ಡಿಸ್ನಿಲ್ಯಾಂಡ್ ಉದ್ಯೋಗಿಯು ವಿವಾಹ ಪ್ರಸ್ತಾಪಕ್ಕೆ ಅಡ್ಡಿಪಡಿಸುತ್ತಿರುವುದನ್ನು ಈ ವೀಡಿಯೊ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಡಿಸ್ನಿಲ್ಯಾಂಡ್ ಉದ್ಯೋಗಿಯು ವಿವಾಹ ಪ್ರಸ್ತಾಪಕ್ಕೆ ಅಡ್ಡಿಪಡಿಸುತ್ತಿರುವುದನ್ನು ಈ ವೀಡಿಯೊ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಡಿಸ್ನಿ ಉದ್ಯೋಗಿಯೊಬ್ಬರು ಡಿಸ್ನಿಲ್ಯಾಂಡ್‌ನಲ್ಲಿ ವಿವಾಹ ಪ್ರಸ್ತಾಪಕ್ಕೆ ಹೇಗೆ ಅಡ್ಡಿಪಡಿಸಿದರು ಎಂದು ಈ ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion : ಈ ಹೇಳಿಕೆ ನಿಜ. ಈ ವೀಡಿಯೊ 2022 ರಲ್ಲಿ ಡಿಸ್ನಿಲ್ಯಾಂಡ್ ಪ್ಯಾರಿಸ್‌ನಲ್ಲಿ ನಡೆದ ನೈಜ ಘಟನೆಯ ನಿಜವಾದ ದೃಶ್ಯವಾಗಿದೆ. ಡಿಸ್ನಿ ಔಪಚಾರಿಕ ಕ್ಷಮೆಯಾಚನೆಯನ್ನು ನೀಡಿತು ಮತ್ತು ಪರಿಹಾರವನ್ನು ಒದಗಿಸುವುದಾಗಿ ಹೇಳಿತು, ಆದರೆ ಜೋಡಿಯು ಅದನ್ನು ಸ್ಪಷ್ಟವಾಗಿ ನಿರಾಕರಿಸಿದರು.

ರೇಟಿಂಗ್/Rating : ನಿಜ

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ

ಅಥವಾ ಕೆಳಗಿನ ಲೇಖನವನ್ನು ಓದಿ

******************************************************

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಾ, ಈ ವೀಡಿಯೊ ಡಿಸ್ನಿಲ್ಯಾಂಡ್ ಉದ್ಯೋಗಿಯೊಬ್ಬರು ವಿವಾಹ ಪ್ರಸ್ತಾಪವನ್ನು ಅಡ್ಡಿಪಡಿಸುವುದನ್ನು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘CrazyVibes_1’ ಅಂತಹ ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: ಡಿಸ್ನಿಲ್ಯಾಂಡ್‌ನಲ್ಲಿ ಮಾಡಲಾದ ವಿವಾಹ ಪ್ರಸ್ತಾಪದಲ್ಲಿ ಭಾಗಿಯಾಗಿದ್ದ ಡಿಸ್ನಿ ಉದ್ಯೋಗಿಯು ಬಹಳ ಪ್ರತಿಕ್ರಿಯೆಯನ್ನು ಪಡೆದರು. ಡಿಸ್ನಿಯು ಜೋಡಿಯಲ್ಲಿ ಕ್ಷಮೆಯಾಚಿಸಿತು ಮತ್ತು ಪರಿಹಾರವನ್ನು ನೀಡಲು ಮುಂದಾಯಿತು, ಆದರೆ ಜೋಡಿಯು ಪರಿಹಾರವನ್ನು ಸ್ವೀಕರಿಸಲಿಲ್ಲ.” ಇದದರಲ್ಲಿ ಘಟನೆಯನ್ನು ತೋರಿಸುವ 21-ಕ್ಷಣಗಳ ವೀಡಿಯೊ ಕ್ಲಿಪ್ ಅನ್ನು ಸೇರಿಸಲಾಗಿದೆ. ಇದರ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ನಿಜವೆಂದು ಕಂಡುಕೊಂಡಿತು. ಈ ವೀಡಿಯೊ 2022ರಲ್ಲಿ ಡಿಸ್ನಿಲ್ಯಾಂಡ್ ಪ್ಯಾರಿಸ್‌ನಲ್ಲಿ ನಡೆದ ನಿಜವಾದ ಘಟನೆಯನ್ನು ತೋರಿಸುತ್ತದೆ. ಘಟನೆಯ ನಂತರ, ಡಿಸ್ನಿ ಅಧಿಕೃತ ಕ್ಷಮೆಯಾಚನೆಯನ್ನು ಬಿಡುಗಡೆ ಮಾಡಿತು ಮತ್ತು ಪರಿಹಾರವನ್ನು ಪ್ರಸ್ತಾಪಿಸಿತು, ಆದರೆ ಜೋಡಿಯು ಅದನ್ನು ಸ್ವೀಕರಿಸದಿರಲು ನಿರ್ಧರಿಸಿತು.

ವಿವರಗಳು:

ನಾವು ಮೊದಲು ವೀಡಿಯೊದ ಮೂಲವನ್ನು ಪತ್ತೆಹಚ್ಚಲು ವೀಡಿಯೊದ ಹಲವಾರು ಕೀಫ್ರೇಮ್‌ಗಳನ್ನು ಪಡೆದು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು.

ಇದರಲ್ಲಿ ಜೂನ್ 7, 2022ರಂದು ವೈರಲ್‌ಹಾಗ್ ಪ್ರಕಟಿಸಿದ “ವ್ಯಕ್ತಿಯು ಅನುಮತಿ ಪಡೆದ ನಂತರ ಡಿಸ್ನಿಲ್ಯಾಂಡ್ ಉದ್ಯೋಗಿಯು ವಿವಾಹ ಪ್ರಸ್ತಾಪಕ್ಕೆ ಅಡ್ಡಿಪಡಿಸಿದ್ದು | ವೈರಲ್‌ಹಾಗ್” ಎಂಬ ಶೀರ್ಷಿಕೆಯೊಂದಿಗಿನ ಯೂಟ್ಯೂಬ್ ಕಿರುಚಿತ್ರ ನಮಗೆ ದೊರಕಿತು. ವಿವರಣೆಯ ಪ್ರಕಾರ, ಈ ಘಟನೆಯು ಮೇ 21, 2022ರಂದು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯಿತು. “ಸ್ಲೀಪಿಂಗ್ ಬ್ಯೂಟಿ ಕ್ಯಾಸಲ್ ಮುಂದಿನ ವೇದಿಕೆಯಲ್ಲಿ ಮದುವೆ ಪ್ರಸ್ತಾವಕ್ಕಾಗಿ ಅನುಮತಿ ಪಡೆದ ನಂತರ ಡಿಸ್ನಿಲ್ಯಾಂಡ್‌ನ ಪಾತ್ರವರ್ಗದ ಸದಸ್ಯರೊಬ್ಬರು ನನ್ನ ಪ್ರಸ್ತಾವಕ್ಕೆ ಅಡ್ಡಿಪಡಿಸಿದರು” ಎಂದು ಅದು ಹೇಳುತ್ತದೆ. ಇದರ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಬಹುದು-

ಇದರ ನಂತರ, ಈ ಘಟನೆಯ ಬಗ್ಗೆ ಬರೆಯುವ ಜೂನ್ 6, 2022ರಲ್ಲಿ ಪ್ರಕಟವಾದ ಡೈಲಿ ಮೇಲ್ ವರದಿಯೂ ಸಹ ನಮ್ಮ ಕೈಸಿಕ್ಕಿತು. ವರದಿಯಲ್ಲಿ “ಡಿಸ್ನಿಲ್ಯಾಂಡ್ ಪ್ಯಾರಿಸ್‌ನಲ್ಲಿ ಜೋಡಿಯೊಂದರ ಅದ್ಭುತ ಕ್ಷಣವನ್ನು ಮಿಕ್ಕಿ ಮೌಸ್ ಕಿವಿಗಳನ್ನು ಧರಿಸಿದ್ದ ಅತಿ ಉತ್ಸಾಹಿ ಸಿಬ್ಬಂದಿ ಕಸಿದುಕೊಂಡಿದ್ದಾರೆ” ಎಂದು ಉಲ್ಲೇಖಿಸಲಾಗಿದೆ. ವರದಿಯಲ್ಲಿ ಹಂಚಿಕೊಳ್ಳಲಾದ ದೃಶ್ಯಗಳು ಹೇಳಿಕೆಯಲ್ಲಿ ಒದಗಿಸಿದ ದೃಶ್ಯಗಳಿಗೆ ಹೊಂದಿಕೆಯಾಗುತ್ತವೆ.

ಡಿಸ್ನಿಯು ಈ ನಿರ್ವಹಣೆಯ ದೋಷವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡು ಕ್ಷಮೆಯಾಚಿಸಿದೆ ಎಂದು ಕೂಡ ನಮಗೆ ತಿಳಿದುಬಂದಿದೆ. ಪೀಪಲ್ಸ್ ವರದಿಯ ಪ್ರಕಾರ, “ಇದರಲ್ಲಿನ ಜೋಡಿಯೊಂದಿಗಿರುವ ಸಮಸ್ಯೆಯನ್ನು ಬಗೆಹರಿಸಲು” ಬಯಸುವುದಾಗಿ ಡಿಸ್ನಿಯು ನ್ಯೂಯಾರ್ಕ್ ಟೈಮ್ಸ್‌ಗೆ (2022 ರಲ್ಲಿ) ಹೇಳಿತು. ಅವರು ಪುನರುಚ್ಚರಿಸಿರುವಂತೆ: “ನಾವು ಸಂಬಂಧಪಟ್ಟ ಜೋಡಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಿದ್ದೇವೆ ಮತ್ತು ಇದನ್ನು ಸರಿಪಡಿಸಲು ನಾವು ನಮ್ಮ ಕೈಲಾದಷ್ಟು ಮಾಡುತ್ತೇವೆ.” ಈ ಭಾಗದ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

ಏಪ್ರಿಲ್ 7, 2026ರಂದು ಪ್ರಕಟವಾದ ಇತ್ತೀಚಿನ ಡೈಲಿಮೇಲ್ ವರದಿಯಲ್ಲಿ ಆ ಡಿಸ್ನಿಲ್ಯಾಂಡ್ ಉದ್ಯೋಗಿಯ ವಿರುದ್ಧ ಸಾರ್ವಜನಿಕರ ಆಕ್ರೋಶದ ಕುರಿತು ಮಾತನಾಡುತ್ತದೆ. ಜನರು ಉದ್ಯೋಗಿಯ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಕಾಮೆಂಟ್‌ಗಳು ಹೀಗಿವೆ: “’ಇನ್ನೂ ಕೆಲವು ಕ್ಷಣಗಳಿಂದ ಅವನು ಸಾಯುತ್ತಿರಲಿಲ್ಲ,” “ಆತ ಒಂದು ಜೀವಮಾನದ ನೆನಪನ್ನು ಹಾಳುಮಾಡಿದ,” ಮತ್ತು ಇವು ಆ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕುವಂತೆ ಕೋರುತ್ತವೆ.

ಕೊನೆಯದಾಗಿ, ನಾವು ಆ ಉದ್ಯೋಗಿಯು ಈ ರೀತಿ ಪ್ರತಿಕ್ರಿಯಿಸಿದ್ದು ಏಕೆ ಎಂಬುದಕ್ಕೆ ನಿರ್ದಿಷ್ಟ ಕಾರಣಗಳನ್ನು ಹುಡುಕಿದೆವು. ಬೋರ್ಡ್‌ಪಾಂಡಾ ವರದಿಯ ಪ್ರಕಾರ, ಡಿಸ್ನಿಲ್ಯಾಂಡ್ ಪ್ಯಾರಿಸ್‌ನಲ್ಲಿನ ಸ್ಲೀಪಿಂಗ್ ಬ್ಯೂಟಿ ಕ್ಯಾಸಲ್‌ನ ಮುಂಭಾಗದ ವೇದಿಕೆಯನ್ನು ಅತಿಥಿಗಳಿಗೆ ನಿಷೇಧಿಸಲಾಗಿದೆ ಮತ್ತು ಬೇಲಿ ಹಾಕಲಾಗಿದೆ. ವೇದಿಕೆಯು “ಉಪಕರಣಗಳು ಮತ್ತು ಪಟಾಕಿಗಳಿಂದ ಸುತ್ತುವರೆದಿದೆ, ಇದು ಅಲ್ಲಿ ಇರಬಾರದ ಯಾರಿಗಾದರೂ ಸುರಕ್ಷತಾ ಅಪಾಯವನ್ನುಂಟುಮಾಡುತ್ತದೆ. ವರದಿಯ ಪ್ರಕಾರ, ಆಂಟೆ [ವೀಡಿಯೊದಲ್ಲಿ ವಿವಾಹವನ್ನು ಪ್ರಸ್ತಾಪಿಸುತ್ತಿರುವ ವ್ಯಕ್ತಿ] ಪ್ರದರ್ಶನ ಪ್ರಾರಂಭವಾಗಲು ನಿಗದಿಪಡಿಸಿದ ಸಮಯದಲ್ಲಿ ಪ್ರಸ್ತಾಪಿಸಿದರು, ಆದ್ದರಿಂದ ಸಮಯವು ಬಹಳ ಪ್ರಮುಖವಾಗಿತ್ತು.” ಈ ಭಾಗದ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ –

ಆದ್ದರಿಂದ, ಹೇಳಿಕೆ ನಿಜ.


ಇದನ್ನೂ ಓದಿ:

ಇರಾನ್ USS ಜೆರಾಲ್ಡ್ ಆರ್.ಫೋರ್ಡ್ ಮೇಲೆ 17 ದಿಕ್ಕುಗಳಿಂದ ದಾಳಿ ಮಾಡಿದೆ ಎಂದು ಟ್ರಂಪ್ ಹೇಳಿದರೇ? ಸತ್ಯ ಪರಿಶೀಲನೆ

ಇರಾನ್ ಸಂಘರ್ಷದ ಮಧ್ಯೆ ಭಾಷಣ ಮಾಡುವಾಗ ಡೊನಾಲ್ಡ್ ಟ್ರಂಪ್ ನಿಜವಾಗಿಯೂ ಕುಸಿದುಬಿದ್ದರೇ? ಸತ್ಯ ಪರಿಶೀಲನೆ

Leave a Reply

Your email address will not be published.