ಕೌನ್ ಬನೇಗಾ ಕರೋರ್ಪತಿ ಕಾರ್ಯಕ್ರಮದ್ದು ಎನ್ನಲಾಗಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮಿತಾಭ್ ಬಚ್ಚನ್ ರವರು ಸ್ಪರ್ಧಿಗೆ ರೂ. 20,000ಕ್ಕೆ ಒಂದು ರಾಜಕೀಯ ಪ್ರಶ್ನೆ ಕೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಪ್ರಶ್ನೆ ಹೀಗಿದೆ, इनमें से किस मुख्यमंत्री को उनकी झूठी घोषना के करण घोषना मशीन कहा जाता है? [ಅನುವಾದ: ಇವರಲ್ಲಿ ಯಾವ ಮುಖ್ಯಮಂತ್ರಿಗಳನ್ನು ಅವರ ಸುಳ್ಳು ಘೋಷಣೆಗಳ ಕಾರಣದಿಂದಾಗಿ ಘೋಷಣಾ ಮಶೀನ್ ಎಂದು ಕರೆಯುತ್ತಾರೆ?] ಸ್ಪರ್ಧಿಗೆ ಕೊಡಲಾದ ಆಯ್ಕೆಗಳು […]
ಭಾರತೀಯ ಜನತಾ ಪಕ್ಷದ (ಬಿಜೆಪಿ) ರಮೇಶ್ ಬಿಧುರಿಯವರು ಸಂಸತ್ ಚರ್ಚೆಯ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ನಾಯಕರೊಬರನ್ನು ನಿಂದಿಸಿದ್ದಕ್ಕಾಗಿ ಇತ್ತೀಚೆಗೆ ಸುದ್ದಿಯಲ್ಲಿ ಬಂದರು. ಅಂದಿನಿಂದ, ಅವರಿಗೆ ಸಂಬಂಧಿತ ಹಲವಾರು ಹೇಳಿಕೆಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಈ ಬಾರಿ ಅವರಿಗೆ ಸಂಬಂಧಿಸಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. FACT CHECK ಉತ್ತರ ಪ್ರದೇಶ ಮತ್ತು ಬಿಹಾರದಿಂದ ವಲಸೆ ಬಂದಿರುವ ಜನರನ್ನು ದೆಹಲಿಯಿಂದ ಓಡಿಸಬೇಕು ಎಂದು ರಮೇಶ್ ಬಿಧುರಿಯವರು ಹೇಳಿದ್ದಾರೆ ಎಂದು ಪತ್ರಿಕಾ ವಾರ್ತೆಯ ಚಿತ್ರದೊಂದಿಗಿರುವ ಒಂದು ಹೇಳಿಕೆಯು ಪ್ರತಿಪಾದಿಸುತ್ತದೆ. […]
ಭಾರತ ಮತ್ತು ಕೆನಡಾ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಅನೇಕ ಹೇಳಿಕೆಗಳು ಮತ್ತು ವೀಡಿಯೊಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಈ ಗೊಂದಲದೆಡೆಯಲ್ಲಿ, ಕೆನಡಾದ ವಿರೋಧ ಪಕ್ಷದ ನಾಯಕರು ಕೆನಡಾದ ಪ್ರಧಾನಿ- ಜಸ್ಟಿನ್ ಟ್ರುಡೊರವರನ್ನು ಟೀಕಿಸುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ವಿರೋಧ ಪಕ್ಷದ ನಾಯಕರು ಭಾರತ-ಕೆನಡಾದ ರಾಜತಾಂತ್ರಿಕ ಸಂಬಂಧವನ್ನು ಹಾಳು ಮಾಡಿದ್ದಕ್ಕಾಗಿ ಟ್ರುಡೊ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದನ್ನು ಕಾಣಬಹುದು. News: 🇨🇦 In the Canadian Parliament, Opposition Leader Scheer […]
ಸಾಂಪ್ರದಾಯಿಕ ತಿರುಪತಿ ಲಡ್ಡುಗಳ ತಯಾರಿಕೆಗಾಗಿ ನಂದಿನಿ ತುಪ್ಪದ ಪೂರೈಕೆಗೆ ಸಂಬಂಧಿತ ಬೆಲೆ ಪ್ರಸ್ತಾವನೆಯನ್ನು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ತಿರಸ್ಕರಿಸಿತು ಎಂದು ಕರ್ನಾಟಕ ಹಾಲು ಮಹಾಮಂಡಳಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಹೇಳಿಕೆಗಳು ಕಾಣಿಸಿಕೊಂಡಿವೆ. ಈ ಸುದ್ದಿ ವೈರಲ್ ಆಗಿದ್ದು, ಮೇ 2023ರ ಚುನಾವಣೆ ವೇಳೆ ರಾಜ್ಯದಲ್ಲಿ ಅಮುಲ್ ಪ್ರವೇಶವನ್ನು ಎತ್ತಿ ಹಿಡಿದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ಕೆಎಂಎಫ್ ಮತ್ತು ಅದರ ನಂದಿನಿ ತುಪ್ಪದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸುವ ಹಲವು ಹೇಳಿಕೆಗಳು […]
ಖಲಿಸ್ತಾನ ಪರ ಬೆಂಬಲಿಗನೊಬ್ಬ ಮತ್ತೊಬ್ಬ ವ್ಯಕ್ತಿಗೆ ಘೋರ ಪರಿಣಾಮದ ಬೆದರಿಕೆ ಹಾಕುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆ ಬೆಂಬಲಿಗ “ಗುಜರಾತಿಗಳೇ, ಸರಿಯಾಗಿ ಕೇಳಿಸಿಕೊಳ್ಳಿ. ನಾವು ನಿಮಗೆ ಎರಡೆರಡು ಬಾರಿಸಬಲ್ಲೆವು. ನಿಮಗೆ ಲಂಗರ್ ಬೇಕಿದ್ದರೆ, ಸುಮ್ಮನೆ ಲಂಗರ್ ಊಟ ಮಾಡಿ. ನಿಮ್ಮ ಸಮುದಾಯದವರು ಮೂತ್ರ ಕುಡಿದು ಸಾಕಷ್ಟು ನಾಟಕ ಮಾಡಿದ್ದಾರೆ. ನಾನು ಎಲ್ಲಾ ಗುಜರಾತಿಗಳಿಗೆ ಹೇಳುತ್ತಿದ್ದೇನೆ, ನೀವು ಜಗಳ ಪ್ರಾರಂಭಿಸಿದರೆ, ನಾವು ಗುಜರಾತಿನೊಳಗೆ, ನಿಮ್ಮ ಮನೆಯೊಳಗೆ ಹೋಗುತ್ತೇವೆ ಮತ್ತು ನಿಮ್ಮೊಂದಿಗೆ ಹೋರಾಡುತ್ತೇವೆ. ಹೋಗಿ, ಮೂತ್ರ ಕುಡಿಯಿರಿ. ಹೋಗಿ […]
अपने बेटे से कहो 72 हजार और 22 लाख नौकरी के बारे में ना बोले नहीं तो मेरा क्या होगा गुजरात जाना पड़ेगा वहां की जनता भी अब जुमले में नहीं फसती ?? pic.twitter.com/R5E6t0W2Wk — neha kumari { चौकीदार चोर है } (@SheikhMdTajUdd1) April 3, 2019 ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿಯವರ ಪಾದ […]
ಕೆನಡಾದಲ್ಲಿ ಖಲಿಸ್ತಾನ-ಪರ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಕೆನಡಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ವೈಮನಸ್ಯದ ನಡುವೆಯೇ ಕೆನಡಾ ಸರ್ಕಾರವು ಭಾರತದ ಒಂದು ಬಲಪಂಥೀಯ ಸಂಘಟನೆಯಾದ ಆರ್‌ಎಸ್‌ಎಸ್ ಅನ್ನು ನಿಷೇಧಿಸಿದೆ ಎನ್ನುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರತದಕ್ಕೆ ತಾವು ಕಳಿಸಿರುವ ರಾಯಭಾರಿಯನ್ನು ಹಿಂದಕ್ಕೆ ಕರೆಸಲು ಮತ್ತು ಕೆನಡಾದಲ್ಲಿರುವ ಭಾರತದ ರಾಯಭಾರಿಯನ್ನು ಹಿಂದೆ ಕಳುಹಿಸಲು ಕೋರುವುದರ ಜೊತೆಗೆ ಭಾರತದೊಂದಿಗಿನ ವ್ಯಾಪಾರದ ಮೇಲೆ ನಿಷೇಧವನ್ನು ಹೇರುವಂತೆ ಈ ವೀಡಿಯೊ ಕೆನಡಾ ಸರ್ಕಾರವನ್ನು ಒತ್ತಾಯಿಸುತ್ತದೆ. […]