ಜಪಾನ್ ನಿಜವಾಗಿಯೂ ಚಂದ್ರನ ಸುತ್ತ ಸೌರ ಉಂಗುರವನ್ನು ನಿರ್ಮಿಸಲು ಯೋಜಿಸುತ್ತಿದೆಯೇ? ಸತ್ಯ ಪರಿಶೀಲನೆ

ಜಪಾನ್ ನಿಜವಾಗಿಯೂ ಚಂದ್ರನ ಸುತ್ತ ಸೌರ ಉಂಗುರವನ್ನು ನಿರ್ಮಿಸಲು ಯೋಜಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಜಪಾನ್ ದೇಶವು ಭೂಮಿಗೆ ಶಾಶ್ವತವಾಗಿ ವಿದ್ಯುತ್ ನೀಡುವ ಸುತ್ತ ಸೌರ ಉಂಗುರವನ್ನು ಚಂದ್ರನ ಸುತ್ತ ನಿರ್ಮಿಸಲು ಯೋಜಿಸುತ್ತಿದೆ.

ಕಡೆನುಡಿ/Conclusion : ಹೇಳಿಕೆ ದಾರಿ ತಪ್ಪಿಸುವಂತಿದೆ.  ಚಂದ್ರನ ಸುತ್ತ ಸೌರ ಉಂಗುರವನ್ನು ನಿರ್ಮಿಸಲು ಜಪಾನಿನ ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಅಧಿಕೃತ ಯೋಜನೆಯು ಯೋಜನಾ ಹಂತದಲ್ಲಿಲ್ಲ. ಈ ಕಲ್ಪನೆಯು ಒಂದು ಖಾಸಗಿ ಸಂಸ್ಥೆಯಾದ ಶಿಮಿಜು-ನ ದಾರ್ಶನಿಕ ಪರಿಕಲ್ಪನೆಯಿಂದ ಹುಟ್ಟಿಕೊಂಡಿರುವಂಥದ್ದು, ಮತ್ತು ಜಪಾನಿನ ಸರ್ಕಾರದ ಪ್ರಸ್ತುತ ಎಂಜಿನಿಯರಿಂಗ್ ಬದ್ಧತೆಯಿಂದಲ್ಲ.

ರೇಟಿಂಗ್/Rating : ದಾರಿ ತಪ್ಪಿಸುವಂತಿದೆ

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಜಪಾನ್ ಚಂದ್ರನ ಸುತ್ತ ಸೌರ ಉಂಗುರವನ್ನು ನಿರ್ಮಿಸಲು ಯೋಜಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘NightSkyToday’ ಅಂತಹ ಪೋಸ್ಟ್ ಅನ್ನು “ಬ್ರೇಕಿಂಗ್: ಜಪಾನ್ ಭೂಮಿಗೆ ಶಾಶ್ವತವಾಗಿ ಶಕ್ತಿಯನ್ನು ನೀಡುವಂತಹ ಸೌರ ಉಂಗುರವನ್ನು ಚಂದ್ರನ ಸುತ್ತ ನಿರ್ಮಿಸಲು ಯೋಜಿಸುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಲಗತ್ತಿಸಲಾದ ಚಿತ್ರದಲ್ಲಿ ಚಂದ್ರ ಮತ್ತು ಅದರ ಸುತ್ತಲು ಸೌರ ಫಲಕಗಳ ಉಂಗುರವನ್ನು ಪ್ರದರ್ಶಿಸುವಂತೆ ಕಾಣುತ್ತದೆ. ಈ ಪೋಸ್ಟ್ ಗೆ 137,000ಕ್ಕೂ ಹೆಚ್ಚು ವೀಕ್ಷಣೆಗಳು ದೊರೆತಿವೆ, ಅದನ್ನು ಕೆಳಗೆ ಕಾಣಬಹುದು

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಜಪಾನಿನ ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಅಧಿಕೃತ ಕಾರ್ಯಕ್ರಮವು ಚಂದ್ರನ ಸುತ್ತ ಸೌರ ಉಂಗುರವನ್ನು ನಿರ್ಮಿಸುವೆಡೆಗೆ ಕಾರ್ಯನಿರ್ವಹಿಸುತ್ತಿಲ್ಲ. ಈ ಪರಿಕಲ್ಪನೆಯು ಖಾಸಗಿ ಕಂಪನಿ ಶಿಮಿಜು ಕಾರ್ಪೊರೇಷನ್‌ನಿಂದ ಬಂದಿರುವಂಥದ್ದು, ಮತ್ತಿದು ಜಪಾನಿನ ಸರ್ಕಾರ ಬೆಂಬಲಿಸಿರುವ ಸಕ್ರಿಯ ಎಂಜಿನಿಯರಿಂಗ್ ಯೋಜನೆಯಲ್ಲ.

ಮೊದಲು ನಾವು “ಚಂದ್ರನ ಸುತ್ತ ಸೌರ ಉಂಗುರವನ್ನು ನಿರ್ಮಿಸಲು ಜಪಾನ್ ಯೋಜನೆ” ಎಂಬ ಪದಗಳೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ಹುಡುಕಾಟದ ಫಲಿತಾಂಶಗಳು ನಮ್ಮನ್ನು ಜಪಾನಿನ ನಿರ್ಮಾಣ ಮತ್ತು ಎಂಜಿನಿಯರಿಂಗ್ ಕಂಪನಿಯಾಗಿರುವ ಶಿಮಿಜು ಕಾರ್ಪೊರೇಷನ್‌ನ ಪುಟಕ್ಕೆ ಕರೆದೊಯ್ಯಿತು, ಇದು ಪರಿಕಲ್ಪನಾ ಸೌರಶಕ್ತಿ ‘ಲೂನಾ ರಿಂಗ್’ ಅನ್ನು ಪ್ರಸ್ತಾಪಿಸಿದೆ. “ಇದು ಮಾನವರು ನಮ್ಮ ಸುಂದರ ಭೂಮಿಯೊಂದಿಗೆ ಶಾಶ್ವತ ಸಾಮರಸ್ಯದಿಂದ ಬದುಕಲು ಅನುವು ಮಾಡಿಕೊಡಲು ವಿನ್ಯಾಸಗೊಳಿಸಲಾಗಿರುವ ಶಿಮಿಜು ಕಾರ್ಪೊರೇಷನ್‌ನ ಹೊಸ ಪ್ರಸ್ತಾಪವಾಗಿದೆ” ಎಂದು ಪುಟದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಭಾಗವನ್ನು ಕೆಳಗೆ ನೋಡಿ-

ಮೇಲಿನ ಪುಟದಿಂದ ನಮಗೆ ಮತ್ತಷ್ಟು ತಿಳಿದುಬಂದದ್ದೇನೆಂದರೆ, ಈ ಪರಿಕಲ್ಪನೆಯು “ಚಂದ್ರನ ಸಮಭಾಜಕದ ಸುತ್ತಲೂ ಸೌರ ವಿದ್ಯುತ್ ಕೋಶಗಳ ಉಂಗುರವನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಉತ್ಪಾದಿಸುವ” ಕಲ್ಪನೆಯಾಗಿದೆ. ಕಂಪನಿಯು ಇದನ್ನು ಹವಾಮಾನದಿಂದ ಪ್ರಭಾವಿತವಾಗದಿರುವಂತಹ “ನಿರಂತರ, 24-ಗಂಟೆಗಳ” ಶುದ್ಧ ಶಕ್ತಿಯನ್ನು ಉತ್ಪಾದಿಸುತ್ತದೆ ಎಂದು ವಿವರಿಸುತ್ತದೆ. ಪುಟದಲ್ಲಿನ ಒಂದು ಚಿತ್ರವು ಲೂನಾ ಉಂಗುರದ ಕುರಿತಾದ ಕಂಪನಿಯ ದೃಷ್ಟಿಕೋನ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸುತ್ತದೆ. ಕೆಳಗಿನ ಸ್ಕ್ರೀನ್‌ಶಾಟ್ ನೋಡಿ-

ಶಿಮಿಜು-ನ ಅಧಿಕೃತ ಪುಟವು ಈ ಯೋಜನೆಯನ್ನು ತನ್ನ “ಕನಸು” ವಿಷಯಗಳ ವಿಭಾಗದ ಅಡಿಯಲ್ಲಿ ಭವಿಷ್ಯದ ಸಂಶೋಧನೆ ಮತ್ತು ಅಭಿವೃದ್ಧಿ ಕಲ್ಪನೆಯಾಗಿ ಪ್ರಸ್ತುತಪಡಿಸುತ್ತದೆ.

ನಾವು ಇತರ ವರದಿಗಳಿಗಾಗಿ ಹುಡುಕಿದಾಗ, ಹುಡುಕಾಟದಲ್ಲಿ ನಮಗೆ ಮೇ 30, 2011ರಂದು ಪ್ರಕಟವಾದ “ಜಪಾನೀಸ್ ಕಾರ್ಪೊರೇಷನ್ ಚಂದ್ರನನ್ನು ಬೃಹತ್ ಸೌರಶಕ್ತಿ ಸ್ಥಾವರವನ್ನಾಗಿ ಪರಿವರ್ತಿಸಲು ಯೋಜಿಸಿದೆ” ಎಂಬ ಶೀರ್ಷಿಕೆಯ ಲೇಖನಕ್ಕೆ ನಮ್ಮನ್ನು ಕರೆದೊಯ್ಯಿತು. ಈ ವರದಿಯು “ಯೋಜನೆಯು ಚಂದ್ರನ ಮೇಲ್ಮೈಯಲ್ಲಿ 12 ಮೈಲಿ ಅಗಲದ, 6,800 ಮೈಲಿ ಉದ್ದದ ಬೃಹತ್ “ಲೂನಾ ರಿಂಗ್” ಸೌರ ಫಲಕಗಳನ್ನು ನಿರ್ಮಿಸುವ ಬಗ್ಗೆ ಉಲ್ಲೇಖಿಸುತ್ತದೆ. ಲೇಖನವು ಜಪಾನಿನ ಸರ್ಕಾರದ ಪಾಲ್ಗೊಳ್ಳುವಿಕೆಯ ಬಗ್ಗೆ ಏನನ್ನೂ ಸೂಚಿಸುವುದಿಲ್ಲ. ಅದರ ಒಂದು ಭಾಗವನ್ನು ಕೆಳಗೆ ನೋಡಿ –

ಡಿಸೆಂಬರ್ 3, 2013ರಲ್ಲಿ, Space.com ಇದರ ಬಗ್ಗೆ “ಚಂದ್ರನನ್ನು ದೈತ್ಯ ಬಾಹ್ಯಾಕಾಶ ಸೌರಶಕ್ತಿ ಕೇಂದ್ರವಾಗಿ ಪರಿವರ್ತಿಸುವುದು ಹೇಗೆ” ಎಂಬ ಶೀರ್ಷಿಕೆಯ ಲೇಖನವನ್ನು ಸಹ ಬರೆದಿತ್ತು. ಶಿಮಿಜು ಕಾರ್ಪೊರೇಷನ್ ಚಂದ್ರನ ಸುತ್ತಲೂ “ಸೌರ ಫಲಕಗಳ ಉಂಗುರ”ದ ಈ ಯೋಜನೆಯನ್ನು ಪ್ರಸ್ತಾಪಿಸಿದೆ ಎಂದು ಲೇಖನವು ದೃಢಪಡಿಸುತ್ತದೆ. ಈ ಯೋಜನೆಯು “ಮೈಕ್ರೋವೇವ್ ಮತ್ತು ಲೇಸರ್ ಟ್ರಾನ್ಸ್‌ಮಿಟರ್‌ಗಳನ್ನು” ಬಳಸಿಕೊಂಡು ಭೂಮಿಗೆ ಶಕ್ತಿಯನ್ನು ನೀಡಬಹುದು ಎಂದು ಲೇಖನವು ಮುಂದುವರಿದು ಹೇಳುತ್ತದೆ. ಈ ನಿರ್ದಿಷ್ಟ ಲೇಖನದ ಒಂದು ಭಾಗವನ್ನು ನೋಡಿ-

ಚಂದ್ರನ ಸುತ್ತ ಸೌರ ಉಂಗುರ ನಿರ್ಮಾಣದ ಕುರಿತು ಜಪಾನ್ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆಗಳು ಅಥವಾ ಸುತ್ತೋಲೆಗಳು ನಮಗೆ ಕಂಡುಬಂದಿಲ್ಲ.

ಆದ್ದರಿಂದ, ಈ ಹೇಳಿಕೆ ದಾರಿತಪ್ಪಿಸುವಂತಿದೆ


ಇದನ್ನೂ ಓದಿ:

ಕಡಲತೀರಗಳಲ್ಲಿ ಬಯಲು ಮಲವಿಸರ್ಜನೆಗಾಗಿ ಭಾರತೀಯರನ್ನು ಗುರಿಯಾಗಿಸಿಕೊಂಡ ಕೆನಡಾದ ಜಾಹೀರಾತು ಫಲಕಗಳನ್ನು ಈ ಚಿತ್ರದಲ್ಲಿ ನಿಜವಾಗಿಯೂ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಭಾರತವು ಈಗಾಗಲೇ ಗ್ರಾಹಕರಲ್ಲಿ ದೇಶಾದ್ಯಂತ ಪೀರ್-ಟು-ಪೀರ್ ಇಂಧನ ವ್ಯಾಪಾರವನ್ನು ಪ್ರಾರಂಭಿಸಿದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published.