ಈ ವೀಡಿಯೊದಲ್ಲಿ ನಿಜವಾಗಿಯೂ ಅರುಣಾಚಲ ಪ್ರದೇಶದೊಳಗೆ ಚೀನಾ 60 ಕಿ.ಮೀ. ಮುನ್ನಡೆಯುತ್ತಿರುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊದಲ್ಲಿ ನಿಜವಾಗಿಯೂ ಅರುಣಾಚಲ ಪ್ರದೇಶದೊಳಗೆ ಚೀನಾ 60 ಕಿ.ಮೀ. ಮುನ್ನಡೆಯುತ್ತಿರುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಚೀನಾ ದೇಶವು ಭಾರತದ ಗಡಿಯೊಳಗಿನ ಅರುಣಾಚಲ ಪ್ರದೇಶದೊಳಗೆ 60 ಕಿ.ಮೀ. ಪ್ರವೇಶಿಸಿರುವುದನ್ನು ತೋರಿಸುವುದಾಗಿ ವೀಡಿಯೊ ಹೇಳುತ್ತದೆ..

ಕಡೆನುಡಿ/Conclusion: ಈ ಹೇಳಿಕೆ ದಾರಿತಪ್ಪಿಸುವಂತಿದೆ. ಈ ವೀಡಿಯೊ ವಾಸ್ತವವಾಗಿ ಅಮರನಾಥ ಯಾತ್ರೆಯ ದೃಶ್ಯಗಳನ್ನು ತೋರಿಸುತ್ತದೆ, ಇದು ಚೀನಾದ ಪಡೆಗಳು ಅರುಣಾಚಲ ಪ್ರದೇಶದೊಳಗೆ 60 ಕಿ.ಮೀ. ಮುನ್ನಡೆಯುತ್ತಿರುವುದನ್ನು ಸಾಬೀತುಪಡಿಸುವುದಿಲ್ಲ. ಅರುಣಾಚಲ ಪ್ರದೇಶದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (DIPR) ಮತ್ತು ಪತ್ರಿಕಾ ಮಾಹಿತಿ ಬ್ಯೂರೋ (PIB) ಎರಡೂ ಇಂತಹ ಹೇಳಿಕೆಗಳನ್ನು ಸುಳ್ಳೆಂದು ತಳ್ಳಿಹಾಕಿವೆ.

ರೇಟಿಂಗ್/Rating: ದಾರಿತಪ್ಪಿಸುವಂತಿದೆ


ಚೀನಾ ದೇಶವು ಭಾರತದ ಗಡಿಯಲ್ಲಿರುವ ಅರುಣಾಚಲ ಪ್ರದೇಶದ 60 ಕಿ.ಮೀ. ಒಳಗೆ ಪ್ರವೇಶಿಸಿದೆ ಎಂದು ಹೇಳುವ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಬಳಕೆದಾರ ‘ನಬಿಲ್ ಆಲಮ್’ ಅಂತಹ ಒಂದು ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಅದರ ಶೀರ್ಷಿಕೆ ಹೀಗಿದೆ (ಕನ್ನಡಕ್ಕೆ ಅನುವಾದಿಸಲಾಗಿದೆ): “ಚೀನಾದ ಸೈನಿಕರು ಭಾರತದ ಅರುಣಾಚಲ ಪ್ರದೇಶದ ಗಡಿಯ 60 ಕಿ.ಮೀ. ಒಳಗೆ ಪ್ರವೇಶಿಸಿದ್ದಾರೆ”. ಪೋಸ್ಟ್‌ಗೆ ಲಗತ್ತಿಸಲಾದ ವೀಡಿಯೊದಲ್ಲಿ ಜನರ ಒಂದು ದೊಡ್ಡ ಗುಂಪು  ಕಾಣುತ್ತದೆ, ಜೊತೆಗೆ ಹಿಂದಿಯಲ್ಲಿ ಬರೆದಿರುವ ಸಾಲು ಕಾಣುತ್ತದೆ, ಇದು ಚೀನಾ ಅರುಣಾಚಲ ಪ್ರದೇಶದೊಳಗೆ 60 ಕಿ.ಮೀ. ಒಳಗೆ ಪ್ರವೇಶಿಸಿದೆ ಎಂಬುದನ್ನು ಪುನರುಚ್ಚರಿಸುತ್ತದೆ. ಅಲ್ಲದೆ ಭಾರತೀಯ ಧ್ವಜದ ಎಮೋಜಿಗಳ ಜೊತೆಗೆ “ಈ ವೀಡಿಯೊವನ್ನು ಭಾರತದ ಪ್ರತಿಯೊಬ್ಬ ನಾಗರಿಕರೊಂದಿಗೆ ಹಂಚಿಕೊಳ್ಳಿ, ಜೈ ಹಿಂದ್” ಎಂದು ವಿನಂತಿಸುತ್ತದೆ. ಪೋಸ್ಟ್ ಅನ್ನು ಕೆಳಗೆ ನೋಡಿ-

ಇದೇ ರೀತಿಯ ಹೇಳಿಕೆಯನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ವೈರಲ್ ಆಗಿರುವ ಈ ವೀಡಿಯೊ ಅಮರನಾಥ ಯಾತ್ರೆಯದ್ದಾಗಿದ್ದು, ಅರುಣಾಚಲ ಪ್ರದೇಶದ ಮೇಲೆ ಚೀನಾದ ಆಕ್ರಮಣಕ್ಕೆ ಸಂಬಂಧಸಿದ್ದಲ್ಲ. ಅರುಣಾಚಲ ಪ್ರದೇಶದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (DIPR) ಮತ್ತು ಪತ್ರಿಕಾ ಮಾಹಿತಿ ಬ್ಯೂರೋ (PIB) ಸಹ ಈ ರೀತಿಯ ಹೇಳಿಕೆಗಳು ಸುಳ್ಳು ಎಂದು ಸ್ಪಷ್ಟಪಡಿಸಿವೆ.

ವಿವರಗಳು:

ವೀಡಿಯೊದ ಮೂಲದ ಬಗ್ಗೆ ತಿಳಿಯಲು ನಾವು ಮೊದಲು ಅದರ ವಿವಿಧ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ಫಲಿತಾಂಶಗಳಲ್ಲಿ ನಮಗೆ ಜುಲೈ 4, 2026ರಂದು ‘sushil_saini_mr_max’ ಎಂಬ ಬಳಕೆದಾರರು ಅಪ್‌ಲೋಡ್ ಮಾಡಿದ ಇನ್ಸ್ಟಾಗ್ರಾಂ ವೀಡಿಯೊ ದೊರಕಿತು. ವೀಡಿಯೊದ ಶೀರ್ಷಿಕೆ ಹೀಗಿದೆ: “ಸಾರ್ವಜನಿಕ ಮತ್ತು ಸೇನಾ ಪ್ರತಿಕ್ರಿಯೆ ಬಾಲ್ಟಾಲ್ ಯಾತ್ರಾ ದಿನ- 2”  ಜೊತೆಗೆ ಸಾರ್ವಜನಿಕ ಮತ್ತು ಸೇನಾ ಪ್ರತಿಕ್ರಿಯೆ ಬಾಲ್ಟಾಲ್ ಯಾತ್ರೆ ದಿನ- 2ರ ಟ್ಯಾಗ್‌ಗಳು ಇದ್ದವು.

ಮೂಲ ವೀಡಿಯೊದಲ್ಲಿ “ತತ್ಕಾಲ್ ರಜಿಸ್ಟ್ರೇಷನ್ & RFID ಕಾರ್ಡ್, ಬಾಲ್ಟಾಲ್, ಲೈವ್ ಅಪ್‌ಡೇಟ್” ಅಥವಾ ಕನ್ನಡದಲ್ಲಿ: “ತತ್ಕಾಲ ನೋಂದಣಿ ಮತ್ತು RFID ಕಾರ್ಡ್, ಬಾಲ್ಟಾಲ್, ಲೈವ್ ಅಪ್‌ಡೇಟ್” ಎಂದು ಬರೆಯಲಾಗಿದೆ. ಈ ಸಾಲು ಬಾಲ್ಟಾಲ್‌ನಲ್ಲಿ ಅಮರನಾಥ ಯಾತ್ರೆಯ ನೋಂದಣಿ ಬಗೆಗಿನ ಅಪ್ಡೇಟ್ ಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ ಮತ್ತು ಚೀನಾದ ಬಗ್ಗೆ ಅಥವಾ ಚೀನಾದ ಪಡೆಗಳು ಅರುಣಾಚಲ ಪ್ರದೇಶಕ್ಕೆ 60 ಕಿ.ಮೀ. ಪ್ರವೇಶಿಸುವ ಬಗ್ಗೆ ಯಾವುದೇ ಉಲ್ಲೇಖವನ್ನು ಹೊಂದಿಲ್ಲ.

ಬಾಲ್ಟಾಲ್ ಅಮರನಾಥ ಯಾತ್ರೆಯ ಪ್ರಮುಖ ಮೂಲ ಶಿಬಿರಗಳಲ್ಲಿ ಒಂದಾಗಿದೆ ಮತ್ತು ಇದು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಗಂಡೇರ್ಬಲ್ ಜಿಲ್ಲೆಯಲ್ಲಿದೆ. ಇದಲ್ಲದೆ, “ಜಮ್ಮು ಕಶ್ಮೀರ ಪೊಲೀಸ್” ಎಂಬ ಪದಗಳನ್ನು ಹೊಂದಿರುವ ಒಂದು ಬ್ಯಾರಿಕೇಡ್ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ, ಇದು ವೀಡಿಯೊವನ್ನು ಅರುಣಾಚಲ ಪ್ರದೇಶದಲ್ಲಿನ ಭಾರತ-ಚೀನಾ ಗಡಿಯಲ್ಲಿ ಅಲ್ಲ, ಜಮ್ಮು ಕಾಶ್ಮೀರದಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಮತ್ತಷ್ಟು ದೃಢಪಡಿಸುತ್ತದೆ. ಇದರ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

ಕೊನೆಯದಾಗಿ, ಅರುಣಾಚಲ ಪ್ರದೇಶ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (DIPR) ಮತ್ತು ಪತ್ರಿಕಾ ಮಾಹಿತಿ ಬ್ಯೂರೋ (PIB) ಎರಡೂ ಈ ರೀತಿಯ ಹೇಳಿಕೆಗಳನ್ನು ನಿರಾಕರಿಸಿದ ಪೋಸ್ಟ್‌ಗಳು ಬಿಡುಗಡೆ ಮಾಡಿವೆ ಎಂಬುದು ನಮಗೆ ಕಂಡುಬಂತು. ಈ ವೀಡಿಯೊಗಳು ವಿಭಿನ್ನವಾಗಿದ್ದರೂ, ಅವು ಚೀನಾ ದೇಶವು ಅರುಣಾಚಲ ಪ್ರದೇಶವನ್ನು 60 ಕಿ.ಮೀ. ಆಕ್ರಮಿಸಿದೆ ಎಂಬ ತಪ್ಪುದಾರಿಗೆಳೆಯುವ ಹೇಳಿಕೆಯನ್ನು ಪ್ರಚಾರ ಮಾಡುತ್ತಿವೆ. PIB ತಮ್ಮ X ಪೋಸ್ಟ್‌ನಲ್ಲಿ ಅಂತಹ ನಕಲಿ ಹೇಳಿಕೆಗಳನ್ನು ಎತ್ತಿ ತೋರಿ ಎಚ್ಚರಿಸಿವೆ ಮತ್ತು ಅರುಣಾಚಲ DIPR ಅದನ್ನೇ ಮರುಪೋಸ್ಟ್ ಮಾಡಿದೆ.

ಹೀಗಾಗಿ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ ಎನ್ನಬಹುದು.


ಇದನ್ನೂ ಓದಿ:

ಅರ್ಥ್ ಸಾಂಗ್ ಸಮಯದಲ್ಲಿ ಮೈಕೆಲ್ ಜಾಕ್ಸನ್ ಅವರ ಮೇಲೆ ಬಂದೂಕು ಇರಿಸಲಾಗಿತ್ತು ಎಂದು ನಿಜವಾಗಿಯೂ ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಫಿಫಾ ವಿಶ್ವಕಪ್‌ನಲ್ಲಿ ಇರಾನ್ ಬದಲಿಗೆ ಇಟಲಿಯನ್ನು ನೇಮಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಸೂಚಿಸಿದ್ದಾರೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published.