ಪಾಕಿಸ್ತಾನ ಧ್ವಜ ಹೊತ್ತ ಹಡಗನ್ನು ಇರಾನ್ ಹರ್ಮಜ್ ಜಲಸಂಧಿಯಲ್ಲಿ ನಾಶಪಡಿಸಲಾಯಿತೇ? ಸತ್ಯ ಪರಿಶೀಲನೆ

ಪಾಕಿಸ್ತಾನ ಧ್ವಜ ಹೊತ್ತ ಹಡಗನ್ನು ಇರಾನ್ ಹರ್ಮಜ್ ಜಲಸಂಧಿಯಲ್ಲಿ ನಾಶಪಡಿಸಲಾಯಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಕೆಲವು ಗಂಟೆಗಳ ಹಿಂದೆ ಹರ್ಮಜ್ ಜಲಸಂಧಿಯನ್ನು ದಾಟುವಾಗ ಇರಾನಿನ ಕ್ಷಿಪಣಿಗಳು ಪಾಕಿಸ್ತಾನ ಧ್ವಜ ಹೊತ್ತ ತೈಲ ಟ್ಯಾಂಕರ್ ನ್ನು ನಾಶಪಡಿಸಿದವು..

ಕಡೆನುಡಿ/Conclusion:ಹೇಳಿಕೆ ಸುಳ್ಳು. ಮಾರ್ಚ್ 2026ರಲ್ಲಿ ಪಾಕಿಸ್ತಾನ ಧ್ವಜ ಹೊತ್ತ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿದ್ದಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ ಮತ್ತು ದೃಶ್ಯಾವಳಿಗಳು ಪಾಕಿಸ್ತಾನ ಧ್ವಜವನ್ನು ತೋರಿಸುವುದಿಲ್ಲ. ಬದಲಾಗಿ ಇರಾನ್ ಮತ್ತು ಪಾಕಿಸ್ತಾನ ಮಾರ್ಚ್ 28, 2026ರಂದು ಘೋಷಿಸಲಾದ ಒಪ್ಪಂದವನ್ನು ಮಾಡಿಕೊಂಡವು, ಇದು 20 ಪಾಕಿಸ್ತಾನಿ ಹಡಗುಗಳಿಗೆ ಹರ್ಮಜ್ ಜಲಸಂಧಿಯ ಮೂಲಕ ಸಾಗಲು ಅವಕಾಶ ಮಾಡಿಕೊಟ್ಟಿತು.

ರೇಟಿಂಗ್/Rating : ಸುಳ್ಳು

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಪಾಕಿಸ್ತಾನ ಧ್ವಜ ಹೊತ್ತ ತೈಲ ಟ್ಯಾಂಕರ್ ಅನ್ನು ಇರಾನಿನ ಕ್ಷಿಪಣಿಗಳು ನಾಶಪಡಿಸಿವೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘Theunk5555’ ಮಾರ್ಚ್ 27, 2026 ರಂದು ಅಂತಹ ಒಂದು ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಕೆಲವು ಗಂಟೆಗಳ ಹಿಂದೆ ಹರ್ಮಜ್ ಜಲಸಂಧಿಯನ್ನು ದಾಟುವಾಗ ಪಾಕಿಸ್ತಾನ ಧ್ವಜ ಹೊತ್ತ ತೈಲ ಟ್ಯಾಂಕರ್ ಅನ್ನು ಇರಾನಿನ ಕ್ಷಿಪಣಿಗಳು ನಾಶಪಡಿಸಿದವು. ಪಾಕಿಸ್ತಾನವು ಇರಾನ್‌ನ ತೈಲವನ್ನು ಅಮೆರಿಕಕ್ಕೆ ತಿರುಗಿಸಿ ಕಳುಹಿಸುವ ಮೂಲಕ ಇರಾನ್‌ಗೆ ದ್ರೋಹ ಮಾಡಿದೆ. ಇದು ಪಾಕಿಸ್ತಾನಕ್ಕೆ ಇರಾನ್ ನೀಡಿದ ಉತ್ತರವಾಗಿದೆ.” ಇದು ಉರಿಯುತ್ತಿರುವ ಹಡಗಿನ 12 ಕ್ಷಣಗಳ ವೀಡಿಯೊವನ್ನು ಒಳಗೊಂಡಿದೆ. ಪೋಸ್ಟ್ 4 ಮಿಲಿಯಕ್ಕಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, ಅದನ್ನು ಕೆಳಗೆ ನೋಡಬಹುದು –

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿ ಅದು ಸುಳ್ಳು ಎಂದು ಕಂಡುಕೊಂಡಿತು. ಮಾರ್ಚ್ 2026ರಲ್ಲಿ ಇರಾನ್ ಪಾಕಿಸ್ತಾನ ಧ್ವಜ ಹೊಂದಿರುವ ಟ್ಯಾಂಕರ್ ಅನ್ನು ಗುರಿಯಾಗಿಸಿಕೊಂಡಿದೆ ಎಂಬುದಕ್ಕೆ ಯಾವುದೇ ದೃಢೀಕೃತ ಪುರಾವೆಗಳಿಲ್ಲ ಮತ್ತು ಹಂಚಿಕೊಳ್ಳಲಾಗುತ್ತಿರುವ ದೃಶ್ಯಾವಳಿಗಳು ಯಾವುದೇ ಪಾಕಿಸ್ತಾನಿ ಹಡಗನ್ನು ಗುರುತಿಸುತ್ತಿಲ್ಲ. ಬದಲಾಗಿ, ಮಾರ್ಚ್ 28, 2026ರಂದು, ಒಂದು ನಿಯಂತ್ರಿತ ವ್ಯವಸ್ಥೆಯಡಿಯಲ್ಲಿ 20 ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳನ್ನು ಹರ್ಮಜ್ ಜಲಸಂಧಿಯ ಮೂಲಕ ಹಾದುಹೋಗಲು ಇರಾನ್ ಒಪ್ಪಿಕೊಂಡಿದೆ ಎಂದು ವರದಿಗಳು ದೃಢಪಡಿಸುತ್ತವೆ.

Details:

ವೀಡಿಯೊದ ಮೂಲದ ಬಗ್ಗೆ ತಿಳಿಯಲು ನಾವು ಮೊದಲು ಅದರ ವಿವಿಧ ಕೀಫ್ರೇಮ್‌ಗಳಿಂದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ಹರ್ಮಜ್ ಜಲಸಂಧಿಯ ಮೂಲಕ ಹಾದುಹೋಗುವ ಸರಕುಗಳ ಹಡಗನ್ನು ಇರಾನ್ ನಾಶಪಡಿಸಿದೆ ಎಂಬುದನ್ನು ಉಲ್ಲೇಖಿಸುವ ಇತ್ತೀಚಿನ ಕ್ಲಿಪ್‌ಗಳು ನಮಗೆ ಇಲ್ಲಿ ಮತ್ತು ಇಲ್ಲಿ ದೊರಕಿದವು. ಆದರೆ, ಈ ಯಾವ ಕ್ಲಿಪ್‌ಗಳೂ ಯಾವುದೇ ದೇಶದ ಹೆಸರನ್ನು ಉಲ್ಲೇಖಿಸಿಲ್ಲ ಅಥವಾ ಹಡಗನ್ನು ಪಾಕಿಸ್ತಾನಿ ಹಡಗು ಎಂದು ಹೆಸರಿಸಿಲ್ಲ.

ಇದರ ನಂತರ, ಹುಡುಕಾಟದಲ್ಲಿ ನಮಗೆ ಮಾರ್ಚ್ 4, 2026ರಂದು ಹರ್ಮಜ್ ಜಲಸಂಧಿಯಲ್ಲಿ ವರದಿಯಾದ ದಾಳಿಯ ನಂತರ ಇನ್ನೂ ಉರಿಯುತ್ತಿರುವ ಸಫೀನ್ ಪ್ರೆಸ್ಟೀಜ್ ಅನ್ನು ತೋರಿಸುವ ದೃಶ್ಯಗಳನ್ನು ‘defencealerts’ ಎಂಬ ಇನ್ಸ್ಟಾಗ್ರಾಂ ಬಳಕೆದಾರರು ಹಂಚಿಕೊಂಡ ಕ್ಲಿಪ್‌ ದೊರೆಯಿತು. ಈ ಬಳಕೆದಾರರು ಈ ದೃಶ್ಯಗಳನ್ನು ಸಿಬ್ಬಂದಿಯು ತೊರೆದುಹೋದ ಮತ್ತು ಸಮುದ್ರದಲ್ಲಿ ಹಲವಾರು ಬಾರಿ ಉರಿದ ಹಡಗಿನ ಘಟನೆಗೆ ಸಂಬಂಧ ಕಲ್ಪಿಸುತ್ತಾರೆ. ಇದರ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

 

View this post on Instagram

 

A post shared by IDU (@defencealerts)

ಡಿಫೆನ್ಸ್ ಡೈಜೆಸ್ಟ್ ಕೂಡ ಕೆಳಗೆ ಕಂಡುಬರುವ ದೃಶ್ಯಗಳನ್ನು ಪೋಸ್ಟ್ ಮಾಡಿದೆ:

ರಾಯಿಟರ್ಸ್ ಮತ್ತು ಟೈಮ್ಸ್ ಆಫ್ ಮಾಲ್ಟಾ ಗಳ ಪ್ರಕಾರ, ಮಾರ್ಚ್ 4, 2026ರಂದು ಮಾಲ್ಟಾ ಧ್ವಜ ಹೊಂದಿದ ಹಡಗನ್ನು ಇರಾನಿನ ಕ್ಷಿಪಣಿಗಳು ಹೊಡೆದುರುಳಿಸಿದವು. ಅವರ ವರದಿಗಳ ಒಂದು ಭಾಗವನ್ನು ಕೆಳಗೆ ನೋಡಿ

ಹಡಗು ಈಜಿಪ್ಟ್ ಒಡೆತನದ ಮಾಲ್ಟಾ ಧ್ವಜದ ಹಡಗಾಗಿದ್ದು ಎಂದು ಮೆರೈನ್‌ಟ್ರಾಫಿಕ್ ದೃಢಪಡಿಸಿದೆ.

ಹರ್ಮಜ್ ಜಲಸಂಧಿಯ ಮೂಲಕ ಪಾಕಿಸ್ತಾನ ಹಡಗುಗಳ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು “ಹರ್ಮಜ್ ಜಲಸಂಧಿಯಲ್ಲಿ ಪಾಕಿಸ್ತಾನಿ ಹಡಗಿನ ಮೇಲೆ ದಾಳಿ” ಎಂಬ ಪದಗಳೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ಮಾರ್ಚ್ 25, 2026ರಂದು ಇಲ್ಲಿ ಪ್ರಕಟವಾದ TOI ವರದಿಯ ಪ್ರಕಾರ, ಪಾಕಿಸ್ತಾನಕ್ಕೆ ಹೋಗುವ ಕಂಟೇನರ್ ಹಡಗಿಗೆ ಇರಾನ್ ಅನುಮತಿ ನಿರಾಕರಿಸಿತು. ಹಡಗಿನ “ಕಾನೂನು ಶಿಷ್ಟಾಚಾರಗಳನ್ನು ಪಾಲಿಸುವಲ್ಲಿ ವಿಫಲತೆ ಮತ್ತು ಹಾದುಹೋಗಲು ಅನುಮತಿಯ ಕೊರತೆಯಿಂದಾಗಿ” ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು IRGC ನೌಕಾಪಡೆಯ ಕಮಾಂಡರ್ ಹೇಳಿದ್ದಾರೆ ಎಂದು ವರದಿ ಗಮನಿಸುತ್ತದೆ. ಆದರೆ, ಪಾಕಿಸ್ತಾನಿ ಹಡಗಿನ ಮೇಲೆ ಇರಾನ್ ಕ್ಷಿಪಣಿಗಳನ್ನು ಹಾರಿಸಿದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ–

ಮಾರ್ಚ್ 28, 2026ರಂದು ಪ್ರಕಟವಾದ ಅಲ್ ಜಜೀರಾ ವರದಿಯ ಪ್ರಕಾರ, ಪ್ರತಿದಿನ ಎರಡು ಹಡಗುಗಳಂತೆ 20 ಪಾಕಿಸ್ತಾನಿ ಧ್ವಜ ಹೊಂದಿರುವ ಹಡಗುಗಳನ್ನು ಹರ್ಮಜ್ ಜಲಸಂಧಿಯ ಮೂಲಕ  ದಾಟಲು ಅವಕಾಶ ನೀಡಲು ಇರಾನ್ ಒಪ್ಪಿಕೊಂಡಿದೆ. ಪಾಕಿಸ್ತಾನದ ವಿದೇಶಾಂಗ ಸಚಿವರು ಈ ಕ್ರಮವನ್ನು “ಶಾಂತಿಯ ಮುನ್ಸೂಚನೆ” ಮತ್ತು “ಸ್ವಾಗತಾತ್ಮಕ ಮತ್ತು ರಚನಾತ್ಮಕ ಸೂಚಕ” ಎಂದು ಕರೆದರು. ಈ ಜಲಸಂಧಿಯು ಇರಾನ್‌ನ IRGCಯಿಂದ ಕಟ್ಟುನಿಟ್ಟಾಗಿ ನಿಯಂತ್ರಿಸಲ್ಪಡುತ್ತದೆ,  ಮತ್ತು ಹಡಗುಗಳು ಅಲ್ಲಿ ಚಲಿಸಲು ಅನುಮತಿ ಮತ್ತು ಬೆಂಗಾವಲಿನ ಅಗತ್ಯವಿರುತ್ತದೆ ಎಂದು ವರದಿ ಹೇಳುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಹೀಗಾಗಿ ಹರ್ಮಜ್ ಜಲಸಂಧಿಯಲ್ಲಿ ಇರಾನ್ ನಾಶಪಡಿಸಿದ ಹಡಗು ಪಾಕಿಸ್ತಾನಕ್ಕೆ ಸೇರಿದ್ದಲ್ಲ.

ಆದ್ದರಿಂದ ಹೇಳಿಕೆ ಸುಳ್ಳು.


ಇದನ್ನೂ ಓದಿ:

ನೈಜೀರಿಯಾದ ಎಲ್ಲಾ ಜಾಹೀರಾತುಗಳಲ್ಲಿ ಬಿಳಿಯರು ಮತ್ತು ಬ್ರಿಟಿಷ್ ಮಾಡೆಲ್ ಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ

ಭಾರತವು ಈಗಾಗಲೇ ಗ್ರಾಹಕರಲ್ಲಿ ದೇಶಾದ್ಯಂತ ಪೀರ್-ಟು-ಪೀರ್ ಇಂಧನ ವ್ಯಾಪಾರವನ್ನು ಪ್ರಾರಂಭಿಸಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.