ಕಾರು ಹತ್ತುವ ಮೊದಲು ಡೊನಾಲ್ಡ್ ಟ್ರಂಪ್ ಬೀಳುವುದನ್ನು ಈ ವೀಡಿಯೊ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಕಾರು ಹತ್ತುವ  ಮೊದಲು ಡೊನಾಲ್ಡ್ ಟ್ರಂಪ್ ಬೀಳುವುದನ್ನು ಈ ವೀಡಿಯೊ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರು ಹತ್ತುವ  ಮೊದಲು ಇದ್ದಕ್ಕಿದ್ದಂತೆ ಕೆಳಗೆ ಬೀಳುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ.

ಕಡೆನುಡಿ/Conclusion : ಹೇಳಿಕೆ ಸುಳ್ಳು. ಅಂತಹ ಘಟನೆಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಶ್ವೇತಭವನದ ಅಧಿಕೃತ ಹೇಳಿಕೆಗಳು ಇಲ್ಲ. ಇದಲ್ಲದೆ, ಪ್ರಸಾರವಾಗುತ್ತಿರುವ ಕ್ಲಿಪ್ ಅನ್ನು AI ಬಳಸಿ ಮಾರ್ಪಾಡು ಮಾಡಲಾಗಿದೆ ಎಂದು ವಿಶ್ಲೇಷಣೆಯು ಸೂಚಿಸುತ್ತದೆ. US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಡಿಯೊದಲ್ಲಿ ಚಿತ್ರಿಸಿರುವಂತೆ ಬಿದ್ದೂ ಇಲ್ಲ ಅಥವಾ ಕುಸಿದೂ ಇಲ್ಲ.

ರೇಟಿಂಗ್/Rating: ಸುಳ್ಳು

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಕಾರನ್ನು ಹತ್ತುವಾಗ ಆಕಸ್ಮಿಕವಾಗಿ ಕುಸಿದು ಬಿದ್ದರು ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಅಂತಹ ಒಂದು ಪೋಸ್ಟ್ ಅನ್ನು ‘ChaosAgent_42’ ಎಂಬ ದೃಢೀಕೃತ X ಬಳಕೆದಾರರು “ಬ್ರೇಕಿಂಗ್: ಚುರುಕಾದ, ಕಟ್ಟುಮಸ್ತಾದ, 6’3″ ಮತ್ತು 215 ಪೌಂಡ್ ಚಾಂಪ್ ತಮ್ಮದೇ ಅಧಿಕಪ್ರಸಂಗದ ಭಾರದಡಿಗೆ ಕುಸಿದರು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಪೋಸ್ಟ್‌ಗೆ ಲಗತ್ತಿಸಲಾದ ದೃಶ್ಯಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಳಗೆ ಬೀಳುತ್ತಿರುವುದನ್ನು ಮತ್ತು ಅಂಗರಕ್ಷಕ ಅವರು ಎದ್ದೇಳಲು ಸಹಾಯ ಮಾಡಲು ಪ್ರಯತ್ನಿಸುತ್ತಿರುವುದನ್ನು ತೋರಿಸಲಾಗಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ-

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಯಾವುದೇ ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳು ಅಥವಾ ಅಧಿಕೃತ ಶ್ವೇತಭವನದ ಮೂಲಗಳು ಡೊನಾಲ್ಡ್ ಟ್ರಂಪ್ ವಾಹನವನ್ನು ಹತ್ತುವ ಮುನ್ನ ಬಿದ್ದಿದ್ದಾರೆ ಎಂದು ವರದಿ ಮಾಡಿಲ್ಲ. ವೈರಲ್ ವೀಡಿಯೊವು AI- ರಚಿತ ವಿಷಯದ ಕುರುಹುಗಳನ್ನು ಹೊಂದಿದ್ದು, ನೈಜ ಘಟನೆಯನ್ನು ಚಿತ್ರಿಸುವುದಿಲ್ಲ.

ವಿವರಗಳು:

ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ನಾವು ಮೊದಲು ವೀಡಿಯೊದ ವಿವಿಧ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಆದರೆ, ಹುಡುಕಾಟದಲ್ಲಿ ನಮಗೆ ಯಾವುದೇ ವಿಶ್ವಾಸಾರ್ಹ ಅಥವಾ ದೃಢೀಕೃತ ಮೂಲಗಳು ಕಂಡುಬರಲಿಲ್ಲ. ನಾವು ಶ್ವೇತಭವನದ ಅಧಿಕೃತ ಹೇಳಿಕೆಗಳನ್ನು ಸಹ ಹುಡುಕಿದೆವು ಆದರೆ ವಾಹನವನ್ನು ಏರುವ ಮೊದಲು ಅಧ್ಯಕ್ಷ ಟ್ರಂಪ್ ಬಿದ್ದಿದ್ದಾರೆ ಎಂದು ದೃಢೀಕರಿಸುವ ಯಾವುದೇ ಪ್ರಕಟಣೆ ಕಂಡುಬಂದಿಲ್ಲ.

ಇದರ ನಂತರ, ಯಾವುದೇ ದೃಢೀಕೃತ ವರದಿಗಳಿವೆಯೇ ಎಂದು ಹುಡುಕಲು ನಾವು “ಟ್ರಂಪ್ ವಾಹನವನ್ನು ಏರುವ ಮೊದಲು ಬಿದ್ದದ್ದು” ಎಂಬ ಪದಗಳನ್ನು ಬಳಸಿಕೊಂಡು ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. US ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ತಮ್ಮ SUVಯನ್ನು ಪ್ರವೇಶಿಸುವಾಗ ಕಷ್ಟಪಡುತ್ತಿರುವಂತೆ ಕಾಣುತ್ತದೆ” ಎಂದು ಜುಲೈ 1, 2026ರಂದು ಪ್ರಕಟವಾದ ಮೆಕ್‌ಗಿಲ್ ಮೀಡಿಯಾ ವರದಿ ಹೇಳುತ್ತದೆ. ಮುಂದುವರೆದು, ಟ್ರಂಪ್ “ಆಯ ತಪ್ಪಿ, ಸಮತೋಲನ ಹಿಂಪಡೆಯಲು ಹಲವು ಕ್ಷಣಗಳ ಕಾಲ ಒಂದು ಕಾಲಿನ ಮೇಲೆ ನೆಲೆಸಿ ಕೊನೆಗೆ ಒಳಗೆ ಹೋದಂತೆ ತೋರುತ್ತದೆ” ಎಂದು ಈ ವರದಿಯು ಹೇಳಿದೆ.

ಈ ವರದಿಯಲ್ಲಿ, ಘಟನೆಯನ್ನು ತೋರಿಸುವ ಫಾಕ್ಸ್ ನ್ಯೂಸ್‌ನ X ಪೋಸ್ಟ್ ಅನ್ನು ಸಹ ಎಂಬೆಡ್ ಮಾಡಲಾಗಿದೆ. ಆದರೆ, ಎಂಬೆಡೆಡ್ ಪೋಸ್ಟ್‌ನಲ್ಲಿ ಟ್ರಂಪ್ ಬೀಳುತ್ತಿರುವುದನ್ನು ತೋರಿಸಲಾಗಿಲ್ಲ. ಬದಲಾಗಿ, ಆತ ತಮ್ಮ ಸಮತೋಲನವನ್ನು ಹಿಂಪಡೆಯುವ ಮುನ್ನ ಕೆಲವೇ ಕ್ಷಣಗಳ ಕಾಲ ನಿಲ್ಲುವುದನ್ನು ಕಾಣಬಹುದು. 0:12ರ ಸಮಯಮುದ್ರೆಯಲ್ಲಿ, ಟ್ರಂಪ್ ನಿಲ್ಲುತ್ತಾರೆ, ಆದರೆ 0:16ರ ಹೊತ್ತಿಗೆ ಆತ ಬೀಳದೆ ಸುರಕ್ಷಿತವಾಗಿ ವಾಹನವನ್ನು ಪ್ರವೇಶಿಸುತ್ತಾರೆ.

ಇದರ ನಂತರ, ನಾವು ಹೇಳಿಕೆಯಲ್ಲಿ ಹಂಚಿಕೊಂಡಿರುವ ವೀಡಿಯೊವನ್ನು ಡೌನ್‌ಲೋಡ್ ಮಾಡಿದೆವು ಮತ್ತು ಅದರ ಸತ್ಯಾಸತ್ಯತೆಯನ್ನು ತಿಳಿಯಲು ಹೈವ್ ಮಾಡರೇಶನ್‌ನ AI ಡಿಟೆಕ್ಟರ್ ಟೂಲ್ ಬಳಸಿ ಅದನ್ನು ವಿಶ್ಲೇಷಿಸಿದೆವು. ವೀಡಿಯೊದ ಹಲವು ಭಾಗಗಳಲ್ಲಿ, 80%ಕ್ಕಿಂತ ಹೆಚ್ಚು AI- ರಚಿತವಾದ ವಿಷಯದ ಸಂಭವನೀಯತೆಯನ್ನು ಡಿಟೆಕ್ಟರ್ ವರದಿ ಮಾಡಿದೆ, ಇದು ಮೂಲ ಕ್ಲಿಪ್ ಅನ್ನು ಕುಶಲತೆಯಿಂದ ಮಾರ್ಪಡಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ. ಫಲಿತಾಂಶಗಳ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಬಹುದು –

ಆದ್ದರಿಂದ, ಈ ಹೇಳಿಕೆ ಸುಳ್ಳು.


ಇದನ್ನೂ ಓದಿ:

ಪಾಕಿಸ್ತಾನ ಧ್ವಜ ಹೊತ್ತ ಹಡಗನ್ನು ಇರಾನ್ ಹರ್ಮಜ್ ಜಲಸಂಧಿಯಲ್ಲಿ ನಾಶಪಡಿಸಲಾಯಿತೇ? ಸತ್ಯ ಪರಿಶೀಲನೆ

ಟೆಸ್ಲಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ದೆವ್ವಗಳನ್ನು ಸೆರೆಹಿಡಿದಿರುವುದನ್ನು ಈ ವೀಡಿಯೊದಲ್ಲಿ ನಿಜವಾಗಿಯೂ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.