ಳು ಕೋಮುವಾದಿ ಹೇಳಿಕೆಗಳೊಂದಿಗೆ ವೈರಲ್ ಆಗಿದೆ

ಹೇಳಿಕೆ/Claim:ಕೇರಳದಲ್ಲಿ ಹಣ ವಸೂಲಿಯ ನಾಟಕೀಯ ವೀಡಿಯೊವನ್ನು ಕೋಮುವಾದಿ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಕಡೆನುಡಿ/Conclusion:ಡಿಸೆಂಬರ್ 26ರಂದು ಸುಜಿತ್ ರಾಮಚಂದ್ರನ್ ಎಂಬ ಬಳಕೆದಾರರು ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಬಳಕೆದಾರರು ವೀಡಿಯೊದ ಪಾತ್ರಗಳನ್ನು ಉಲ್ಲೇಖಿಸಿದರು. ಅವರು ನಂತರ, ವೀಡಿಯೊವನ್ನು ಸಂಪೂರ್ಣವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರೀಕರಿಸಲಾಗಿದೆ ಎಂಬ ಒಂದು ಹಕ್ಕು ನಿರಾಕರಣೆಯನ್ನೂ ಸೇರಿಸಿದ್ದರು.

ರೇಟಿಂಗ್:ತಪ್ಪು ನಿರೂಪಣೆ —

ಸತ್ಯ ಪರಿಶೀಲನೆ ವಿವರಗಳು

ಗಂಡಸರ ಗುಂಪೊಂದು ಕಾರಿನಲ್ಲಿ ಒಬ್ಬ ವ್ಯಕ್ತಿಯಿಂದ ಹಣ ವಸೂಲಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಕೋಮುವಾದಿ  ಹೇಳಿಕೆಗಳೊಂದಿಗೆ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಕೇರಳದಲ್ಲಿ ಸೆರೆಹಿಡಿಯಲಾಗಿದೆ ಮತ್ತು ತಮ್ಮ ಕ್ರಿಸ್ಮಸ್ ದೇಣಿಗೆಗೆ ಕೊಡುಗೆ ನೀಡಲು
ಐಚ್ಛಿಸದ ಜನರಿಂದ ಪುರುಷರು ಬಲವಂತವಾಗಿ ಹಣ ಕೇಳುವುದನ್ನು ಇದು ತೋರಿಸುತ್ತದೆ ಎಂದು ಹೇಳಿಕೆಗಳು ಆರೋಪಿಸುತ್ತವೆ. 2:55 ನಿಮಿಷಗಳ ಅವಧಿಯ ಈ ವೀಡಿಯೊದಲ್ಲಿ ಕೆಲವು ಗಂಡಸರು ಒಬ್ಬ ವ್ಯಕ್ತಿಯನ್ನು ಕಾರಿನಿಂದ ಹೊರಗೆಳೆದು ತೊಂದರೆ ಕೊಡುವುದನ್ನು ತೋರಿಸಲಾಗಿದೆ.

ವೀಡಿಯೊದೊಂದಿಗೆ ವೈರಲ್ ಆಗುತ್ತಿರುವ ಹೇಳಿಕೆ ಹೀಗಿದೆ,

ആഘോഷം ഗംഭീരമാക്കാൻ നാട്ടുകാരുടെ കയ്യിൽ നിന്നും ബലമായി പിരിവെടുക്കുന്നു അതും നമ്മുടെ കേരളത്തിൽ എങ്ങോട്ടാണ് നാടിൻറെ ഈ പോക്ക് മദ്യവും മയക്കുമരുന്നുമായി ഒരുപറ്റം ചെറുപ്പക്കാർ നാട്ടുകാരെ ഭീതിയിലാഴ്ത്തുന്ന അവസ്ഥ കാണുക😞😞😞😞😞🙏 ദൈവത്തിന്റെ സ്വന്തം നാട്

(ಅನುವಾದ: ಆಚರಣೆಯನ್ನು ಅದ್ಧೂರಿಯಾಗಿ ಮಾಡಲು ಸ್ಥಳೀಯರ ಕೈಗಳಿಂದ ಬಲವಂತವಾಗಿ ಸಂಗ್ರಹಿಸಲಾಗುತ್ತದೆ, ಅದೂ ನಮ್ಮ ಕೇರಳದಲ್ಲಿ, ಈ ದೇಶ ಎತ್ತ ಸಾಗುತ್ತಿದೆ? ಮದ್ಯ ಮತ್ತು ಮಾದಕ ದ್ರವ್ಯಗಳೊಂದಿಗೆ ಸ್ಥಳೀಯರನ್ನು ಬೆದರಿಸುವ ಅನೇಕ ಯುವಕರ ಸ್ಥಿತಿ ನೋಡಿ�� �
ದೇವರ ಸ್ವಂತ ನಾಡು)

ಈ ವೈರಲ್ ವೀಡಿಯೊವನ್ನು ಪರಿಶೀಲಿಸುವಂತೆ ಡಿಜಿಟೈ ಇಂಡಿಯಾಗೆ ವಾಟ್ಸಾಪ್‌ನಲ್ಲಿ ವಿನಂತಿ ಬಂತು.

ಈ ವೀಡಿಯೊವನ್ನು ಅದೇ ಹೇಳಿಕೆಯೊಂದಿಗೆ Xನಲ್ಲಿ (ಈ ಹಿಂದೆ, ಟ್ವಿಟರ್) ಹಂಚಿಕೊಂಡಿರುವುದನ್ನೂ ನಾವು ಗಮನಿಸಿದೆವು.

FACT CHECK

ವೀಡಿಯೊವನ್ನು ಹಲವು ಪ್ರಮುಖ ಫ್ರೇಮ್‌ಗಳಾಗಿ ವಿಭಜಿಸಲು ಡಿಜಿಟೈ ಇಂಡಿಯಾ ತಂಡವು ಇನ್‌ವಿಡ್ – ವೀಡಿಯೊ ಪರಿಶೀಲನಾ ಟೂಲನ್ನು ಬಳಸಿತು. ನಾವು ಈ ಫ್ರೇಮ್‌ಗಳನ್ನು ಬಳಸಿ ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು.

ಫಲಿತಾಂಶಗಳಲ್ಲಿ ಒಂದು, ಡಿಸೆಂಬರ್ 26ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊವೊಂದಕ್ಕೆ ನಮ್ಮನ್ನು ಕರೆದೊಯ್ಯಿತು. ಸುಜಿತ್ ರಾಮಚಂದ್ರನ್ ಎಂಬ ಬಳಕೆದಾರರು ಅದೇ ವೀಡಿಯೊವನ್ನು ಹಂಚಿಕೊಂಡಿದ್ದರು. ಆತ ಬರೆದದ್ದು ಹೀಗೆ,

നാടൊട്ടുക്കു പിരിവ്!
കടക്കൽ നിന്ന് കുളത്തുപ്പുഴക്ക് കുടുംബവുമായി സഞ്ചരിച്ച യുവാവിന് ഓന്തുപച്ച എന്ന സ്ഥലത്തു വെച്ച് സംഭവിച്ചത് 😥
അരങ്ങിൽ : ജിഷ്ണു മഴവില്ല് , സുർജിത്, ബൈജു, സിദ്ധീഖ്, നൗഷാദ്, മഹേഷ്‌, വിജയൻ കടക്കൽ, ജ്യോതിഷ് & പിച്ചു
അണിയറയിൽ :സുജിത് രാമചന്ദ്രൻ
ಡಿಸ್ಕ್ಲೈಮರ್: ಜಾಗೃತಿಯ ಉದ್ದೇಶಕ್ಕಾಗಿ ವೀಡಿಯೊವನ್ನು ರಚಿಸಲಾಗಿದೆ
(ಅನುವಾದ: ರಾಷ್ಟ್ರವ್ಯಾಪಿ ಸಂಗ್ರಹ! ಕಟಕಲ್‌ನಿಂದ ಕುಲತುಪುರಕ್ಕೆ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಒಂತುಪಾಚ ಅರಂಗ್ ಎಂಬ ಸ್ಥಳದಲ್ಲಿ ಸಂಭವಿಸಿದ ಘಟನೆ; ನಟಿನೆ: ಜಿಷ್ಣು ಮರವಿಲ್, ಸುರ್ಜಿತ್, ಬೈಜು, ಸಿದ್ದಿಕ್, ನೌಶಾದ್, ಮಹೇಶ್, ವಿಜಯನ್ ಕಟಕಲ್, ಜ್ಯೋತಿಶ್
ಮತ್ತು ಪಿಚು , ಸುಜಿತ್ ರಾಮಚಂದ್ರನ್. ಡಿಸ್ಕ್ಲೈಮರ್: ಜಾಗೃತಿಯ ಉದ್ದೇಶಕ್ಕಾಗಿ ವೀಡಿಯೊವನ್ನು ರಚಿಸಲಾಗಿದೆ)

ಆರಂಭದಲ್ಲಿ, ಡಿಸೆಂಬರ್ 26ರಂದು ವೀಡಿಯೊವನ್ನು ಹಂಚಿಕೊಂಡಾಗ ಶೀರ್ಷಿಕೆಯಲ್ಲಿದ್ದದ್ದು ಇಷ್ಟೇ, “ರಾಷ್ಟ್ರವ್ಯಾಪಿ ಸಂಗ್ರಹ! ಕಟಕುತ್‌ನಿಂದ ಕುಲತುಪುರಕ್ಕೆ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಆದದ್ದೇನು”. ಆದರೆ, ಶೀರ್ಷಿಕೆಯನ್ನು ಡಿಸೆಂಬರ್ 27 ರಂದು ಮಧ್ಯಾಹ್ನ
2:45ಕ್ಕೆ ಬದಲಾಯಿಸಲಾಯಿತು. ಹೊಸ ಶೀರ್ಷಿಕೆಯಲ್ಲಿ, ವೀಡಿಯೊದಲ್ಲಿರುವವರ ಹೆಸರುಗಳು ಮತ್ತು ಹಕ್ಕು ನಿರಾಕರಣೆಯನ್ನು ಸೇರಿಸಲಾಯಿತು.

ಇಲ್ಲಿರುವ ವೀಡಿಯೊವನ್ನು ಒಮ್ಮೆ ನೋಡಿ.

ಆದ್ದರಿಂದ, ಹೇಳಿಕೆಯು ಸುಳ್ಳು.

ಇದನ್ನೂ ಓದಿ:

ಕೇರಳದ ಬಲ್ಲಾ ಬೀಚ್ನಲ್ಲಿ ನಡೆದ ರ್ಯಾಲಿಯಲ್ಲಿ ಪಾಕಿಸ್ತಾನಿ ಧ್ವಜದ ಪ್ರದರ್ಶನ? ಸತ್ಯ ಪರಿಶೀಲನೆ

ಈ ಸಂಪೂರ್ಣ ವೀಡಿಯೊ ಕೇರಳದ ದೇವಸ್ಥಾನವೊಂದರ ಪ್ರಸಿದ್ಧ ಸಸ್ಯಾಹಾರಿ ಮೊಸಳೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*