ಜೋಹ್ರಾನ್ ಮಮ್ದಾನಿಯವರ ಹೇಳಿಕೆಯ ನಂತರ ಅಮೆರಿಕ ನಿಜವಾಗಿಯೂ ಕದ್ದ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿತೇ? ಸತ್ಯ ಪರಿಶೀಲನೆ

ಜೋಹ್ರಾನ್ ಮಮ್ದಾನಿಯವರ ಹೇಳಿಕೆಯ ನಂತರ ಅಮೆರಿಕ ನಿಜವಾಗಿಯೂ ಕದ್ದ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಜೋಹ್ರಾನ್ ಮಮ್ದಾನಿಯವರ ಹೇಳಿಕೆಯ ನಂತರ ನ್ಯೂಯಾರ್ಕ್ ಅಧಿಕಾರಿಗಳು 657 ಕ್ಕೂ ಹೆಚ್ಚು ಕದ್ದ ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿದ್ದಾರೆ.

ಕಡೆನುಡಿ/Conclusion: ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ಮ್ಯಾನ್‌ಹ್ಯಾಟನ್ ಜಿಲ್ಲಾ ವಕೀಲರ ಪ್ರಾಚೀನ ವಸ್ತುಗಳ ಕಳ್ಳಸಾಗಣೆ ಘಟಕದ ದೀರ್ಘಕಾಲೀನ ಅಪರಾಧಿ ತನಿಖೆಗಳಿಂದಾಗಿ ಈ ವಸ್ತುಗಳ ಹಿಂದಿರುಗಿವೆ ಮತ್ತು ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವ ಬಗ್ಗೆ ಜೋಹ್ರಾನ್ ಮಮ್ದಾನಿಯವರ ಇತ್ತೀಚಿನ ಹೇಳಿಕೆಗೆ ಇದು ಸಂಬಂಧಿಸಿಲ್ಲ.

ರೇಟಿಂಗ್Rating: ದಾರಿ ತಪ್ಪಿಸುವಂತಿದೆ

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ

******************************************************

ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿಯವರ ಹೇಳಿಕೆಯ ನಂತರ ನ್ಯೂಯಾರ್ಕ್ ಅಧಿಕಾರಿಗಳು ಕದ್ದ ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘ಪಿಕ್ಚರ್ಸ್‌ಫೋಲ್ಡರ್’ ಅಂತಹ ಪೋಸ್ಟ್ ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ನ್ಯೂಯಾರ್ಕ್ ಅಧಿಕಾರಿಗಳು $14 ಮಿಲಿಯ ಮೌಲ್ಯದ 657ಕ್ಕೂ ಹೆಚ್ಚು ಕದ್ದ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ್ದಾರೆ. ಇತ್ತೀಚೆಗೆ UK ರಾಜಮನೆತನದವರ ನಗರ ಭೇಟಿಯ ಸಂದರ್ಭದಲ್ಲಿ ಮೇಯರ್ ಜೋಹ್ರಾನ್ ಮಮ್ದಾನಿಯವರು ಕೊಹಿನೂರ್ ವಜ್ರವನ್ನು ಹಿಂದಿರುಗಿಸುವ ವಿಷಯವನ್ನು ಎತ್ತಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ.” ಈ ಪೋಸ್ಟ್ 719,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, ಇದನ್ನು ಕೆಳಗೆ ನೋಡಬಹುದು –

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದು, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಮ್ಯಾನ್‌ಹ್ಯಾಟನ್ ಜಿಲ್ಲಾ ವಕೀಲರ ಪ್ರಾಚೀನ ವಸ್ತುಗಳ ಕಳ್ಳಸಾಗಣೆ ಘಟಕದ ನಿರಂತರ ತನಿಖೆಗಳ ಭಾಗವಾಗಿ ಕಲಾಕೃತಿಗಳನ್ನು ಹಿಂತಿರುಗಿಸಲಾಯಿತು, ಮತ್ತು ಜೋಹ್ರಾನ್ ಮಮ್ದಾನಿಯವರ ಯಾವುದೇ ಇತ್ತೀಚಿನ ಹೇಳಿಕೆಗಳಿಂದಾಗಿ ಅಲ್ಲ. ಮ್ಯಾನ್‌ಹ್ಯಾಟನ್ ಪ್ರಾಚೀನ ವಸ್ತುಗಳ ಕಳ್ಳಸಾಗಣೆ ಘಟಕ ಕೈಗೊಂಡ ಕ್ರಮ ಅಥವಾ ಅವರ ಪ್ರಯತ್ನಕ್ಕೂ ಕೊಹಿನೂರ್ ವಜ್ರದ ಬಗ್ಗೆ ಮೇಯರ್ ಮಮ್ದಾನಿಯವರ ಹೇಳಿಕೆಗಳಿಗೂ ಯಾವುದೇ ಸಂಬಂಧವಿಲ್ಲ.

ಅವರ ಹೇಳಿಕೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಕೊಹಿನೂರ್ ಬಗ್ಗೆ ಮಮ್ದಾನಿ ಹೇಳಿಕೆ” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಏಪ್ರಿಲ್ 30, 2026ರಂದು ಪ್ರಕಟವಾದ NBC ವರದಿಯ ಪ್ರಕಾರ, ಕಿಂಗ್ ಚಾರ್ಲ್ಸ್ III (ಆ ಸಮಯದಲ್ಲಿ ತಮ್ಮ US ಭೇಟಿಯಲ್ಲಿದ್ದರು) ಅವರೊಂದಿಗೆ ಏನು ಮಾತನಾಡುತ್ತೀರಿ ಎಂದು NYC ಮೇಯರ್ ಜೋಹ್ರಾನ್ ಮಮ್ದಾನಿಯವರನ್ನು ಕೇಳಲಾಗಿತ್ತು, ಆಗ ಅವರು ಕೊಹಿನೂರ್ ವಿಷಯದ ಬಗ್ಗೆ ಪ್ರತಿಕ್ರಿಯಿಸಿದರು. ವರದಿಯು ಅವರ ಹೇಳಿಕೆಗಳ ಬಗ್ಗೆ ಹೀಗೆಂದು ಹೇಳುತ್ತದೆ: “ನಾನು ಪ್ರತ್ಯೇಕವಾಗಿ ರಾಜರೊಂದಿಗೆ ಮಾತನಾಡುವುದಾದ, ನಾನು ಬಹುಶಃ ಅವರನ್ನು ಕೊಹ್-ಇ-ನೂರ್ ವಜ್ರವನ್ನು ಹಿಂದಿರುಗಿಸಲು ಪ್ರೋತ್ಸಾಹಿಸುವೆನೇನೊ,” ವರದಿಯ ಒಂದು ಭಾಗವನ್ನು ಕೆಳಗೆ ನೋಡಿ –

ಇದರ ನಂತರ, ನ್ಯೂಯಾರ್ಕ್ ಅಧಿಕಾರಿಗಳು 657 ಕಳುವಾದ ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿರುವ ಬಗ್ಗೆ ನಾವು ಹುಡುಕಿದೆವು, ಆಗ ಏಪ್ರಿಲ್ 30, 2026ರಂದು ಇಂಡಿಯಾ ಟುಡೇ ನವೀಕರಿಸಿದ ವರದಿಯು ನಮಗೆ ಸಿಕ್ಕಿತು. “ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಕಚೇರಿಯು ಕಳ್ಳಸಾಗಣೆ ತನಿಖೆಗಳ ನಂತರ ಸುಮಾರು $14 ಮಿಲಿಯ ಮೌಲ್ಯದ 657 ಕಳುವಾದ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವಾದ್ಯಂತ ಸಾವಿರಾರು ಕದ್ದ ವಸ್ತುಗಳನ್ನು ಹಿಂಪಡೆಯಲು ಅಧಿಕಾರಿಗಳು ಪ್ರಯತ್ನಗಳನ್ನು ಮುಂದುವರಿಸಿತ್ತಿರುವಂತೆಯೂ, ಈ ಸಾಗಣೆಯಲ್ಲಿ ಒಂದು ಮಿಲಿಯ $ ಕಂಚಿನ ಅವಲೋಕಿತೇಶ್ವರ, $7.5 ಮಿಲಿಯ ಮರಳುಗಲ್ಲಿನ ಬುದ್ಧ, ನರ್ತಿಸುತ್ತಿರುವ ಗಣೇಶನ ಮರಳುಗಲ್ಲಿನ ಪ್ರತಿಮೆಯಂತಹ ಅಪರೂಪದ ಕಲಾಕೃತಿಗಳು ಸೇರಿವೆ.

ವರದಿಯಲ್ಲಿ ಎಲ್ಲಿಯೂ ಮಮ್ದಾನಿಯವರ ಹೇಳಿಕೆ ಅಥವಾ ಅವರ ನಿರ್ದೇಶನದ ಬಗ್ಗೆ ಉಲ್ಲೇಖವಿಲ್ಲ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಗುರುವಾರ 30 ಏಪ್ರಿಲ್ 2026ರಂದು ಪ್ರಕಟವಾದ ಗಾರ್ಡಿಯನ್ ವರದಿಯ ಪ್ರಕಾರ, “ಸಮಾರಂಭವನ್ನು ತಿಂಗಳುಗಳ ಮೊದಲೇ ನಿಗದಿಪಡಿಸಲಾಗಿತ್ತು ಮತ್ತು ಅದು ರಾಜಮನೆತನದ ಭೇಟಿಗೆ ಸಂಬಂಧಿಸಿರಲಿಲ್ಲ ಎಂದು ಪ್ರಾಸಿಕ್ಯೂಟರ್ ಕಚೇರಿಯ ವಕ್ತಾರರು ಹೇಳಿದರು.” ಆದ್ದರಿಂದ, ಕಳುವಾದ 657ಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸುವ ನಿಜವಾದ ಶ್ರೇಯವು ವರ್ಷಗಳ ಕಾಲ ನಡೆದ ಕಾನೂನು ಜಾರಿ ತನಿಖೆಗಳಿಗೆ ಸಲ್ಲುತ್ತದೆ, ಜೋಹ್ರಾನ್ ಮಮ್ದಾನಿಯವರ ಹೇಳಿಕೆಗಳಿಗೆ ಅಲ್ಲ.

2024 ರಲ್ಲಿ, ಭಾರತ ಮತ್ತು US ದೇಶಗಳು, ಪ್ರಾಚೀನ ವಸ್ತುಗಳನ್ನು ಹಿಂಪಡೆಯುವ ಸಲುವಾಗಿ ತಮ್ಮ ಮೊಟ್ಟಮೊದಲ ಒಪ್ಪಂದಕ್ಕೆ ಸಹಿ ಹಾಕಿದವು.

ಆದ್ದರಿಂದ, ಈ ಹೇಳಿಕೆ ದಾರಿತಪ್ಪಿಸುವಂಥದ್ದು ಎನ್ನಬಹುದು.


ಇದನ್ನೂ ಓದಿ:

ದುಬೈಯಲ್ಲಿ ಕಪ್ಪು ಸಿಂಹವನ್ನು ಹರಾಜಿನಲ್ಲಿ ಮಾರಾಟ ಮಾಡುತ್ತಿರುವುದನ್ನು ನಿಜವಾಗಿಯೂ ಈ ವೀಡಿಯೊದಲ್ಲಿ ತೋರಿಸಲಾಗುತ್ತಿದೆಯೇ? ಸತ್ಯ ಪರಿಶೀಲನೆ

ಆಪಲ್ CEO ಟಿಮ್ ಕುಕ್ ತಮ್ಮ ಹುದ್ದೆಯಿಂದ ನಿವೃತ್ತಿ ಘೋಷಿಸಿದ್ದಾರೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.