ನ್ಯೂಜಿಲೆಂಡ್‌ನ ಗೃಹ ಸಚಿವರು ಸಹ ಸನಾತನ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ ಎಂದು ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ

ನ್ಯೂಜಿಲೆಂಡ್‌ನ ಗೃಹ ಸಚಿವರು ಸಹ ಸನಾತನ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ ಎಂದು ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim:ನ್ಯೂಜಿಲೆಂಡ್‌ನ ಗೃಹ ಸಚಿವರು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿದ್ದಾರೆಂದು ತೋರಿಸುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಕಡೆನುಡಿ/Conclusion: ಸುಳ್ಳು. ನ್ಯೂಜಿಲೆಂಡ್‌ನ ಗೃಹ ಸಚಿವರು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿರುವುದನ್ನು ವೀಡಿಯೊ ತೋರಿಸುವುದಿಲ್ಲ, ಅದು ಬ್ರೆಂಟ್ ಗೋಬಲ್ ಎಂಬ ಅಮೇರಿಕದ ಯೋಗ ಶಿಕ್ಷಕರು ದೈನಂದಿನ ಪ್ರಾರ್ಥನೆಯಲ್ಲಿ ತೊಡಗಿರುವುದನ್ನು ತೋರಿಸುತ್ತದೆ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ವಿದೇಶಿ ವ್ಯಕ್ತಿಯೊಬ್ಬರು ಕೈಮುಗಿದು ಹಿಂದೂ ಆಚರಣೆಗಳನ್ನು ಪರಿಪಾಲಿಸುತ್ತಿರುವ ವೀಡಿಯೊವೊಂದು ಅದು ನ್ಯೂಜಿಲೆಂಡ್‌ನ ಗೃಹ ಸಚಿವರು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿರುವುದು ಎಂಬ ಹೇಳಿಕೆಯೊಂದಿಗೆ Xನಲ್ಲಿ (ಈ ಹಿಂದೆ  ಟ್ವಿಟರ್) ವೈರಲ್ […]

ಇಲ್ಲ, “ಡಿಎಂಕೆ ಹಿಂದೂಗಳನ್ನು ಮತಕ್ಕಾಗಿ ಬೇಡುವುದಿಲ್ಲ ” ಎಂದು ಸ್ಟಾಲಿನ್ ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ

ಇಲ್ಲ, “ಡಿಎಂಕೆ ಹಿಂದೂಗಳನ್ನು ಮತಕ್ಕಾಗಿ ಬೇಡುವುದಿಲ್ಲ ” ಎಂದು ಸ್ಟಾಲಿನ್ ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ

ಹೇಳಿಕೆ/Claim: “ನಮ್ಮ ಗೆಲುವು ಕೇವಲ ಹಿಂದೂ ಮತಗಳ ಮೇಲೆ ಅವಲಂಬಿತವಾಗಿರುವುದಾದರೆ, ನಾವು ಸೋತರೂ ಪರವಾಗಿಲ್ಲ. ಹಿಂದೂಗಳಲ್ಲಿ ಮತ ಯಾಚನೆ ಮಾಡುವ ಮಟ್ಟಕ್ಕೆ ಡಿಎಂಕೆ ಇಳಿಯುವುದಿಲ್ಲ” ಎಂದು ಸ್ಟಾಲಿನ್ ಹೇಳಿದರು. ಕಡೆನುಡಿ/Conclusion:  ಸುಳ್ಳು. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಇಂತಹ ಹೇಳಿಕೆಗಳನ್ನು ಹೊಂದಿರುವ ಯಾವುದೇ ವರದಿಯನ್ನು ನ್ಯೂಸ್ 7 ತಮಿಳು ಪ್ರಕಟಿಸಿಲ್ಲ. ಸ್ಟಾಲಿನ್ ಅವರು ಈ ಮಾತುಗಳನ್ನು ಹೇಳುತ್ತಿರುವಂತೆ  ತೋರಿಸಲು ನ್ಯೂಸ್7 ತಮಿಳಿನ ಹಳೆಯ ಸುದ್ದಿಯೊಂದನ್ನು ಬದಲಾಯಿಸಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ […]

ಇಲ್ಲ, ಎಲಾನ್ ಮಸ್ಕ್ ‘ನಾನು ಶಿಶುಕಾಮಿ’ ಎಂದು Xನಲ್ಲಿ ತನ್ನ ಉತ್ತರವನ್ನು ಪೋಸ್ಟ್ ಮಾಡಿಲ್ಲ; ಸತ್ಯ ಪರಿಶೀಲನೆ

ಇಲ್ಲ, ಎಲಾನ್ ಮಸ್ಕ್ ‘ನಾನು ಶಿಶುಕಾಮಿ’ ಎಂದು Xನಲ್ಲಿ ತನ್ನ ಉತ್ತರವನ್ನು ಪೋಸ್ಟ್ ಮಾಡಿಲ್ಲ; ಸತ್ಯ ಪರಿಶೀಲನೆ

ಹೇಳಿಕೆ/Claim: ಎಲಾನ್ ಮಸ್ಕ್ ತಾನು ಶಿಶುಕಾಮಿ ಎಂದು ಹೇಳುವ ಟ್ವೀಟ್‌ಗೆ ಸಕಾರಾತ್ಮಕವಾಗಿ ಉತ್ತರಿಸಿದರು. ಕಡೆನುಡಿ/Conclusion: ಸುಳ್ಳು, ಎಲಾನ್ ಮಸ್ಕ್ ಅವರ X ಅಥವಾ Twitter ಖಾತೆಯಿಂದ ಅಂತಹ ಯಾವುದೇ ಉತ್ತರವನ್ನು ನೀಡಲಾಗಿಲ್ಲ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು X ಸಾಮಾಜಿಕ ಜಾಲತಾಣದ ಮಾಲೀಕ ಎಲಾನ್ ಮಸ್ಕ್ ಅವರ ಪೋಸ್ಟ್ ನ ಸ್ಕ್ರೀನ್‌ಶಾಟ್‌ನೊಂದಿಗೆ ತೋರಿಸುವ ಹೇಳಿಕೆಯನ್ನು ಹೊಂದಿರುವ ಟ್ವೀಟ್ X ನಲ್ಲಿ ತಿರುಗಾಡುತ್ತಿದೆ. “ನೀವು ಶಿಶುಕಾಮಿ” ಎಂದು ಯಾರೋ ಸುಳ್ಳು ಹರಡುತ್ತಿರುವ ಬಗ್ಗೆ ಬಳಕೆದಾರರೊಬ್ಬರ ಎಚ್ಚರಿಕೆಯು […]

ಭಾರತದಲ್ಲಿ ಈಗ ಹೊಸ ರೈಲು ಹಳಿ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ವೈರಲ್ ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ

ಭಾರತದಲ್ಲಿ ಈಗ ಹೊಸ ರೈಲು ಹಳಿ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ವೈರಲ್ ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಅರವತ್ತು ವರ್ಷ ಹಿಂದಿನ ಅವಧಿಗೆ ಹೋಲಿಸಿದರೆ ಈಗ ಭಾರತದ ತಂತ್ರಜ್ಞಾನವು ಬಹಳ ಉತ್ತಮವಾಗಿದೆ ಎಂಬ ಹೇಳಿಕೆಯೊಂದಿಗೆ ರೈಲು ಹಳಿ ಇರಿಸುವ ಯಂತ್ರದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಕಡೆನುಡಿ/Conclusion: ಸುಳ್ಳು. ಭಾರತವು ಸುಧಾರಿತ ತಂತ್ರಜ್ಞಾನದೊಂದಿಗೆ ಹೊಸ ರೈಲುಮಾರ್ಗಗಳನ್ನು ಹೇಗೆ ನಿರ್ಮಿಸುತ್ತಿದೆ ಎಂಬುದನ್ನು ತೋರಿಸುವ ವೈರಲ್ ವೀಡಿಯೊ ವಾಸ್ತವವಾಗಿ ಚೈನಾ ಕಮ್ಯುನಿಕೇಷನ್ಸ್ ಕನ್ಸ್ಟ್ರಕ್ಷನ್ ಮಲೇಷ್ಯಾದಲ್ಲಿ ರೈಲು ಮಾರ್ಗವನ್ನು ನಿರ್ಮಿಸುತ್ತಿರುವ ವೀಡಿಯೊ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಟ್ಯಾಂಪಿಂಗ್ ಯಂತ್ರವೊಂದು ಚಲಿಸುತ್ತಾ ರೈಲು ಸ್ಲೀಪರ್ ಗಳನ್ನು ಇರಿಸುವ ಒಂದು ಸಣ್ಣ […]

ಜೋ ಬಿಡೆನ್, ರಿಷಿ ಸುನಕ್, ಜಸ್ಟಿನ್ ಟ್ರುಡೊ ರವರು ರಾಮಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವೀಡಿಯೊ ಹೇಳಿಕೊಂಡಿದೆ; ಸತ್ಯ ಪರಿಶೀಲನೆ

ಜೋ ಬಿಡೆನ್, ರಿಷಿ ಸುನಕ್, ಜಸ್ಟಿನ್ ಟ್ರುಡೊ ರವರು ರಾಮಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವೀಡಿಯೊ ಹೇಳಿಕೊಂಡಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಅಯೋಧ್ಯೆಯ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಹಲವಾರು ವಿಶ್ವ ನಾಯಕರು ಭಾಗವಹಿಸಿದ್ದರು. ಕಡೆನುಡಿ/Conclusion: ರಾಷ್ಟ್ರಗಳ ಮುಖ್ಯಸ್ಥರು ಸೆಪ್ಟೆಂಬರ್ 2023ರಲ್ಲಿ G20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದ ವೀಡಿಯೊವನ್ನು ಜನವರಿ 2024 ರಲ್ಲಿ ನಡೆದ ರಾಮಮಂದಿರ ಕಾರ್ಯಕ್ರಮದ್ದು ಎನ್ನುವಂತೆ ಹಂಚಿಕೊಳ್ಳಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ಅಮೇರಿಕಾದ ರಾಷ್ಟ್ರಪತಿ  ಜೋ ಬಿಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತಿತರ ವಿಶ್ವ ನಾಯಕರು  ಸೇರಿದಂತೆ ವಿದೇಶಿ ಗಣ್ಯರು ಜನವರಿ 22, 2024 […]

ಯೋಗಿ ಆದಿತ್ಯನಾಥ್ 2017 ರಲ್ಲಿ ಮುಖ್ಯ ಮಂತ್ರಿಯಾಗುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ 2 ವಿಮಾನ ನಿಲ್ದಾಣಗಳಿದ್ದವು? ಸತ್ಯ ಪರಿಶೀಲನೆ

ಯೋಗಿ ಆದಿತ್ಯನಾಥ್ 2017 ರಲ್ಲಿ ಮುಖ್ಯ ಮಂತ್ರಿಯಾಗುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ 2 ವಿಮಾನ ನಿಲ್ದಾಣಗಳಿದ್ದವು? ಸತ್ಯ ಪರಿಶೀಲನೆ

ಹೇಳಿಕೆ/Claim: ಬ್ರಿಟಿಷರ ಕಾಲದಿಂದ 2017ರ ವರೆಗೆ ಉತ್ತರ ಪ್ರದೇಶದಲ್ಲಿ ಕೇವಲ ಎರಡು ವಿಮಾನ ನಿಲ್ದಾಣಗಳಿದ್ದವು. ಯೋಗಿ ಆದಿತ್ಯನಾಥ್ ರವರಡಿಯಲ್ಲಿ ಈಗ 24 ವಿಮಾನ ನಿಲ್ದಾಣಗಳಿವೆ. ಕಡೆನುಡಿ/Conclusion: 2017 ರ ಮೊದಲು, ದಾಖಲೆಯನುಸಾರ  ಉತ್ತರ ಪ್ರದೇಶದಲ್ಲಿ 6 ವಿಮಾನ ನಿಲ್ದಾಣಗಳಿದ್ದವು ಮತ್ತು ಪ್ರಸ್ತುತ 10 ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣಗಳಿವೆ ಹಾಗೂ 14 ನಿರ್ಮಾಣ ಹಂತದಲ್ಲಿವೆ ಎಂದು ವಿಮಾನಯಾನ ಸಚಿವರ ಪ್ರಕಟಣೆ ತಿಳಿಸಿದೆ. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ ವಿವರಗಳು ಯೋಗಿ ಆದಿತ್ಯನಾಥ್ ರವರು 2017 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ […]

ನೇಪಾಳಿ ಹಿಂದೂಗಳು ಉಡುಗೊರೆಗಳೊಂದಿಗೆ ಅಯೋಧ್ಯೆಗೆ ತಲುಪಿದರೆಂದು ತಪ್ಪಾಗಿ ಹೇಳಿ ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

ನೇಪಾಳಿ ಹಿಂದೂಗಳು ಉಡುಗೊರೆಗಳೊಂದಿಗೆ ಅಯೋಧ್ಯೆಗೆ ತಲುಪಿದರೆಂದು ತಪ್ಪಾಗಿ ಹೇಳಿ ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ನೇಪಾಳದಲ್ಲಿ ಸೀತಾ ಮಾತೆಯ ಮನೆಯಿಂದ ಅಯೋಧ್ಯೆಯ ಭಗವಾನ್ ರಾಮ ಮಂದಿರದವರೆಗಿನ ಭವ್ಯ ಮೆರವಣಿಗೆಯಲ್ಲಿ ಭಗವಾನ ರಾಮ ಮತ್ತು ಸೀತಾ ಮಾತೆಗೆ ಮದುವೆಯ ಉಡುಗೊರೆಯನ್ನು ಒಯ್ಯಲಾಗುತ್ತಿದೆ ಎಂದು ಒಂದು ವೀಡಿಯೊ ಹೇಳಿತು. ಕಡೆನುಡಿ/Conclusion: ಸುಳ್ಳು. ಜುಲೈ 2023 ರಲ್ಲಿ ಧೀರೇಂದ್ರ ಕೃಷ್ಣ ಶಾಸ್ತ್ರಿಯವರ ‘ಭಗವತ್ ಕಥಾ‘ಗಾಗಿ 3-ಕಿಲೋಮೀಟರ್–ಉದ್ದದ ಕಲಶ ಯಾತ್ರೆಯಲ್ಲಿ ಸಾವಿರಾರು ಮಹಿಳೆಯರ ಹಳೆಯ ವೀಡಿಯೊವನ್ನು ಜನವರಿ 2024 ರಲ್ಲಿ ಅಯೋಧ್ಯೆಗೆ ನೇಪಾಳ ಭಕ್ತರ ಯಾತ್ರೆ ಎಂದು ಹಂಚಿಕೊಳ್ಳಲಾಯಿತು. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಜನವರಿ […]

ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ ಆಂಧ್ರ, ತೆಲಂಗಾಣದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆಯೇ? ಸತ್ಯ ಪರಿಶೀಲನೆ

ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ ಆಂಧ್ರ, ತೆಲಂಗಾಣದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಎರಡು ತೆಲುಗು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿವೆ. ಕಡೆನುಡಿ/Conclusion: ಪ್ರಸ್ತುತ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ತೆಲುಗು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿಲ್ಲ. ಹಳೆಯ ಮಾರ್ಚ್ 2020 ರ ವೀಡಿಯೊವನ್ನು ಈಗ ಹಂಚಿಕೊಳ್ಳಲಾಗುತ್ತಿದೆ. ರೇಟಿಂಗ್:ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ ವಿವರಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕೊರೊನಾದ JN.1 ರೂಪಾಂತರದ ಹೊಸ  ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಎರಡೂ ತೆಲುಗು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ […]

‘ಹೆಚ್ಚು ಹಳದಿ’ಯಾಗಿರುವ ಅರಿಶಿನವು ಸೀಸದ ಕ್ರೋಮೇಟ್ ಅನ್ನು ಹೊಂದಿರುತ್ತದೆ ಎಂದು ವೈರಲ್ ಸಂದೇಶವು ಹೇಳುತ್ತದೆ; ಸತ್ಯ ಪರಿಶೀಲನೆ

‘ಹೆಚ್ಚು ಹಳದಿ’ಯಾಗಿರುವ  ಅರಿಶಿನವು ಸೀಸದ ಕ್ರೋಮೇಟ್ ಅನ್ನು ಹೊಂದಿರುತ್ತದೆ ಎಂದು ವೈರಲ್ ಸಂದೇಶವು ಹೇಳುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ‘ಹೆಚ್ಚು ಹಳದಿಯಾಗಿರುವ’ ಅರಿಶಿನವು ಸೀಸದ ಕ್ರೋಮೇಟ್ ಪುಡಿಯನ್ನು ಹೊಂದಿರುತ್ತದೆ ಎಂದು ವೈರಲ್ ಸಂದೇಶವೊಂದು ಹೇಳುತ್ತದೆ. ಕಡೆನುಡಿ/Conclusion: ಅರಿಶಿನವು ಹೆಚ್ಚು ಹಳದಿಯಾಗಿ ಕಾಣುವಂತೆ ಮಾಡಲು ಅದರಲ್ಲಿ ಸೀಸದ ಕ್ರೋಮೇಟ್ ಅನ್ನು ಬಳಸಲಾಗುತ್ತದೆ. ಅರಿಶಿನದಲ್ಲಿ ಸೀಸದ ಕ್ರೋಮೇಟ್ ಇರಬಾರದು ಎಂದು FSSAI ಹೇಳಿದೆ. ಅಷ್ಟೇ ಅಲ್ಲದೆ, ಅರಿಶಿನದಲ್ಲಿ ಕಲಬೆರಕೆಯನ್ನು ಪರೀಕ್ಷಿಸಲು ಜನರು ತಮ್ಮ ಮನೆಗಳಲ್ಲಿ ನಡೆಸಬಹುದಾದ ಸರಳ ಪರೀಕ್ಷೆಗಳನ್ನು ಸಹ ಸಂಸ್ಥೆಯು ಬಹಿರಂಗಪಡಿಸಿದೆ. ಮಾರುಕಟ್ಟೆಯಲ್ಲಿ ಪ್ರಮಾಣೀಕೃತ ಮತ್ತು ಅಧಿಕೃತ ಮಾರಾಟಗಾರರಿಂದ ಅರಿಶಿನವನ್ನು ಖರೀದಿಸಲು ಸಲಹೆ ನೀಡಲಾಗಿದೆ. […]

1 22 23 24 25 26 29