ಹೇಳಿಕೆ/Claim:ಚೀನಾದಲ್ಲಿರುವ ಲೆಶಾನ್ ಬೃಹತ್ ಬುದ್ಧನ ಪ್ರತಿಮೆಯ ನಿರ್ವಹಣೆ ಮತ್ತು ಸ್ವಚ್ಛತೆಯನ್ನು ಈ ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ.
ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಈ ವೀಡಿಯೊವನ್ನು AI ಬಳಸಿ ರಚಿಸಲಾಗಿದೆ ಮತ್ತು ಇದು ಚೀನಾದಲ್ಲಿರುವ ಯುನೆಸ್ಕೋ ವಿಶ್ವ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ತಾಣವಾದ ಲೆಶಾನ್ ಬೃಹತ್ ಬುದ್ಧನ ನೈಜ ನಿರ್ವಹಣಾ ಕಾರ್ಯವನ್ನು ಚಿತ್ರಿಸುವುದಿಲ್ಲ. ಅಧಿಕಾರಿಗಳು ಈ ವೀಡಿಯೊವನ್ನು ತಳ್ಳಿಹಾಕಿದ್ದಾರೆ, ಇದರ ವಾಸ್ತವಿಕ ನಿರ್ವಹಣೆಯು ಮೇಲ್ಮೈ ದುರಸ್ತಿ ಮತ್ತು ಸಸ್ಯವರ್ಗವನ್ನು ತೆಗೆದುಹಾಕುವಂತಹ ವಿಧಾನಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ರೇಟಿಂಗ್/Rating: ಸುಳ್ಳು![]()
ಚೀನಾದಲ್ಲಿರುವ ಯುನೆಸ್ಕೋ ವಿಶ್ವ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ತಾಣವಾದ ‘ಲೆಶಾನ್ ಬೃಹತ್ ಬುದ್ಧ’ನ ಪ್ರತಿಮೆಯ ಸಾಮಾನ್ಯ ಸ್ವಚ್ಛತೆ ಅಥವಾ ನಿರ್ವಹಣಾ ಕಾರ್ಯವನ್ನು ಈ ವೀಡಿಯೊ ತೋರಿಸುತ್ತದೆ ಎಂದು ಹೇಳಿ ಹಲವು ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ‘kenw_2’ ಎಂಬ ದೃಢೀಕೃತ ‘X’ ಬಳಕೆದಾರ, “ಲೆಶಾನ್ ಬೃಹತ್ ಬುದ್ಧನ ನಿರ್ವಹಣೆಯನ್ನು ಹೀಗೆ ಮಾಡಲಾಗುತ್ತದೆ. ಅಮಿತಾಭ ಬುದ್ಧ” ಎಂಬ ಶೀರ್ಷಿಕೆಯೊಂದಿಗೆ ಅಂತಹ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನೊಂದಿಗೆ ಎರಡು ವೀಡಿಯೊಗಳನ್ನು ಲಗತ್ತಿಸಲಾಗಿದೆ; ಇದರಲ್ಲಿ ಕಾರ್ಮಿಕರು ಉದ್ದನೆಯ ಕೋಲುಗಳನ್ನು ಬಳಸಿ ಪ್ರತಿಮೆಯ ಕಿವಿ ಮತ್ತು ಮೂಗಿನ ಹೊಳ್ಳೆಯನ್ನು ಸ್ವಚ್ಛಗೊಳಿಸುತ್ತಿರುವುದು, ಕಸ ಮತ್ತು ಎಲೆಗಳನ್ನು ಹೊರತೆಗೆಯುತ್ತಿರುವುದು ಹಾಗೂ ಕಿವಿಯ ಕುಳಿಯಿಂದ ಪಕ್ಷಿಗಳು ಹೊರಗೆ ಹಾರುತ್ತಿರುವುದು ಕಂಡುಬರುತ್ತದೆ.
ಈ ಪೋಸ್ಟ್ ಗೆ 3.8 ಮಿಲಿಯಕ್ಕೂ ಹೆಚ್ಚು ವೀಕ್ಷಣೆಗಳು ದೊರೆತಿವೆ ಮತ್ತು ಇದನ್ನು ಕೆಳಗೆ ಕಾಣಬಹುದು –

原来乐山大佛的保养是这样的,阿弥陀佛🙏 https://t.co/RgS6xBEu9b
— Ken W (@kenw_2) October 4, 2026
ಇತರ ಬಳಕೆದಾರರು ಇಂತಹದ್ದೇ ಹೇಳಿಕೆಗಳನ್ನು ಹಂಚಿಕೊಂಡಿದ್ದು, ಅವುಗಳನ್ನು ಇಲ್ಲಿ ಕಾಣಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಈ ವೀಡಿಯೊವನ್ನು AI ಬಳಸಿ ರಚಿಸಲಾಗಿದೆ ಮತ್ತು ಇದು ಚೀನಾದಲ್ಲಿರುವ ಯುನೆಸ್ಕೋ ವಿಶ್ವ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ತಾಣವಾದ ‘ಲೆಶಾನ್ ಬೃಹತ್ ಬುದ್ಧ’ದಲ್ಲಿ ನಡೆಯುವ ನೈಜ ನಿರ್ವಹಣಾ ಕಾರ್ಯವನ್ನು ತೋರಿಸುವುದಿಲ್ಲ. ಈ ದೃಶ್ಯಾವಳಿಗಳು ಕೃತಕವಾಗಿ ಸೃಷ್ಟಿಸಲ್ಪಟ್ಟಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ; ವಾಸ್ತವವಾಗಿ, ಅಲ್ಲಿ ನಡೆಯುವ ನಿರ್ವಹಣಾ ಕಾರ್ಯವು ಮೇಲ್ಮೈ ಹಾನಿಯನ್ನು ಸರಿಪಡಿಸುವುದು, ಸಸ್ಯವರ್ಗವನ್ನು ತೆಗೆದುಹಾಕುವುದು ಮತ್ತು ಸೂಕ್ಷ್ಮಜೀವಿಗಳನ್ನು ಸ್ವಚ್ಛಗೊಳಿಸುವಂತಹ ಚಟುವಟಿಕೆಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ.
Details:
ವಿವರಗಳು:
ಇದರ ಮೂಲವನ್ನು ಪತ್ತೆಹಚ್ಚಲು ನಾವು ಮೊದಲು ವೀಡಿಯೊದ ಕೆಲವು ಪ್ರಮುಖ ಕೀಫ್ರೇಮ್ ಗಳನ್ನು ಬಳಸಿಕೊಂಡು ರಿವರ್ಸ್ ಚಿತ್ರಾಧಾರಿತ ಹುಡುಕಾಟವನ್ನು ನಡೆಸಿದೆವು. ಆದಾಗ್ಯೂ, ಈ ವೀಡಿಯೊವನ್ನು ಪ್ರಕಟಿಸಿದ ಅಥವಾ ಹಂಚಿಕೊಂಡ ಯಾವುದೇ ವಿಶ್ವಾಸಾರ್ಹ ಮೂಲ ಅಥವಾ ಅಧಿಕೃತ ಮಾಧ್ಯಮವನ್ನು ನಮಗೆ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ನಂತರ ನಾವು ವೀಡಿಯೊಗಳನ್ನು ಡೌನ್ಲೋಡ್ ಮಾಡಿ, ಹೈವ್ ಮಾಡರೇಷನ್ ನ AI ಪತ್ತೆಹಚ್ಚುವ ಸಾಧನವನ್ನು ಬಳಸಿ ಅವುಗಳನ್ನು ವಿಶ್ಲೇಷಿಸಿದೆವು. ವೀಡಿಯೊದ ಕೆಲವು ಭಾಗಗಳು 60% ಕ್ಕಿಂತ ಹೆಚ್ಚು AI-ರಚಿತವಾಗಿರುವ ಸಾಧ್ಯತೆಯನ್ನು ಹೊಂದಿವೆ ಎಂದು ವಿಶ್ಲೇಷಣೆಯು ಸೂಚಿಸಿತು.

ಈ ವಿಷಯವನ್ನು ಹಂಚಿಕೊಂಡ ವ್ಯಕ್ತಿಯು ನಂತರದ ಪೋಸ್ಟ್ನಲ್ಲಿ, ತಾವು ಹಂಚಿಕೊಂಡ ವೀಡಿಯೊವನ್ನು AI ಬಳಸಿ ರಚಿಸಲಾಗಿತ್ತು ಎಂಬುದನ್ನು ಒಪ್ಪಿಕೊಂಡರು. “ಮೇಲಿನದ್ದು AI ವೀಡಿಯೊ, ಇದು ಕೇವಲ ಮನರಂಜನೆಯ ಉದ್ದೇಶಕ್ಕಾಗಿ ಮಾತ್ರ, ಅಮಿತಾಭ. ಅಧಿಕೃತ ನಿರ್ವಹಣಾ ಕಾರ್ಯ ಶೀಘ್ರದಲ್ಲೇ ನಡೆಯಲಿದೆ” ಎಂದು ಆ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
免骂声明:上面是AI视频,仅供娱乐,阿弥陀佛🙏
正式的官方维护即将到来。 https://t.co/JfQILuQ3cU
— Ken W (@kenw_2) October 4, 2026
ಇದರ ನಂತರ, ಹೆಚ್ಚಿನ ಮಾಹಿತಿಗಾಗಿ ನಾವು “ಚೀನಾದಲ್ಲಿ ಲೆಶನ್ ಬೃಹತ್ ಬುದ್ಧ ವೈರಲ್ ವೀಡಿಯೊ” ಎಂಬ ಪದಗುಚ್ಛವನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದೆವು. ಅಕ್ಟೋಬರ್ 4, 2026ರಂದು ರೆಡ್ ಸ್ಟಾರ್ ನ್ಯೂಸ್ ಪ್ರಕಟಿಸಿದ ಮತ್ತು ಕನ್ನಡಕ್ಕೆ ಅನುವಾದಿಸಲಾದ ವರದಿಯ ಪ್ರಕಾರ, ಲೆಶಾನ್ ಬೃಹತ್ ಬುದ್ಧನ ಕಿವಿ ಮತ್ತು ಮೂಗಿನ ಹೊಳ್ಳೆಗಳನ್ನು ಕಾರ್ಮಿಕರು ಸ್ವಚ್ಛಗೊಳಿಸುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊವು AI ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಯಾಗಿದೆ. ಲೆಶಾನ್ ಬೃಹತ್ ಬುದ್ಧನ ಸಾಂಸ್ಕೃತಿಕ ಅವಶೇಷಗಳ ಸಂರಕ್ಷಣಾ (ಪ್ರವಾಸಿ ತಾಣ) ನಿರ್ವಹಣಾ ಸಮಿತಿಯ ಪ್ರಕಾರ, ಈ ವೀಡಿಯೊವು ಅಲ್ಲಿನ ನೈಜ ದೃಶ್ಯವನ್ನು ತೋರಿಸುತ್ತಿರಲಿಲ್ಲ; ಮತ್ತು ಸಮಿತಿಯ ಡಿಜಿಟಲ್ ಮಾಹಿತಿ ಕೇಂದ್ರದ ಉಪ ನಿರ್ದೇಶಕ ಚೆನ್ ರುಯಿ ಅವರು ಇದು AI-ರಚಿತ ವೀಡಿಯೊ ಎಂದು ದೃಢಪಡಿಸಿದ್ದಾರೆ.

ಮೇಲಿನ ವರದಿಯು, “ಲೆಶಾನ್ ಬೃಹತ್ ಬುದ್ಧನ ಮುಖ್ಯ ಭಾಗಕ್ಕೆ ಸಂಬಂಧಿಸಿದ ಸಂರಕ್ಷಣೆ ಮತ್ತು ಪುನಃಸ್ಥಾಪನೆ ಸಮೀಕ್ಷೆ ಹಾಗೂ ವಿನ್ಯಾಸ ಯೋಜನೆಯನ್ನು ಆಡಳಿತ ಮಂಡಳಿಯು ಶೀಘ್ರದಲ್ಲೇ ಪ್ರಾರಂಭಿಸಲಿದೆ” ಎಂದು ತಿಳಿಸಿದೆ. “ಕೇವಲ ‘ಕ್ಲಿಕ್’ಗಳನ್ನು ಪಡೆಯುವ ಉದ್ದೇಶಕ್ಕಾಗಿ ಈ ಐತಿಹಾಸಿಕ ಸ್ಮಾರಕವನ್ನು AI ಬಳಸಿ ತಿರುಚಲು ಅಥವಾ ದುರ್ಬಳಕೆ ಮಾಡಲು ಅವಕಾಶ ನೀಡಬಾರದು” ಎಂದು ಅವರು ಒತ್ತಿಹೇಳಿದರು.
IT ಹೋಮ್ ಪ್ರಕಟಿಸಿದ ಮತ್ತೊಂದು ವರದಿಯ (ಕನ್ನಡದ ಅನುವಾದ) ಪ್ರಕಾರ, ಲೆಶಾನ್ ಬೃಹತ್ ಬುದ್ಧನ ಸಾಂಸ್ಕೃತಿಕ ಸ್ಮಾರಕ ಸಂರಕ್ಷಣಾ (ಪ್ರವಾಸಿ ತಾಣ) ಆಡಳಿತ ಸಮಿತಿಯು, ಆ ವೀಡಿಯೊ “ಸುಳ್ಳು ಮತ್ತು AI ಮೂಲಕ ಸೃಷ್ಟಿಸಲ್ಪಟ್ಟದ್ದು ಹಾಗೂ ಅದು ಆ ಸ್ಥಳದ ನೈಜ ದೃಶ್ಯವನ್ನು ತೋರಿಸಲಿಲ್ಲ ಎಂದು ದೃಢಪಡಿಸಿದೆ. ಸಮಿತಿಯ ಡಿಜಿಟಲ್ ಮಾಹಿತಿ ಕೇಂದ್ರದ ಉಪ ನಿರ್ದೇಶಕ ಚೆನ್ ರುಯಿ ಅವರ ಹೇಳಿಕೆಯನ್ನೂ ಈ ವರದಿಯು ಉಲ್ಲೇಖಿಸುತ್ತಾ “ಬುದ್ಧನ ಕಿವಿ ಮತ್ತು ಮೂಗಿನ ಒಳಗೆ ಸ್ವಚ್ಛತೆಯ ಅಗತ್ಯವಿರುವ ಯಾವುದೇ ಉಳಿಕೆಗಳಿಲ್ಲ” ಮತ್ತು ಬುದ್ಧನ ಪ್ರತಿಮೆ ಇರುವ ಲಿಂಗ್ಯುನ್ ಪರ್ವತ ಪ್ರದೇಶದಲ್ಲಿ “ಪ್ರಸ್ತುತ ಯಾವುದೇ ಕೋತಿಗಳಿಲ್ಲ” ಎಂದು ಅವರು ತಿಳಿಸಿದ್ದಾರೆ ಎಂದಿತು. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ –

ಲೆಶನ್ ಬೃಹತ್ ಬುದ್ಧನ ಪ್ರತಿಮೆಯನ್ನು ನಿಜವಾಗಿಯೂ ಹೇಗೆ ಸ್ವಚ್ಛಗೊಳಿಸಲಾಗುತ್ತದೆ ಎಂಬುದರ ಕುರಿತು, 2026ರಲ್ಲಿ ಐದು ನಿರ್ವಹಣಾ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು ಇತ್ತೀಚಿನದು ಸೆಪ್ಟೆಂಬರ್ 20 ರಿಂದ 25 ರವರೆಗೆ ನಡೆಯಿತು ಎಂದು ಮೇಲಿನ ವರದಿಯು ಹೇಳಿದೆ, ಮತ್ತು “ಶಿಲೆಗೆ ಮೇಲ್ಮೈಗೆ ಸೂಕ್ಷ್ಮ-ಹಾನಿಯನ್ನು ದುರಸ್ತಿ ಮಾಡುವುದು, ಸೂಕ್ಷ್ಮಜೀವಿಗಳನ್ನು ಸ್ವಚ್ಛಗೊಳಿಸುವುದು ಮತ್ತು ಮೇಲ್ಮೈ ಸಸ್ಯವರ್ಗವನ್ನು ತೆಗೆದುಹಾಕುವುದರ” ಮೇಲೆ ಗಮನ ಕೊಡಲಾಗುತ್ತದೆ ಎಂದು ಇದರಲ್ಲಿ ಹೇಳಲಾಗಿದೆ.
ಪ್ರತಿಮೆಯನ್ನು ನಿಜವಾಗಿಯೂ ಹೇಗೆ ಸ್ವಚ್ಛವಾಗಿ ನಿರ್ವಹಿಸಲಾಗಿದೆ ಎಂಬುದನ್ನು ತಿಳಿಯಲು ಡಿಜಿಟೈ ಇಂಡಿಯಾ ಪ್ರತ್ಯೇಕ ಹುಡುಕಾಟವನ್ನು ನಡೆಸಿತು. ಚೀನಾ ನ್ಯೂಸ್ ನೆಟ್ವರ್ಕ್ ಪ್ರಕಟಿಸಿದ 2019ರ ವರದಿಯ ಪ್ರಕಾರ, “ಬಿರುಕು ಬಿಟ್ಟ ಮತ್ತು ಹಾನಿಗೊಳಗಾದ ಪ್ರದೇಶಗಳಲ್ಲಿನ ಸಸ್ಯವರ್ಗವನ್ನು ಸ್ವಚ್ಛಗೊಳಿಸುವುದು”, “ಬಂಡೆಯ ಮೇಲ್ಮೈ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವುದು ಮತ್ತು ಹೂಳು ತೆಗೆಯುವುದು” ಹಾಗೂ ಬಿರುಕು ಬಿಟ್ಟ ಅಥವಾ ಹಾನಿಗೊಳಗಾದ ಭಾಗಗಳನ್ನು ತೆಗೆದುಹಾಕುವಂತಹ ಕಾರ್ಯಗಳನ್ನು ಕಾರ್ಮಿಕರು ಕೈಗೊಂಡರು ಎನ್ನಲಾಗಿದೆ. ಬುದ್ಧನ ಪ್ರತಿಮೆಯ ಈ “ಭೌತಿಕ ಪರಿಶೀಲನೆ”ಯ ಸಂದರ್ಭದಲ್ಲಿ, ಪ್ರತಿಮೆಯ ಬಿರುಕು ಬಿಟ್ಟ ಭಾಗಗಳು ಹಾಗೂ ಅದರ ಎದೆ ಮತ್ತು ಹೊಟ್ಟೆಯ ಭಾಗಗಳನ್ನು ದಾಖಲಿಸಲು ಡ್ರೋನ್ ಮೂಲಕ ವೈಮಾನಿಕ ಸಮೀಕ್ಷೆ ಮತ್ತು 3D ಲೇಸರ್ ಸ್ಕ್ಯಾನಿಂಗ್ನಂತಹ ವಿಧಾನಗಳನ್ನು ಬಳಸಲಾಗುತ್ತದೆ. ಈ ಭೌತಿಕ ಪರಿಶೀಲನಾ ಪ್ರಕ್ರಿಯೆಯಲ್ಲಿ “ಹಾನಿಯ ಸಮೀಕ್ಷೆಗಾಗಿ ಫೈಬರ್ ಆಪ್ಟಿಕ್ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಳಸಲಾಗುತ್ತಿತ್ತು” ಎಂದೂ ಸಹ ವರದಿಯು ತಿಳಿಸುತ್ತದೆ.

ಆದ್ದರಿಂದ, ಆ ಹೇಳಿಕೆಯು ಸುಳ್ಳು.
ಇದನ್ನೂ ಓದಿ:
ಪಾಕಿಸ್ತಾನ ಧ್ವಜ ಹೊತ್ತ ಹಡಗನ್ನು ಇರಾನ್ ಹರ್ಮಜ್ ಜಲಸಂಧಿಯಲ್ಲಿ ನಾಶಪಡಿಸಲಾಯಿತೇ? ಸತ್ಯ ಪರಿಶೀಲನೆ
