ಏರ್ ಇಂಡಿಯಾ ಜುಲೈ ವರೆಗಿನ ತನ್ನ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ನಿಜವಾಗಿಯೂ ರದ್ದುಗೊಳಿಸಿದೆಯೇ? ಸತ್ಯ ಪರಿಶೀಲನೆ

ಏರ್ ಇಂಡಿಯಾ ಜುಲೈ ವರೆಗಿನ ತನ್ನ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ನಿಜವಾಗಿಯೂ ರದ್ದುಗೊಳಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ​ಇಂಧನ ಕೊರತೆಯಿಂದಾಗಿ ಏರ್ ಇಂಡಿಯಾ ಜುಲೈ ವರೆಗೆ ತನ್ನ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿದೆ.

ಕಡೆನುಡಿ/Conclusion: ಹೇಳಿಕೆ ಸುಳ್ಳು. ಏರ್ ಇಂಡಿಯಾ ಇಂಧನ ಕೊರತೆಯಿಂದಾಗಿ ಜುಲೈ ವರೆಗೆ ತನ್ನ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿಲ್ಲ. ಏರ್ ಇಂಡಿಯಾ CEO ಮತ್ತು MD ಕ್ಯಾಂಪ್‌ಬೆಲ್ ವಿಲ್ಸನ್ ಕೆಲವು ಮಾರ್ಗಗಳಲ್ಲಿ ಉದ್ದೇಶಿತ ಕಡಿತವನ್ನು ದೃಢಪಡಿಸಿದ್ದರೂ, ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ರೇಟಿಂಗ್/Rating: ಸುಳ್ಳು

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ

******************************************************

ಏರ್ ಇಂಡಿಯಾ ತನ್ನ ಎಲ್ಲಾ ಅಂತಾರಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸುತ್ತಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘GBX_Press’ ಅಂತಹ ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, ಶೀರ್ಷಿಕೆ ಹೀಗಿದೆ: “ಬ್ರೇಕಿಂಗ್: ನಿರ್ಬಂಧಗಳು ಮತ್ತು ಇರಾನ್ ಯುದ್ಧದ ಕಾರಣ ಇಂಧನ ಕೊರತೆಯಿಂದಾಗಿ ಜುಲೈ ವರೆಗಿನ ತನ್ನ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ಏರ್ ಇಂಡಿಯಾ ರದ್ದುಗೊಳಿಸಿದೆ.”ಏರ್ ಇಂಡಿಯಾ ವಿಮಾನವು ಆಕಾಶದಲ್ಲಿ ಹಾರುತ್ತಿರುವ ಒಂದು ಸಾಮಾನ್ಯ ಚಿತ್ರವನ್ನು ಪೋಸ್ಟ್‌ಗೆ ಲಗತ್ತಿಸಲಾಗಿದೆ”. ಪೋಸ್ಟ್ ಅನ್ನು ಕೆಳಗೆ ನೋಡಿ-

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಏರ್ ಇಂಡಿಯಾ ಜುಲೈ ವರೆಗೆ ತನ್ನ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿಲ್ಲ. ಈ ವಿಮಾನಯಾನ ಸಂಸ್ಥೆಯು ಕೆಲವು ಮಾರ್ಗಗಳಲ್ಲಿ ಸೀಮಿತ ಹೊಂದಾಣಿಕೆಗಳನ್ನು ಮಾಡುತ್ತಿದ್ದು ಸೇವೆಗಳನ್ನು ಕಡಿಮೆ ಮಾಡುತ್ತಿದೆಯಾದರೂ, ಪ್ರತಿ ಅಂತಾರಾಷ್ಟ್ರೀಯ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಸೂಚಿಸುವ ಯಾವುದೇ ಅಧಿಕೃತ ದೃಢೀಕರಣ ಅಥವಾ ವಿಶ್ವಾಸಾರ್ಹ ಪುರಾವೆಗಳಿಲ್ಲ.

ವಿವರಗಳು:

ಈ ವಿಷಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಏರ್ ಇಂಡಿಯಾ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸುತ್ತಿದೆ” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. NDTVಯ ಒಂದು ವರದಿಯ ಪ್ರಕಾರ, ಜೆಟ್ ಇಂಧನ ಬೆಲೆ ಏರಿಕೆಯ ನಡುವೆ ಏರ್ ಇಂಡಿಯಾ ಜುಲೈ ವರೆಗೆ ಅಂತಾರಾಷ್ಟ್ರೀಯ ವಿಮಾನಗಳನ್ನು ಕಡಿತಗೊಳಿಸಲಿದೆ. CEO ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕ್ಯಾಂಪ್‌ಬೆಲ್ ವಿಲ್ಸನ್ ಅವರ ಹೇಳಿಕೆಯನ್ನು ವರದಿ ಉಲ್ಲೇಖಿಸುತ್ತದೆ, “ನಾವು ಏಪ್ರಿಲ್ ಮತ್ತು ಮೇ ತಿಂಗಳುಗಳಿಗೆ ಹಾರಾಟಗಳನ್ನು ಸ್ವಲ್ಪ ಕಡಿಮೆ ಮಾಡಿದ್ದೇವೆ… ವಾಯುಪ್ರದೇಶ ಮುಚ್ಚುವಿಕೆಗಳು ಮತ್ತು ದೀರ್ಘ ಹಾರಾಟ ಮಾರ್ಗಗಳೊಂದಿಗೆ ಜೆಟ್ ಇಂಧನ ಬೆಲೆಗಳಲ್ಲಿ ಭಾರಿ ಏರಿಕೆಯಿಂದಾಗಿ ನಮ್ಮ ಅನೇಕ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯನಿರ್ವಹಣೆಯು ಲಾಭದಾಯಕವಲ್ಲದಂತಾಗಿದೆ”. ಸಂಪೂರ್ಣ ರದ್ದತಿಯ ಬಗ್ಗೆ ಏನನ್ನೂ ಉಲ್ಲೇಖಿಸಲಾಗಿಲ್ಲ, ವರದಿಯ ಒಂದು ಭಾಗವನ್ನು ಕೆಳಗೆ ನೋಡಿ

ಮೇ-ಜುಲೈಯಲ್ಲಿ ಏರ್ ಇಂಡಿಯಾ ತನ್ನ ಕೆಲವು ಅಂತಾರಾಷ್ಟ್ರೀಯ ವಿಮಾನಗಳನ್ನು ಕಡಿತಗೊಳಿಸಲಿದೆ, ಆ ಸಂಪೂರ್ಣವಾಗಿಯಲ್ಲ ಎಂದು ಮತ್ತೊಂದು ಹಿಂದೂಸ್ತಾನ್ ಟೈಮ್ಸ್‌ನ ವರದಿಯೂ ಬರೆಯುತ್ತದೆ. “ಮಾರ್ಚ್ 31, 2026 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾ ಗ್ರೂಪ್ ₹22,000 ಕೋಟಿಗೂ ಹೆಚ್ಚು ನಷ್ಟವನ್ನು ಅನುಭವಿಸಿದೆ ಎಂದು ಅಂದಾಜಿಸಲಾಗಿದೆ” ಎಂದು ವರದಿಯು ಹೇಳುತ್ತದೆ. ಇದಲ್ಲದೆ, ಹೆಚ್ಚಿದ ವಿಮಾನ ದರಗಳು ಮತ್ತು ಇಂಧನ ಸರ್‌ಚಾರ್ಜ್‌ ವಿಧಿಸುವಿಕೆಯಂತಹ ಬೆಲೆ-ಸಂಬಂಧಿತ ಕ್ರಮಗಳನ್ನು ಕೈಗೊಂಡಿದ್ದರೂ ಸಹ, ಏನೂ ಸಹಾಯವಾಗಲಿಲ್ಲ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಏರ್ ಇಂಡಿಯಾದ ವೆಬ್‌ಸೈಟ್ ಮತ್ತು ಇತ್ತೀಚಿನ ಅಪ್ಡೇಟ್ ಗಳು ಸಂಪೂರ್ಣ ಅಂತಾರಾಷ್ಟ್ರೀಯ ಸ್ಥಗಿತಗೊಳಿಸುವಿಕೆಯ ಕುರಿತಾದ ಘೋಷಣೆಯನ್ನು ತೋರಿಸುವುದಿಲ್ಲ. ಏಪ್ರಿಲ್ 7, 2026ರಂದು, ಏರ್ ಇಂಡಿಯಾ ಇಂಧನ ಸರ್‌ಚಾರ್ಜ್‌ ಬಗೆಗಿನ ಪರಿಷ್ಕರಣೆಗಳಿಗೆ ಸಂಬಂಧಿಸಿದ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು, ಆದರೆ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸುವ ಬಗ್ಗೆ ಏನನ್ನೂ ಉಲ್ಲೇಖಿಸಲಿಲ್ಲ.

ಡಿಜಿಟೈ ಇಂಡಿಯಾ ಅಂತಾರಾಷ್ಟ್ರೀಯ ವಿಮಾನ ಲಭ್ಯತೆಯನ್ನು ಸ್ವತಃ ಪರಿಶೀಲಿಸಿದಾಗ, ಏರ್ ಇಂಡಿಯಾ ಇನ್ನೂ ಬುಕಿಂಗ್‌ಗಳನ್ನು ಅನುಮತಿಸುತ್ತಿದೆ ಎಂದು ಕಂಡುಬಂತು. ಕೋಲ್ಕತ್ತಾದಿಂದ ಡೆನ್ಮಾರ್ಕ್‌ಗೆ ವಿಮಾನವನ್ನು ತೋರಿಸುವ ಕೆಳಗಿನ ಸ್ಕ್ರೀನ್‌ಶಾಟ್ ಅನ್ನು ಗಮನಿಸಿ, ಇದು ಮೇ ಮತ್ತು ಜುಲೈ ನಡುವೆ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿಲ್ಲ ಎಂದು ಸಾಬೀತುಪಡಿಸುತ್ತದೆ.

ಆದ್ದರಿಂದ, ಈ ಹೇಳಿಕೆಯು ಸುಳ್ಳು.


ಇದನ್ನೂ ಓದಿ:

ಈ ವೀಡಿಯೊದಲ್ಲಿ ಟೋಕಿಯೋದಲ್ಲಿ ಬಿಡುಗಡೆಯಾದ ಹೊಸ ಪ್ಲೇಸ್ಟೇಷನ್ 6 ಅನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಈ ಚಿತ್ರವು ನಿಜವಾಗಿಯೂ ಕೇರಳದಲ್ಲಿ ನಡೆದ ಫೋಟೋಶೂಟ್‌ನಲ್ಲಿ ಪ್ರಧಾನಿ ಮೋದಿಯವರನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.