ಈ ವೀಡಿಯೊದಲ್ಲಿ ಸ್ಕಾರ್ಲೆಟ್ ಜೋಹಾನ್ಸನ್ ಅವರ ಹಿಂದೆ ರೆಡ್ ಕಾರ್ಪೆಟ್ ಮೇಲೆ ಮಹಿಳೆಯೊಬ್ಬರು ಕಣ್ಮರೆಯಾಗುತ್ತಿರುವುದು ಕಾಣುತ್ತದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊದಲ್ಲಿ ಸ್ಕಾರ್ಲೆಟ್ ಜೋಹಾನ್ಸನ್ ಅವರ ಹಿಂದೆ ರೆಡ್ ಕಾರ್ಪೆಟ್ ಮೇಲೆ ಮಹಿಳೆಯೊಬ್ಬರು ಕಣ್ಮರೆಯಾಗುತ್ತಿರುವುದು ಕಾಣುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :ರೆಡ್ ಕಾರ್ಪೆಟ್ ಮೇಲೆ ಸ್ಕಾರ್ಲೆಟ್ ಜೋಹಾನ್ಸನ್ ಅವರ ಹಿಂದೆ ಮಹಿಳೆಯೊಬ್ಬರು ಸಂಪೂರ್ಣವಾಗಿ ಕಣ್ಮರೆಯಾಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ.

ಕಡೆನುಡಿ/Conclusion : ಹೇಳಿಕೆಯು ದಾರಿ ತಪ್ಪಿಸುವಂತಿದೆ. ಈ ಕ್ಲಿಪ್ 2006 ರ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳ ಕರ್ಯಕ್ರಮದ್ದು, ಮತ್ತು “ಕಣ್ಮರೆಯಾಗುತ್ತಿರುವ” ಮಹಿಳೆ ಜೋಹಾನ್ಸನ್ ರವರ ತಾಯಿ ಮೆಲನಿ ಸ್ಲೋನ್. ನವೆಂಬರ್ 2023ರಲ್ಲಿ ಜಿಮ್ಮಿ ಫಾಲನ್ ರವರ ದ ಟುನೈಟ್ ಶೋನಲ್ಲಿ ಜೋಹಾನ್ಸನ್ ಸ್ವತಃ ಇದನ್ನು ದೃಢಪಡಿಸಿದ್ದರು. ವಿಭಿನ್ನ ಕ್ಯಾಮೆರಾ ಎಂಗಲ್ ಗಳಿಂದ, ಸ್ಲೋನ್ ಇನ್ನೂ ಆಕೆಯ ಹಿಂದೆ ನಿಂತಿದ್ದರು ಮತ್ತು ಅಚಾನಕ್ಕಾಗಿ ಕಣ್ಮರೆಯಾಗಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ರೇಟಿಂಗ್/Rating : ದಾರಿ ತಪ್ಪಿಸುವಂತಿದೆ

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಸ್ಕಾರ್ಲೆಟ್ ಜೋಹಾನ್ಸನ್ ಹಿಂದೆ ಮಹಿಳೆಯೊಬ್ಬರು ಕಣ್ಮರೆಯಾಗಿದ್ದಾರೆ ಎಂದು ಹೇಳುವ ಕ್ಲಿಪ್ ಅನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘Clip_Station’ ಅಂತಹ ಕ್ಲಿಪ್ ಅನ್ನು “ರೆಡ್ ಕಾರ್ಪೆಟ್ ಮೇಲೆ ಸ್ಕಾರ್ಲೆಟ್ ಜೋಹಾನ್ಸನ್ ಹಿಂದೆ ಮಹಿಳೆ ಸಂಪೂರ್ಣವಾಗಿ ಕಣ್ಮರೆಯಾದರು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಜೋಹಾನ್ಸನ್ ಸಂದರ್ಶನ ನೀಡುತ್ತಿರುವ 38 ಕ್ಷಣಗಳ ಒಂದು ಕ್ಲಿಪ್ ಅನ್ನು ಲಗತ್ತಿಸಲಾಗಿದೆ. ಸುಮಾರು 5 ಕ್ಷಣಗಳ ಸಮಯಕ್ಕೆ, ಒಬ್ಬ ಮಹಿಳೆ ಆಕೆಯ ಹಿಂದೆ ಹೋಗಿ ಕಣ್ಮರೆಯಾಗುತ್ತಿರುವುದನ್ನು ತೋರಿಸಲಾಗುತ್ತಿದೆ ಎನ್ನಲಾಗಿದೆ. ಈ ಪೋಸ್ಟ್ ಗೆ 3.7 ಮಿಲಿಯ ವೀಕ್ಷಣೆಗಳು ದೊರಕಿದ್ದು ಅದನ್ನು ಕೆಳಗೆ ಕಾಣಬಹುದು –

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸತ್ಯ ಪರಿಶೀಲನೆ 

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಈ ದೃಶ್ಯಗಳು 2006ರ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳದ್ದಾಗಿದ್ದು, “ಕಣ್ಮರೆಯಾದ” ಮಹಿಳೆ ವಾಸ್ತವವಾಗಿ ಜೋಹಾನ್ಸನ್ ರವರ ತಾಯಿ ಮೆಲನಿ ಸ್ಲೋನ್ ಎಂದು ತಿಳಿದುಬಂದಿದೆ. ನಂತರ 2023ರ ನವೆಂಬರ್‌ನಲ್ಲಿ ಜಿಮ್ಮಿ ಫಾಲನ್ ರವರ ‘ದ ಟುನೈಟ್ ಶೋ’ ನಲ್ಲಿ ಜೋಹಾನ್ಸನ್ ಕಾಣಿಸಿಕೊಂಡಾಗ, ಈ ವಿಷಯವನ್ನು ಸ್ಪಷ್ಟಪಡಿಸಿದರು. ವಿವಿಧ ಕೋನಗಳಿಂದ ನೋಡಿದಾಗ, ಸ್ಲೋನ್ ಆ ಎಲ್ಲಾ ಸಮಯದಲ್ಲೂ ಆಕೆಯ ಹಿಂದೆಯೇ ಇದ್ದರು ಮತ್ತು ಕಣ್ಮರೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಕ್ಲಿಪ್‌ನ ಮೂಲ ಮತ್ತು ಸತ್ಯಾಸತ್ಯತೆಯ ಬಗ್ಗೆ ತಿಳಿಯಲು ನಾವು ಮೊದಲು ಅದರ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ “ಸ್ಕಾರ್ಲೆಟ್ ಜೋಹಾನ್ಸನ್ ಫ್ಯಾಷನ್ ಸ್ನ್ಯಾಪ್‌ಶಾಟ್ ಗೋಲ್ಡನ್ ಗ್ಲೋಬ್ಸ್ 2006” ಎಂಬ ಶೀರ್ಷಿಕೆಯ ಯೂಟ್ಯೂಬ್ ಕ್ಲಿಪ್‌ ಕರಕಿತು. ಆ ವೀಡಿಯೊದಲ್ಲಿ, ಸ್ಕಾರ್ಲೆಟ್ ಜೋಹಾನ್ಸನ್ ಹೇಳಿಯಲ್ಲಿ ತೋರಿಸಿರುವ ಅದೇ ಕೆಂಪು ಉಡುಪನ್ನು ಧರಿಸಿದ್ದಾರೆ. ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

ಇದರ ನಂತರ, 2006ರಲ್ಲಿ ಚೀನಾ ಡೈಲಿ ಪ್ರಕಟವಾದ ಲೇಖನವು ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿತು. ಈ ಲೇಖನದಲ್ಲಿ ಸ್ಕಾರ್ಲೆಟ್ ಜೋಹಾನ್ಸನ್ ತಮ್ಮ ಕೆಂಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು “ಸ್ಕಾರ್ಲೆಟ್ ಜೋಹಾನ್ಸನ್ ಜನವರಿ 16, 2006ರಂದು ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿ ನಡೆದ 63ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಿಗೆ ಆಗಮಿಸಿದ್ದಾರೆ. ಜೋಹಾನ್ಸನ್ “ಮ್ಯಾಚ್ ಪಾಯಿಂಟ್” ನಲ್ಲಿ ತಮ್ಮ ಕೆಲಸಕ್ಕಾಗಿ ಚಲನಚಿತ್ರದಲ್ಲಿ ಪೋಷಕ ಪಾತ್ರಕ್ಕಾಗಿ ಅತ್ಯುತ್ತಮ ನಟಿಗಾಗಿ ಗೋಲ್ಡನ್ ಗ್ಲೋಬ್‌ ಪ್ರಶಸ್ತಿಗೆ ನಾಮನಿರ್ದೇಶಿತಗೊಂಡಿದ್ದರು. ಈ ಭಾಗವನ್ನು ಕೆಳಗೆ ನೋಡಿ-

ಜೋಹಾನ್ಸನ್ ತಮ್ಮ ಚಲನಚಿತ್ರದ ಪ್ರಚಾರ ಮಾಡಲು 2006ರ ಗೋಲ್ಡನ್ ಗ್ಲೋಬ್ ಸಮಾರಂಭಕ್ಕೆ ಆಗಮಿಸಿದ್ದರು ಎಂದು 2007 ರಲ್ಲಿ ಸ್ಪೋಕ್ಸ್‌ಮನ್ ನಲ್ಲಿ ಪ್ರಕಟವಾದ  ಮತ್ತೊಂದು ಲೇಖನವು ಖಚಿತಪಡಿಸುತ್ತದೆ.

ಮುಂದೆ, ಜೋಹಾನ್ಸನ್ ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆಯೇ ಅಥವಾ ಅದಕ್ಕೆ ಪ್ರತಿಕ್ರಿಯಿಸಿದ್ದಾರೆಯೇ ಎಂದು ತಿಳಿಯಲು ನಾವು ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ನವೆಂಬರ್ 2023ರಲ್ಲಿ ಜಿಮ್ಮಿ ಫ್ಯಾಲನ್ ನಟಿಸಿದ ‘ದ ಟುನೈಟ್ ಶೋ’ ಸಮಯದಲ್ಲಿ, ಜೋಹಾನ್ಸನ್ ಪ್ರೇಕ್ಷಕರ ಮುಂದೆ ಈ ವೈರಲ್ ಕ್ಲಿಪ್‌ಗೆ ಪ್ರತಿಕ್ರಿಯಿಸಿದರು. 1:55ರ ಸಮಯಮುದ್ರೆಯಲ್ಲಿ, ಜಿಮ್ಮಿ ಫಾಲನ್ ಆಕಗೆ ಘಟನೆಯನ್ನು ವಿವರಿಸಿ ಕ್ಲಿಪ್ ಅನ್ನು ತೋರಿಸುತ್ತಾರೆ. 2:11ಕ್ಕೆ ಈ ದೃಶ್ಯಕ್ಕೆ ಪ್ರತಿಕ್ರಿಯಿಸಿದ ಸ್ಕಾರ್ಲೆಟ್ ಜೋಹಾನ್ಸನ್ ತಕ್ಷಣವೇ “ಓ ದೇವರೇ, ಅದು ನನ್ನ ತಾಯಿ! … ಕಪ್ಪು ಕೂದಲಿನ ಆ ಮಹಿಳೆ, ಅದು ನನ್ನ ತಾಯಿ” ಎಂದು ಹೇಳಿ ತಮಾಷೆಯಾಗಿ “ನಾನು ಕಳೆದ 15 ವರ್ಷಗಳಿಂದ ಅವರನ್ನು ಹುಡುಕುತ್ತಿದ್ದೇನೆ” ಎಂದು ಹೇಳುತ್ತಾರೆ. ಆಕೆಯ ತಾಯಿ ಮೆಲಾನಿ ಸ್ಲೋನ್ ಬಗ್ಗೆ ಹುಡುಕಿದಾಗ, ಆಕೆ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಮಗೆ ತಿಳಿದುಬಂದಿತು.

ಹೆಚ್ಚಿನ ಸ್ಪಷ್ಟೀಕರಣವನ್ನು ಪಡೆಯಲು, ಜೋಹಾನ್ಸನ್ ರವರ ತಾಯಿ ಅವರ ಹಿಂದೆ ನೇರವಾಗಿ ನಿಂತಿರುವುದರಿಂದ ಉಂಟಾದ ದೃಷ್ಟಿಯ ಭ್ರಮೆಯಾಗಿರಬಹುದೇ ಎಂದು ಪರಿಶೀಲಿಸಿದೆವು. ಈ ಹೇಳಿಕೆಯ ಕಾಮೆಂಟ್‌ಗಳಲ್ಲಿ, ಒಬ್ಬ ಬಳಕೆದಾರರು ಆಕೆಯ ತಾಯಿ ಇನ್ನೂ ಅವರ ಹಿಂದೆಯೇ ಇರುವ, ಆದರೆ ಬೇರೆ ಕ್ಯಾಮೆರಾ ಕೋನದಿಂದ ಕಾಣುತ್ತಿರುವ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇತರ ಬಳಕೆದಾರರು ಕೂಡ ತಾಯಿ ಕಣ್ಮರೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಮತ್ತು ಇದನ್ನು ಸಾಬೀತುಪಡಿಸುವ ಬೇರೆ ಕ್ಯಾಮೆರಾ ಕೋನದಿಂದ ತೆಗೆದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಮಹಿಳೆ ಕಣ್ಮರೆಯಾಗಲಿಲ್ಲ, ಆದರೆ ಒಂದು ಕ್ಯಾಮೆರಾ ಕೋನದಿಂದ ಆಕೆ ಬ್ಲೈಂಡ್ ಸ್ಪಾಟ್ ಪ್ರವೇಶಿಸುತ್ತಾರೆ ಮತ್ತು ಜೋಹಾನ್ಸನ್‌ನ ಚಲನೆಗಳೊಂದಿಗೆ ಆಕೆ ಕಣ್ಮರೆಯಾದಂತೆ ಕಾಣುತ್ತದೆ.

ಹೀಗಾಗಿ, ಈ ಹೇಳಿಕೆ ದಾರಿತಪ್ಪಿಸುವಂತಿದೆ.


ಇದನ್ನೂ ಓದಿ:

ಟ್ರಂಪ್ ರವರ ಬೆದರಿಕೆಗಳ ವಿರುದ್ಧ ಡೆನ್ಮಾರ್ಕ್ ಪ್ರತಿಭಟನೆ ನಡೆಸುವುದನ್ನು ಈ ವೀಡಿಯೊ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

2025ರ ನೊಬೆಲ್ ಶಾಂತಿ ಪ್ರಶಸ್ತಿಯ ನಾಮನಿರ್ದೇಶಿತರ ಪಟ್ಟಿಯಿಂದ ಟ್ರಂಪ್ ಅವರನ್ನು ತೆಗೆದುಹಾಕಲಾಗಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.