ಹೇಳಿಕೆ/Claim : ಕೋಪಗೊಂಡ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಂದೇಶವನ್ನು ಹಿಂದಿರುಗಿಸುತ್ತಿರುವುದನ್ನು ಮತ್ತು ಘರ್ಷಣೆಯನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ.
ಕಡೆನುಡಿ/Conclusion : ಹೇಳಿಕೆ ಸುಳ್ಳು. ಸಂದೇಶವನ್ನು ಬೆಂಜಮಿನ್ ನೆತನ್ಯಾಹು ಅವರು ರವಾನಿಸಿರಲಿಲ್ಲ ಮತ್ತು ವಾಂಗ್ ಯಿ ಅದನ್ನು ಬೇರೊಬ್ಬ ವ್ಯಕ್ತಿಯಿಂದ ಸ್ವೀಕರಿಸಿದ್ದರು. ಈ ಕ್ಲಿಪ್ ಡಿಸೆಂಬರ್ 18, 2013ರಂದು ನಡೆದ ಜಂಟಿ ಪತ್ರಿಕಾಗೋಷ್ಠಿಯಿಂದ ಬಂದಿದೆ, ಮತ್ತು ಮೂಲ ಆಡಿಯೊವನ್ನು ತೆಗೆದುಹಾಕಲಾಗಿದೆ. ವಾಸ್ತವದಲ್ಲಿ, ಪೂರ್ಣ ದೃಶ್ಯವು ಸೌಹಾರ್ದಯುತ ರಾಜತಾಂತ್ರಿಕ ಸಂವಾದವನ್ನು ತೋರಿಸುತ್ತದೆ, ಮತ್ತಿದು ಇಬ್ಬರೂ ನಾಯಕರು ಕೈಕುಲುಕುವುದರೊಂದಿಗೆ ಕೊನೆಗೊಳ್ಳುತ್ತದೆ.
ರೇಟಿಂಗ್/Rating : ಸುಳ್ಳು. ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಂದೇಶವನ್ನು ಚೀನಾದ ರಾಜತಾಂತ್ರಿಕರೊಬ್ಬರು ಕೋಪದಿಂದ ತಿರಸ್ಕರಿಸಿದ್ದಾರೆ ಎನ್ನುವ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘IG_Zahra’ ರವರು ಅಂತಹ ಒಂದು ಪೋಸ್ಟ್ ಅನ್ನು “ಬ್ರೇಕಿಂಗ್ ನ್ಯೂಸ್ ಚೀನೀ ವಿದೇಶಾಂಗ ಸಚಿವರಿಗೆ ಕೋಪ. ಪತ್ರಿಕಾಗೋಷ್ಠಿಯ ಸಮಯದಲ್ಲಿ ತಮಗೆ ನೆತನ್ಯಾಹು ರವರು ನೀಡಿದ ಸಂದೇಶವನ್ನು ಚೀನಾದ ವಿದೇಶಾಂಗ ಸಚಿವರು ತಕ್ಷಣವೇ ಹಿಂದಿರುಗಿಸಿದರು. ಕೋಪದ ಭಾವವು ಚೀನಾ ವಿದೇಶಾಂಗ ಸಚಿವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ (ಕನ್ನಡಕ್ಕೆ ಅನುವಾದಿಸಲಾಗಿದೆ). ಈ ಘಟನೆ ಇತ್ತೀಚೆಗೆ ಸಂಭವಿಸಿದೆ ಎಂದು ಆರೋಪಿಸಿ ಪ್ರಸ್ತುತ “ಬ್ರೇಕಿಂಗ್ ನ್ಯೂಸ್” ಎನ್ನುವ 47 ಕ್ಷಣಗಳವೀಡಿಯೊ ಕ್ಲಿಪ್ ಅನ್ನು ಪೋಸ್ಟ್‌ಗೆ ಲಗತ್ತಿಸಲಾಗಿದೆ. ಕೆಳಗಿನ ಪೋಸ್ಟ್ ಅನ್ನು ನೋಡಿ-
بریکنگ نیوز 🚨چینی وزیر خارجہ چھا گیا🔥🔥
چائنا کے وزیر خارجہ نے پریس کانفرنس کے دوران نیتن یاہو کی طرف سے دی گئی پرچی فوراً اسکو واپس لوٹا دی۔ چینی وزیر خارجہ کے چہرے پر غصّے کے اثرات صاف نظر آرہے ہیںpic.twitter.com/rAkpvVYkSW— زہـــرہ لیــاقت (@IG_Zahra) April 13, 2026

ಇತರ ಬಳಕೆದಾರರು ಇಲ್ಲಿ ಮತ್ತು ಇಲ್ಲಿ ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ
🚨 During a press conference, China’s Foreign Minister reportedly returned a notice linked to Benjamin Netanyahu in a visibly strong reaction.
The moment has gone viral, reflecting rising diplomatic tensions and sharp exchanges on the global stage. pic.twitter.com/lsSTRr1Pg5
— UFO Hunter (@iamufohunter) April 14, 2026
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಈ ಸಂದೇಶವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರವರು ವೈಯಕ್ತಿಕವಾಗಿ ನೀಡಿರಲಿಲ್ಲ, ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಭಿನ್ನಾಭಿಪ್ರಾಯವನ್ನು ತಪ್ಪಾಗಿ ಸೃಷ್ಟಿಸಲು ಈ ಹೇಳಿಕೆಯಲ್ಲಿರುವ ಆಡಿಯೊವನ್ನು ಮ್ಯೂಟ್ ಮಾಡಲಾಗಿದೆ. ಮೂಲ ವೀಡಿಯೊ ಡಿಸೆಂಬರ್ 18, 2013ರಂದು ನಡೆದ ಜಂಟಿ ಪತ್ರಿಕಾಗೋಷ್ಠಿಯಿಂದ ಬಂದಿರುವಂಥದ್ದು, ಇದರಲ್ಲಿ ಇಬ್ಬರು ನಾಯಕರು ಪರಸ್ಪರ ಕೈಕುಲುಕುವುದರೊಂದಿಗೆ ಭೇಟಿ ಕೊನೆಗೊಂಡಿತ್ತು.
ಮೂಲದ ಬಗ್ಗೆ ತಿಳಿಯಲು ನಾವು ಮೊದಲು ವೀಡಿಯೊದ ವಿವಿಧ ಕೀಫ್ರೇಮ್‌ಗಳಲ್ಲಿ ತೆಗೆದು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದ ಫಲಿತಾಂಶಗಳಲ್ಲಿ ನಮಗೆ ಡಿಸೆಂಬರ್ 18, 2013 ರಂದು ‘ಇಸ್ರೇಲಿಪಿಎಂ’ ಯುಟ್ಯೂಬ್ ವಾಹಿನಿಯಲ್ಲಿ ಅಪ್‌ಲೋಡ್ ಮಾಡಲಾದ ಯೂಟ್ಯೂಬ್ ವೀಡಿಯೊ ದೊರಕಿತು. ವೀಡಿಯೊದ ಶೀರ್ಷಿಕೆ: “ಪ್ರಧಾನಿ ನೆತನ್ಯಾಹು ಮತ್ತು ಚೀನಿ ವಿದೇಶಾಂಗ ಸಚಿವ ವಾಂಗ್ ಯಿ ಅವರ ಹೇಳಿಕೆಗಳು” ಎಂದಾಗಿತ್ತು.
ನಂತರ ಸಭೆಯ ಸಂದರ್ಭ ಮತ್ತು ನಿಜವಾಗಿಯೂ ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಇಡೀ ವೀಡಿಯೊವನ್ನು ನೋಡಿದೆವು. ಪ್ರಧಾನಿ ನೆತನ್ಯಾಹು ರವರು ಒಂದು ಸಂದೇಶವನ್ನು ಹಸ್ತಾಂತರಿಸಿದರು ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ ಆದರೆ ಮೂಲ ವೀಡಿಯೊದಲ್ಲಿ 5:43ರ ಸಮಯ ಮುದ್ರೆಯಲ್ಲಿ, ಸ್ಪಷ್ಟವಾಗಿ ಬೇರೆ ಯಾರೋ ಈ ಕಾರ್ಯ ಮಾಡಿದ್ದಾರೆ. ಡಿಜಿಟೈ ಇಂಡಿಯಾ ಈ ವ್ಯಕ್ತಿಯ ಗುರುತನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ, ಆದರೆ ಪ್ರಧಾನಿ ನೆತನ್ಯಾಹುರವರು ಸಂದೇಶವನ್ನು ಕೊಟ್ಟಿಲ್ಲ ಮತ್ತು ಅವರ ಮೇಲೆ ವಾಂಗ್ ಯಿರವರು ಮೇಲೆ ಕೋಪಗೊಂಡಿರಲಿಲ್ಲ ಎಂದು ದೃಢವಾಗಿದೆ.
ಹೇಳಿಕೆಯಲ್ಲಿರುವ ಕ್ಲಿಪ್ ಅನ್ನು ತಿದ್ದುಪಡಿ ಮಾಡಲಾಗಿದ್ದು ನೆತನ್ಯಾಹು, ವಾಂಗ್ ಯಿ ಮಾತನಾಡುತ್ತಿರುವ ಆಡಿಯೊವನ್ನು ತೆಗೆದುಹಾಕಲಾಗಿದೆ ಮತ್ತು ಅನುವಾದಕರು ಸುಳ್ಳು “ವಾಗ್ವಾದದ” ಅನಿಸಿಕೆಯನ್ನು ಸೃಷ್ಟಿಸಿದ್ದಾರೆ. ವಾಸ್ತವದಲ್ಲಿ, 5:39ರಿಂದ 6:27 ರವರೆಗಿನ ಸಮಯ ಮುದ್ರೆಯಲ್ಲಿ, ವಾಂಗ್ ಯಿ ಯವರ ಅನುವಾದಕರು ಅವರಿಗೆ ಸಂದೇಶವನ್ನು ತಿಳಿಸುತ್ತಿದ್ದಾರೆ. ಅನುವಾದದ ನಂತರ, 6:28ಕ್ಕೆ, ಪ್ರಧಾನಿ ನೆತನ್ಯಾಹುರವರು ವಾಂಗ್ ಯಿ ಅವರನ್ನು “ಇಸ್ರೇಲ್‌ಗೆ ಸ್ವಾಗತ, ಜೆರುಸಲೆಮ್‌ಗೆ ಸ್ವಾಗತ” ಎಂದು ಹೇಳುವ ಮೂಲಕ ಸ್ವಾಗತಿಸುತ್ತಾರೆ ಮತ್ತು ನಂತರ ಪರಸ್ಪರ ಹೃತ್ಪೂರ್ವಕವಾಗಿ ವಂದಿಸುತ್ತಾರೆ. ಈ ನಿರ್ದಿಷ್ಟ ಕ್ಷಣದ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

ನಂತರ ನಾವು “ಪ್ರಧಾನಿ ನೆತನ್ಯಾಹು ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದರು, ಡಿಸೆಂಬರ್ 18, 2013” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. 2013ರಲ್ಲಿ ಟೈಮ್ಸ್ ಆಫ್ ಇಸ್ರೇಲ್ ಪ್ರಕಟಿಸಿದ ವರದಿಯು ಈ ವಿನಿಮಯವನ್ನು ದೃಢಪಡಿಸುತ್ತದೆ, ಹಾಗೂ ಇರಾನ್ ಕುರಿತು ಭದ್ರತಾ ಕಾಳಜಿಗಳು ಮತ್ತಿತರ ಬೆಳೆಯುತ್ತಿರುವ ಆರ್ಥಿಕ ಸಂಬಂಧಗಳ ಬಗ್ಗೆ ಬರೆಯುತ್ತದೆ. ವರದಿಯು “ನೆತನ್ಯಾಹು ಅವರು “ವಿಶ್ವದ ಶಾಂತಿಗಾಗಿ… ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ನಿರಾಕರಿಸಬೇಕು…” ಎಂದು ಹೇಗೆ ಒತ್ತಾಯಿಸುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸುತ್ತದೆ.
ಎರಡೂ ಕಡೆಯವರು “ಶಾಂತಿ ಮಾತುಕತೆಯ ಹಾದಿಯನ್ನು ಅನುಸರಿಸಬೇಕು” ಮತ್ತು ಸ್ಥಿರತೆಗಾಗಿ “ಪರಸ್ಪರ ನಂಬಿಕೆ”ಯನ್ನು ನಿರ್ಮಿಸಬೇಕು ಎಂದು ವಾಂಗ್ ಯಿ ಒತ್ತಿ ಹೇಳಿದರು. ಈ ಉದ್ವಿಗ್ನತೆಯ ಜೊತೆಗೆ, ಸಭೆಯು ಆರ್ಥಿಕ ಸಹಕಾರಕ್ಕೂ ಸಹ ಒತ್ತು ನೀಡಿತು, ಮತ್ತು ಇಬ್ಬರೂ ನಾಯಕರು ಪರಸ್ಪರ ಲಾಭಕ್ಕಾಗಿ “ಅತ್ಯಂತ ಉಜ್ವಲ ಭವಿಷ್ಯ”ದೊಂದಿಗೆ ತಮ್ಮ “ಅತಿ ಪೂರಕವಾದ” ಆರ್ಥಿಕತೆ ವ್ಯವಸ್ಥೆಗಳ ಕುರಿತು ಮಾತನಾಡಿದರು. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಹೀಗಾಗಿ, ಹೇಳಿಕೆ ಸುಳ್ಳು.
ಇದನ್ನೂ ಓದಿ:
ಇರಾನ್ USS ಜೆರಾಲ್ಡ್ ಆರ್.ಫೋರ್ಡ್ ಮೇಲೆ 17 ದಿಕ್ಕುಗಳಿಂದ ದಾಳಿ ಮಾಡಿದೆ ಎಂದು ಟ್ರಂಪ್ ಹೇಳಿದರೇ? ಸತ್ಯ ಪರಿಶೀಲನೆ
ಇರಾನ್ ಸಂಘರ್ಷದ ಮಧ್ಯೆ ಭಾಷಣ ಮಾಡುವಾಗ ಡೊನಾಲ್ಡ್ ಟ್ರಂಪ್ ನಿಜವಾಗಿಯೂ ಕುಸಿದುಬಿದ್ದರೇ? ಸತ್ಯ ಪರಿಶೀಲನೆ
