ಇರಾನ್ ನೌಕಾ ಹಡಗಿನ ಸ್ಥಳದ ಬಗ್ಗೆ ಭಾರತವು ಇಸ್ರೇಲ್‌ಗೆ ಮಾಹಿತಿ ನೀಡಿದೆ ಎಂದು ಜನರಲ್ ಉಪೇಂದ್ರ ದ್ವಿವೇದಿ ಒಪ್ಪಿಕೊಂಡಿದ್ದಾರೆಯೇ? ಸತ್ಯ ಪರಿಶೀಲನೆ

ಇರಾನ್ ನೌಕಾ ಹಡಗಿನ ಸ್ಥಳದ ಬಗ್ಗೆ ಭಾರತವು ಇಸ್ರೇಲ್‌ಗೆ ಮಾಹಿತಿ ನೀಡಿದೆ ಎಂದು ಜನರಲ್ ಉಪೇಂದ್ರ ದ್ವಿವೇದಿ ಒಪ್ಪಿಕೊಂಡಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಇರಾನೀ ನೌಕಾ ಹಡಗಿನ ನಿಖರವಾದ ಸ್ಥಳದ ಬಗ್ಗೆ ಭಾರತವು ಇಸ್ರೇಲ್‌ಗೆ ಮಾಹಿತಿ ನೀಡಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಒಪ್ಪಿಕೊಂಡಿದ್ದಾರೆ.

ಕಡೆನುಡಿ/Conclusion: ಹೇಳಿಕೆ ಸುಳ್ಳು. ಹೇಳಿಕೆಯಲ್ಲಿನ ವೀಡಿಯೊದಲ್ಲಿರುವ ಧ್ವನಿಯನ್ನು AI ಬಳಸಿಕೊಂಡು ರಚಿಸಲಾಗಿದೆ. ಮೂಲ ದೃಶ್ಯಾವಳಿಗಳು ಆಪರೇಷನ್ ಸಿಂಧೂರ್ ಮತ್ತು ಅದರ ಪಾಠಗಳ ಕುರಿತಾದ ಹೇಳಿಕೆಗಳಿಗೆ ಸಂಬಂಧಿಸಿವೆ ಮತ್ತು ಇರಾನಿನ ನೌಕಾ ಹಡಗಿನ ಬಗ್ಗೆ ಅಥವಾ ಇಸ್ರೇಲ್ ಬಗ್ಗೆ ಯಾವುದೇ ಹೇಳಿಕೆಗಳನ್ನು ಮೂಲ ದೃಶ್ಯಗಳು ಹೊಂದಿಲ್ಲ.

ರೇಟಿಂಗ್/Rating: ಸುಳ್ಳು

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ಇರಾನ್ ನೌಕಾಪಡೆಯ ಹಡಗು ಸ್ಥಳ ಪತ್ತೆಗೆ ಭಾರತ ಇಸ್ರೇಲ್‌ಗೆ ಸಹಾಯ ಮಾಡಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೊಳ್ಳುವ ಕ್ಲಿಪ್ ಅನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. X ಬಳಕೆದಾರ ‘FARMLIK’ ಅಂತಹ ಒಂದು ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಭಾರತವು ಇರಾನ್‌ನ ಬೆನ್ನಿಗೆ ಚೂರಿ ಹಾಕಿದೆ ಮತ್ತು ಇಸ್ರೇಲ್‌ಗೆ ಇರಾನ್ ಹಡಗಿನ ಸ್ಥಳದ ಮಾಹಿತಿ ನೀಡಿದೆ ಎಂದು ಅಧಿಕೃತವಾಗಿ ಒಪ್ಪಿಕೊಂಡಿದೆ. ಭಾರತೀಯ ಸೇನಾ ಮುಖ್ಯಸ್ಥರು ತಾವು ಇರಾನಿನ ನೌಕಾಪಡೆಯ ಹಡಗಿನ ನಿಖರವಾದ ಸ್ಥಳವನ್ನು ಇಸ್ರೇಲಿಗಳಿಗೆ ನೀಡಿದ್ದು ಮತ್ತು ಅದು ಭಾರತೀಯರ ಅಸಹ್ಯಕರ ಕೃತ್ಯ ಎಂಬುದನ್ನು ವಿವರಿಸಿದರು.” ಪೋಸ್ಟ್ ಅನ್ನು ಕೆಳಗೆ ನೋಡಿ-

ವೀಡಿಯೊದ ಒಂದು ಭಾಗದಲ್ಲಿ, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿಯವರು- “… ಅವರು ಅಂತಾರಾಷ್ಟ್ರೀಯ ಜಲಗಡಿಯನ್ನು ದಾಟಿದರು, ಇಸ್ರೇಲ್ ಕಾರ್ಯತಾಂತ್ರಿಕ ಮಿತ್ರರಾಗಿ, ನಮ್ಮ ಹೊಸ ಕಾರ್ಯತಾಂತ್ರಿಕ ಒಪ್ಪಂದದ ಭಾಗವಾಗಿ ಇಸ್ರೇಲ್‌ಗೆ ಅವರ ನಿಖರವಾದ ಸ್ಥಳದ ಬಗ್ಗೆ ತಿಳಿಸುವುದು ನಮ್ಮ ಕರ್ತವ್ಯವಾಗಿತ್ತು … ನಾವು ಇಸ್ರೇಲ್‌ಗೆ ಸ್ಥಳ ಅಥವಾ ಗುಪ್ತಚರ ಮಾಹಿತಿಯನ್ನು ಒದಗಿಸಬಹುದು ಆದರೆ ಇಸ್ರೇಲ್-US ಟಾರ್ಪಿಡೊ ದಾಳಿಯಲ್ಲಿ ನಮ್ಮ ಪಾತ್ರವಿಲ್ಲ …” ಎಂದು ಹೇಳುತ್ತಿರುವಂತೆ ಕಾಣುತ್ತದೆ. ಹೇಳಿಕೆಯಲ್ಲಿ ಭಾರತವು ಇಸ್ರೇಲ್‌ಗೆ ಹಡಗಿನ ಸ್ಥಳದ ಬಗ್ಗೆ ಮಾಹಿತಿ ನೀಡುವ ಮೂಲಕ ಇರಾನ್‌ಗೆ ದ್ರೋಹ ಬಗೆದಿದೆ ಎಂದು ನಿರೂಪಿಸುವಂತೆ ಈ ವಿಭಾಗವನ್ನು ಎತ್ತಿ ತೋರಿಸಲಾಗಿದೆ.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಜನರಲ್ ದ್ವಿವೇದಿ ಅಂತಹ ಯಾವುದೇ ಹೇಳಿಕೆಯನ್ನು ಎಂದೂ ನೀಡಿಲ್ಲ ಮತ್ತು ಹೇಳಿಕೆಯಲ್ಲಿ ತೋರಿಸಲಾದ ವೀಡಿಯೊದಲ್ಲಿನ ಆಡಿಯೊವನ್ನು AI ಬಳಸಿ ರಚಿಸಲಾಗಿದೆ. ಮೂಲ ವೀಡಿಯೊದಲ್ಲಿ ಜನರಲ್ ದ್ವಿವೇದಿ ಆಪರೇಷನ್ ಸಿಂಧೂರ್‌ನಿಂದ ದೊರೆತ ಪಾಠಗಳು ಮತ್ತು ಯುದ್ಧದ ವಿಕಸನ ಪ್ರವೃತ್ತಿಯ ಬಗ್ಗೆ ಮಾತನಾಡುತ್ತಿರುವುದು ಕಾಣಬಹುದು.

ಇದನ್ನು ನಿರಾಕರಿಸುವ ಅಧಿಕೃತ ಸರ್ಕಾರಿ ಮೂಲಗಳನ್ನು ನೋಡುವುದಾದರೆ, PIB ಈ ಹೇಳಿಕೆಯನ್ನು ಸುಳ್ಳು ಎಂದು ಇಲ್ಲಿ ಸೂಚಿಸಿದೆ.

“ಡಿಜಿಟಲ್ ಮಾರ್ಪಾಟು ಮಾಡಲಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿಯವರ ವೀಡಿಯೊವನ್ನು ಪಾಕಿಸ್ತಾನದ ಪ್ರಚಾರ ಖಾತೆಗಳು ಹಂಚಿಕೊಳ್ಳುತ್ತಿದ್ದು” ಭಾರತವು ಇರಾನ್ ನೌಕಾಪಡೆಯ ಹಡಗಿನ ಸ್ಥಳವನ್ನು ಹಂಚಿಕೊಳ್ಳುತ್ತಿದೆ ಎಂದು ಸುಳ್ಳು ಹೇಳಿಕೆಗಳನ್ನು ನೀಡಿವೆ ಎಂದು PIB ಸತ್ಯ ಪರಿಶೀಲನಾ ಘಟಕವು ಬರೆದಿದೆ. “ಜನರಲ್ ಉಪೇಂದ್ರ ದ್ವಿವೇದಿ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ” ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸಲು ಈ ಹೇಳಿಕೆಯನ್ನು ನೀಡಲಾಗಿದೆ ಎಂದು ಕೂಡ ಪೋಸ್ಟ್ ದೃಢಪಡಿಸುತ್ತದೆ.

ಮಾರ್ಚ್ 4, 2026ರ, ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಶ್ರೀಲಂಕಾದ ಗ್ಯಾಲೆಯಿಂದ ಸುಮಾರು 40 ನಾಟಿಕಲ್ ಮೈಲಿ ದಕ್ಷಿಣಕ್ಕೆ ಹಿಂದೂ ಮಹಾಸಾಗರದಲ್ಲಿ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಯಿಂದ (ಸಬ್ಮೆರೀನ್) ಹಾರಿಸಲಾದ ಟಾರ್ಪಿಡೊ ಮೂಲಕ U.S. ನೌಕಾಪಡೆಯು ಇರಾನಿನ ಯುದ್ಧನೌಕೆ IRIS ದೇನಾವನ್ನು ಮುಳುಗಿಸಿತು. ವಿಶಾಖಪಟ್ಟಣದಲ್ಲಿ ಭಾರತ ಆಯೋಜಿಸಿದ್ದ ನೌಕಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ನಂತರ ಇರಾನ್‌ಗೆ ಹಿಂತಿರುಗುತ್ತಿದ್ದಾಗ ಹಡಗಿನ ಮೇಲೆ ಈ ದಾಳಿ ಸಂಭವಿಸಿತು. ಶ್ರೀಲಂಕಾದ ವಿದೇಶಾಂಗ ಸಚಿವೆ ವಿಜಿತಾ ಹೆರಾತ್ ರವರು ಗಾಯಗೊಂಡ ನಾವಿಕರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಎಂದು ಹೇಳಿದರು, ಮತ್ತೊಂದೆಡೆ ನೌಕಾಪಡೆಯ ವಕ್ತಾರ ಬುದ್ಧಿಕ ಸಂಪತ್ ರವರು ಶ್ರೀಲಂಕಾ ಸಂಕಷ್ಟದ ಕರೆಗೆ ಸ್ಪಂದಿಸಿದೆ ಎಂದು ಹೇಳಿದ್ದಾರೆ.

ವೀಡಿಯೊದ ಮೂಲದ ಬಗ್ಗೆ ತಿಳಿಯಲು ನಾವು ಮೊದಲು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ಯುಟ್ಯೂಬ್ ನಲ್ಲಿ ಮಾರ್ಚ್ 7, 2026 ರಂದು ಫಸ್ಟ್ ಪೋಸ್ಟ್ ಅಪ್‌ಲೋಡ್ ಮಾಡಿದ ಮೂಲ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು, ಅದರ ಶೀರ್ಷಿಕೆ ಹೀಗಿತ್ತು- “ಭಾರತದ ಸೇನಾ ಮುಖ್ಯಸ್ಥರು ಓಪರೇಷನ್ ಸಿಂಧೂರ್, ಪಾಕಿಸ್ತಾನ ಮತ್ತು ಯುದ್ಧನೀತಿಯ ಭವಿಷ್ಯದ ಕುರಿತು ಮಾತನಾಡಿದರು | ರೈಸಿನಾ ಸಂವಾದ 2026”. ಈ ಪಾಡ್‌ಕ್ಯಾಸ್ಟ್ ನ ವಿಷಯ “ಆಪರೇಷನ್ ಸಿಂಧೂರ್‌ನಿಂದ ದೊರಕಿದ ಪಾಠಗಳು ಮತ್ತು ಯುದ್ಧದ ವಿಕಸನ ಪ್ರವೃತ್ತಿ” ಆಗಿತ್ತು. ಕೆಳಗೆ ಸ್ಕ್ರೀನ್‌ಶಾಟ್ ನೋಡಿ-

ಮೂಲ ವೀಡಿಯೊದಲ್ಲಿ, ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕದ ಯುದ್ಧದ ಬಗ್ಗೆ ಯಾವುದೇ ಚರ್ಚೆಗಳಿಲ್ಲ. ಇದರ ನಂತರ, “ಮುಳುಗಿದ ಇರಾನ್ ನೌಕಾಪಡೆಯ ಹಡಗಿನ ಬಗ್ಗೆ ಜನರಲ್ ಉಪೇಂದ್ರ ದ್ವಿವೇದಿ ಅವರ ಮಾತುಗಳು” ಎಂಬ ಪದಗಳೊಂದಿಗೆ ನಾವು ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಆದಾಗ್ಯೂ, ಅಂತಹ ಯಾವುದೇ ಹೇಳಿಕೆಗಳ ಬಗ್ಗೆ ನಮಗೆ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಅಧಿಕೃತ ಹೇಳಿಕೆಗಳು ಸಿಗಲಿಲ್ಲ.

NDTV ವರದಿಯ ಪ್ರಕಾರ, ಇರಾನ್ ತಾಂತ್ರಿಕ ಸಮಸ್ಯೆಗಳನ್ನು ವರದಿ ಮಾಡಿದ ನಂತರ ಭಾರತವು ಇರಾನ್ ಹಡಗು IRIS ಲವನ್ ಅನ್ನು ಕೊಚ್ಚಿಯಲ್ಲಿ ಡಾಕ್ ಮಾಡಲು ಅವಕಾಶ ನೀಡಿತು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿವರಿಸಿದ್ದರು. ಇರಾನಿನ ಹಡಗುಗಳು ಮೂಲತಃ ನೌಕಾ ಕಾರ್ಯಕ್ರಮಗಳಿಗಾಗಿ ಭಾರತಕ್ಕೆ ಬಂದಿದ್ದವು ಆದರೆ ” ದುರದೃಷ್ಟಕರ ಘಟನೆಗಳಲ್ಲಿ ಸಿಲುಕಿಕೊಂಡವು” ಎಂದು ಪ್ರದೇಶದಲ್ಲಿ ಯುನೈಟೆಡ್ ಸ್ಟೇಟ್ಸ್, ಇಸ್ರೇಲ್ ಮತ್ತು ಇರಾನ್ ಒಳಗೊಂಡ ಉಲ್ಬಣವನ್ನು ಉಲ್ಲೇಖಿಸಿ ಅತ ಮಾತನಾಡಿದರು. ಜೈಶಂಕರ್ ಹೇಳಿರುವಂತೆ “ನಾವು ಮಾನವೀಯತೆಯ ದೃಷ್ಟಿಯಿಂದ ಪರಿಸ್ಥಿತಿಯನ್ನು ನಿಭಾಯಿಸಿದೆವು… ಮತ್ತು ನಾವು ಸರಿಯಾದ ಕೆಲಸವನ್ನೇ ಮಾಡಿದೆವೆಂದು ನನಗನಿಸುತ್ತದೆ” ಎಂದು ಹೇಳಿದರು. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಕೊನೆಯದಾಗಿ, ನಾವು ಹೇಳಿಕೆಯ ಪೋಸ್ಟ್‌ನಲ್ಲಿರುವ ಆಡಿಯೊವನ್ನು ಹೊರತೆಗೆದು ಅನ್ಡಿಟೆಕ್ಟೆಬಲ್ AI ಆಡಿಯೊ ಡಿಟೆಕ್ಟರ್ ಮೂಲಕ ಅದನ್ನು ಪರೀಕ್ಷಿಸಿದೆವು. ಆಡಿಯೋ AI ರಚಿತವಾಗಿದೆ ಎಂದು ಫಲಿತಾಂಶಗಳು ಸಾಬೀತುಪಡಿಸಿವೆ ಮತ್ತು ಕೇವಲ 1% ಮಾತ್ರ ನಿಜವಾಗಿದೆ. ಫಲಿತಾಂಶಗಳನ್ನು ಕೆಳಗೆ ನೋಡಿ-

ಹೀಗಾಗಿ, ಹೇಳಿಕೆ ಸುಳ್ಳು.

ಹೀಗಾಗಿ, ಹೇಳಿಕೆ ಸುಳ್ಳು.

*******************************************************************************************

ಇದನ್ನೂ ಓದಿ:

ಇಂಡೋನೇಷ್ಯಾದ ಮಾಜಿ ಅಧ್ಯಕ್ಷ ಜೋಕೊ ವಿಡೋಡೊ ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದರೇ? ಸತ್ಯ ಪರಿಶೀಲನೆ

ಚೀನಾದ ಸಂಪೂರ್ಣ ಮಹಿಳಾ SWAT ತಂಡವು ಭಾರತದ ಪುರುಷರ ತಂಡವನ್ನು ಸೋಲಿಸಿತೇ? ಸತ್ಯ ಪರಿಶೀಲನೆ

Leave a Reply

Your email address will not be published.