ಹೇಳಿಕೆ/Claim : ಇಲಾನ್ ಮಸ್ಕ್ ಸ್ಪಿರಿಟ್ ಏರ್ಲೈನ್ಸ್ ಅನ್ನು ಖರೀದಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಕಡೆನುಡಿ/Conclusion : ಹೇಳಿಕೆ ಸುಳ್ಳು. ಇಲಾನ್ ಮಸ್ಕ್ ಒಳಗೊಂಡ ಯಾವುದೇ ಸ್ವಾಧೀನ ಮಾತುಕತೆಗಳನ್ನು ಬೆಂಬಲಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಸ್ಪಿರಿಟ್ ಏರ್ಲೈನ್ಸ್ನ ಅಂತಹ ಸ್ವಾಧೀನದ ಕುರಿತು ಇಲಾನ್ ಮಸ್ಕ್ ಅವರ ಯಾವುದೇ ಅಧಿಕೃತ ಹೇಳಿಕೆಗಳು, ಪ್ರಕಟಣೆಗಳು ಅಥವಾ ಯಾವುದೇ ವೈಯಕ್ತಿಕ ಕಾಮೆಂಟ್‌ಗಳಿಲ್ಲ.
ರೇಟಿಂಗ್Rating : ಸುಳ್ಳು ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ
******************************************************
ಸ್ಪಿರಿಟ್ ಏರ್ಲೈನ್ಸ್ ಅನ್ನು ಇಲಾನ್ ಮಸ್ಕ್ ಸ್ವಾಧೀನಪಡಿಸಿಕೊಳ್ಳಲಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘ಫ್ಲಕ್ಸ್‌ಚಾರ್ಟ್ಸ್’ ಅಂತಹ ಒಂದು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಾ “ಸ್ವಾಧೀನ: ಇಲಾನ್ ಮಸ್ಕ್ ಸ್ಪಿರಿಟ್ ಏರ್ಲೈನ್ಸ್ ಅನ್ನು ಖರೀದಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ” ಎಂದು ಹೇಳಿದ್ದಾರೆ. ಪೋಸ್ಟ್ ಜೊತೆಗೆ ಇಲಾನ್ ಮಸ್ಕ್ ಅವರ ಫೋಟೋ ಮತ್ತು ಸ್ಪಿರಿಟ್ ಏರ್ಲೈನ್ಸ್ ವಿಮಾನದ ಚಿತ್ರವಿದೆ. ಈ ಪೋಸ್ಟ್ 257,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, ಅದನ್ನು ಕೆಳಗೆ ನೋಡಬಹುದು –
ACQUISITION:
Elon Musk is reportedly in talks to purchase Spirit Airlines. pic.twitter.com/SPOvVeX4Ft— Flux Charts (@FluxCharts) May 2, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
Elon Musk is said to be purchasing Spirit Airlines, with plans to completely reinvent air travel. pic.twitter.com/Kd21GJ22ha
— Headlines (@headlines_blog) May 2, 2026
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಸ್ಪಿರಿಟ್ ಏರ್ಲೈನ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಇಲಾನ್ ಮಸ್ಕ್ ಯಾವುದೇ ಮಾತುಕತೆಗಳಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಮಸ್ಕ್ ಅವರ ಯಾವುದೇ ಅಧಿಕೃತ ಪ್ರಕಟಣೆಗಳು, ಪರಿಶೀಲಿತ ಹೇಳಿಕೆಗಳು ಅಥವಾ ಸಾರ್ವಜನಿಕ ಹೇಳಿಕೆಗಳು ಅಂತಹ ವಿಷಯವನ್ನು ಬೆಂಬಲಿಸುವುದಿಲ್ಲ.
“ಸ್ಪಿರಿಟ್ ಏರ್ಲೈನ್ಸ್ ಅನ್ನು ಸ್ವಾಧೀನಪಡಿಸಿಕೊಂಡ ಮಸ್ಕ್” ಎಂಬ ಪದಗಳೊಂದಿಗೆ ನಾವು ಮೊದಲು ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ತಮ್ಮ ಅಂತಿಮ ವಿಮಾನ (NK1833 ಡೆಟ್ರಾಯಿಟ್ ನಿಂದ ಡಲ್ಲಾಸ್ ಗೆ) ಶನಿವಾರ ಮಧ್ಯರಾತ್ರಿಯ ಲ್ಯಾಂಡ್ ಆದ ನಂತರವೇ ಸ್ಪಿರಿಟ್ ಏರ್ಲೈನ್ಸ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು ಎಂದು ನಮಗೆ ತಿಳಿದುಬಂದಿತು, ಇದು ಸುಮಾರು ಎರಡು ದಶಕಗಳ ಅಲ್ಟ್ರಾ-ಬಜೆಟ್ ಹಾರಾಟದ ಅಂತ್ಯವನ್ನು ಸೂಚಿಸುತ್ತದೆ. ಇರಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಇಂಧನ ವೆಚ್ಚದ ತೀವ್ರ ಏರಿಕೆಯಿಂದಾಗಿ ಈ ಕುಸಿತ ಸಂಭವಿಸಿತು, ಇದು ವಾರದ ವೆಚ್ಚಗಳಲ್ಲಿ $10–15 ಮಿಲಿಯಗಳನ್ನು ಸೇರಿಸಿತು, ಇದರಿಂದಾಗಿ ಈ ವಿಮಾನಯಾನ ಸಂಸ್ಥೆಯು “ಕಂಪನಿಯನ್ನು ನಿರ್ವಹಿಸಲು ಬೇಕಾದ ನಗದು ಕಳೆದುಕೊಳ್ಳುತ್ತಾ ಹೋಯಿತು” ಎಂದು CEO ಡೇವ್ ಡೇವಿಸ್ ಹೇಳಿದರು. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇದರ ನಂತರ, ಫ್ಲೈಟ್ ರಾಡಾರ್ 24ರ X ಪೋಸ್ಟ್ ನಮ್ಮ ಕೈಸಿಕ್ಕಿತು, ಅದು ಕೂಡ ಸ್ಪಿರಿಟ್ ಏರ್ಲೈನ್ಸ್ ಮುಚ್ಚುವಿಕೆಯನ್ನು ದೃಢಪಡಿಸಿತು. ಆ ಪೋಸ್ಟ್ ನಲ್ಲಿ ಅವರ ಅಧಿಕೃತ ಪ್ರಕಟಣೆಯನ್ನು ಪ್ರದರ್ಶಿಸಲಾಗಿದೆ, “ಮೇ 2, 2026ರಂದು, ಸ್ಪಿರಿಟ್ ಏರ್ಲೈನ್ಸ್ ನಿರಾಶಾಜನಕವಾಗಿ ನಮ್ಮ ಕಾರ್ಯಾಚರಣೆಗಳನ್ನು ಕ್ರಮಬದ್ಧವಾಗಿ ಸ್ಥಗಿತಗೊಳಿಸಲು ಪ್ರಾರಂಭಿಸಿದ್ದು, ಇದು ತಕ್ಷಣವೇ ಜಾರಿಗೆ ಬರಲಿದೆ. ನಮ್ಮ ಅತಿಥಿಗಳಿಗೆ: ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಗ್ರಾಹಕ ಸೇವೆ ಇನ್ನು ಮುಂದೆ ಲಭ್ಯವಿರುವುದಿಲ್ಲ.” ಪೋಸ್ಟ್ ನಲ್ಲಿ ಮುಂದುವರೆದು “ಕಳೆದ 34 ವರ್ಷಗಳಲ್ಲಿ ನಮ್ಮ ಅತಿ ಕಡಿಮೆ-ವೆಚ್ಚದ ಮಾದರಿಯು ಉದ್ಯಮದ ಮೇಲೆ ಬೀರಿದ ಪ್ರಭಾವದ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಮತ್ತು ಮುಂಬರುವ ಹಲವು ವರ್ಷಗಳ ಕಾಲ ನಮ್ಮ ಅತಿಥಿಗಳಿಗೆ ಸೇವೆ ಸಲ್ಲಿಸುತ್ತೇವೆಂದು ಆಶಿಸುತ್ತಿದ್ದೆವು.”
Official statement by Spirit Airlines
Announcement
It is with great disappointment that on May 2, 2026, Spirit Airlines started an orderly wind-down of our operations, effective immediately. To our Guests: all flights have been cancelled, and customer service is no longer… pic.twitter.com/CavgpuHODu— Flightradar24 (@flightradar24) May 2, 2026
ಸ್ಪಿರಿಟ್ ಏರ್‌ಲೈನ್ಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಾವು ಇದನ್ನು ಪರಿಶೀಲಿಸಿದೆವು, ಪೂರ್ಣ ಹೇಳಿಕೆಯನ್ನು ಇಲ್ಲಿ ಓದಬಹುದು.
CNBC ವರದಿಯ ಪ್ರಕಾರ, ಜನವರಿಯಲ್ಲಿ, ಸ್ಪಿರಿಟ್ ಏರ್‌ಲೈನ್ಸ್ “ದಿವಾಳಿತನದಿಂದ ಹೊರಬರುವ ಮಾರ್ಗ” ವನ್ನು ಹುಡುಕುತ್ತಿರುವಾಗ್ಗೆ ಹೂಡಿಕೆ ಸಂಸ್ಥೆ ಕ್ಯಾಸಲ್‌ಲೇಕ್‌ನೊಂದಿಗೆ ಸಂಭಾವ್ಯ ಸ್ವಾಧೀನಕ್ಕಾಗಿ ಮಾತುಕತೆ ನಡೆಸುತ್ತಿತ್ತು. ಈ ವಿಮಾನಯಾನ ಸಂಸ್ಥೆಯು ಈಗಾಗಲೇ ಎರಡನೇ ಬಾರಿಗೆ ಅಧ್ಯಾಯ 11 ದಿವಾಳಿತನ ರಕ್ಷಣೆಗಾಗಿ ಅರ್ಜಿ ಸಲ್ಲಿಸಿತ್ತು ಮತ್ತು ಸ್ವತಂತ್ರ ಪುನರ್ರಚನೆ ಯೋಜನೆ ಅಥವಾ ವ್ಯವಹಾರದಲ್ಲಿರಲು ಕಾರ್ಯತಾಂತ್ರಿಕ ಒಪ್ಪಂದದ ಕುರಿತು “ಸಕ್ರಿಯ ಮಾತುಕತೆಗಳಲ್ಲಿ” ಇತ್ತು. ಆದರೆ, ಇಲಾನ್ ಮಸ್ಕ್ ಅಥವಾ ಆತನ ಯಾವುದೇ ಕಂಪನಿಗಳು ಸ್ಪಿರಿಟ್ ಏರ್‌ಲೈನ್ಸ್‌ನೊಂದಿಗೆ ಒಪ್ಪಂದದಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇದನ್ನು ದೃಢಪಡಿಸಿದ ನಂತರ, ನಾವು ಇಲಾನ್ ಮಸ್ಕ್ ಮತ್ತು ಸ್ಪಿರಿಟ್ ಏರ್ಲೈನ್ಸ್ ಬಗ್ಗೆ ವರದಿಗಳನ್ನು ಹುಡುಕಿದೆವು, ಆದರೆ ಏನೂ ಸಿಗಲಿಲ್ಲ. ಇಲಾನ್ ಮಸ್ಕ್ ಅವರು X ಅಥವಾ ಬೇರೆಡೆ ಎಲ್ಲಿಯೂ ಸ್ಪಿರಿಟ್ ಏರ್ಲೈನ್ಸ್ ಬಗ್ಗೆ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡಿಲ್ಲ. ಸ್ಪಿರಿಟ್ ಏರ್ಲೈನ್ಸ್, ಟೆಸ್ಲಾ, ಸ್ಪೇಸ್X ಅಥವಾ ಇಲಾನ್ ಮಸ್ಕ್‌ಗೆ ಸಂಬಂಧಿಸಿದ ಯಾವುದೇ ಪಕ್ಷಗಳಿಂದ ಯಾವುದೇ ಪ್ರಕಟಣೆಗಳು ಬಂದಿಲ್ಲ.
ಆದ್ದರಿಂದ, ಈ ಹೇಳಿಕೆಯು ಸುಳ್ಳು.
ಇದನ್ನೂ ಓದಿ:
ದುಬೈಯಲ್ಲಿ ಕಪ್ಪು ಸಿಂಹವನ್ನು ಹರಾಜಿನಲ್ಲಿ ಮಾರಾಟ ಮಾಡುತ್ತಿರುವುದನ್ನು ನಿಜವಾಗಿಯೂ ಈ ವೀಡಿಯೊದಲ್ಲಿ ತೋರಿಸಲಾಗುತ್ತಿದೆಯೇ? ಸತ್ಯ ಪರಿಶೀಲನೆ
ಆಪಲ್ CEO ಟಿಮ್ ಕುಕ್ ತಮ್ಮ ಹುದ್ದೆಯಿಂದ ನಿವೃತ್ತಿ ಘೋಷಿಸಿದ್ದಾರೆಯೇ? ಸತ್ಯ ಪರಿಶೀಲನೆ
