ಹೇಳಿಕೆ/Claim :ಡೊನಾಲ್ಡ್ ಟ್ರಂಪ್ ಫಿಫಾವನ್ನು ಇರಾನ್ ಅನ್ನು ವಿಶ್ವಕಪ್‌ನಿಂದ ತೆಗೆದುಹಾಕಿ ಇಟಲಿಯನ್ನು ಸೇರಿಸುವಂತೆ ವಿನಂತಿಸಿದ್ದಾರೆ.
ಕಡೆನುಡಿ/Conclusion : ಈ ಹೇಳಿಕೆ ಸುಳ್ಳು. ಟ್ರಂಪ್ ಆಡಳಿತದ ಹಿರಿಯ ಅಧಿಕಾರಿ ಪಾವ್ಲೊ ಜಂಪೊಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರೂ, ಡೊನಾಲ್ಡ್ ಟ್ರಂಪ್ ಸ್ವತಃ ಯಾವುದೇ ಔಪಚಾರಿಕ ವಿನಂತಿಯನ್ನು ಮಾಡಲಿಲ್ಲ. ಇಟಲಿ ಈ ಪ್ರಸ್ತಾಪವನ್ನು ತಿರಸ್ಕರಿಸಿತು, ಫಿಫಾ ಕೂಡ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಮತ್ತು ಇರಾನ್ ಪಂದ್ಯಾವಳಿಗೆ ಅರ್ಹತೆಯನ್ನು ಉಳಿಸಿಕೊಂಡಿದೆ.
ರೇಟಿಂಗ್/Rating : ಸುಳ್ಳು. ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ
******************************************************
ಮುಂಬರುವ 2026ರ FIFA ವಿಶ್ವಕಪ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ವಿನಿಮಯಕ್ಕೆ ವಿನಂತಿಸಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. “ಡೊನಾಲ್ಡ್ ಟ್ರಂಪ್ ಫಿಫಾವನ್ನು ವಿಶ್ವಕಪ್‌ನಿಂದ ಇರಾನ್ ಅನ್ನು ತೆಗೆದುಹಾಕಿ ಬದಲಾಗಿ ಇಟಲಿಯನ್ನು ಸೇರಿಸುವಂತೆ ವಿನಂತಿಸಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ‘pubity’ ಎಂಬ ದೃಢೀಕೃತ X ಬಳಕೆದಾರರು ಅಂತಹ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ಗೆ ಎರಡು ಚಿತ್ರಗಳನ್ನು ಲಗತ್ತಿಸಲಾಗಿದೆ, ಒಂದು ಟ್ರಂಪ್ ರವರದ್ದು, ಮತ್ತೊಂದು ಫಿಫಾ ಕಪ್‌ನ ಪಕ್ಕದಲ್ಲಿರುವ ಫುಟ್‌ಬಾಲ್ ನದ್ದು. ಪೋಸ್ಟ್ ಅನ್ನು ಕೆಳಗೆ ನೋಡಬಹುದು –
Donald Trump has requested FIFA to remove Iran from the World Cup and replace them with Italy. pic.twitter.com/cShGVhyWii
— Pubity (@pubity) April 22, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ನೋಡಬಹುದು.
🚨 JUST IN: Donald Trump has reportedly asked FIFA to replace Iran with Italy at the World Cup.
Iran have already qualified, Italy didn’t.[@PolymarketSport] pic.twitter.com/3hU5IMpYAV
— MatchDay Central (@MatchDCentral) April 23, 2026
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಟ್ರಂಪ್ ಆಡಳಿತದ ಹಿರಿಯ ಅಧಿಕಾರಿ ಪಾವ್ಲೊ ಜಂಪೊಲ್ಲಿ ಈ ಬದಲಿಯನ್ನು ಸೂಚಿಸಿದರಾದರೂ, ಅಧ್ಯಕ್ಷ ಟ್ರಂಪ್ ಸ್ವತಃ ಅದನ್ನು ಔಪಚಾರಿಕವಾಗಿ ವಿನಂತಿಸಲಿಲ್ಲ. ಇಟಲಿ ಸ್ವತಃ ಬದಲಾವಣೆಯನ್ನು ತಿರಸ್ಕರಿಸಿದೆ, ಫಿಫಾ ಕೂಡ ಏನನ್ನೂ ಬದಲಾಯಿಸಿಲ್ಲ ಮತ್ತು ಇರಾನ್ ಅರ್ಹವಾಗಿಯೇ ಉಳಿದಿದೆ
ವಿವರಗಳು:
ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಟ್ರಂಪ್ ಇಟಲಿಗಾಗಿ ಇರಾನ್ ಅನ್ನು ತೆಗೆದುಹಾಕಲು ಫಿಫಾವನ್ನು ವಿನಂತಿಸಿತೇ” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. “ಮುಂಬರುವ ವಿಶ್ವಕಪ್‌ನಲ್ಲಿ ಇರಾನ್ ಬದಲಾಗಿ ಇಟಲಿಯನ್ನು ಆಡಿಸಲು ಡೊನಾಲ್ಡ್ ಟ್ರಂಪ್ ಅವರ ರಾಯಭಾರಿ ಫಿಫಾವನ್ನು ಕೇಳಿಕೊಂಡಿದ್ದಾರೆ” ಎಂದು ದ ಗಾರ್ಡಿಯನ್ ಪ್ರಕಟಿಸಿದ ಒಂದು ವರದಿಯು ಉಲ್ಲೇಖಿಸಿದೆ. US ವಿಶೇಷ ರಾಯಭಾರಿ ಪಾವ್ಲೊ ಜಂಪೊಲ್ಲಿ ಫೈನಾನ್ಷಿಯಲ್ ಟೈಮ್ಸ್‌ಗೆ “ವಿಶ್ವಕಪ್‌ನಲ್ಲಿ ಇರಾನ್ ಬದಲಾಗಿ ಇಟಲಿಯನ್ನು ಸೇರಿಸಬೇಕೆಂದು ನಾನು ಟ್ರಂಪ್ ಮತ್ತು [ಫಿಫಾ ಅಧ್ಯಕ್ಷ ಜಿಯಾನಿ] ಇನ್ಫಾಂಟಿನೊಗೆ ಸೂಚಿಸಿದ್ದೇನೆ ಎಂದು ನಾನು ದೃಢೀಕರಿಸುತ್ತೇನೆ” ಎಂದು ಹೇಳಿದರು ಎಂದು ವರದಿಯು ತಿಳಿಸುತ್ತದೆ.
ಆತ ಮುಂದುವರೆದು “ನಾನು ಇಟಾಲಿ ಮೂಲದವನು ಮತ್ತು ಅಮೆರಿಕ ಆಯೋಜಿಸುವ ಪಂದ್ಯಾವಳಿಯಲ್ಲಿ ಅಜ್ಜುರಿಯನ್ನು ನೋಡುವುದು ಒಂದು ಕನಸಾಗಿದೆ” ಎಂದು ಹೇಳುತ್ತಾರೆ. ನಾಲ್ಕು ಪ್ರಶಸ್ತಿಗಳೊಂದಿಗೆ, ಅವರು ಸೇರ್ಪಡೆಗೆ ಸಮರ್ಥನೆ ನೀಡುವ ಇತಿಹಾಸವನ್ನು ಹೊಂದಿದ್ದಾರೆ.” “ತಮ್ಮ ಪಂದ್ಯಗಳನ್ನು ಅಮೆರಿಕದಿಂದ ಮೆಕ್ಸಿಕೊಕ್ಕೆ ಸ್ಥಳಾಂತರಿಸುವ ಬಗ್ಗೆ ಫಿಫಾದಿಂದ ಪ್ರತಿಕ್ರಿಯೆಯನ್ನು ಪಡೆದ ನಂತರವೇ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡದ ಭಾಗವಹಿಸುವಿಕೆಯನ್ನು ನಿರ್ಧರಿಸುವುದಾಗಿ ಇರಾನ್ ಈ ಹಿಂದೆ ಏಪ್ರಿಲ್‌ನಲ್ಲಿ ಹೇಳಿತ್ತು” ಎಂದು ನಮಗೆ ತಿಳಿದುಬಂತು. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಮುಂದೆ, ಇಟಲಿಯು ನಿಜವಾಗಿಯೂ ಇರಾನ್ ನ ಬದಲಿಯಾಗಬಹುದೋ ಇಲ್ಲವೋ ಎಂಬುದರ ಕುರಿತು ಟ್ರಂಪ್ ಅವರ ನಿಜವಾದ ಹೇಳಿಕೆಗಳು ನಮಗೆ ದೊರಕಿದವು. ANI ವರದಿಯ ಪ್ರಕಾರ, “ನಾನು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ” ಎಂದು ಟ್ರಂಪ್ ಮಾಧ್ಯಮಗಳಿಗೆ ಹೇಳಿದರು ಮತ್ತು ಏನನ್ನೂ ಅನುಮೋದಿಸಲಿಲ್ಲ. ಮತ್ತೊಂದೆಡೆ, US ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ “ಇರಾನ್‌ನೊಂದಿಗಿನ ಸಮಸ್ಯೆ ಕ್ರೀಡಾಪಟುಗಳಲ್ಲ… ಅವರು IRGC ಭಯೋತ್ಪಾದಕರ ಗುಂಪನ್ನು ನಮ್ಮ ದೇಶಕ್ಕೆ ತಂದು ಅವರು ಪತ್ರಕರ್ತರು ಅಥವಾ ಆಟಗಾರರ ತರಬೇತುದಾರರು ಎಂದು ನಟಿಸಲು ಸಾಧ್ಯವಿಲ್ಲ” ಎಂದು ಹೇಳಿದರು. ಈ ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಶ್ವೇತಭವನದ ಅಧಿಕೃತ ಯೂಟ್ಯೂಬ್ ವಹಿನಿಯಲ್ಲಿ ಏಪ್ರಿಲ್ 23, 2026ರಂದು ಟ್ರಂಪ್ ಮತ್ತು ಮಾರ್ಕೊ ರೂಬಿಯೊ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಸಂಪೂರ್ಣ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಾಗಿತ್ತು. ಪತ್ರಕರ್ತರು ಪ್ರಶ್ನೆಯನ್ನು ಕೇಳುತ್ತಾರೆ ಮತ್ತು ಟ್ರಂಪ್ ಅವರ ಪ್ರತಿಕ್ರಿಯೆ ಸಮಯಮುದ್ರೆ 19:28ರಿಂದ ಪ್ರಾರಂಭವಾಗಿ, ರೂಬಿಯೊ 19:56ರಿಂದ ಮಾತನಾಡಲು ಪ್ರಾರಂಭಿಸುವುದನ್ನು ಕಾಣಬಹುದು.
ಇದರ ನಂತರ, ಏಪ್ರಿಲ್ 25, 2026ರಂದು ನವೀಕರಿಸಲಾದ ಇಂಡಿಯಾ ಟುಡೇ ವರದಿಯಿಂದ ನಮಗೆ ತಿಳಿದುಬಂದದ್ದೇನೆಂದರೆ, “ಈ ವಿಷಯವು ಅವಾಸ್ತವಿಕ ಮಾತ್ರವಲ್ಲದೆ ಅವಮಾನಕರವೂ ಆಗಿದೆ ಎಂದು ಇಟಾಲಿಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಲುಸಿಯಾನೊ ಬುವೊನ್‌ಫಿಗ್ಲಿಯೊ ಹೇಳಿದರು.” ಇಟಲಿಯ ಕ್ರೀಡಾ ಸಚಿವೆ ಆಂಡ್ರಿಯಾ ಅಬೋಡಿ ಕೂಡ ಅದೇ ಭಾವನೆಯನ್ನು ಪ್ರತಿಧ್ವನಿಸುತ್ತಾ, ““ಇದು ಸೂಕ್ತವಲ್ಲ. ನೀವು ಮೈದಾನದಲ್ಲಿ ಅರ್ಹತೆ ಪಡೆಯಬೇಕು” ಎಂದು ಹೇಳಿದರು. “ಫೀಫಾ ಸಹ ಪಂದ್ಯಾವಳಿಯಲ್ಲಿ ಇರಾನ್ ಉಪಸ್ಥಿತಿಯನ್ನು ಬೆಂಬಲಿಸುವ ಇನ್ಫಾಂಟಿನೊ ರವರ ಹಿಂದಿನ ಹೇಳಿಕೆಗಳನ್ನು ಸೂಚಿಸುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ” ಎಂದು ಕೂಡ ವರದಿಯು ಗಮನಿಸಿತು.
ಏಪ್ರಿಲ್ 15, 2026ರಂದು ಪ್ರಕಟವಾದ CNBC ವರದಿಯ ಪ್ರಕಾರ, ಇರಾನ್ ತಂಡ “ಖಂಡಿತವಾಗಿಯೂ ಬರುತ್ತಿದೆ” ಎಂದು ಫೀಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಹೇಳಿದರು. ಈ ವಿಷಯದ ಕುರಿತು ಯಾವುದೇ ಇತ್ತೀಚಿನ ಹೇಳಿಕೆಗಳಿವೆಯೇ ಎಂದು ನಾವು ಹುಡುಕಿದಾಗ, ಕೆಳಗೆ ಕಾಣಬಹುದಾದಂತೆ ಇರಾನ್ ಭಾಗವಹಿಸಲಿದೆ ಎಂದು ಫೀಫಾ X ನಲ್ಲಿ ಘೋಷಿಸಿದೆ. ಆದ್ದರಿಂದ ಇಟಲಿ ಇರಾನಿನ ಬದಲಾಗಿ ಆಡುವುದಿಲ್ಲ.
FIFA President Gianni Infantino addresses the 76th FIFA Congress in Vancouver.
Watch the event live 👇
— FIFA (@FIFAcom) April 30, 2026
ಆದ್ದರಿಂದ, ಹೇಳಿಕೆ ಸುಳ್ಳು.
ಇದನ್ನೂ ಓದಿ:
ಇರಾನ್ USS ಜೆರಾಲ್ಡ್ ಆರ್.ಫೋರ್ಡ್ ಮೇಲೆ 17 ದಿಕ್ಕುಗಳಿಂದ ದಾಳಿ ಮಾಡಿದೆ ಎಂದು ಟ್ರಂಪ್ ಹೇಳಿದರೇ? ಸತ್ಯ ಪರಿಶೀಲನೆ
ಇರಾನ್ ಸಂಘರ್ಷದ ಮಧ್ಯೆ ಭಾಷಣ ಮಾಡುವಾಗ ಡೊನಾಲ್ಡ್ ಟ್ರಂಪ್ ನಿಜವಾಗಿಯೂ ಕುಸಿದುಬಿದ್ದರೇ? ಸತ್ಯ ಪರಿಶೀಲನೆ
