ಹೇಳಿಕೆ/Claim: FIFA ವಿಶ್ವಕಪ್ 2026 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಪ್ಯಾನಿಷ್ ಫುಟ್ಬಾಲ್ ಆಟಗಾರ ಲ್ಯಾಮಿನ್ ಯಮಲ್ ರವರು ಡೊನಾಲ್ಡ್ ಟ್ರಂಪ್ ಅವರ ಹಸ್ತಲಾಘವವನ್ನು ನಿರ್ಲಕ್ಷಿಸಿವುದನ್ನು ತೋರಿಸಿಲಾಗಿದೆ ಎಂದು ವೀಡಿಯೊ ಹೇಳುತ್ತದೆ..
ಕಡೆನುಡಿ/Conclusion: ಹೇಳಿಕೆ ಸುಳ್ಳು. 2026ರ FIFA ವಿಶ್ವಕಪ್ ಫೈನಲ್ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲ್ಯಾಮಿನ್ ಯಮಲ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹಸ್ತಲಾಘವ ಮಾಡಿದರು. ಆತ ಉದ್ದೇಶಪೂರ್ವಕವಾಗಿ ಟ್ರಂಪ್ ಅವರನ್ನು ನಿರ್ಲಕ್ಷಿಸಿದ್ದಾರೆ ಅಥವಾ ಅಗೌರವಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಮತ್ತು ಇದು ಒಂದು ಸುಳ್ಳು ನಿರೂಪಣೆಯನ್ನು ರೂಪಿಸಲು ತಿದ್ದುಪಡಿ ಮಾಡಿದ ಕ್ಲಿಪ್ ಆಗಿದೆ.
ರೇಟಿಂಗ್/Rating: ಸುಳ್ಳು![]()
ಸ್ಪ್ಯಾನಿಷ್ ಫುಟ್ಬಾಲ್ ಆಟಗಾರ ಲ್ಯಾಮಿನ್ ಯಮಲ್ ರವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಗೌರವಿಸಿದ್ದಾರೆ ಎನ್ನುವ ಒಂದು ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ “timeand2037” “ಟ್ರಂಪ್ ಅವರ ಕೈಯನ್ನು ತಿರಸ್ಕರಿಸಿದ್ದಕ್ಕಾಗಿ ಸ್ಪ್ಯಾನಿಷ್ ಫುಟ್ಬಾಲ್ ಆಟಗಾರ ಲ್ಯಾಮಿನ್ ಯಮಲ್ ಅವರಿಗೆ ಗೌರವ. ವಿಶ್ವಕಪ್ ಪದಕ ಸಮಾರಂಭದಲ್ಲಿ ಹಲವಾರು ಆಟಗಾರರು ಅನಗತ್ಯ ಗೇಟ್‌ಕ್ರಾಷರ್ ಮತ್ತು ಯುದ್ಧ ಅಪರಾಧಿ ಟ್ರಂಪ್ ಅವರನ್ನು ತಿರಸ್ಕರಿಸಿದರು” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ AOLನ ಲೇಖನವನ್ನು ಸಹ ಸೇರಿಸಲಾಗಿದೆ.
ಈ ಹೇಳಿಕೆಯೊಂದಿಗೆ ಟ್ರಂಪ್ ಅವರೊಂದಿಗೆ ಯಮಲ್ ಹಸ್ತಲಾಘವ ಮಾಡಲು ನಿರಾಕರಿಸುತ್ತಿರುವುದನ್ನು ತೋರಿಸುವ ವೀಡಿಯೊ ಕೂಡ ಇದೆ. ಪೋಸ್ಟ್ ಅನ್ನು ಕೆಳಗೆ ನೋಡಬಹುದು –

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ , ಇಲ್ಲಿ ಮತ್ತು ಇಲ್ಲಿ ಕಾಣಬಹುದು.
Lamine Yamal disrespects President Trump on camera pic.twitter.com/II6LpzTdTc
— Matt Wallace (@MattWallace888) July 19, 2026
FACT CHECK
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. 2026ರ FIFA ವಿಶ್ವಕಪ್ ಫೈನಲ್ ಪ್ರಶಸ್ತಿ ಪ್ರದಾನ ಸಮಾರಂಭದ ದೃಶ್ಯಗಳಲ್ಲಿ ಲ್ಯಾಮಿನ್ ಯಮಲ್ ರವರು ಪದಕವನ್ನು ಸ್ವೀಕರಿಸುವಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರೊಂದಿಗೆ ಹಸ್ತಲಾಘವ ಮಾಡಿದ್ದಾರೆ ಎಂದು ಕಾಣುತ್ತದೆ. ಅವರು ಉದ್ದೇಶಪೂರ್ವಕವಾಗಿ ಟ್ರಂಪ್ ಅವರನ್ನು ನಿರ್ಲಕ್ಷಿಸಿದರು ಅಥವಾ ಅಗೌರವಿಸಿದರು ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ವೈರಲ್ ಕ್ಲಿಪ್ ಅನ್ನು ಸುಳ್ಳು ನಿರೂಪಣೆ ರಚಿಸಲು ಕುಶಲತೆಯಿಂದ ತಿದ್ದಲಾಗಿದೆ.
ಮೊದಲು ನಾವು ಹೇಳಿಕೆಯ ಜೊತೆ ಹಂಚಿಕೊಳ್ಳಲಾಗಿರುವ AOL ಲೇಖನವನ್ನು ಓದಿದಾಗ ಅದು ಅಪ್ರಸ್ತುತ ಎಂದು ಕಂಡುಬಂದಿತು. ಮೊದಲನೆಯದಾಗಿ, ಲ್ಯಾಮಿನ್ ಯಮಲ್ ಟ್ರಂಪ್ ರವರ ಹಸ್ತಲಾಘವವನ್ನು ನಿರ್ಲಕ್ಷಿಸುವ ಮೂಲಕ ಅವರನ್ನು ಅಗೌರವಿಸಿದರು ಎಂಬ ಹೇಳಿಕೆಯನ್ನು ಬೆಂಬಲಿಸಲು ಲೇಖನವು ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. ಬದಲಾಗಿ, ಸ್ಪೇನ್ ನಾಯಕ ರೊಡ್ರಿಯವರು ಟ್ರಂಪ್ ರವರ ಬೆನ್ನು ತಟ್ಟಿ ಅವರನ್ನು ನಿಧಾನವಾಗಿ ತಳ್ಳಿದರು, ಸ್ಪೇನ್ ವಿಶ್ವಕಪ್ ಟ್ರೋಫಿಯನ್ನು ಎತ್ತುವ ಮೊದಲು ಟ್ರಂಪ್ ವೇದಿಕೆಯಿಂದ ಹೊರಹೋಗುವ ಸಮಯವಾಗಿದೆ ಎಂದು ಸೂಚಿಸುವಂತೆ ಅದು ಕಾಣುತ್ತದೆ.
ನಂತರ, “2026ರ FIFA ವಿಶ್ವಕಪ್ ಸಮಯದಲ್ಲಿ ಯಮಲ್ ಮತ್ತು ಟ್ರಂಪ್ ಪ್ರಶಸ್ತಿ ಪ್ರದಾನ ಸಮಾರಂಭ” ಎಂಬ ಪದಗುಚ್ಛದೊಂದಿಗೆ ನಾವು ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಇಂಡಿಯನ್ ಗ್ಲೋಬಲ್ ರಿವ್ಯೂ ಅಪ್‌ಲೋಡ್ ಮಾಡಿದ ಒಂದು ಯೂಟ್ಯೂಬ್ ಕಿರುಚಿತ್ರದಲ್ಲಿ ಯಮಲ್ ರವರು ಟ್ರಂಪ್ ರವರ ಕೈ ಕುಲುಕಿದ್ದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. FIFA ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರೊಂದಿಗೆ ಮಾತನಾಡುವಾಗ ಯಮಲ್ ರವರು ಟ್ರಂಪ್ ಅವರ ಚಾಚಿದ ಕೈಯನ್ನು ಗಮನಿಸದಂತೆ ಕಂಡುಬರುತ್ತದೆ, ಆದರೆ ಆತ ತಕ್ಷಣ ತಿರುಗಿ ಟ್ರಂಪ್ ಅವರ ಕೈ ಕುಲುಕುತ್ತಾರೆ.

ಡಯಾರಿಯೊ AS ಅಪ್‌ಲೋಡ್ ಮಾಡಿದ ಮತ್ತೊಂದು ಯೂಟ್ಯೂಬ್ ವೀಡಿಯೊ ಪ್ರಶಸ್ತಿ ಪ್ರದಾನ ಸಮಾರಂಭದ ದೀರ್ಘ ಕ್ಲಿಪ್ ಅನ್ನು ತೋರಿಸುತ್ತದೆ. 1:38ರ ಸಮಯಮುದ್ರೆಯಲ್ಲಿ, ಲ್ಯಾಮಿನ್ ಯಮಲ್ ವೇದಿಕೆಯ ಮೇಲೆ ಹತ್ತುವುದು, FIFA ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರನ್ನು ಉದ್ದೇಶಿಸಿ ಮಾತನಾಡುವುದು ಮತ್ತು ಟ್ರಂಪ್ ಕೈ ಚಾಚುತ್ತಿರುವುದು ಕಾಣುತ್ತದೆ. 1:41ರ ಸಮಯಮುದ್ರೆಯಲ್ಲಿ, ಯಮಲ್ ತಮ್ಮ ಪದಕವನ್ನು ಸ್ವೀಕರಿಸುವ ಮುನ್ನ ಟ್ರಂಪ್ ಅವರ ಕೈ ಕುಲುಕುತ್ತಿರುವುದು ಕಂಡುಬರುತ್ತದೆ, ಇದರಲ್ಲಿ ಯಾವುದೇ ಅಗೌರವದ ಸೂಚನೆಯಿಲ್ಲ. ಕೆಳಗಿನ ವೀಡಿಯೊ/ ಸ್ಕ್ರೀನ್‌ಶಾಟ್ ವೀಕ್ಷಿಸಿ:

ಕೊನೆಯದಾಗಿ, ಯಾವುದೇ ಭಾಗವನ್ನು AI ಬಳಸಿ ರಚಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿರುವ ವೀಡಿಯೊದ ಭಾಗಗಳನ್ನು ತೆಗೆದುಕೊಂಡು, AI ಪತ್ತೆ ಟೂಲ್ ಬಳಸಿ ತುಣುಕನ್ನು ವಿಶ್ಲೇಷಿಸಿದೆವು, ಈ ಮೂಲಕ ವೀಡಿಯೊದ ಪ್ರಮುಖ ಭಾಗಗಳು AI- ರಚಿತವಾಗಿವೆ ಎಂದು ಕಂಡುಬಂತು. ತಿದ್ದುಪಡಿ ಮಾಡಲಾದ ಭಾಗಗಳಲ್ಲಿ ಮುಖ ಲಕ್ಷಣಗಳ ಅಸಂಗತತೆಯೂ ಸಹ ಕಾಣುತ್ತದೆ, ಫಲಿತಾಂಶಗಳನ್ನು ಕೆಳಗೆ ನೋಡಿ-

ಆದ್ದರಿಂದ, ಈ ಹೇಳಿಕೆ ಸುಳ್ಳು.
