ಪ್ಯಾಲೇಸ್ಟಿನಿನ ಮಿಲಿಟರಿ ಗುಂಪಾದ ಹಮಾಸ್, ಇಸ್ರೇಲ್ ಮೇಲೆ ದಾಳಿ ನಡೆಸಲು ಮೋಟರೀಕೃತ ಪ್ಯಾರಾಗ್ಲೈಡರ್‌ಗಳನ್ನು ಬಳಸಿತು. ಆದರೆ, ಹಮಾಸ್‌ನ ನಿಜವಾದ ದಾಳಿಯನ್ನು ತೋರಿಸುತ್ತಿರುವುದಾಗಿ ಹೇಳುವ ದಾಳಿಗೆ ಸಂಬಂಧಿಸಿರದ ಇತರ ಅನೇಕ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಂತಹ ಒಂದು ವೀಡಿಯೊದಲ್ಲಿ ಪ್ಯಾರಾಗ್ಲೈಡರ್‌ಗಳು ಆಟದ ಮೈದಾನದಂತೆ ಕಾಣುತ್ತಿರುವ ಸ್ಥಳದೊಳಗೆ ಹಾರಿ ಬರುವುದನ್ನು ಕಾಣಬಹುದು. ವೀಡಿಯೊದೊಂದಿಗಿನ ಹೇಳಿಕೆಯ ಪ್ರಕಾರ “ಹಮಾಸ್ ಭಯೋತ್ಪಾದಕರು ಇಸ್ರೇಲ್ ನೊಳಗೆ ಪ್ಯಾರಾಗ್ಲೈಡ್ ಮಾಡಿದರು, ಅಮಾಯಕ ನಾಗರಿಕರನ್ನು ಹತ್ಯೆಗೊಳಿಸಲು, ಮಹಿಳೆಯರು ಮತ್ತು ಮಕ್ಕಳನ್ನು ಅತ್ಯಾಚಾರಕ್ಕೊಳಗಾಗಿಸಿ ಕೊಲ್ಲಲು ಮನೆ-ಮನೆಗೆ ಹೋದರು.” […]
Claim/ಹೇಳಿಕೆ: ಚಿತ್ರವು 36 ವರ್ಷಗಳಿಗೊಮ್ಮೆ ಅರಳುವ ನಾಗಪುಷ್ಪ ಹೂವವನ್ನು ತೋರಿಸುತ್ತದೆ. Conclusion/ಕಡೆನುಡಿ: ಈ ಚಿತ್ರವು ಸಮುದ್ರ ಪ್ರಾಣಿಯಾದ ಸಮುದ್ರ ಪೆನ್ ಅನ್ನು ತೋರಿಸುತ್ತದೆ. ನಾಗಪುಷ್ಪವು ಇಂಡೋ- ಮಾಲಯ ಪ್ರದೇಶದಲ್ಲಿ ಬೆಳೆಯುವ ಒಂದು ನಿತ್ಯಹರಿದ್ವರ್ಣ ಮರವಾಗಿದೆ. ರೇಟಿಂಗ್: ಶುದ್ಧ ಸುಳ್ಳು– Fact Check ವಿವರಗಳು: 36 ವರ್ಷಗಳಿಗೊಮ್ಮೆ ಅರಳುತ್ತಿರುವ ನಾಗಪುಷ್ಪ ಹೂವು ಎಂದು ಹೇಳಿಕೆ ನೀಡುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಚಿತ್ರದ ಜೊತೆಯಲ್ಲಿರುವ ಶೀರ್ಷಿಕೆಯು ಹೀಗಿದೆ- “ನಿನ್ನೆ ಮುಂಜಾನೆ 3:30 ಕ್ಕೆ ಮಾನಸ ಸರೋವರದಲ್ಲಿ ಈ […]
1982ರ ಭಾರತೀಯ ಅಂಚೆ ಚೀಟಿ ಎಂದು ಆರೋಪಿಸಲಾಗುತ್ತಿರುವ ಒಂದು ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಅಂಚೆ ಚೀಟಿಯಲ್ಲಿ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ಕುಸ್ತಿಯಾಡುತ್ತಿದ್ದು ಆ ಎರಡನೆಯ ವ್ಯಕ್ತಿಯನ್ನು ನೆಲದಿಂದ ಮೇಲೆತ್ತಿರುವುದನ್ನು ಕಾಣಬಹುದು. ಚಿತ್ರದ ಜೊತೆಗೆ ವೈರಲ್ ಆಗುತ್ತಿರುವ ಹೇಳಿಕೆಯ ಪ್ರಕಾರ ಈ ಅಂಚೆ ಚೀಟಿಯು ಮುಸ್ಲಿಂ ಕುಸ್ತಿಪಟುವೊಬ್ಬನು ಅಗ್ರ ಹಿಂದೂ ಪಟುವನ್ನು ಹೊಡೆಯುತ್ತಿರುವುದನ್ನು ಚಿತ್ರಿಸುತ್ತದೆ. ಹೇಳಿಕೆಯಲ್ಲಿರುವ ವಿಷಯ ಹೀಗಿದೆ: 1982ರಲ್ಲಿ ಏಷ್ಯನ್ ಕ್ರೀಡಾಕೂಟದ ಸಮಯದಲ್ಲಿ ಇಂದಿರಾ ಗಾಂಧಿ ಈ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು. […]
ಕೌನ್ ಬನೇಗಾ ಕರೋರ್ಪತಿ ಕಾರ್ಯಕ್ರಮದ್ದು ಎನ್ನಲಾಗಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮಿತಾಭ್ ಬಚ್ಚನ್ ರವರು ಸ್ಪರ್ಧಿಗೆ ರೂ. 20,000ಕ್ಕೆ ಒಂದು ರಾಜಕೀಯ ಪ್ರಶ್ನೆ ಕೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಪ್ರಶ್ನೆ ಹೀಗಿದೆ, इनमें से किस मुख्यमंत्री को उनकी झूठी घोषना के करण घोषना मशीन कहा जाता है? [ಅನುವಾದ: ಇವರಲ್ಲಿ ಯಾವ ಮುಖ್ಯಮಂತ್ರಿಗಳನ್ನು ಅವರ ಸುಳ್ಳು ಘೋಷಣೆಗಳ ಕಾರಣದಿಂದಾಗಿ ಘೋಷಣಾ ಮಶೀನ್ ಎಂದು ಕರೆಯುತ್ತಾರೆ?] ಸ್ಪರ್ಧಿಗೆ ಕೊಡಲಾದ ಆಯ್ಕೆಗಳು […]
ಚೀನಾದಲ್ಲಿ ತಯಾರಾದ ಪಟಾಕಿಗಳನ್ನು ಜನರು ಖರೀದಿಸಬೇಡಿ ಎಂಬ ಸಂದೇಶವು ದೀಪಾವಳಿಗೂ ಮುನ್ನ ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದರ ಪ್ರಕಾರ ಚೀನಾದ ಪಟಾಕಿಗಳು ಕಾರ್ಬನ್ ಮಾನಾಕ್ಸೈಡ್‌ಗಿಂತ ಹೆಚ್ಚು ವಿಷಕಾರಿ ಹಾಗೂ ಅದು ಕ್ಯಾನ್ಸರ್‌ಗೆ ಕಾರಣವಾಗಬಹುದು. ಸಂದೇಶದ ಇನ್ನೊಂದು ಭಾಗದಲ್ಲಿ ವಿಶೇಷ ಚೀನೀ ಅಲಂಕಾರಿಕ ದೀಪಗಳು ಪಾದರಸವನ್ನು ಹೊಂದಿರುವುದರಿಂದ ಅವು ಕುರುಡುತನವನ್ನು ಉಂಟುಮಾಡಬಹುದು ಎಂದು ಹೇಳಲಾಗಿದೆ. ಇದು ಹಿರಿಯ ತನಿಖಾ ಅಧಿಕಾರಿಗಳು ಜಾರಿಗೊಳಿಸಿದ, ಗೃಹ ಸಚಿವಾಲಯವು ಹಂಚಿಕೊಂಡಿರುವ ಸಲಹೆ ಎಂದು ಈ ಸಂದೇಶವು ಹೇಳಿಕೊಳ್ಳುತ್ತದೆ. ಪಾಕಿಸ್ತಾನವು ಭಾರತದ ಮೇಲೆ ನೇರ […]
ಭಾರತೀಯ ಜನತಾ ಪಕ್ಷದ (ಬಿಜೆಪಿ) ರಮೇಶ್ ಬಿಧುರಿಯವರು ಸಂಸತ್ ಚರ್ಚೆಯ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ನಾಯಕರೊಬರನ್ನು ನಿಂದಿಸಿದ್ದಕ್ಕಾಗಿ ಇತ್ತೀಚೆಗೆ ಸುದ್ದಿಯಲ್ಲಿ ಬಂದರು. ಅಂದಿನಿಂದ, ಅವರಿಗೆ ಸಂಬಂಧಿತ ಹಲವಾರು ಹೇಳಿಕೆಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಈ ಬಾರಿ ಅವರಿಗೆ ಸಂಬಂಧಿಸಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. FACT CHECK ಉತ್ತರ ಪ್ರದೇಶ ಮತ್ತು ಬಿಹಾರದಿಂದ ವಲಸೆ ಬಂದಿರುವ ಜನರನ್ನು ದೆಹಲಿಯಿಂದ ಓಡಿಸಬೇಕು ಎಂದು ರಮೇಶ್ ಬಿಧುರಿಯವರು ಹೇಳಿದ್ದಾರೆ ಎಂದು ಪತ್ರಿಕಾ ವಾರ್ತೆಯ ಚಿತ್ರದೊಂದಿಗಿರುವ ಒಂದು ಹೇಳಿಕೆಯು ಪ್ರತಿಪಾದಿಸುತ್ತದೆ. […]
ಭಾರತ ಮತ್ತು ಕೆನಡಾ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಅನೇಕ ಹೇಳಿಕೆಗಳು ಮತ್ತು ವೀಡಿಯೊಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಈ ಗೊಂದಲದೆಡೆಯಲ್ಲಿ, ಕೆನಡಾದ ವಿರೋಧ ಪಕ್ಷದ ನಾಯಕರು ಕೆನಡಾದ ಪ್ರಧಾನಿ- ಜಸ್ಟಿನ್ ಟ್ರುಡೊರವರನ್ನು ಟೀಕಿಸುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ವಿರೋಧ ಪಕ್ಷದ ನಾಯಕರು ಭಾರತ-ಕೆನಡಾದ ರಾಜತಾಂತ್ರಿಕ ಸಂಬಂಧವನ್ನು ಹಾಳು ಮಾಡಿದ್ದಕ್ಕಾಗಿ ಟ್ರುಡೊ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದನ್ನು ಕಾಣಬಹುದು. News: 🇨🇦 In the Canadian Parliament, Opposition Leader Scheer […]
ಕೆಲವು ಹುಡುಗರು ಹಿಜಾಬ್ ಧರಿಸಿದ ಒಬ್ಬ ಹುಡುಗಿಯನ್ನು ಬೆದರಿಸುತ್ತಿರುವ ಮತ್ತು ಒದೆಯುತ್ತಿರುವ ತರಗತಿ ಕೊಠಡಿಯನ್ನು ತೋರಿಸುವ ಒಂದು ವೀಡಿಯೊ ವೈರಲ್ ಆಗುತ್ತಿದೆ. ಈ ಕ್ಲಿಪ್ ಕೋಮುವಾದ ಪ್ರಚೋದಿಸುವ ಶೀರ್ಷಿಕೆಯೊಂದಿಗೆ ವೈರಲ್ ಆಗುತ್ತಿದ್ದು, ಆ ಹುಡುಗರು ಹಿಂದೂಗಳು ಮತ್ತು ಹುಡುಗಿ ಮುಸ್ಲಿಮಳು ಎಂದಿದು ಚಿತ್ರಿಸುತ್ತದೆ. ಪೋಸ್ಟ್ ಅನ್ನು ಇಲ್ಲಿ ನೋಡಿ: ये किसी कॉलेज का वीडियो है , और ये ऐसा कॉलेज है जहां हिंदू लड़के लड़कियां साथ पढ़ाई करते हैं […]
ಸಾಂಪ್ರದಾಯಿಕ ತಿರುಪತಿ ಲಡ್ಡುಗಳ ತಯಾರಿಕೆಗಾಗಿ ನಂದಿನಿ ತುಪ್ಪದ ಪೂರೈಕೆಗೆ ಸಂಬಂಧಿತ ಬೆಲೆ ಪ್ರಸ್ತಾವನೆಯನ್ನು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ತಿರಸ್ಕರಿಸಿತು ಎಂದು ಕರ್ನಾಟಕ ಹಾಲು ಮಹಾಮಂಡಳಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಹೇಳಿಕೆಗಳು ಕಾಣಿಸಿಕೊಂಡಿವೆ. ಈ ಸುದ್ದಿ ವೈರಲ್ ಆಗಿದ್ದು, ಮೇ 2023ರ ಚುನಾವಣೆ ವೇಳೆ ರಾಜ್ಯದಲ್ಲಿ ಅಮುಲ್ ಪ್ರವೇಶವನ್ನು ಎತ್ತಿ ಹಿಡಿದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ಕೆಎಂಎಫ್ ಮತ್ತು ಅದರ ನಂದಿನಿ ತುಪ್ಪದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸುವ ಹಲವು ಹೇಳಿಕೆಗಳು […]
ಒಬ್ಬ ವ್ಯಕ್ತಿ ಮತ್ತು ಆತನ ಕಾರಿನ ಮೇಲೆ ಜನರ ಗುಂಪೊಂದು ಹಲ್ಲೆ ನಡೆಸುತ್ತಿರುವ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವ್ಯಕ್ತಿಯು ಮಧ್ಯಪ್ರದೇಶದ ಬಿಜೆಪಿ ನಾಯಕ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಹೇಳುತ್ತವೆ. ಆತ ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದ್ದು, ಆ ಕಾರಣಕ್ಕೆ ಜನರು ಆತನ ಮೇಲೆ ಹಲ್ಲೆ ನಡೆಸಿದರೆಂದು ವೀಡಿಯೊದಲ್ಲಿ ಹೇಳಲಾಗಿದೆ. मध्य प्रदेश से भाजपा के रुझान आने लगे हैंl # विधायक जी की जोरदार कुटाई […]