ಹೇಳಿಕೆ/Claim: ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ತಮ್ಮ ಸ್ಥಾನದಿಂದ ಕೆಳಗಿಳಿಯುವ ನಿರೀಕ್ಷೆಯಿದೆ ಎಂದು ವೈರಲ್ ಪೋಸ್ಟ್ ಹೇಳುತ್ತದೆ.
ಕಡೆನುಡಿ/Conclusion:ಈ ಹೇಳಿಕೆ ಸುಳ್ಳು. ಇನ್ಫಾಂಟಿನೊ ರಾಜೀನಾಮೆ ನೀಡಲು ಯೋಜಿಸುತ್ತಿದ್ದಾರೆ ಅಥವಾ ಆತ ಕೆಳಗಿಳಿಯುವ ನಿರೀಕ್ಷೆಯಿದೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆಗಳು, ಅಧಿಕೃತ ಘೋಷಣೆ ಅಥವಾ ವಿಶ್ವಾಸಾರ್ಹ ವರದಿಗಳು ಇಲ್ಲ. ಆತ ಫಿಫಾ ಅಧ್ಯಕ್ಷರಾಗಿ ಉಳಿದಿದ್ದಾರೆ ಮತ್ತು 2027ರಲ್ಲಿ ಮರುಚುನಾವಣೆಗೆ ಸ್ಪರ್ಧಿಸುವ ಉದ್ದೇಶವನ್ನು ಸಾರ್ವಜನಿಕವಾಗಿ ದೃಢಪಡಿಸಿದ್ದಾರೆ.
ರೇಟಿಂಗ್/Rating :ಸುಳ್ಳು ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ
******************************************************
ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಮುಂದಿನ ವರ್ಷ ಮರುಚುನಾವಣೆಗೆ ಸ್ಪರ್ಧಿಸುವುದಿಲ್ಲ ಮತ್ತು ಆತ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ “indykaila” ಅಂತಹ ಒಂದು ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಎಕ್ಸ್ಕ್ಲೂಸಿವ್. ಗಿಯಾನಿ ಇನ್ಫಾಂಟಿನೊ ಫಿಫಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರೀಕ್ಷೆಯಿದೆ”. ಈ ಪೋಸ್ಟ್ನಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ರವರ ಚಿತ್ರವಿರುವ ಗ್ರಾಫಿಕ್ ಇದ್ದು, ಚಿತ್ರದಲ್ಲಿ ಅದೇ ಶೀರ್ಷಿಕೆಯನ್ನು ಪ್ರದರ್ಶಿಸಲಾಗಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ-

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದು, ಅವುಗಳನ್ನು ಇಲ್ಲಿ ನೋಡಬಹುದು.
🚨💣 EXCLUSIVE: Gianni Infantino is expected to step down as FIFA President.
👀 Major developments are reportedly unfolding behind the scenes, with further updates expected in the coming days if the situation progresses.
🌍 A resignation would mark one of the biggest leadership… pic.twitter.com/Mpjy6P9tsJ
— Fabrizo Romariz Fan (@ugonduIj) July 30, 2026
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಗಿಯಾನಿ ಇನ್ಫಾಂಟಿನೊ ರಾಜೀನಾಮೆ ನೀಡಲು ಉದ್ದೇಶಿಸಿದ್ದಾರೆ ಅಥವಾ ಆತ ಹುದ್ದೆಯಿಂದ ಕೆಳಗಿಳಿಯುವ ನಿರೀಕ್ಷೆಯಿದೆ ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳು, ಅಧಿಕೃತ ಹೇಳಿಕೆ ಅಥವಾ ವಿಶ್ವಾಸಾರ್ಹ ಸುದ್ದಿ ವರದಿ ಇಲ್ಲ. ಆದರೆ ಇದಕ್ಕೆ ವಿರುದ್ಧವಾಗಿ, ಅತ ಫಿಫಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಲೇ ಇದ್ದಾರೆ ಮತ್ತು 2027ರಲ್ಲಿ ತಾವು ಮರುಚುನಾವಣೆಗೆ ಸ್ಪರ್ಧಿಸಲು ಯೋಜಿಸಿರುವುದಾಗಿ ಹೇಳಿದ್ದಾರೆ.
ವಿವರಗಳು:
ಈ ಹೇಳಿಕೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ರಾಜೀನಾಮೆ ನೀಡುವ ಸಾಧ್ಯತೆ” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಮೇ 1, 2026 ರಂದು ಪ್ರಕಟವಾದ ಫಿಫಾ ವರದಿಯ ಪ್ರಕಾರ, ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಕೆನಡಾದ ವ್ಯಾಂಕೂವರ್ನಲ್ಲಿ ನಡೆದ 76ನೇ ಫಿಫಾ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡುತ್ತಾ, ಕಳೆದ 10 ವರ್ಷಗಳಲ್ಲಿ ನೀಡಿದ ಬೆಂಬಲ ಮತ್ತು ಪ್ರಗತಿಗಾಗಿ 211 ಫಿಫಾ ಸದಸ್ಯ ಸಂಘಗಳಿಗೆ (MAs) ಧನ್ಯವಾದ ಅರ್ಪಿಸಿದರು ಮತ್ತು 2027 ರಲ್ಲಿ ಮರುಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದರು. ಇದು ಮರುಚುನಾವಣೆಯ ಅಧಿಕೃತ ದೃಢೀಕರಣವಾಗಿದೆ, ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಮೇಲಿನ ವರದಿಯಲ್ಲಿ ಗಿಯಾನಿ ಇನ್ಫಾಂಟಿನೊ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ಸೇರಿಸಲಾಗಿದೆ, ಅದರಲ್ಲಿ ಶೀರ್ಷಿಕೆಯ ಒಂದು ಭಾಗದಲ್ಲಿ “ಮುಂದಿನ ವರ್ಷ ಫಿಫಾ ಅಧ್ಯಕ್ಷರ ಚುನಾವಣೆಗೆ ನಾನು ಅಭ್ಯರ್ಥಿಯಾಗಲಿದ್ದೇನೆ ಎಂದು ಹೇಳಲು ನನಗೆ ಸಂತೋಷವೆನಿಸುತ್ತದೆ ಮತ್ತು ನಿರಂತರ ಪ್ರೀತಿ ಮತ್ತು ಬೆಂಬಲಕ್ಕಾಗಿ ನನ್ನ ಜಾಗತಿಕ ಫುಟ್ಬಾಲ್ ಸಮುದಾಯವಾದ ನಿಮಗೆ, ಹಾಗೆಯೇ ನನ್ನ ಕುಟುಂಬ ಮತ್ತು ಆಪ್ತರಿಗೆ ನಾನು ಧನ್ಯವಾದ ಹೇಳಬಯಸುತ್ತೇನೆ.” ಎಂದು ಆತ ಸ್ಪಷ್ಟವಾಗಿ ಹೀಗೆ ಹೇಳುತ್ತಾರೆ.
View this post on Instagram

ದ ಗಾರ್ಡಿಯನ್ನ ವರದಿಯ ಪ್ರಕಾರ, ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ “200 ಕ್ಕೂ ಹೆಚ್ಚು ಫಿಫಾ ಸದಸ್ಯರ” ಔಪಚಾರಿಕ ಅನುಮೋದನೆಯನ್ನು ಹೊಂದಿದ್ದಾರೆ ಮತ್ತು ಮಾರ್ಚ್ 2027 ರಲ್ಲಿ ಸಂಸ್ಥೆಯ ಕಾಂಗ್ರೆಸ್ನಲ್ಲಿ “ಅಗಾಧ ಬಹುಮತದಿಂದ ನಾಲ್ಕನೇ ಅವಧಿಗೆ ಆಯ್ಕೆಯಾಗುವ ಹಾದಿಯಲ್ಲಿದ್ದಾರೆ”. ಫಿಫಾ ದ 211 ಸದಸ್ಯ ಸಂಘಗಳಲ್ಲಿ “ಬೆರಳೆಣಿಕೆಯಷ್ಟು” ಮಾತ್ರ ಇನ್ನೂ ಬೆಂಬಲ ಪತ್ರಗಳನ್ನು ಸಲ್ಲಿಸಿಲ್ಲ ಎಂದು ವರದಿ ಗಮನಿಸುತ್ತದೆ. “UEFA ಇತ್ತೀಚಿನ ಹಲವಾರು ವಿಷಯಗಳ ಬಗ್ಗೆ FIFA ಗೆ ತನ್ನ ವಿರೋಧವನ್ನು ಸ್ಪಷ್ಟಪಡಿಸಿದೆ”, ಆದರೆ ಇನ್ಫಾಂಟಿನೊ ಚುನಾವಣೆಯಲ್ಲಿ “ಪ್ರಸ್ತುತ ಏಕೈಕ ಭಾಗಿಯಾಗಿದ್ದಾರೆ” ಎಂದು ಅದು ಹೇಳುತ್ತದೆ.

UEFA ಫೆಡರೇಷನ್ಗಳಿಂದ ವಿರೋಧಗಳ ಹೊರತಾಗಿಯೂ, ಇನ್ಫಾಂಟಿನೊ ಇನ್ನೂ ಮರು-ಚುನಾವಣೆಗೆ ಬಲವಾದ ಸ್ಥಾನದಲ್ಲಿದ್ದು, ಯಾವುದೇ ದೃಢೀಕೃತ ಸ್ಪರ್ಧಿಯು ಸ್ಪರ್ಧೆಯಲ್ಲಿ ಪ್ರವೇಶಿಸಿಲ್ಲ. ಜುಲೈ 30, 2026ರಂದು, ಗಿಯಾನಿ ಇನ್ಫಾಂಟಿನೊ ಹೊಸ ವಾಣಿಜ್ಯ ಅಂಗಸಂಸ್ಥೆಯಲ್ಲಿ ಪಾಲನ್ನು ಖಾಸಗಿ ಹೂಡಿಕೆದಾರರಿಗೆ ಮಾರಾಟ ಮಾಡುವ ಯೋಜನೆಗಳೊಂದಿಗೆ ಮುಂದುವರಿದರೆ, UEFA ಫಿಫಾ ಸ್ಪರ್ಧೆಗಳನ್ನು ಬಹಿಷ್ಕರಿಸಲು ಸರ್ವಾನುಮತದಿಂದ ಮತ ಚಲಾಯಿಸಿದೆ ಎಂದು ಅಲ್ ಜಜೀರಾ ವರದಿ ಮಾಡಿತ್ತು. ಪ್ರಸ್ತಾವನೆಯನ್ನು ಕೈಬಿಡದ ಹೊರತು “ಯಾವುದೇ UEFA ರಾಷ್ಟ್ರೀಯ ತಂಡಗಳು ಯಾವುದೇ ಫಿಫಾ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ” ಎಂದು UEFA ಘೋಷಿಸಿತು.

“ಇನ್ಫಾಂಟಿನೊ ಇಲ್ಲಿಯವರೆಗೆ ರಾಜೀನಾಮೆ ನೀಡುವಂತೆ ಬಂದ ಕರೆಗಳನ್ನು ತಪ್ಪಿಸಿದ್ದಾರೆ ಮತ್ತು ಅವರು ರಾಜೀನಾಮೆ ನೀಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ತಿಳಿದುಬಂದಿದೆ” ಎಂದು ದ ಸ್ಟ್ಯಾಂಡರ್ಡ್ನ ವರದಿ ಸ್ಪಷ್ಟವಾಗಿ ಹೇಳುತ್ತದೆ. ಅವರು ರಾಜೀನಾಮೆ ನೀಡುವ ಸಾಧ್ಯತೆ “ತುಂಬಾ ಕಡಿಮೆ” ಮತ್ತು “ಮುಂದಿನ ವರ್ಷ ಫಿಫಾ ಅಧ್ಯಕ್ಷರಾಗಿ ಮರು ಆಯ್ಕೆಯಾಗಬೇಕೆಂದು ಇನ್ಫಾಂಟಿನೊ ಪಟ್ಟು ಹಿಡಿದಿದ್ದಾರೆ” ಎಂದು ವರದಿಯು ಹೇಳುತ್ತದೆ. ಇನ್ಫಾಂಟಿನೊ ಅವರ ರಾಜೀನಾಮೆಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಅಥವಾ ವಿಶ್ವಾಸಾರ್ಹ ವರದಿಗಳು ಡಿಜಿಟೈಗೆ ಕಂಡುಬಂದಿಲ್ಲ ಮತ್ತು ಹೇಳಿಕೆಯಲ್ಲಿ ಹಂಚಿಕೊಂಡಿರುವ ಚಿತ್ರವು ಗ್ರಾಕ್ ಇಮ್ಯಾಜಿನ್ ಬಳಸಿ ಮಾಡಲಾಗಿದೆ.

ಆದ್ದರಿಂದ, ಈ ಹೇಳಿಕೆ ಸುಳ್ಳು.
ಇದನ್ನೂ ಓದಿ:
ಪಾಕಿಸ್ತಾನ ಧ್ವಜ ಹೊತ್ತ ಹಡಗನ್ನು ಇರಾನ್ ಹರ್ಮಜ್ ಜಲಸಂಧಿಯಲ್ಲಿ ನಾಶಪಡಿಸಲಾಯಿತೇ? ಸತ್ಯ ಪರಿಶೀಲನೆ
