ರ‍್ಯಾಪರ್ 6ix9ine ನಿಜವಾಗಿಯೂ ಮೂತ್ರಪಿಂಡದ ವೈಫಲ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರೇ? ಸತ್ಯ ಪರಿಶೀಲನೆ

ರ‍್ಯಾಪರ್ 6ix9ine ನಿಜವಾಗಿಯೂ ಮೂತ್ರಪಿಂಡದ ವೈಫಲ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಅಮೆರಿಕನ್ ರ‍್ಯಾಪರ್ 6ix9ine ಆಸ್ಪತ್ರೆಯಲ್ಲಿ ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಚಿತ್ರ ಹೇಳುತ್ತದೆ.

ಕಡೆನುಡಿ/Conclusion: ಹೇಳಿಕೆ ಸುಳ್ಳು. ಯಾವುದೇ ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳು, ಅಧಿಕೃತ ಹೇಳಿಕೆಗಳು ಅಥವಾ ವಿಶ್ವಾಸಾರ್ಹ ಮೂಲಗಳು ಈ ಹೇಳಿಕೆಯನ್ನು ಬೆಂಬಲಿಸುವುದಿಲ್ಲ. ಪೋಸ್ಟ್‌ನಲ್ಲಿರುವ ಚಿತ್ರವು ಜುಲೈ 2018ರದ್ದು, ಆಗ 6ix9ine ಅವರಿಂದ ಕಳ್ಳತನಮಾಡಿ, ಗಾಯಗೊಳಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಈಗ ಜೀವಂತವಾಗಿದ್ದು ಮತ್ತು ಪ್ರಸ್ತುತ ದಕ್ಷಿಣ ಫ್ಲೋರಿಡಾದಲ್ಲಿ ವಾಸಿಸುತ್ತಿದ್ದಾರೆ.

ರೇಟಿಂಗ್/Rating: ಸುಳ್ಳು.  

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ

******************************************************

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅಮೇರಿಕನ್ ರ‍್ಯಾಪರ್ 6ix9ine ಮೂತ್ರಪಿಂಡ ವೈಫಲ್ಯದಿಂದ ನಿಧನರಾಗಿದ್ದಾರೆ ಎಂಬ ಹೇಳಿಕೆ ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘Tojisukuna56’  “ಮೂತ್ರಪಿಂಡ ವೈಫಲ್ಯದಿಂದ ಪ್ರಾಣ ಕಳೆದುಕೊಂಡ ಅಮೇರಿಕನ್ ರ‍್ಯಾಪರ್ ಸಿಕ್ಸ್ 9 ರಿಗೆ ಶ್ರದ್ಧಾಂಜಲಿ” ಎಂಬ ಶೀರ್ಷಿಕೆಯೊಂದಿಗೆ ಅಂತಹ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ಗೆ ಲಗತ್ತಿಸಲಾದ ಆಸ್ಪತ್ರೆಯ ಛಾಯಾಚಿತ್ರದಲ್ಲಿ 6ix9ine ಕಣ್ಣು ಮುಚ್ಚಿ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದು. ಪೋಸ್ಟ್ 12 ಮಿಲಿಯಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, ಅದನ್ನು ಕೆಳಗೆ ನೋಡಬಹುದು-

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಈ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ವರದಿ, ಅಧಿಕೃತ ದೃಢೀಕರಣ ಅಥವಾ ವಿಶ್ವಾಸಾರ್ಹ ಪುರಾವೆಗಳಿಲ್ಲ. ಪ್ರಸಾರವಾಗುತ್ತಿರುವ ಚಿತ್ರವು ವಾಸ್ತವವಾಗಿ ಜುಲೈ 2018 ರದು, ಆಗ ರ‍್ಯಾಪರ್ 6ix9ine ಅವರನ್ನು ದರೋಡೆ ಮಾಡಿ, ಅವರ ಮೇಲೆ ಹಲ್ಲೆ ಮಾಡಲಾಗಿತ್ತು ಮತ್ತು ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಜೀವಂತವಾಗಿದ್ದು, ಪ್ರಸ್ತುತ ದಕ್ಷಿಣ ಫ್ಲೋರಿಡಾದಲ್ಲಿ ವಾಸಿಸುತ್ತಿದ್ದಾರೆ.

ವಿವರಗಳು:

ಹೆಚ್ಚಿನ ಮಾಹಿತಿಗಾಗಿ ನಾವು ಮೊದಲು “ಅಮೇರಿಕನ್ ರ‍್ಯಾಪರ್ 6ix9ine ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ” ಎಂಬ ಪದಗಳೊಂದಿಗೆ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಆದರೆ, ಯಾವುದೇ ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳು ಮೇ 2026ರಲ್ಲಿ ಮೂತ್ರಪಿಂಡ ವೈಫಲ್ಯದಿಂದಾಗಿ 6ix9ine ಸಾವನ್ನಪ್ಪಿರುವ ಸುದ್ದಿಯನ್ನು ಪ್ರಕಟಿಸಿಲ್ಲ.

ಇದರ ನಂತರ, ಜನವರಿ 7, 2026ರಂದು ಪ್ರಕಟವಾದ TOI ವರದಿಯಿಂದ ರ‍್ಯಾಪರ್ 6ix9ine ತಮ್ಮ ಮೂರು ತಿಂಗಳ ಜೈಲು ಶಿಕ್ಷೆಯನ್ನು ಪ್ರಾರಂಭಿಸಿದ್ದಾರೆ ಎಂದು ನಮಗೆ ತಿಳಿದುಬಂದಿತು. “ರ‍್ಯಾಪರ್ 6ix9ine ಮಂಗಳವಾರ, ಜನವರಿ 6, 2026ರಂದು ತಮ್ಮನ್ನು ತಾವು ಕಾನೂನಿಗೊಪ್ಪಿಸಿಕೊಂಡರು” ಮತ್ತು ಅವರ ಕೊನೆಯ ಕ್ಷಣಗಳನ್ನು ಏಡಿನ್ ರಾಸ್ ಸ್ಟ್ರೀಮ್ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರ‍್ಯಾಪರ್ “ತಮ್ಮ ಮೇಲ್ವಿಚಾರಣೆಯಡಿಯಲ್ಲಿನ ಬಿಡುಗಡೆಯ ಮೂರು ಷರತ್ತುಗಳನ್ನು” ಉಲ್ಲಂಘಿಸಿದರು ಮತ್ತು ನಂತರ ತಮ್ಮ ದಕ್ಷಿಣ ಫ್ಲೋರಿಡಾದ ಮನೆಯಲ್ಲಿ ಕೊಕೇನ್ ಮತ್ತು MDMA ಹೊಂದಿದ್ದಾಗಿ ತಪ್ಪೊಪ್ಪಿಕೊಂಡರು. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

WION ವರದಿಯ ಪ್ರಕಾರ, ರ‍್ಯಾಪರ್ 6ix9ine ಏಪ್ರಿಲ್ 3, 2026ರಂದು ಬ್ರೂಕ್ಲಿನ್‌ನ ಮೆಟ್ರೋಪಾಲಿಟನ್ ಡಿಟೆನ್ಷನ್ ಕೇಂದ್ರದಿಂದ ಬಿಡುಗಡೆಯಾದರು. ಜೈಲಿನಿಂದ ಹೊರಬಂದ ನಂತರ, ಅವರು ನಿಕೋಲಸ್ ಮಡುರೊ ಸಹಿ ಮಾಡಿದ್ದಾರೆ ಎನ್ನಲಾದ ಸ್ಪಾಂಜ್ ಬಾಬ್ ಆಟಿಕೆಯನ್ನು ತೋರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದರು, “ನೋಡಿ, ಮಡುರೊ ಸಹಿ ಮಾಡಿದ್ದು” ಎಂದು ಹೇಳಿದರು ಮತ್ತು “ವೆನೆಜುವೆಲಾ ಶಾಶ್ವತವಾಗಿ” ಎಂಬ ಸಂದೇಶವನ್ನು ಓದಿದರು. ತಮ್ಮ ಉನ್ನತ ಸ್ಥಾನಮಾನದಿಂದಾಗಿ ಈ ಇಬ್ಬರೂ ವ್ಯಕ್ತಿಗಳನ್ನು ಸೌಲಭ್ಯದ ವಿಶೇಷ ವಸತಿ ಘಟಕದಲ್ಲಿ ಇರಿಸಲಾಗಿತ್ತು ಎಂದು ಸಹ ವರದಿಯು ಹೇಳಿತು. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

6ix9ine ಬಗ್ಗೆ ಇತ್ತೀಚಿನ ಸುದ್ದಿಗಳನ್ನು ಹುಡುಕಿದಾಗ, ಮೇ 17, 2026ರಂದು ಪ್ರಕಟವಾದ AOL ವರದಿ ನಮಗೆ ಕಂಡುಬಂತು, ಅದರಲ್ಲಿ ಅವರ ವಿವಾದಾತ್ಮಕ ಟೀಕೆಗಳನ್ನು ಉಲ್ಲೇಖಿಸಲಾಗಿದೆ. 6ix9ine ಗಂಡು ಮಗು ಬೇಕಾಗಿದ್ದು ತಮಗೆ ಹುಟ್ಟಲಿರುವ ಮಗು ಹೆಣ್ಣಾಗಿದ್ದರೆ ಗರ್ಭಪಾತ ಮಾಡ ಬಯಸುವುದಾಗಿ ಹೇಳಿಸ ಸಮಯದಲ್ಲಿ ತಮ್ಮ ಗೆಳತಿ “ನಿರಾಳ” ಮತ್ತು “ಮುಕ್ತ ಮನಸ್ಸಿನವಳು” ಎಂದು ಹೇಳಿಕೊಂಡಾಗ ಈ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಆದಾಗ್ಯೂ, ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅಥವಾ ಮೂತ್ರಪಿಂಡ ವೈಫಲ್ಯವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ನಮಗೆ ಸಿಗಲಿಲ್ಲ.

ಕೊನೆಯದಾಗಿ, ಮೂಲದ ಬಗ್ಗೆ ತಿಳಿಯಲು ನಾವು ಹೇಳಿಕೆಯಲ್ಲಿ ಲಗತ್ತಿಸಲಾದ ಚಿತ್ರದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ಜುಲೈ 22, 2018ರಂದು ಪ್ರಕಟವಾದ ಕಾನ್ಸೀಕ್ವೆನ್ಸ್‌ನ ಲೇಖನಕ್ಕೆ ನಮ್ಮನ್ನು ಕರೆದೊಯ್ದಿತು, ಅದು “6ix9ineರನ್ನು ಭಾನುವಾರ ಬೆಳಿಗ್ಗೆ ಅಪಹರಿಸಿ ದರೋಡೆ ಮಾಡಲಾಗಿದೆ ಎಂದು ವರದಿಯಾಗಿದೆ ಮತ್ತು ಪ್ರಸ್ತುತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ಉಲ್ಲೇಖಿಸಿದೆ. “ತಮಗೆ ಇಬ್ಬರು ಬಂದೂಕುಧಾರಿಗಳು ಎದುರಾಗಿದ್ದರೆಂದು 6ix9ine ಅವರು ಹೇಳಿದ್ದಾರೆ” ಮತ್ತು ಆ ಇಬ್ಬರು ನಂತರ ಅವರನ್ನು ಕಾರಿನೊಳಗೆ ಎಳೆದುಕೊಂಡು ಹೋಗಿ “ಅವರ ಆಭರಣಗಳನ್ನು ಮತ್ತು ನಗದನ್ನು ಕೊಡಲು ಒತ್ತಾಯಿಸಿದರು” ಎಂದು ಹೇಳುವ TMZಯ ವರದಿಯ ಬಗ್ಗೆ ಈ ವರದಿಯು ವಿವರಿಸುತ್ತದೆ. ವರದಿಯನ್ನು ಕೆಳಗೆ ನೋಡಿ:

 

ಇತರ ಹುಡುಕಾಟ ಫಲಿತಾಂಶಗಳಲ್ಲಿ ಜುಲೈ 22, 2018ರಂದು ಪ್ರಕಟವಾದ ” $750k ಆಭರಣ ಮತ್ತು ಹಣ ಲೂಟಿಗೊಳಗಾದ ನಂತರ 6ix9ine ಆಸ್ಪತ್ರೆಗೆ ದಾಖಲು” ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೊ ನಮಗೆ ದೊರಕಿತು. ಇದು 0:30 ಸಮಯಸ್ಟ್ಯಾಂಪ್‌ನಲ್ಲಿ ನೋಡಬಹುದಾದ ಅದೇ ಚಿತ್ರವನ್ನು ಬಳಸುತ್ತದೆ. ಮತ್ತೊಂದು ಫಲಿತಾಂಶದಲ್ಲಿ ಜುಲೈ 23, 2018ರಂದು ಪ್ರಕಟವಾದ Pix11 ಮಾರ್ನಿಂಗ್ ನ್ಯೂಸ್‌ನ ವರದಿ ನಮಗೆ ದೊರಕಿತು, ಅದರಲ್ಲಿಯೂ ಇದೇ ಚಿತ್ರವನ್ನು ಬಳಸಲಾಗಿದೆ.

ಆದ್ದರಿಂದ ರ‍್ಯಾಪರ್ ಜೀವಂತವಾಗಿದ್ದಾರೆ ಮತ್ತು ಇನ್ಸ್ಟಾಗ್ರಾಂ ಲೈವ್‌ಸ್ಟ್ರೀಮ್‌ಗಳು, ವೈರಲ್ ಕ್ಲಿಪ್‌ಗಳು ಮತ್ತು ಪ್ರಭಾವಿಗಳೊಂದಿಗಿನ ಕೊಲಾಬೊರೇಶನ್ ಮೂಲಕ ಆನ್‌ಲೈನ್ ಉಪಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ.

ಹೀಗಾಗಿ, ಹೇಳಿಕೆ ಸುಳ್ಳು.


ಇದನ್ನೂ ಓದಿ:

ಪಾಕಿಸ್ತಾನ ಧ್ವಜ ಹೊತ್ತ ಹಡಗನ್ನು ಇರಾನ್ ಹರ್ಮಜ್ ಜಲಸಂಧಿಯಲ್ಲಿ ನಾಶಪಡಿಸಲಾಯಿತೇ? ಸತ್ಯ ಪರಿಶೀಲನೆ

ಟೆಸ್ಲಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ದೆವ್ವಗಳನ್ನು ಸೆರೆಹಿಡಿದಿರುವುದನ್ನು ಈ ವೀಡಿಯೊದಲ್ಲಿ ನಿಜವಾಗಿಯೂ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.