ಈ ವೀಡಿಯೊದಲ್ಲಿ ಟೋಕಿಯೋದಲ್ಲಿ ಬಿಡುಗಡೆಯಾದ ಹೊಸ ಪ್ಲೇಸ್ಟೇಷನ್ 6 ಅನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊದಲ್ಲಿ ಟೋಕಿಯೋದಲ್ಲಿ ಬಿಡುಗಡೆಯಾದ ಹೊಸ ಪ್ಲೇಸ್ಟೇಷನ್ 6 ಅನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಜಪಾನ್‌ನ ಟೋಕಿಯೋದಲ್ಲಿ ಬಿಡುಗಡೆಯಾದ ಹೊಸ ಪ್ಲೇಸ್ಟೇಷನ್ 6 ಅನ್ನು ತೋರಿಸುವುದಾಗಿ ದೃಶ್ಯಾವಳಿಗಳು ಹೇಳಲಾದ.

ಕಡೆನುಡಿ/Conclusion : ಹೇಳಿಕೆ ಸುಳ್ಳು. ಮುಂಬರುವ PS6 ನ ದೃಢೀಕರಣವನ್ನು ಮೌಲ್ಯೀಕರಿಸಲು ಸೋನಿ ಇಂದ ಯಾವುದೇ ವಿಶ್ವಾಸಾರ್ಹ ಪುರಾವೆಗಳು ಅಥವಾ ಪ್ರಕಟಣೆಗಳಿಲ್ಲ. ವೀಡಿಯೊವನ್ನು AI ಬಳಸಿ ರಚಿಸಲಾಗಿದೆ ಮತ್ತು ಜಪಾನ್‌ನ ಟೋಕಿಯೋದಲ್ಲಿ ಅಂತಹ ಯಾವುದೇ ನೈಜ ಕಾರ್ಯಕ್ರಮ ನಡೆದಿಲ್ಲ.

ರೇಟಿಂಗ್/Conclusion : ಸುಳ್ಳು.


ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ಲೇಸ್ಟೇಷನ್ 6 ಅನ್ನು ಒಂದು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಂತಹ ಒಂದು ಕ್ಲಿಪ್ ಅನ್ನು “ಪ್ಲೇಸ್ಟೇಷನ್ 6 ಅನ್ನು ಇಂದು ಟೋಕಿಯೊದಲ್ಲಿ ಪ್ರದರ್ಶಿಸಲಾಗಿದೆ ಎಂದು ವರದಿಯಾಗಿದೆ” ಎಂಬ ಶೀರ್ಷಿಕೆಯೊಂದಿಗೆ ದೃಡೀಕೃತ X ಬಳಕೆದಾರ ‘DailyLoud’ ಹಂಚಿಕೊಂಡಿದ್ದಾರೆ. ವೀಡಿಯೊಗೆ 10 ಕ್ಷಣಗಳ ಒಂದು ಕ್ಲಿಪ್ ಅನ್ನು ಲಗತ್ತಿಸಲಾಗಿದೆ, ಇದರಲ್ಲಿ “PS6” ಎಂದು ಲೇಬಲ್ ಮಾಡಲಾದ ಎರಡು ಕನ್ಸೋಲ್ ಪ್ರೋಟೊಟೈಪ್ ಗಳನ್ನು ಪ್ರದರ್ಶನದಲ್ಲಿ ತೋರಿಸಲಾಗಿದೆ. ಜನಸಮೂಹವು ಸ್ಮಾರ್ಟ್‌ಫೋನ್‌ಗಳಲ್ಲಿ ಆ ಎರಡು ಯೂನಿಟ್‌ಗಳನ್ನು ಚಿತ್ರೀಕರಿಸುತ್ತಿದ್ದಾರೆ ಮತ್ತು ಪೋಸ್ಟ್ ಅನ್ನು ಕೆಳಗೆ ಕಾಣಬಹುದು –

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಪ್ರಸ್ತುತ ಸೋನಿಯಿಂದ ಪ್ಲೇಸ್ಟೇಷನ್ 6ರ ಬಿಡುಗಡೆಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಪುರಾವೆ ಅಥವಾ ಅಧಿಕೃತ ಸಂವಹನವಿಲ್ಲ. ಪ್ರಸಾರವಾಗುತ್ತಿರುವ ದೃಶ್ಯಗಳನ್ನು AI ಬಳಸಿ ರಚಿಸಲಾಗಿದೆ ಮತ್ತು ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ಯಾವುದೇ ನೈಜ-ಪ್ರಪಂಚದ ಘಟನೆಯ ಕುರಿತು ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ.

ಹೆಚ್ಚಿನ ಮಾಹಿತಿಗಾಗಿ ನಾವು ಮೊದಲು “ಟೋಕಿಯೊದಲ್ಲಿ ಪ್ಲೇಸ್ಟೇಷನ್ 6 ಪ್ರದರ್ಶನ” ಎಂಬ ಪದಗಳೊಂದಿಗೆ ಅಮ್ತರ್ಜಾಲದ ಹುಡುಕಾಟವನ್ನು ನಡೆಸಿದೆವು ಆದರೆ, ಯಾವುದೇ ಮಾಧ್ಯಮಗಳು ಅಥವಾ ಟೆಕ್/ ಗೇಮಿಂಗ್ ಸುದ್ದಿ ಪೋರ್ಟಲ್‌ಗಳಲ್ಲಿ ಯಾವುದೇ ವರದಿಗಳು ಕಂಡುಬಂದಿಲ್ಲ. ಟ್ವೀಟ್‌ಗಳನ್ನು ಮತ್ತು ಗ್ರೋಕ್‌ನ ಉತ್ತರವನ್ನು ಸಂಕ್ಷೇಪಿಸಿದ X ಟ್ರೆಂಡಿಂಗ್ ವಿಭಾಗವು ಗಮನಿಸಿರುವುದೇನೆಂದರೆ ಈ ಪೋಸ್ಟ್ ಅನ್ನು ಏಪ್ರಿಲ್ 1, 2026ರಂದು ಹಂಚಿಕೊಂಡಿರುವುದರಿಂದ, ಆ ಸಮಯವು ಏಪ್ರಿಲ್ ಫೂಲ್‌ನ ತಮಾಷೆಯ ಸೂಚಕವಾಗಿರಬಹುದು.

ಇದರ ನಂತರ, ಇತ್ತೀಚಿನ ಅಪ್ಡೇಟ್ ಗಳು ಮತ್ತು ಸುದ್ದಿಗಳ ಬಗ್ಗೆ ತಿಳಿಯಲು ನಾವು ಪ್ಲೇಸ್ಟೇಷನ್‌ನ ಅಧಿಕೃತ ಬ್ಲಾಗ್ ಪುಟವನ್ನು ಪರಿಶೀಲಿಸಿದೆವು. ಪುಟದಲ್ಲಿನ ಕೊನೆಯ ಪೋಸ್ಟ್‌ಗಳು ಏಪ್ರಿಲ್‌ ತಿಂಗಳ ಪ್ಲೇಸ್ಟೇಷನ್‌ನ ಮಾಸಿಕ ಆಟಗಳು, ಮಾರ್ಚ್ 2026ರ ಟಾಪ್ ಡೌನ್‌ಲೋಡ್‌ಗಳು ಬಗ್ಗೆ ಮತ್ತು ಅಸಾಸಿನ್ ಕ್ರೀಡ್‌ನ ಶಾಡೋಸ್‌ಗಾಗಿ ಹೊಸ PSSR ಅಪ್‌ಸ್ಕೇಲರ್ ಲಭ್ಯವಿರುವ ಬಗೆಗಿನ ಅಪ್ಡೇಟ್ ಆಗಿತ್ತು. ಇದರ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

ಫೆಬ್ರವರಿ 18, 2026ರಂದು ಪ್ರಕಟವಾದ ಪಾಲಿಗಾನ್ ವರದಿಯ ಪ್ರಕಾರ, “ಸೋನಿ ಪ್ಲೇಸ್ಟೇಷನ್ 6 ಬಿಡುಗಡೆಯನ್ನು 2028 ಅಥವಾ 2029 ಕ್ಕೆ ಮುಂದೂಡಲು ಪರಿಗಣಿಸುತ್ತಿದೆ.” “AI ಡೇಟಾಸೆಂಟರ್‌ಗಳಲ್ಲಿ ಪ್ರೊಸೆಸರ್‌ಗಳಲ್ಲಿ ಹಾಕಲು ಬೇಕಾದ ಮೆಮೊರಿ ಚಿಪ್‌ಗಳಿಗಾಗಿರುವ ಅತೀವ ಬೇಡಿಕೆ… ತೀವ್ರ ಪೂರೈಕೆ ಸಮಸ್ಯೆಗಳನ್ನು ಮತ್ತು ಆಟಗಳ ಹಾರ್ಡ್‌ವೇರ್ ಸೇರಿದಂತೆ ಎಲ್ಲಾ ರೀತಿಯ ಕಂಪ್ಯೂಟಿಂಗ್‌ನ ವೆಚ್ಚದಲ್ಲಿ ಭಾರಿ ಬೆಲೆ ಏರಿಕೆಗೆ ಕಾರಣವಾಗುತ್ತಿದೆ” ಎಂದು ವರದಿ ಗಮನಿಸಿದೆ. ಇದಲ್ಲದೆ, “ಇತ್ತೀಚಿನವರೆಗೂ ಪ್ಲೇಸ್ಟೇಷನ್ 6ಕ್ಕಾಗಿ ನವೆಂಬರ್ 2027ರ ಬಿಡುಗಡೆಯ ಯೋಜಿತವಾಗಿರುವಂತೆ ತೋರುತ್ತಿತ್ತು…” ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇದರ ನಂತರ, ಏಪ್ರಿಲ್ 3, 2026ರಂದು ಪ್ರಕಟವಾದ ಮತ್ತೊಂದು Wccftech ವರದಿಯಲ್ಲಿ “ಪ್ಲೇಸ್ಟೇಷನ್ 6 ಬಹಳ ವರ್ಷ ದೂರವೇನಿಲ್ಲ” ಎಂಬುದರ ಕುರಿತು ಬರೆಯುತ್ತದೆ, ಸೋನಿ ಈಗಾಗಲೇ “ಸನ್ನಿಹಿತ ಪೀಳಿಗೆಯ ವರ್ಗಾವಣೆ”ಯನ್ನು ದೂಡುತ್ತಿದೆ ಎಂದು ಲೀಕ್ ಗಳು ಸೂಚಿಸುತ್ತವೆ. ಇದು ಇತರ ಹ್ಯಾಂಡ್‌ಹೆಲ್ಡ್ ಪುರಾವೆಗಳೊಂದಿಗೆ “ಪ್ಲೇಸ್ಟೇಷನ್ 6 ಹ್ಯಾಂಡ್‌ಹೆಲ್ಡ್ ಅನ್ನು ಬೆಂಬಲಿಸಲು ಪವರ್ ಸೇವರ್ ಮೋಡ್ ಒಂದು ಟ್ರೋಜನ್ ಹಾರ್ಸ್ ನಂತಿದೆ” ಎಂಬುದನ್ನು ಎತ್ತಿ ತೋರುತ್ತದೆ.

ಸೋನಿಯ ಹೊಸ ಪ್ಲೇಗೋ ಸಿಸ್ಟಮ್ ಸೋನಿಯ “ಎಕ್ಸ್‌ಬಾಕ್ಸ್‌ನ ಸ್ಮಾರ್ಟ್ ಡೆಲಿವರಿ ಆವೃತ್ತಿ” ಎಂದು ವರದಿಯು ವಿವರಿಸುತ್ತದೆ, ಇದು ಕನ್ಸೋಲ್‌ಗಳು “ಅದು ಬಳಸುವ ನಿಖರವಾದ ಫೈಲ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡಲು” ಅವಕಾಶ ನೀಡುತ್ತದೆ. ಈ ವೈಶಿಷ್ಟ್ಯವು ಅಸ್ತಿತ್ವದಲ್ಲಿರಲು ಕಾರಣ  “ಈ ‘ಮೋಡ್’ ಹೊಸ ಕನ್ಸೋಲ್‌ನ ಸಂಪೂರ್ಣ ಬೇಸ್‌ಗಳಾಗಿರಲಿತ್ತು”. ಆದರೆ, ಏಪ್ರಿಲ್ 1, 2026ರಂದು ಟೋಕಿಯೊದಲ್ಲಿ PS6 ಅನ್ನು ಲಾಂಚ್ ಮಾಡುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಕೊನೆಯದಾಗಿ, ನಾವು ಹೇಳಿಕೆಯಲ್ಲಿ ಹಂಚಿಕೊಂಡ ಕ್ಲಿಪ್ ಅನ್ನು ಡೌನ್‌ಲೋಡ್ ಮಾಡಿ, ಅದನ್ನು ಹೈವ್ ಮಾಡರೇಶನ್‌ನ AI ಡಿಟೆಕ್ಟರ್ ನಲ್ಲಿ ಪರಿಶೀಲಿಸಿದೆವು. ಈ ವೀಡಿಯೊ 57% ದಷ್ಟು AI ರಚಿತವಾಗಿರುವ ಸಾಧ್ಯತೆಯಿದೆ ಮತ್ತು ಕೆಲವು ಭಾಗಗಳು 97.8% AI ರಚಿತವಾಗಿವೆ ಎಂದು ಫಲಿತಾಂಶಗಳು ಸಾಬೀತುಪಡಿಸಿದವು. ಫಲಿತಾಂಶಗಳನ್ನು ಕೆಳಗೆ ನೋಡಿ-

ಹೀಗಾಗಿ, ಹೇಳಿಕೆ ಸುಳ್ಳು.


ಇದನ್ನೂ ಓದಿ:

ಇರಾನ್, ಅದರ ತೈಲ ಖರೀದಿದಾರರು ಅಥವಾ ಶಸ್ತ್ರಾಸ್ತ್ರ ಪೂರೈಕೆದಾರರಿಗೆ ಸುಜಾತಾ ಶರ್ಮಾ ಬೆದರಿಕೆ ಹಾಕಿದ್ದಾರೆಯೇ? ಸತ್ಯ ಪರಿಶೀಲನೆ

ಈ ಚಿತ್ರವು MK ಸ್ಟಾಲಿನ್ ಅವರ DMK ರ‍್ಯಾಲಿಯಲ್ಲಿ ಪಾಕಿಸ್ತಾನ ಧ್ವಜಗಳನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published.