ಇಟಲಿಯು ನಿಜವಾಗಿಯೂ ಎಲ್ಲಾ ಇಸ್ರೇಲಿ ಪ್ರವಾಸಿಗರು ದೇಶ ಪ್ರವೇಶಿಸದಂತೆ ನಿಷೇಧ ಹೇರಿದೆಯೇ? ಸತ್ಯ ಪರಿಶೀಲನೆ

ಇಟಲಿಯು ನಿಜವಾಗಿಯೂ ಎಲ್ಲಾ ಇಸ್ರೇಲಿ ಪ್ರವಾಸಿಗರು ದೇಶ ಪ್ರವೇಶಿಸದಂತೆ ನಿಷೇಧ ಹೇರಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಟಲಿಯು ಇಸ್ರೇಲಿ ಪ್ರವಾಸಿಗರ ಅಧಿಕೃತ ದೇಶ ಪ್ರವೇಶವನ್ನು ನಿಷೇಧಿಸಿದೆ.

ಕಡೆನುಡಿ/Conclusion: ಹೇಳಿಕೆ ಸುಳ್ಳು. ಯಾವುದೇ ಅಧಿಕೃತ ಇಟಲಿಯ ಸರ್ಕಾರಿ ತೀರ್ಪು, ಪ್ರಧಾನಿ ಮೆಲೋನಿಯವರ ಹೇಳಿಕೆ ಅಥವಾ ಯಾವುದೇ ಇಟಲಿಯ ಪ್ರಾಧಿಕಾರದ ಪ್ರಕಟಣೆಯು ಇಸ್ರೇಲಿ ಪ್ರವಾಸಿಗರ ಮೇಲೆ ನಿಷೇಧ ಹೇರಿಲ್ಲ. ಇಸ್ರೇಲಿ ನಾಗರಿಕರು ತಮ್ಮ ವಾಸ್ತವ್ಯದ 90 ದಿನಗಳವರೆಗೆ ಇಟಲಿಯೊಳಗೆ ವೀಸಾ-ಮುಕ್ತ ಪ್ರವೇಶವನ್ನು ಆನಂದಿಸುತ್ತಿದ್ದಾರೆ.

ರೇಟಿಂಗ್/Rating: ಸುಳ್ಳು


ಇಟಲಿಯು ಇಸ್ರೇಲಿ ಪ್ರವಾಸಿಗರನ್ನು ದೇಶದೊಳಗೆ ಪ್ರವೇಶಿಸದಂತೆ ನಿಷೇಧ ವಿಧಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘kriptoselkk’ ಅಂತಹ ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ (ಕನ್ನಡದ ಅನುವಾದ ಹೀಗಿದೆ): “ಇಟಲಿಯು ಅಧಿಕೃತವಾಗಿ ಇಸ್ರೇಲಿ ಪ್ರವಾಸಿಗರು ದೇಶದೊಳಗೆ ಪ್ರವೇಶಿಸುವುದನ್ನು ನಿಷೇಧಿಸಿದೆ.” ಇದರಲ್ಲಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಚಿತ್ರ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೊಬ್ಬ ಅಧಿಕಾರಿಯೊಂದಿಗೆ ಕುಳಿತಿರುವ ಒಂದು ಸಣ್ಣ ವೀಡಿಯೊ ಕ್ಲಿಪ್ ಅನ್ನು ಸೇರಿಸಲಾಗಿದೆ. ಈ ಪೋಸ್ಟ್ ಗೆ 8.4 ಮಿಲಿಯಕ್ಕಿಂತಲೂ ಹೆಚ್ಚು ವೀಕ್ಷಣೆಗಳು ದೊರಕಿವೆ, ಅದನ್ನು ಕೆಳಗೆ ನೋಡಬಹುದು –

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಇಟಲಿಯ ಸರ್ಕಾರದ ಯಾವುದೇ ಅಧಿಕೃತ ನಿರ್ದೇಶನ, PM ಮೆಲೋನಿಯವರ ಯಾವುದೇ ಹೇಳಿಕೆ ಅಥವಾ ಇಟಲಿಯ ಅಧಿಕಾರಿಗಳ ಯಾವುದೇ ಪ್ರಕಟಣೆಯು ಇಸ್ರೇಲಿ ಪ್ರವಾಸಿಗರ ಮೇಲೆ ಹೇರಿರುವ ಯಾವುದೇ ನಿಷೇಧವನ್ನು ಸೂಚಿಸುವುದಿಲ್ಲ. ಇಸ್ರೇಲಿ ನಾಗರಿಕರು ಈಗಲೂ 90 ದಿನಗಳವರೆಗೆ ಇಟಲಿಗೆ ವೀಸಾ-ಮುಕ್ತ ಪ್ರವೇಶವನ್ನು ಪಡೆದಿದ್ದಾರೆ.

ವಿವರಗಳು:

ಈ ಹೇಳಿಕೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಇಟಲಿಯು ಇಸ್ರೇಲಿ ಪ್ರವಾಸಿಗರನ್ನು ನಿಷೇಧಿಸಿದೆ” ಎಂಬ ಪದಗಳೊಂದಿಗೆ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಆದಾರೆ, ಅಂತಹ ನಿಷೇಧವನ್ನು ವಿಧಿಸಲಾಗಿದೆ ಎಂದು ಸೂಚಿಸುವ ಯಾವುದೇ ವರದಿಗಳು ಅಥವಾ ವಿಶ್ವಾಸಾರ್ಹ ಪುರಾವೆಗಳು ನಮಗೆ ಸಿಗಲಿಲ್ಲ. ಇಟಲಿಯ ಸರ್ಕಾರಿ ಮೂಲಗಳು, ಮೆಲೋನಿಯವರ ಹೇಳಿಕೆಗಳು ಮತ್ತು ಪ್ರಮುಖ ಮಾಧ್ಯಮಗಳಲ್ಲಿನ ಹುಡುಕಾಟಗಳಲ್ಲಿ ಅಂತಹ ಯಾವುದೇ ನಿಷೇಧವನ್ನು ದೃಢೀಕರಿಸಲಾಗಿಲ್ಲ.

ಇದರ ನಂತರ, ಸೆಪ್ಟೆಂಬರ್ 21, 2025ರಂದು ಇಟಲಿಯು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮೇಳವಾದ TTG ಟ್ರಾವೆಲ್ ಎಕ್ಸ್‌ಪೀರಿಯೆನ್ಸ್ 2025ರಿಂದ ಇಸ್ರೇಲ್ ಅನ್ನು ನಿಷೇಧಿಸಿದ ಬಗ್ಗೆ WAFAದ ಒಂದು ವರದಿಯನ್ನು ನಾವು ನೋಡಿದೆವು. ಈ ಮೇಳವು ಅಕ್ಟೋಬರ್ 8 ರಿಂದ 10 ರವರೆಗೆ ರಿಮಿನಿ ನಗರದಲ್ಲಿ ನಡೆಯಿತು ಮತ್ತು “ನಗರದ ಪುರಸಭೆಯಿಂದ ಹೆಚ್ಚುತ್ತಿರುವ ಒತ್ತಡ ಮತ್ತು ಇಸ್ರೇಲ್ ನ ಗಾಜಾ ಸ್ಟ್ರಿಪ್ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿಯ ಬಗ್ಗೆ ವ್ಯಾಪಕ ಸಾರ್ವಜನಿಕ ಆಕ್ರೋಶದ ನಡುವೆ” ಈ ಕ್ರಮವು ಬಂದಿತು.

“ಹೆಚ್ಚುತ್ತಿರುವ ಭದ್ರತಾ ಸಮಸ್ಯೆಗಳು ಮತ್ತು ದೊಡ್ಡ ಪ್ರಮಾಣದ ಪ್ರತಿಭಟನೆಗಳ ಅಪಾಯದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ರಿಮಿನಿಯ ಮೇಯರ್ ಜಮಿಲ್ ಸಡೆಘೋಲ್ವಾಡ್ ಹೇಳಿದ್ದಾರೆ ಎಂದು ವರದಿಯು ಉಲ್ಲೇಖಿಸುತ್ತದೆ. ಈ ಕ್ರಮವು “ಪ್ಯಾಲೆಸ್ಟೈನ್‌ ನೊಂದಿಗಿನ ಒಗ್ಗಟ್ಟನ್ನು ಪ್ರದರ್ಶಿಸುವ ಇಟಲಿಯಾದ್ಯಂತ ನಡೆದ ಪ್ರದರ್ಶನಗಳ ಅಲೆಯನ್ನು ಅನುಸರಿಸುತ್ತದೆ”. ಆದರೆ, ಇಟಲಿಯು ದೇಶಾದ್ಯಂತ ಇಸ್ರೇಲಿ ಪ್ರವಾಸಿಗರನ್ನು ನಿಷೇಧಿಸಿರುವ ಬಗ್ಗೆ ನಮಗೆ ಏನೂ ಸಿಕ್ಕಿಲ್ಲ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಮುಂದೆ, ಜನವರಿ 8, 2026 ರಂದು ಪ್ರಕಟವಾದ ಒಂದು AP ವರದಿಯ ಪ್ರಕಾರ, ಇಟಲಿಯ ವಾಯುಯಾನ ಪ್ರಾಧಿಕಾರ, ENAC, ಮಿಲಾನ್ ಮಾಲ್ಪೆನ್ಸಾ ವಿಮಾನ ನಿಲ್ದಾಣದಲ್ಲಿ ಪ್ಯಾಲೆಸ್ಟೀನಿಯನ್ ಪರ ಪ್ರತಿಭಟನೆಯನ್ನು ಖಂಡಿಸಿದೆ, ಇದರಲ್ಲಿ ಕಾರ್ಯಕರ್ತರು ಪ್ರಯಾಣಿಕರನ್ನು ಟೆಲ್ ಅವಿವ್‌ಗೆ ಹೋಗುವ ವಿಮಾನ ಹತ್ತದಂತೆ ತಾತ್ಕಾಲಿಕವಾಗಿ ತಡೆದರು. ENAC ಈ ಘಟನೆಯನ್ನು “ಬಹಳ ಗಂಭೀರ” ಎಂದು ವಿವರಿಸಿದೆ ಏಕೆಂದರೆ ಅದು “ಸುರಕ್ಷತೆ, ತಟಸ್ಥತೆಯ ತತ್ವಗಳು” ಮತ್ತು “ಎಲ್ಲಾ ನಾಗರಿಕರ ಚಲನಶೀಲತೆಯ ಹಕ್ಕನ್ನು” ಉಲ್ಲಂಘಿಸಿದೆ ಎಂದು ವರದಿ ಗಮನಿಸಿತು.

ಇಟಲಿಗೆ ಇಸ್ರೇಲ್ ರಾಯಭಾರಿ ಜೊನಾಥನ್ ಪೆಲೆಡ್ ಅವರೊಂದಿಗಿನ ಸಭೆಯಲ್ಲಿ ಇಟಲಿಯ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಕರು “ಮುಕ್ತವಾಗಿ ಮತ್ತು ಸುರಕ್ಷಿತವಾಗಿ” ಚಲಿಸಬಹುದೆಂಬುದನ್ನು ಖಚಿತಪಡಿಸಿಕೊಳ್ಳಲು ಇಟಲಿಯ “ಖಚಿತ ಬದ್ಧತೆ”ಯನ್ನು ENAC ಅಧ್ಯಕ್ಷ ಪಿಯರ್ಲುಯಿಗಿ ಡಿ ಪಾಲ್ಮಾ ಪುನರುಚ್ಚರಿಸಿದರು. ಇಟಲಿಯು ಇಸ್ರೇಲಿ ಪ್ರವಾಸಿಗರನ್ನು ನಿಷೇಧಿಸಿದೆ ಎಂಬುದಕ್ಕೆ ನಮಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ, ಬದಲಿಗೆ ಇಟಲಿಯ ಅಧಿಕಾರಿಗಳು ಇಸ್ರೇಲ್‌ಗೆ ಹೋಗುವ ಪ್ರಯಾಣಿಕರನ್ನು ತಡೆಯುವ ಪ್ರಯತ್ನಗಳನ್ನು ಖಂಡಿಸಿದರು. ಕೆಳಗಿನ ವರದಿಯ ಈ ಭಾಗವನ್ನು ನೋಡಿ-

ಕೊನೆಯದಾಗಿ, ಇಸ್ರೇಲಿ ಪ್ರವಾಸಿಗರನ್ನು ದೇಶದಲ್ಲಿ ಅನುಮತಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನಾವು ಇಟಲಿಯ ವೀಸಾ ಪೋರ್ಟಲ್‌ಗೆ ಹೋದೆವು. ರಾಷ್ಟ್ರೀಯತೆ, ನಿವಾಸ, ವಾಸ್ತವ್ಯದ ಅವಧಿ ಮತ್ತು ವಾಸ್ತವ್ಯದ ಕಾರಣದ ಕುರಿತು 4 ಮೂಲಭೂತ ಪ್ರಶ್ನೆಗಳನ್ನು ಭರ್ತಿ ಮಾಡಿದ ನಂತರ, ಇಸ್ರೇಲಿ ಪ್ರವಾಸಿಗರಿಗೆ ಈಗಲೂ ಸ್ವಾಗತವಿದೆ ಮತ್ತು ಅವರಿಗೆ ವೀಸಾ ಅಗತ್ಯವಿಲ್ಲ (90 ದಿನಗಳವರೆಗಿನ ವಾಸ್ತವ್ಯಕ್ಕೆ) ಎಂದು ಫಲಿತಾಂಶಗಳು ಹೇಳಿದವು. ಇಸ್ರೇಲ್‌ನಿಂದ ಬರುವ ಪ್ರವಾಸಿಗರಿಗೆ ಇನ್ನೂ ಇಟಲಿಯಲ್ಲಿ ಅವಕಾಶವಿದೆ ಮತ್ತು ಅಂತಹ ಯಾವುದೇ ನಿಷೇಧವನ್ನು ವಿಧಿಸಲಾಗಿಲ್ಲ ಎಂದು ಇದು ಸಾಬೀತುಪಡಿಸುತ್ತದೆ. ಫಲಿತಾಂಶಗಳ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

ಆದ್ದರಿಂದ, ಹೇಳಿಕೆ ಸುಳ್ಳು.


ಇದನ್ನೂ ಓದಿ:

ಅರ್ಥ್ ಸಾಂಗ್ ಸಮಯದಲ್ಲಿ ಮೈಕೆಲ್ ಜಾಕ್ಸನ್ ಅವರ ಮೇಲೆ ಬಂದೂಕು ಇರಿಸಲಾಗಿತ್ತು ಎಂದು ನಿಜವಾಗಿಯೂ ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಫಿಫಾ ವಿಶ್ವಕಪ್‌ನಲ್ಲಿ ಇರಾನ್ ಬದಲಿಗೆ ಇಟಲಿಯನ್ನು ನೇಮಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಸೂಚಿಸಿದ್ದಾರೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published.