ಇರಾನ್, ಅದರ ತೈಲ ಖರೀದಿದಾರರು ಅಥವಾ ಶಸ್ತ್ರಾಸ್ತ್ರ ಪೂರೈಕೆದಾರರಿಗೆ ಸುಜಾತಾ ಶರ್ಮಾ ಬೆದರಿಕೆ ಹಾಕಿದ್ದಾರೆಯೇ? ಸತ್ಯ ಪರಿಶೀಲನೆ

ಇರಾನ್, ಅದರ ತೈಲ ಖರೀದಿದಾರರು ಅಥವಾ ಶಸ್ತ್ರಾಸ್ತ್ರ ಪೂರೈಕೆದಾರರಿಗೆ ಸುಜಾತಾ ಶರ್ಮಾ ಬೆದರಿಕೆ ಹಾಕಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿರುವ (ಮಾರ್ಕೆಟಿಂಗ್ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ ಅವರು ಇರಾನ್ ಮತ್ತು ಅದರ ತೈಲ ಖರೀದಿದಾರರು ಮತ್ತು ಶಸ್ತ್ರಾಸ್ತ್ರ ಪೂರೈಕೆದಾರರಿಗೆ ಬೆದರಿಕೆ ಹಾಕಿದ್ದಾರೆ.

ಕಡೆನುಡಿ/Conclusion :ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಈ ದೃಶ್ಯಾವಳಿಗಳು ಅಧಿಕೃತವಾಗಿದ್ದು, ಮಾರ್ಚ್ 12, 2026ರಂದು ನಡೆದ ‘ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ್-ಸಚಿವಾಲಯ ಬ್ರೀಫಿಂಗ್’ ನಿಂದ ತೆಗೆದುಕೊಳ್ಳಲಾಗಿದೆ, ಆದರೆ ಆಡಿಯೊವನ್ನು AI ಬಳಸಿ ಮಾರ್ಪಾಟು ಮಾಡಲಾಗಿದೆ. ಈ ಬ್ರೀಫಿಂಗ್‌ನಲ್ಲಿ ಸುಜಾತಾ ಶರ್ಮಾ ಅಥವಾ ಇತರ ಯಾವುದೇ ಭಾರತೀಯ ಅಧಿಕಾರಿಗಳು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು. Five rating

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರ್ಕೆಟಿಂಗ್ ಮತ್ತು ತೈಲ ಸಂಸ್ಕರಣಾಗಾರ) ಅಗಿರುವ ಸುಜಾತಾ ಶರ್ಮಾ ಇರಾನ್‌ಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಹೇಳಿಕೆಯನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. X ಬಳಕೆದಾರ ‘aliabbasikhan39’ ಇರಾನಿನ ಅಧಿಕಾರಿಗಳಾದ @araghchi ಮತ್ತು @drpezeshkian ಅವರನ್ನು ಉದ್ದೇಶಿಸಿ ಇಂತಹ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. “ಭಾರತೀಯ ವಾಣಿಜ್ಯ ಹಡಗುಗಳ ಮೇಲಿನ ಇರಾನಿನ ಭಯೋತ್ಪಾದಕ ದಾಳಿಗೆ ಉತ್ತರಿಸದಿರುವುದಿಲ್ಲ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ನಮಗೆ ಭರವಸೆ ನೀಡಿದ್ದಾರೆ. ಇಂದಿನಿಂದ, ಇರಾನಿನ ತೈಲವನ್ನು ಪಡೆಯುವ ಎಲ್ಲಾ ದೇಶಗಳು ಮತ್ತು ಭಯೋತ್ಪಾದಕ ಇರಾನೀ ಆಡಳಿತಕ್ಕೆ ಅಸ್ತ್ರ-ಶಸ್ತ್ರಗಳನ್ನು ಒದಗಿಸುವ ದೇಶಗಳು ನಮ್ಮ ಗುರಿಯಾಗಿರುತ್ತವೆ.” ಎಂದು ಸುಜಾತಾ ಶರ್ಮಾ ಹೇಳಿದ್ದಾರೆಂದು ಈ ಪೋಸ್ಟ್ ನಲ್ಲಿ  ಹೇಳಿಕೊಳ್ಳಲಾಗಿದೆ –

ಈ ಪೋಸ್ಟ್‌ನಲ್ಲಿ ಆಕೆ ಅಧಿಕೃತ ಬ್ರೀಫಿಂಗ್‌ನಲ್ಲಿ ಈ ಘೋಷಣೆ ಮಾಡಿದ್ದಾರೆಂದು ಹೇಳಲಾದ 39 ಕ್ಷಣಗಳ ವೀಡಿಯೊ ಕ್ಲಿಪ್ ಕೂಡ ಸೇರಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ-

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸಂಪೂರ್ಣವಾಗಿ ಸುಳ್ಳು ಎಂದು ಕಂಡುಕೊಂಡಿತು. ವೀಡಿಯೊದಲ್ಲಿನ ದೃಶ್ಯಗಳು ನಿಜವಾಗಿದ್ದರೂ, ಆಡಿಯೊವನ್ನು ಕೃತಕವಾಗಿ AI ಬಳಸಿ ರಚಿಸಲಾಗಿದೆ. ಸುಜಾತಾ ಶರ್ಮಾ ಮತ್ತು ಇತರ ಭಾರತೀಯ ಅಧಿಕಾರಿಗಳು ಹೇಳಿಕೆಯಲ್ಲಿ ತೋರಿಸಿರುವಂತೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ಈ ವಿಷಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಇರಾನ್ ಬಗ್ಗೆ ಸುಜಾತಾ ಶರ್ಮಾ ಮಾತುಗಳು” ಎಂಬ ಪದಗಳೊಂದಿಗೆ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ಅಧಿಕೃತ ಸರ್ಕಾರಿ ಮೂಲಗಳು ಕಂಡುಬಂದವು, ಪತ್ರಿಕಾ ಮಾಹಿತಿ ಬ್ಯೂರೋ (PIB) ಸತ್ಯ ಪರಿಶೀಲನಾ ಘಟಕವು ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ “ಡಿಜಿಟಲ್ ಮಾಧ್ಯಮದಲ್ಲಿ ಕುಶಲತೆಯಿಂದ ತಿದ್ದಲಾದ” AI ಡೀಪ್‌ಫೇಕ್ ಎಂದು ಹೆಸರಿಸಿ ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ. ಪಾಕಿಸ್ತಾನಿ ಪ್ರಚಾರ ಖಾತೆಗಳು ಸಾರ್ವಜನಿಕರನ್ನು ದಾರಿ ತಪ್ಪಿಸಲು ಇದನ್ನು ಪ್ರಸಾರ ಮಾಡುತ್ತಿವೆ ಎಂದು PIB ಸ್ಪಷ್ಟವಾಗಿ ಹೇಳಿದೆ ಮತ್ತು ಅದೇ ಪತ್ರಿಕಾ ಬ್ರೀಫಿಂಗ್ ನಿಂದ ಅಧಿಕೃತ ಮೂಲ ವೀಡಿಯೊ ಲಿಂಕ್ ಅನ್ನು ಒದಗಿಸಿದೆ. ವೀಡಿಯೊ ಮತ್ತು ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಬಹುದು-

PIB ಈ ವೀಡಿಯೊದ ಒಂದು ಭಾಗವನ್ನು ಇಲ್ಲಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿದೆ, ಅಲ್ಲಿ ಸುಜಾತಾ ಶರ್ಮಾರವರು ನಮ್ಮ ಆಮದುಗಳಲ್ಲಿ 70%ಕ್ಕಿಂತ ಹೆಚ್ಚು ಈಗ #ಸ್ಟ್ರೈಟ್ ಆಫ್ ಹರ್ಮಜ್ ಹೊರತುಪಡಿಸಿ ಇತರ ಮಾರ್ಗಗಳ ಮೂಲಕ ಬರುತ್ತಿವೆ ಎಂದು ಮತ್ತು ತೈಲ, ಅನಿಲ ಮತ್ತು ರೀಟೈಲ್ ಮಳಿಗೆಗಳ ಕುರಿತು ಅಪ್ಡೇಟ್ ಗಳನ್ನು ನೀಡುತ್ತಿರುವುದು ಕಾಣಬಹುದು.

ಕಿಸಾನ್ ಇಂಡಿಯಾ ತಮ್ಮ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿದ ಮತ್ತೊಂದು ವೀಡಿಯೊ ನಮಗೆ ದೊರಕಿತು: Inter-Ministerial Briefing: पश्चिम एशिया युद्ध का भारत पर असर? सरकार ने तेल-LPG को लेकर दिया बड़ा बयान. ಕನ್ನಡದ ಅನುವಾದ ಹೀಗಿದೆ: ಅಂತರ್-ಸಚಿವಾಲಯ ಬ್ರೀಫಿಂಗ್: ಭಾರತದ ಮೇಲೆ ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ? ತೈಲ ಮತ್ತು ಎಲ್‌ಪಿಜಿ ಬಗ್ಗೆ ಸರ್ಕಾರವು ಪ್ರಮುಖ ಹೇಳಿಕೆಯನ್ನು ನೀಡಿದೆ. 1.45 ಸಮಯ ಮುದ್ರೆಯಿಂದ, ಸುಜಾತಾ ಶರ್ಮಾ ಯುದ್ಧದ ಪರಿಸ್ಥಿತಿ ಮತ್ತು ತೈಲ ಆಮದು ಇತ್ಯಾದಿಗಳ ಬಗ್ಗೆ ಮಾತನಾಡುತ್ತಿರುವುದನ್ನು ನಾವು ಕಾಣಬಹುದು.

ಇದರ ನಂತರ, ಹೇಳಿಕೆಯ ಕುರಿತು ಇನ್ನಷ್ಟು ಪರಿಶೀಲಿಸಲು ನಾವು ವೀಡಿಯೊದ ವಿವಿಧ ಕೀಫ್ರೇಮ್‌ಗಳಿಂದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ಮಾರ್ಚ್ 12, 2026ರಂದು SK ಲೈವ್ ಅಪ್‌ಲೋಡ್ ಮಾಡಿದ ಯೂಟ್ಯೂಬ್ ಶಾರ್ಟ್ ನಮಗೆ ಕಂಡುಬಂತು. ಆಮದುಗಳಿಗೆ ಸಂಬಂಧಿಸಿದಂತೆ ಹರ್ಮಜ್ ಜಲಸಂಧಿಯ ಪ್ರಾಮುಖ್ಯತೆಯನ್ನು ಪರಿಗಣಿಸಿ, ಭಾರತವು ಯುದ್ಧದ ಪರಿಸ್ಥಿತಿ ಮತ್ತು ಜಲಸಂಧಿಯ ಮುಚ್ಚುವಿಕೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂಬುದರ ಕುರಿತು ಆಕೆ ಮಾತನಾಡಿದ್ದಾರೆ ಎಂದು ವಿವರಣೆಯಲ್ಲಿ ಹೇಳಲಾಗಿದೆ. ಇದೆಲ್ಲದರ ಹೊರತಾಗಿಯೂ, ಕಚ್ಚಾ ತೈಲ ಪೂರೈಕೆ ಸ್ಥಿರವಾಗಿದ್ದು, ಭಾರತದ ಬಲವಾದ ಸಂಸ್ಕರಣಾ ಸಾಮರ್ಥ್ಯ ಮತ್ತು ದೈನಂದಿನ ಸಂಸ್ಕರಣೆಯಿಂದ ಬೆಂಬಲಿತವಾಗಿದೆ.

ಮೇಲಿನ ಯಾವುದೇ ಅಧಿಕೃತ ವೀಡಿಯೊಗಳಲ್ಲಿ, ಆಕೆ ಇರಾನಿನ ಭಯೋತ್ಪಾದಕ ದಾಳಿಯ ಬಗ್ಗೆ ಅಥವಾ ಭಯೋತ್ಪಾದಕ ಇರಾನಿನ ಆಡಳಿತವನ್ನು ಗುರಿಯಾಗಿಸಿಕೊಂಡ ಯಾವುದೇ ಮಾತುಗಳನ್ನಾಡಿಲ್ಲ.

ಮುಂದೆ, ಸುಜಾತಾ ಶರ್ಮಾ ಇರಾನ್‌ಗೆ ಬೆದರಿಕೆ ಹಾಕುತ್ತಿರುವ ಬಗ್ಗೆ ಯಾವುದೇ ನೇರ ಉಲ್ಲೇಖಗಳಿವೆಯೇ ಎಂದು ನಾವು ಹುಡುಕಿದೆವು, ಆದರೆ ಯಾವುದೇ ವರದಿಗಳು ಕಂಡುಬಂದಿಲ್ಲ. ಹೇಳಿಕೆಯಲ್ಲಿ ಬಳಸಲಾದ ದೃಶ್ಯಾವಳಿಗಳನ್ನು ಹೈವ್ ಮಾಡರೇಶನ್‌ನ AI ಡಿಟೆಕ್ಟರ್ ನಲ್ಲಿ ಪರೀಕ್ಷಿಸಿದಾಗ, ಫಲಿತಾಂಶಗಳು ಆಡಿಯೊವನ್ನು ನಕಲಿ ಎಂದು ಸಾಬೀತುಪಡಿಸಿದವು. ಫಲಿತಾಂಶಗಳ ಸ್ಕ್ರೀನ್‌ಶಾಟ್ ಕೆಳಗೆ ನೋಡಿ-

ಹೀಗಾಗಿ, ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು


ಇದನ್ನೂ ಓದಿ:

ಈ ವೀಡಿಯೊ ಚೀನಾದ ಯಂತ್ರಗಳು ಸಾಗರದಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ವೈರಲ್ ವೀಡಿಯೊ ನಿಜವಾಗಿಯೂ 2026ರಲ್ಲಿ ಹೊಸ ರೋಬೋಟಿಕ್ ಸಾರಿಗೆ ವಿಧಾನವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.